ನಾಯಿ ಜೊತೆ ಪುಟ್ಟ ಬಾಲಕಿಯ ಕ್ಯೂಟ್ ಮಾತುಕತೆ: ನೆಟ್ಟಿಗರ ಮನಗೆದ್ದ Viral Video

ನಿಷ್ಕಲ್ಮಶ ಮನಸ್ಸಿನ ಮಕ್ಕಳು ಮತ್ತು ಮೂಕ ಪ್ರಾಣಿಗಳ ನಡುವಿನ ಬಾಂಧವ್ಯ ಯಾವಾಗಲೂ ನೋಡುವ ಕಣ್ಣುಗಳಿಗೆ ಮುದ ನೀಡುತ್ತವೆ. ಯಾವುದೇ ಸ್ವಾರ್ಥವಿಲ್ಲದ ಇವರ ಪ್ರೀತಿ ಜಗತ್ತಿನ ಅತ್ಯಂತ ಸುಂದರವಾದ ಭಾವನೆಗಳಲ್ಲಿ ಒಂದು. ಪ್ರೀತಿಯನ್ನು ಹಂಚಲು ಕೇವಲ ಭಾಷೆಯೊಂದೇ ಮಾಧ್ಯಮವಲ್ಲ, ಬದಲಿಗೆ ಮನಸ್ಸಿನ ಮುಗ್ಧತೆ ಸಾಕು ಎಂಬುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಒಂದು ಪುಟ್ಟ ವಿಡಿಯೋವೇ ಸಾಕ್ಷಿ. ಕಲ್ಲು ಮನಸ್ಸನ್ನೂ ಕರಗಿಸುವಂತಹ ಕ್ಯೂಟ್ ಬಾಲಕಿ ಮತ್ತು ಬೀದಿ ನಾಯಿಯೊಂದರ ಹೃದಯಸ್ಪರ್ಶಿ ದೃಶ್ಯವೊಂದು ಈಗ ಇಂಟರ್ನೆಟ್‌ನಲ್ಲಿ ನೆಟ್ಟಿಗರ ಮನಗೆದ್ದಿದೆ.

ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ಇತ್ತೀಚೆಗೆ ಅಪ್‌ಲೋಡ್ ಆಗಿರುವ ವಿಡಿಯೋವೊಂದು ಲಕ್ಷಾಂತರ ಜನರ ಹೃದಯ ಗೆಲ್ಲುತ್ತಿದೆ. ವಿಡಿಯೋದಲ್ಲಿ ಎರಡು ಜುಟ್ಟು ಹಾಕಿಕೊಂಡಿರುವ ಪುಟ್ಟ, ಮುದ್ದಾದ ಹೆಣ್ಣು ಮಗುವೊಂದು ರಸ್ತೆ ಬದಿಯ ಕಟ್ಟೆಯ ಮೇಲೆ ಮಲಗಿರುವ ಶ್ವಾನದ ಬಳಿ ಬಂದು ಮಾತನಾಡಿಸುವ ದೃಶ್ಯವಿದೆ. ಮಗು ತುಂಬಾ ಮುಗ್ಧತೆಯಿಂದ ನಾಯಿಯ ಮುಖದ ಹತ್ತಿರ ನಿಂತು, "ಡಾಗಿ.. ನಿಮಗೆ ಬಿಸ್ಕೆಟ್ ಬೇಕಾ?" ಎಂದು ಹಿಂದಿಯಲ್ಲಿ ಕೇಳುತ್ತದೆ. ನಾಯಿ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನೆ ಮಲಗಿದ್ದಾಗ, ಮಗು ತಾನೇ ಯೋಚಿಸಿ "ಬಿಸ್ಕೆಟ್ ಬೇಡವಾ?" ಎಂದು ಮರುಪ್ರಶ್ನೆ ಹಾಕುತ್ತದೆ.

Viral Video

ಅಷ್ಟಕ್ಕೇ ನಿಲ್ಲದ ಆ ಮುದ್ದು ಮಗಳು, "ಹಾಗಾದರೆ ರೊಟ್ಟಿ ಬೇಕಾ?" ಎಂದು ಪ್ರೀತಿಯಿಂದ ಕೇಳುತ್ತದೆ. ನಾಯಿ ತುಂಬಾ ಸೌಮ್ಯವಾಗಿ ಕಣ್ಣುಗಳನ್ನು ಮಿಟುಕಿಸುತ್ತಾ ಮಗುವಿನ ಮಾತುಗಳನ್ನು ಆಲಿಸುತ್ತಿರುತ್ತದೆ. ಕೊನೆಗೆ ಮಗು "ಓಹ್ ನಿನಗೆ ಬಿಸ್ಕೆಟ್ ಬೇಕು ಅನ್ಸುತ್ತೆ, ಇರು ನಾನು ಅಮ್ಮನ ಹತ್ತಿರ ಕೇಳಿ ತರ್ತೀನಿ" ಎಂದು ಹೇಳಿ, ನಾಯಿಗೆ ಬಾಯ್ ಹೇಳುತ್ತಾ ಅಲ್ಲಿಂದ ತನ್ನ ಪೋಷಕರಿರುವ ಕಡೆಗೆ ಓಡುತ್ತದೆ.

