LPG: ಎಲ್‌ಪಿಜಿ ಸಿಲಿಂಡರ್ ಬಳಕೆದಾರರು ತಿಳಿದುಕೊಳ್ಳಲೇಬೇಕಾದ ಮಹತ್ವದ ಮಾಹಿತಿ

LPG: ಕಪ್ಪು ಮಾರುಕಟ್ಟೆ ಹಾಗೂ ಅಡುಗೆ ಅನಿಲದ ಅನಗತ್ಯ ಸಂಗ್ರಹಣೆಗೆ ಬ್ರೇಕ್ ಹಾಕಲು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಮತ್ತು ತೈಲ ಕಂಪನಿಗಳು ಹೊಸ ನಿಯಮಗಳನ್ನು ಜಾರಿಗೆ ತಂದಿವೆ. ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಇನ್ಮುಂದೆ ಪ್ರತಿ ಮನೆಗೆ ಕೇವಲ ಒಂದೇ ಒಂದು ಗ್ಯಾಸ್ ಸಂಪರ್ಕ ಹೊಂದುವುದು ಕಡ್ಡಾಯವಾಗಿದೆ. ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಮತ್ತು ಸಬ್ಸಿಡಿಯ ದುರುಪಯೋಗವನ್ನು ತಡೆಯಲು ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.

ಯಾವ ಮನೆಗಳಲ್ಲಿ ಈಗಾಗಲೇ ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್‌ಜಿ) ಸಂಪರ್ಕವಿದೆಯೋ ಅಂತಹ ಗ್ರಾಹಕರು ಇನ್ಮುಂದೆ ಎಲ್‌ಪಿಜಿ ಸಿಲಿಂಡರ್ ಬಳಸುವಂತಿಲ್ಲ. ನಿಮ್ಮ ಪ್ರದೇಶದಲ್ಲಿ ಪಿಎನ್‌ಜಿ ಗ್ಯಾಸ್ ಗ್ರಿಡ್ ಲೈನ್ ಲಭ್ಯವಿದ್ದು, ನೀವು ಹೊಸದಾಗಿ ಆ ಸಂಪರ್ಕವನ್ನು ಪಡೆದುಕೊಂಡರೆ ಮುಂದಿನ 30 ದಿನಗಳ ಒಳಗಾಗಿ ನಿಮ್ಮ ಹಳೆಯ ಎಲ್‌ಪಿಜಿ ಸಿಲಿಂಡರ್ ಸಂಪರ್ಕವನ್ನು ಕಡ್ಡಾಯವಾಗಿ ಹಿಂದಿರುಗಿಸಬೇಕಾಗುತ್ತದೆ. ನಿಯಮ ಪಾಲಿಸದಿದ್ದರೆ ತೈಲ ಕಂಪನಿಗಳು ಸ್ವಯಂಚಾಲಿತವಾಗಿ ಎಲ್‌ಪಿಜಿ ಸಂಪರ್ಕವನ್ನು ರದ್ದುಗೊಳಿಸಲಿವೆ.

LPG New Rules 2026 One Gas Connection Per Home OTP Delivery and PNG Users Face Restrictions

ವೋಚರ್‌ನಿಂದ ಪಡೆಯಬಹುದಾದ ಲಾಭಗಳು

ಒಂದು ವೇಳೆ ಪಿಎನ್‌ಜಿ ಸಂಪರ್ಕ ಪಡೆದು ನೀವು ಎಲ್‌ಪಿಜಿ ಸಿಲಿಂಡರ್ ಅನ್ನು ಹಿಂತಿರುಗಿಸಿದರೆ ಸರ್ಕಾರ ನಿಮಗೆ ವರ್ಗಾವಣೆ ವೋಚರ್ ನೀಡಲಿದೆ. ಮುಂದಿನ ದಿನಗಳಲ್ಲಿ ನೀವು ಪಿಎನ್‌ಜಿ ಪೈಪ್‌ಲೈನ್ ಸೌಲಭ್ಯವಿಲ್ಲದ ಬೇರೆ ಯಾವುದೇ ಊರು ಅಥವಾ ಪ್ರದೇಶಕ್ಕೆ ಮನೆ ಬದಲಾಯಿಸಿದರೆ ಈ ವೋಚರ್ ತೋರಿಸಿ ತಕ್ಷಣವೇ ಯಾವುದೇ ತೊಂದರೆಯಿಲ್ಲದೆ ಹೊಸ ಎಲ್‌ಪಿಜಿ ಸಿಲಿಂಡರ್ ಸಂಪರ್ಕವನ್ನು ಮರಳಿ ಪಡೆದುಕೊಳ್ಳಬಹುದು.

