JEE ಅಡ್ವಾನ್ಸ್ಡ್‌ನಲ್ಲಿ ದಾಖಲೆ ಬರೆದ ಹೆಣ್ಣುಮಕ್ಕಳು: ಇದೇ ಮೊದಲ ಬಾರಿಗೆ 10,000ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಐಐಟಿಗೆ ಅರ್ಹತೆ

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜೆಇಇ ಅಡ್ವಾನ್ಸ್ಡ್ 2026ರಲ್ಲಿ 10,000 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ. ಐಐಟಿ ರೂರ್ಕಿ ಸೋಮವಾರ ಪ್ರಕಟಿಸಿದ ಫಲಿತಾಂಶಗಳ ಪ್ರಕಾರ, ಇದುವರೆಗಿನ ಅತಿ ಹೆಚ್ಚು ಉತ್ತೀರ್ಣ ಪ್ರಮಾಣ ಇದಾಗಿದೆ. ಉನ್ನತ ತಾಂತ್ರಿಕ ಶಿಕ್ಷಣದಲ್ಲಿ ಹೆಣ್ಣುಮಕ್ಕಳ ಸಾಧನೆ ಹೊಸ ಮೈಲಿಗಲ್ಲು ತಲುಪಿದೆ.

ಅಧಿಕೃತ ಮಾಹಿತಿಯ ಪ್ರಕಾರ, 2026ರ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಒಟ್ಟು 1,87,389 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಅವರಲ್ಲಿ 1,79,694 ವಿದ್ಯಾರ್ಥಿಗಳು ಪೇಪರ್ 1 ಮತ್ತು ಪೇಪರ್ 2 ಎರಡೂ ಪರೀಕ್ಷೆಗಳಿಗೆ ಹಾಜರಾಗಿದ್ದು, 56,880 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 10,107 ವಿದ್ಯಾರ್ಥಿನಿಯರು ಮತ್ತು 46,773 ವಿದ್ಯಾರ್ಥಿಗಳು ಐಐಟಿ ಪ್ರವೇಶಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

JEE Advanced 2026

ಮಹಿಳಾ ಪ್ರಾತಿನಿಧ್ಯ ಹೆಚ್ಚಳ

ಐಐಟಿಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಸುಧಾರಿಸಲು 2018ರಲ್ಲಿ 'ಸೂಪರ್‌ನ್ಯೂಮರರಿ ಸೀಟ್ಸ್' (ಹೆಚ್ಚುವರಿ ಸೀಟುಗಳು) ಯೋಜನೆಯನ್ನು ಜಾರಿಗೆ ತರಲಾಗಿತ್ತು. 2019 ರಿಂದ ಐಐಟಿಗಳಿಗೆ ಅರ್ಹತೆ ಪಡೆಯುವ ಮಹಿಳೆಯರ ಸಂಖ್ಯೆ 5,356 ರಿಂದ 10,107 ಕ್ಕೆ ಏರಿಕೆಯಾಗಿದೆ. ಅಂದರೆ ಕೇವಲ ಏಳು ವರ್ಷಗಳಲ್ಲಿ ಶೇಕಡಾ 89 ರಷ್ಟು ಜಿಗಿತ ಕಂಡಿದೆ. ಇದೇ ಅವಧಿಯಲ್ಲಿ ಪರೀಕ್ಷೆಗೆ ಹಾಜರಾಗುವ ಮಹಿಳೆಯರ ಸಂಖ್ಯೆ ಕೂಡ 33,249 ರಿಂದ 40,562 ಕ್ಕೆ ಏರಿಕೆಯಾಗಿದ್ದು, ಶೇ. 22 ರಷ್ಟು ಹೆಚ್ಚಳವಾಗಿದೆ.