ಈ ಇಡೀ ದೃಶ್ಯದಲ್ಲಿ ನಾಯಿ ಮಗುವಿಗೆ ಯಾವುದೇ ಹಾನಿ ಮಾಡದೆ, ಅದರ ಮುಗ್ಧತೆಗೆ ಶರಣಾದಂತೆ ಶಾಂತವಾಗಿ ಮಲಗಿರುವುದು ಪ್ರಾಣಿ ಪ್ರೇಮಿಗಳ ಗಮನ ಸೆಳೆದಿದೆ. ಮಕ್ಕಳಲ್ಲಿ ಪ್ರಾಣಿಗಳ ಬಗ್ಗೆ ಇರುವ ಕರುಣೆ ಮತ್ತು ಪ್ರೀತಿಯನ್ನು ಈ ವಿಡಿಯೋ ಅತ್ಯಂತ ಸುಂದರವಾಗಿ ಬಿಂಬಿಸಿದೆ. ಪ್ರಸ್ತುತ ದಿನಗಳಲ್ಲಿ ಪ್ರಾಣಿಗಳ ಮೇಲಿನ ದೌರ್ಜನ್ಯದ ಸುದ್ದಿಗಳ ನಡುವೆ, ಇಂತಹ ಸಕಾರಾತ್ಮಕ ಮತ್ತು ಪ್ರೀತಿ ತುಂಬಿದ ವಿಡಿಯೋಗಳು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುತ್ತವೆ. ಈ ವಿಡಿಯೋ ಪ್ರತಿಯೊಬ್ಬರ ಮುಖದಲ್ಲೂ ಒಂದು ಸಣ್ಣ ನಗು ಮೂಡುವಂತೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.

ನೆಟ್ಟಿಗರಿಂದ ಕಮೆಂಟ್‌ಗಳ ಸುರಿಮಳೆ

ಈ ಸುಂದರ ವಿಡಿಯೋ ನೋಡಿದ ನೆಟ್ಟಿಗರು ಭಾವುಕರಾಗಿ ಕಮೆಂಟ್ ಮಾಡುತ್ತಿದ್ದಾರೆ. ಬಳಕೆದಾರರೊಬ್ಬರು "ಮಗುವಿನ ಮುಗ್ಧತೆ ಮತ್ತು ನಾಯಿಯ ಶಾಂತ ನಡೆ ನಿಜಕ್ಕೂ ಅದ್ಭುತ, ಇಂದಿನ ಇಂಟರ್ನೆಟ್‌ನಲ್ಲಿ ನಾನು ನೋಡಿದ ಅತ್ಯಂತ ಸುಂದರ ವಿಡಿಯೋ ಇದು."ಎಂದು ಕಮೆಂಟ್‌ ಮಾಡಿದ್ದಾರೆ. ಹಾಗೆಯೇ "ಮಕ್ಕಳಿಗೆ ಬಾಲ್ಯದಲ್ಲೇ ಪ್ರಾಣಿಗಳ ಮೇಲೆ ಕರುಣೆ ತೋರುವುದನ್ನು ಕಲಿಸಬೇಕು ಎಂಬುದಕ್ಕೆ ಈ ಮಗುವೇ ಸಾಕ್ಷಿ. ಆ ದೇವ ಭಗವಂತ ಇಬ್ಬರನ್ನೂ ಚೆನ್ನಾಗಿಟ್ಟಿರಲಿ." ಎಂದು ಮತ್ತೊಬ್ಬರು ಹಾರೈಸಿದ್ದು, "ಆ ನಾಯಿ ಮಗುವಿನ ಪ್ರೀತಿಯ ಭಾಷೆಯನ್ನು ಅರ್ಥ ಮಾಡಿಕೊಂಡಂತೆ ಕಾಣುತ್ತಿದೆ. ಮೂಕ ಪ್ರಾಣಿಗಳಿಗೆ ಪ್ರೀತಿ ಮಾತ್ರ ಅರ್ಥವಾಗುತ್ತದೆ." ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+