ಸಿಲಿಂಡರ್ ಬುಕಿಂಗ್ ಅವಧಿಯ ಅಂತರ ಹೆಚ್ಚಳ

ಸಿಲಿಂಡರ್‌ಗಳ ಅತಿಯಾದ ದಾಸ್ತಾನು ಮತ್ತು ದುರುಪಯೋಗ ತಡೆಯಲು ಎರಡು ಸಿಲಿಂಡರ್ ಬುಕಿಂಗ್‌ಗಳ ನಡುವಿನ ಕನಿಷ್ಠ ದಿನಗಳ ಅಂತರವನ್ನು ಹೆಚ್ಚಿಸಲಾಗಿದೆ. ಗ್ರಾಹಕರು ಒಂದು ಸಿಲಿಂಡರ್ ಪಡೆದ ನಂತರ ಎರಡನೇ ಸಿಲಿಂಡರ್ ಬುಕ್ ಮಾಡಲು ಕನಿಷ್ಠ 25 ದಿನಗಳ ಅಂತರ ಕಾಯ್ದುಕೊಳ್ಳಬೇಕು. ಈ ಹಿಂದೆ ಹಿಂದೆ ಇದು 21 ದಿನಗಳಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಈ ಲಾಕ್-ಇನ್ ಅವಧಿಯನ್ನು ಕನಿಷ್ಠ 45 ದಿನಗಳಿಗೆ ನಿಗದಿಪಡಿಸಲಾಗಿದೆ.

ಮೋಸದ ಬುಕಿಂಗ್‌ಗಳಿಗೆ ಕಡಿವಾಣ

ಸಿಲಿಂಡರ್ ಡೆಲಿವರಿ ಪಡೆಯುವ ಪ್ರಕ್ರಿಯೆಯನ್ನು ಈಗ ಸಂಪೂರ್ಣ ಡಿಜಿಟಲೀಕರಣಗೊಳಿಸಲಾಗಿದೆ. ಇನ್ಮುಂದೆ ನಿಮ್ಮ ಮನೆಗೆ ಗ್ಯಾಸ್ ಸಿಲಿಂಡರ್ ಬಂದಾಗ ಕೇವಲ ಹಣ ಮತ್ತು ಹಳೆಯ ರಶೀದಿ ನೀಡಿದರೆ ಸಾಲದು. ಬುಕಿಂಗ್ ಸಮಯದಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ವಿತರಕರಿಗೆ ನೀಡಬೇಕಾಗುತ್ತದೆ. ಈ ಒಟಿಪಿ ನಮೂದಿಸಿದ ನಂತರವೇ ವಿತರಣೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಇದರಿಂದ ನಕಲಿ ಹಾಗೂ ಮೋಸದ ಬುಕಿಂಗ್‌ಗಳಿಗೆ ಕಡಿವಾಣ ಬೀಳಲಿದೆ.

ನೀವು ಉಜ್ಜಲ ಯೋಜನೆಯ ಫಲಾನುಭವಿಗಳಾಗಿದ್ದರೆ ತಕ್ಷಣವೇ ಆಧಾರ್ ಆಧಾರಿತ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಹಾಗೂ ನಿಮ್ಮ ಗ್ಯಾಸ್ ಏಜೆನ್ಸಿಯಲ್ಲಿ ಸರಿಯಾದ ಮೊಬೈಲ್ ಸಂಖ್ಯೆ ನೋಂದಣಿ ಆಗಿರುವುದನ್ನು ಖಚಿತಪಡಿಸಿಕೊಳ್ಳಿ. ನಿಯಮಗಳನ್ನು ಸರಿಯಾಗಿ ಪಾಲಿಸುವುದರಿಂದ ಸರ್ಕಾರದ ಸಬ್ಸಿಡಿ ಹಣ ಯಾವುದೇ ಯಾವುದೇ ಅಡೆತಡೆಯಿಲ್ಲದೆ ನೇರವಾಗಿ ನಿಮ್ಮ ಖಾತೆಗೆ ಜಮೆ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+