ಸೋಷಿಯಲ್ ಮೀಡಿಯಾ ಡಿಪಿ ನಿಮ್ಮ ಗುಣ ಹೇಳುತ್ತೆ! ಪ್ರೊಫೈಲ್ ಚಿತ್ರದ ಹಿಂದಿನ ಅಸಲಿ ರಹಸ್ಯ ಬಿಚ್ಚಿಟ್ಟ ಸಂಶೋಧನೆ
ಇಂದಿನ ದಿನಗಳಲ್ಲಿ ಬಹುತೇಕ ಜನರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುತ್ತಾರೆ. ನಿತ್ಯ ಸ್ಟೇಟಸ್, ಪೋಸ್ಟ್, ಡಿಪಿ ಬದಲಾಯಿಸುತ್ತಿರುತ್ತಾರೆ. ಹೀಗೆ ಬದಲಾಯಿಸುವ ನಿಮ್ಮ ಪ್ರೊಫೈಲ್ ಚಿತ್ರ ನಿಮ್ಮ ವ್ಯಕ್ತಿತ್ವದ ಬಗ್ಗೆ ಹಲವು ವಿಷಯಗಳನ್ನು ಹೇಳತ್ತದೆ ಎಂಬುದು ನಿಮಗೆ ಗೊತ್ತಾ? ನಿಮ್ಮ ಸ್ನೇಹಿತರೊಂದಿಗೆ ಸಂತೋಷದಿಂದಿರುವ ಚಿತ್ರವನ್ನು ನೀವು ಇಷ್ಟಪಡುತ್ತೀರಾ, ಅಥವಾ ನಿಮ್ಮ ಮನದಾಳದ ಆಲೋಚನೆ ಪ್ರತಿನಿಧಿಸುವ ಅಮೂರ್ತ ಚಿತ್ರವನ್ನು ಅಪ್ಲೋಡ್ ಮಾಡುತ್ತೀರಾ, ಇತ್ತೀಚಿನ ಸಂಶೋಧನೆಯೊಂದು ನಿಮ್ಮ ಪ್ರೊಫೈಲ್ ಚಿತ್ರಗಳ ಹಿಂದಿನ ವ್ಯಕ್ತಿತ್ವ ರಹಸ್ಯಗಳನ್ನು ಜಗತ್ತಿನ ಮುಂದಿಟ್ಟಿದೆ.
ಸಾಮಾಜಿಕ ಜಾಲತಾನದಲ್ಲಿನ ಬಳಕೆದಾರರ ಪ್ರೋಫೈಲ್ ಕುರಿತು ಸಂಶೋಧಕ ಡೇನಿಯಲ್ ಪ್ರಿಯೋಟಿಕ್-ಪೀಟ್ರೋ ಅವರು ವಿಸ್ತೃತ ಅಧ್ಯಯನ ನಡೆಸಿದ್ದಾರೆ. 66,000 ಬಳಕೆದಾರರ ಪ್ರೊಫೈಲ್ ಚಿತ್ರಗಳು, 3,200 ಪಠ್ಯ ಸಂದೇಶಗಳು ಮತ್ತು 434 ಜನರ ಮಾನಸಿಕ ಸಮೀಕ್ಷೆಗಳು ಅವರ ಅಧ್ಯಯನದಲ್ಲಿದ್ದು, ಅವರ ಅವೆಲ್ಲವನ್ನು ವಿಶ್ಲೇಷಿಸಿ ಮಾಹಿತಿ ಬಹಿರಂಗಪಡಿಸಿದ್ದಾರೆ. ಅದಕ್ಕಾಗಿ ಅವರು ವ್ಯಕ್ತಿತ್ವ ವಿಕಸನದ ಸಾಫ್ಟ್‌ವೇರ್ ಬಳಸಿದ್ದಾರೆ. ಅದರಿಂದ ಅವರು ವಿವಿಧ ವ್ಯಕ್ತಿತ್ವ ಗುಣಲಕ್ಷಣ, ಅಂತರಾಳದ ವಿಷಯಗಳು, ಭಾವನೆಗಳನ್ನು ಜನರ ಪ್ರೋಫೈಲ್‌ನಲ್ಲಿ ಪ್ರದರ್ಶಿಸುತ್ತಾರೆ ಎಂಬುದನ್ನು ಕಂಡುಕೊಂಡಿದ್ದಾರೆ. ಸಂಶೋಧನೆಯ ಅಂಶಗಳು ಇಲ್ಲಿವೆ.