ಈ ವರ್ಷ 40,562 ಮಹಿಳಾ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ ಶೇ. 24.9 ರಷ್ಟು ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ. 2018 ರಲ್ಲಿ ಕೇವಲ ಶೇ. 13.47 ರಷ್ಟು ಹೆಣ್ಣುಮಕ್ಕಳು ಮಾತ್ರ ಐಐಟಿ ಪ್ರವೇಶಕ್ಕೆ ಅರ್ಹತೆ ಪಡೆದಿದ್ದರು. ಆ ಸಂಖ್ಯೆ ಈಗ ಶೇ. 25 ಕ್ಕೆ ತಲುಪಿದೆ. ಇದು ಎಸ್‌ಟಿಇಎಂ (STEM - ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ) ಶಿಕ್ಷಣದಲ್ಲಿ ಲಿಂಗ ಪ್ರಾತಿನಿಧ್ಯದ ಒಂದು ಮಹತ್ವದ ಸಾಧನೆ ಎಂದು ಶಿಕ್ಷಣ ತಜ್ಞರು ಬಣ್ಣಿಸಿದ್ದಾರೆ.

ಸೀಟುಗಳ ಲಭ್ಯತೆ

ಒಟ್ಟಾರೆಯಾಗಿ, 56,880 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದು, ಕಾಮನ್ ರ‍್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಜೆಇಇ ಅಡ್ವಾನ್ಸ್ಡ್ ರ‍್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದ ತಕ್ಷಣ ಐಐಟಿಯಲ್ಲಿ ಸೀಟು ಖಾತರಿಯಾಗುವುದಿಲ್ಲ ಎಂಬುದನ್ನು ವಿದ್ಯಾರ್ಥಿಗಳು ಗಮನಿಸಬೇಕು. ದೇಶದ 23 ಐಐಟಿಗಳು ಸೇರಿ ಒಟ್ಟು ಸುಮಾರು 20,000 ಸೀಟುಗಳನ್ನು ಮಾತ್ರ ನೀಡುತ್ತವೆ. ಐಐಟಿಗೆ ಸೇರಲು ಸಾಧ್ಯವಾಗದವರು ಎನ್‌ಐಟಿ ಅಥವಾ ಇತರ ಪ್ರತಿಷ್ಠಿತ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಈ ರ‍್ಯಾಂಕ್ ಅನ್ನು ಬಳಸಿಕೊಳ್ಳಬಹುದು.

ಟಾಪರ್ಸ್ ವಿವರ

ಈ ಬಾರಿಯ ಫಲಿತಾಂಶದಲ್ಲಿ ಐಐಟಿ ದೆಹಲಿ ವಲಯದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಶುಭಂ ಕುಮಾರ್ 360 ಕ್ಕೆ 330 ಅಂಕಗಳನ್ನು ಗಳಿಸುವ ಮೂಲಕ ಅಖಿಲ ಭಾರತ ಮಟ್ಟದಲ್ಲಿ ಮೊದಲ ರ‍್ಯಾಂಕ್ (AIR 1) ಪಡೆದಿದ್ದಾರೆ. ಕಬೀರ್ ಛಿಲ್ಲರ್ (329 ಅಂಕ) ಮತ್ತು ಜತಿನ್ ಚಾಹರ್ (319 ಅಂಕ) ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ. ಇನ್ನು ಮಹಿಳಾ ವಿಭಾಗದಲ್ಲಿ ಐಐಟಿ ದೆಹಲಿ ವಲಯದ ಆರೋಹಿ ದೇಶಪಾಂಡೆ 360 ಕ್ಕೆ 280 ಅಂಕಗಳನ್ನು ಪಡೆದು (CRL 77) ದೇಶದಲ್ಲೇ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯಾಗಿ ಹೊರಹೊಮ್ಮಿದ್ದಾರೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ವರ್ಷ ಹೆಣ್ಣುಮಕ್ಕಳು ಜೆಇಇ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಇದು ಸಮಾಜದಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಉನ್ನತ ಶಿಕ್ಷಣದಲ್ಲಿ, ಅದರಲ್ಲೂ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಣ್ಣುಮಕ್ಕಳ ಬಗ್ಗೆ ಪೋಷಕರಲ್ಲಿ ಹೆಚ್ಚುತ್ತಿರುವ ಅರಿವನ್ನು ಸ್ಪಷ್ಟವಾಗಿ ತೋರಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+