D Boss: ಸೊರಗಿದ ದರ್ಶನ್ ಫೋಟೋ ನೋಡಿ ಅಭಿಮಾನಿಗಳ ಕಣ್ಣೀರು: ಜೋರಾಯ್ತು ಆರೋಗ್ಯದ ಚರ್ಚೆ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರದ್ದು ಎನ್ನಲಾದ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬೇಲ್ ಸಿಗದ ಇರುವುದರಿಂದ ನಟ ದರ್ಶನ್ ಅವರು​​ ಜೈಲಿನಲ್ಲೇ ಮಾನಸಿಕವಾಗಿ ನೊಂದಿದ್ದಾರೆ. ಮತ್ತೊಂದು ಕಡೆ ಸಾಕ್ಷ್ಯಗಳ ವಿಚಾರಣೆ ಸಹ ತಡವಾಗ್ತಿದೆ ಎಂದು ಹೇಳಲಾಗಿದೆ. ಈ ನಡುವೆ ದರ್ಶನ್ ಅವರು ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ನಟ ದರ್ಶನ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವಂತೆ ಫೋಟೋ ಇರುವುದು ಅಭಿಮಾನಿಗಳಲ್ಲಿ ನೋವನ್ನುಂಟು ಮಾಡಿದೆ. ದರ್ಶನ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಹಲವು ನೆಟ್ಟಿಗರು ಕೆಲವೇ ಕ್ಷಣಗಳಲ್ಲಿ ದುಡುಕಿ ತೆಗೆದುಕೊಳ್ಳುವ ನಿರ್ಧಾರಗಳು ಜೀವನಪೂರ್ತಿ ಹೇಗೆ ಸಂಕಷ್ಟವನ್ನುಂಟು ಮಾಡುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಹೇಳಿದ್ದಾರೆ.

ಕೆಂ.ಎಂ ಲತಾಗೌಡ ಕಬ್ಬಳಿಗೆರೆ ಎನ್ನುವವರು ದರ್ಶನ್ ಅವರ ವೈರಲ್ ಫೋಟೋವನ್ನು ಹಂಚಿ ಕೊಂಡಿದ್ದು, ನಿಮ್ಮನ್ನ ಅಂದು ಅರೆಸ್ಟ್ ಮಾಡಿದಾಗ ಇಡೀ ಕರ್ನಾಟಕದ ಜನರಿಗೆ ಬೇಸರ ವೆನಿಸಿದರೂ, ಕಾನೂನಿಗೆ ಬಹಳ ಗೌರವ ನೀಡಿದರು. ಪೋಲೀಸರ ನಿಷ್ಠಾವಂತ ಕಾರ್ಯಕ್ಕೆ ಹೊಗಳಿದರು, ಆಶ್ಚರ್ಯಪಟ್ಟರು. ಆದರೆ ಇಂದು ಅನಿಸುತ್ತಿದೆ ಇದೊಂದು ರಾಜಕೀಯದ ಮೋಸದಾಟವೆಂದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ನಿಮ್ಮ ವಿಷಯದಲ್ಲಿ ಮುಖ್ಯ ಸಮಸ್ಯೆ ನಿಮ್ಮ ಅಡ್ವೊಕೇಟ್ ನಿಮ್ಮ ಪತ್ನಿ ವಿಜಯಲಕ್ಷ್ಮೀ ಅವರು ಅಡ್ವೋಕೇಟ್ ವಿಷಯದಲ್ಲಿ ಎಡವಿದ್ದಾರೆ ಅನಿಸುತ್ತದೆ.