ಬಹಿರ್ಮುಖ ವ್ಯಕ್ತಿತ್ವ (Extraversion)
ಬಹಿರಂಗ (ಬಹಿರ್ಮುಖ) ವ್ಯಕ್ತಿತ್ವದವರು ಪ್ರತಿ ಹಂತದಲ್ಲೂ ತಮ್ಮನ್ನು ತಾವೇ ತೋರಿಸಿಕೊಳ್ಳಲು ಇಷ್ಟಪಡುತ್ತಾರೆ. ಈ ಗುಣದವರ ಪ್ರೊಫೈಲ್ ಫೋಟೋಗಳು ಸಾಮಾನ್ಯವಾಗಿ ಅತ್ಯಂತ ವರ್ಣರಂಜಿತವಾಗಿರುತ್ತವೆ. ಗುಣಮಟ್ಟದಲ್ಲಿ ಕಳಪೆಯಾಗಿರುತ್ತವೆ. ಕಾಂಟ್ರಾಸ್ಟ್, ಸ್ಯಾಚುರೇಶನ್ ಅಥವಾ ಸ್ಪಷ್ಟತೆಯಂತಹ ಸೌಂದರ್ಯದ ಗುಣಲಕ್ಷಣಗಳಿಗೂ ಇವುಗಳಿಗೂ ಸಂಬಂಧ ಇರುವುದಿಲ್ಲ. ಇವರು ಡಿಪಿ ಫೋಟೋಗಳಲ್ಲಿ ಕನ್ನಡಕ ಧರಿಸುವುದು ಕಡಿಮೆ. ಯುವ ಜನರೊಂದಿಗೆ ಪೋಸ್ ನೀಡುತ್ತಾರೆ ಅಥವಾ ತಾವೇ ಹೆಚ್ಚು ಯುವಕರಾಗಿ ನಗುಮೊಗದೊಂದಿಗೆ ಕಾಣಿಸಿಕೊಳ್ಳಲು ಯತ್ನಿಸುತ್ತಾರೆ.
ಸಹಮತದ ವ್ಯಕ್ತಿತ್ವ (Agreeable)
ಸಹಮತದ ವ್ಯಕ್ತಿತ್ವದ ಗುಣಲಕ್ಷಣಗಳು ಇರುವ ವ್ಯಕ್ತಿಗಳು ಬೇರೆಯವರೊಂದಿಗೆ ಸುಲಭವಾಗಿ ಹೊಂದಿಕೊಳ್ಳುತ್ತಾರೆ. ಸಾಮಾನ್ಯವಾಗಿ ಇವರು ಸದಾ ಸಂತಸದಿಂದ ಕೂಡಿರುತ್ತಾರೆ. ಇಂತಹವರು ಪ್ರೊಫೈಲ್ ವರ್ಣಮಯವಾಗಿ ಕಂಗೊಳಿಸುತ್ತವೆ. ಈ ಪ್ರೊಫೈಲ್ ಚಿತ್ರಗಳು ಸಾಮಾನ್ಯವಾಗಿ ಮಸುಕಾಗಿ ಮತ್ತು ಕಡಿಮೆ ಸ್ಪಷ್ಟತೆಯಿಂದ ಕೂಡಿರುತ್ತವೆ. ತೀರಾ ಅಷ್ಟಾಗಿ ಚೆನ್ನಾಗಿಲ್ಲದ ಇವರ ಚಿತ್ರಗಳಲ್ಲಿ ಸಾಮಾನ್ಯವಾಗಿ ನಗುವ, ನಗುತ್ತಾ ಮಾತನಾಡುವುದು ಅಥವಾ ಸೌಮ್ಯವಾಗಿ ಕಾಣಿಸುತ್ತಾರೆ.
