ಟಿಕೆಟ್ ಕೈ ತಪ್ಪಿದ್ದಕ್ಕೆ ಕಣ್ಣೀರಿಟ್ಟ ಸಂಪಂಗಿ, ಮೊಯ್ಲಿ ವಿರುದ್ಧ ಆಕ್ರೋಶ

Posted By:
Subscribe to Oneindia Kannada

ಚಿಕ್ಕಬಳ್ಳಾಪುರ, ಏಪ್ರಿಲ್ 16: ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿದ್ದಕ್ಕೆ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎನ್.ಸಂಪಂಗಿ ಕಣ್ಣೀರಿಟ್ಟರು.

ಚಿಕ್ಕಬಳ್ಳಾಪುರ ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ವೀರಪ್ಪ ಮೊಯ್ಲಿ ತಮಗೆ ಮೋಸ ಮಾಡಿದರು, ನನಗೆ ಧಕ್ಕಬೇಕಿದ್ದ ಟಿಕೆಟ್‌ ಅನ್ನು ಬೇರೆಯವರಿಗೆ ಕೊಡಿಸಿದ್ದಾರೆ ಎಂದು ಆರೋಪಿಸಿದರು. ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ ಅನ್ನು ಸುಬ್ಬಾರೆಡ್ಡಿಗೆ ನೀಡಲಾಗಿದೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಸುದ್ದಿಗೋಷ್ಠಿ ನಡೆಯಬೇಕಾದರೆ ಮಾಧ್ಯಮದವರ ಎದುರಿಗೆ ಕಣ್ಣೀರು ಹಾಕಿದ ಅವರು, 'ಮೊಯ್ಲಿ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಬಾವಿಗೆ ತಳ್ಳುತ್ತಿದ್ದಾರೆ' ಎಂದರು.

congress ticket aspirant sampangi cries for not getting ticket

'ವೀರಪ್ಪ ಮೊಯ್ಲಿ ಅವರು ಸತತ ಸೋಲಿನಿಂದ ಕಂಗೆಟ್ಟಿದ್ದಾಗ ಅವರನ್ನು ಕರೆತಂದು ಚಿಕ್ಕಬಳ್ಳಾಪುರದಿಂದ ಗೆಲ್ಲುವಂತೆ ಮಾಡಿದೆವು, ಆದರೆ ನಮಗೆ ಇಂದು ಅವರು ಮೋಸ ಮಾಡಿದ್ದಾರೆ, ಅವರಿಗೆ ನಿಜವಾಗಿಯೂ ದೇವರ ಮೇಲೆ ಭಕ್ತಿ ಇದ್ದರೆ ನನಗೆ ಟಿಕೆಟ್ ಕೊಡಿಸಲಿ' ಎಂದು ಕಣ್ಣೀರು ಹಾಕಿದರು.

ಅಂಬರೀಶ್‌ಗೆ ಟಿಕೆಟ್‌, ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಚೇರಿ ಧ್ವಂಸ

congress ticket aspirant sampangi cries for not getting ticket

ಬೇರೆ ಪಕ್ಷಕ್ಕೆ ಹೋಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಂಪಂಗಿ ಅವರು, ಕಾಂಗ್ರೆಸ್‌ನಲ್ಲಿ ಬಿ-ಫಾರಂ ಕೊಡುವವರೆಗೂ ಏನು ಬೇಕಾದರೂ ಆಗಬಹುದು, ನಾನು ಇನ್ನೂ ಭರವಸೆ ಕಳೆದುಕೊಂಡಿಲ್ಲ, ಅಂತಹಾ ಪರಿಸ್ಥಿತಿ ಬಂದರೆ ನನ್ನ ಬೆಂಬಲಿಗರೊಂದಿಗೆ ಮಾತನಾಡಿದ ಮುಂದಿನ ನಿರ್ಧಾರ ಮಾಡುತ್ತೇನೆ' ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bagepalli Congress ticket aspirant N Sampangi for not getting ticket. He said Veerappa Moily cheated him. congress gave ticket to Subbareddy from Bagepalli constituency.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