D Boss

ನಿಮಗೆ ಸೂಪರ್ ಅಡ್ವೋಕೇಟ್ ಒಬ್ಬರು ಮನಸ್ಸು ಮಾಡಿ ನಿಂತಿದ್ದರೆ ನಿಮಗೆ ಎಷ್ಟೆ ಶತ್ರುಗಳು, ಅದೆಷ್ಟು ರಾಜಕೀಯ ನಡೆದಿದ್ದರೂ ನೀವು ಹೊರಗಡೆ ಬರ್ತಾ ಇದ್ರಿ. ನಿಮ್ಮನ್ನು ಈ ರೀತಿ ನೋಡುವಾಗ ಬಹಳ ಬೇಸರವಾಗುತ್ತದೆ ಡಿಬಾಸ್. ನಾನು ನಿಮ್ಮ ಅಭಿಮಾನಿ ಅಲ್ಲ. ನಾನು ಯಾವುದೇ ನಟನ ಅಭಿಮಾನಿ ಆಗಿಲ್ಲ. ಆದರೂ ಈ ದಿನ ನಿಮ್ಮ ಅಭಿಮಾನಿಗಳ ಪರವಾಗಿ ಡಿಬಾಸ್ ಅಂತ ಕರೆಯುತ್ತಿದ್ದೇನೆ. ಮುಖದಲ್ಲಿ ಅನಾರೋಗ್ಯ ಕಾಣುತ್ತಿದೆ. ನೀವು ಜೈಲಿನಲ್ಲೇ ತುಂಬಾ ದಿನ ಕಳೆಯುತ್ತೀರಿ ಎನ್ನುವ ಲಕ್ಷಣಗಳು ಕಾಣುತ್ತಿವೆ. ನಿಮಗೆ ಒಬ್ಬ ಉತ್ತಮ ಅಡ್ವೋಕೇಟ್ ಅವಶ್ಯಕತೆ ಇದೆ. ಇದನ್ನ ನಿಮ್ಮ ಅಭಿಮಾನಿ ಬಳಗ ಮುಂದೆ ನಿಂತು ಮಾಡಬೇಕಿದೆ. ಅವರಿಂದಲೇ ನೀವು ಈಚೆಗೆ ಬರೋಕೆ ಸಾಧ್ಯ. ನಾನು ಕೂಡ ದೇವರಲ್ಲಿ ನಿಮಗೆ ಶುಭವಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ

ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಪರ - ವಿರೋಧ ಚರ್ಚೆ ನಡೆದಿದೆ. ಬಿ.ಸಿ ಕಂಠೀರವ ಎನ್ನುವವರು ಅಭಿಮಾನಿ ಅಲ್ಲ ಎಂದು ಹೇಳಿಕೊಂಡೆ ಇಡೀ ಬರವಣಿಗೆ ಆತನನ್ನು ಸಮರ್ಥಿಸಲಾಗಿದೆ. ಕೋರ್ಟ್‌ ಅವರಿಗೆ ಜಾಮೀನು ಕೊಡಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ. ಆದರೂ ಇದಕ್ಕೆ ವಿರುದ್ಧವಾದ ನಿಮ್ಮ ಬರವಣಿಗೆಗೆ ಏನಾದರೂ ಅರ್ಥವಿದೆಯೇ. ತ್ವರಿತ ನ್ಯಾಯಾಲಯವನ್ನು ಸ್ಥಾಪಿಸಿ ತನಿಖೆಯನ್ನು ಫಾಸ್ಟ್ ಟ್ರಾಕ್ ಮೂಲಕ ಶೀಘ್ರ ಮುಗಿಸಬೇಕು ಎಂದು ತನಿಖಾಧಿಕಾರಿ ಮತ್ತು ರಾಜ್ಯ ಸರ್ಕಾರಕ್ಕೆ ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ.

D Boss

ಇತ್ತೀಚಿಗೆ ಕೊಲೆ ತನಿಖೆಯಲ್ಲಿ ರಾಜಕಾರಣಿ ವಿನಯ್ ಕುಲಕರ್ಣಿ ಜೈಲು ಪಾಲಾಗಿರುವುದನ್ನು ತಿಳಿದಿದ್ದಾರೆ. ಯಡಿಯೂರಪ್ಪ ಭ್ರಷ್ಟಾಚಾರದ ಅಪರಾಧದಲ್ಲಿ ಜೈಲು ಸೇರಿದ್ದು. ಪ್ರಜ್ವಲ್ ರೇವಣ್ಣ ಕಂಬಿ ಹಿಂದೆ ಕುಳಿತಿರೋದು ಎಲ್ಲರಿಗೂ ತಿಳಿದೇ ಇದೆ ಎಂದು ಹೇಳಿದ್ದಾರೆ. ಚೇತನ್ ಎನ್ನುವವರು, ನೀನು ಹೇಳುವುದು ಹೇಗಿದೆ ಎಂದರೆ, ಎಲ್ಲರೂ ನಿಮಗೆ ಇಷ್ಟ ಬಂದಂಗೆ ತಪ್ಪು ಮಾಡಿ ಒಳ್ಳೆಯ ವಕೀಲರ ಮೂಲಕ ಹೊರಗಡೆ ಬಂದು ಆರಾಮಾಗಿ ಇರಿ ಅಂತ ಪ್ರಚೋದನೆ ಕೊಡುತ್ತಿರುವ ರೀತಿ ಇದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+