ಆತ್ಮಸಾಕ್ಷಿಯತೆ ವ್ಯಕ್ತಿತ್ವ (Conscientiousness)
ಆತ್ಮಸಾಕ್ಷಿಯತೆ (ಕರ್ತವ್ಯನಿಷ್ಠ) ವ್ಯಕ್ತಿತ್ವದ ಜನರು ಆದಷ್ಟು ವ್ಯವಸ್ಥಿತ ಜೀವನ ನಡೆಸಲು ಇಷ್ಟಪಡುತ್ತಾರೆ. ಆದಷ್ಟು ಪ್ರತಿ ವಿಷಯಗಳಿಗೂ ಅವರು ಪೂರ್ವ ಯೋಜಿತ ಯೋಚಿಸುತ್ತಾರೆ. ಸ್ವಯಂ ಶಿಸ್ತನ್ನು ಇಷ್ಟಪಡುತ್ತಾರೆ. ಆದರೆ ಇವರು ಹಠಮಾರಿ ಸ್ವಭಾದವರಾಗಿರುತ್ತಾರೆ. ಇವರೊಂದಿಗೆ ಹೊಂದಾಣಿಕೆ ಕಷ್ಟ ಎನ್ನಬಹುದು. ಇನ್ನೂ ಕರ್ತವ್ಯನಿಷ್ಠ ಜನರು ತಮ್ಮ ಪ್ರೊಫೈಲ್ ಚಿತ್ರಗಳಲ್ಲಿ ಸಕಾರಾತ್ಮಕ ಭಾವನೆಗಳನ್ನು ಪ್ರದರ್ಶಿಸುತ್ತಾರೆ. ಪ್ರೊಫೈಲ್ ಫೋಟೋದಲ್ಲಿ ನಗಬೇಕು ಮತ್ತು ಸಂತೋಷವಾಗಿ ಕಾಣಿಸಬೇಕು ಎಂಬ ನಿರೀಕ್ಷೆಯಿಂದ ಕೃತಕವಾಗಿ ನಗುತ್ತಾರೆ ಎನ್ನಬಹುದು. ಇವರು ನಿಜ ವಯಸ್ಸಿಗಿಂತ ಹಿರಿಯರಂತೆ ಕಾಣುತ್ತಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಹೆಚ್ಚು ಭಾವನಾತ್ಮಕ ವ್ಯಕ್ತಿತ್ವ (Neuroticism)
ಹೆಚ್ಚು ಭಾವನಾತ್ಮಕ ವ್ಯಕ್ತಿತ್ವ ಉಳ್ಳವರು ನಕಾರಾತ್ಮಕ ಭಾವನೆಗಳಿಂದ ಬೇಗ ಹೊರ ಬರುವುದಿಲ್ಲ. ಅವರು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಕಷ್ಟ. ಇವರು ಪ್ರೊಫೈಲ್ ನಲ್ಲಿ ತಮ್ಮ ಮುಖದ ಫೋಟೋ ಹಾಕುವ ಬದಲಾಗಿ ಇತರ ವಸ್ತುಗಳ ಚಿತ್ರವನ್ನು ಹಾಕುತ್ತಾರೆ. ತಮ್ಮ ಚಿತ್ರ ಪ್ರೊಫೈಲ್ ಚಿತ್ರವನ್ನಾಗಿ ಆರಿಸಿಕೊಳ್ಳಲು ಹೆಚ್ಚು ಇಷ್ಟಪಡುತ್ತಾರೆ. ಓದುವ ಕನ್ನಡಕ ಧರಿಸುವ ಸಾಧ್ಯತೆಯೂ ಇವರಲ್ಲೇ ಹೆಚ್ಚು. ಇವರ ಪ್ರೊಫೈಲ್‌ನಲ್ಲಿ ಯಾವುದೇ ಭಾವನೆಗಳು ತೋರ್ಪಡಿಸುವುದಿಲ್ಲ. ತಟಸ್ಥ ಭಾವನೆಗಳು ಇರುತ್ತವೆ.













Click it and Unblock the Notifications