ಮಾತು ತಪ್ಪಿದ್ರಾ ಅಂಬರೀಶ್, ಗಣಿಗ ರವಿ ಬಂಡಾಯಕ್ಕೆ ಏನು ಕಾರಣ?

Posted By:
Subscribe to Oneindia Kannada

ಮಂಡ್ಯ, ಏಪ್ರಿಲ್ 16: ಅಂಬರೀಶ್‌ ಅವರಿಗೆ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಮಂಡ್ಯ ಕಾಂಗ್ರೆಸ್‌ನಲ್ಲಿ ಬಂಡಾಯ ಭುಗಿಲೆದ್ದಿದ್ದು, ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ರವಿಕುಮಾರ್ ಗಣಿಗ ಬೆಂಬಲಿಗರು ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ.

ಗಣಿಗ ರವಿ ಅವರು ಈ ಬಾರಿ ಮಂಡ್ಯ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿ ಆಗಿದ್ದರು. ಅದಕ್ಕೆ ತಕ್ಕಂತೆ ಅಂಬರೀಶ್ ಅವರು ಕೂಡಾ ಟಿಕೆಟ್‌ಗೆ ಅರ್ಜಿ ಸಲ್ಲಿಸಿರಲಿಲ್ಲ, ಆದರೆ ಹಠಾತ್ ಬೆಳವಣಿಗೆಯಲ್ಲಿ ಅಂಬರೀಶ್ ಅವರಿಗೆ ಟಿಕೆಟ್ ಘೋಷಣೆ ಆಗಿದ್ದು, ಇದೀಗ ಮಂಡ್ಯ ಕಾಂಗ್ರೆಸ್‌ನಲ್ಲಿ ಭಿನ್ನಮತ ಪ್ರಾರಂಭವಾಗಿದೆ.

ಮಂಡ್ಯ ಟಿಕೆಟ್ ಬಗ್ಗೆ ಸ್ವತಃ ಅಂಬರೀಶ್ ಹೀಗಂದಿದ್ದಾರೆ

ಗಣಿಗ ರವಿ ಅವರು ಕಳೆದ ಚುನಾವಣೆಯಲ್ಲೇ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದರು, ಆಗ ಅಂಬರೀಶ್‌ ಅವರು 'ಇದು ನನ್ನ ಕೊನೆಯ ಚುನಾವಣೆ' ಎಂದು ಹೇಳಿ ಗಣಿಗ ರವಿ ಅವರನ್ನು ಟಿಕೆಟ್ ರೇಸ್‌ನಿಂದ ತಪ್ಪಿಸಿದ್ದರು ಎನ್ನಲಾಗಿದೆ. ಆದರೆ ಈ ಬಾರಿ ಮತ್ತೆ ಅವರೇ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸುತ್ತಿರುವುದು ಗಣಿಗ ರವಿ ಅವರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇಂದು ಮಧ್ಯಾಹ್ನದ ವೇಳೆಗೆ ಮಂಡ್ಯಾ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ನುಗ್ಗಿದ ಗಣಿಗ ರವಿ ಅವರ ಬೆಂಬಲಿಗರು ಅಲ್ಲಿನ ಪೀಠೋಪಕರಣಗಳನ್ನು ಧ್ವಂಸಗೊಳಿಸಿ, ಅಂಬರೀಶ್ ವಿರುದ್ಧ ಧಿಕ್ಕಾರಗಳನ್ನು ಕೂಗಿದ್ದಾರೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಅಂಬರೀಶ್‌ ಮೋಸ ಮಾಡಿದ್ದಾರೆ

ಅಂಬರೀಶ್‌ ಮೋಸ ಮಾಡಿದ್ದಾರೆ

ಇಂದು ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗಣಿಗ ರವಿ ಅವರು, 'ಅಂಬರೀಶ್ ನನಗೆ ಮೋಸ ಮಾಡಿದ್ದಾರೆ, ನಾನು ಅವರ ವಿರುದ್ಧ ಪಕ್ಷೇತರವಾಗಿ ಕಣಕ್ಕಿಳಿಯುತ್ತೇನೆ' ಎಂದು ಘೋಷಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ನಿಯಮಗಳು ಕಾಟಾಚಾರಕ್ಕಷ್ಟೆ

ಕಾಂಗ್ರೆಸ್‌ನಲ್ಲಿ ನಿಯಮಗಳು ಕಾಟಾಚಾರಕ್ಕಷ್ಟೆ

'ಅಂಬರೀಶ್‌ ಅರ್ಜಿ ಹಾಕದೇ ಇದ್ದರೂ ಟಿಕೆಟ್ ಕೊಟ್ಟಿದ್ದಾರೆ, ನಾನು ಅರ್ಜಿ ಹಾಕಿದ್ದರೂ ನನಗೆ ಟಿಕೆಟ್ ಕೊಟ್ಟಿಲ್ಲ, ಅಂಬರೀಶ್ ಕ್ಷೇತ್ರಕ್ಕೆ ಬರದೇ ಇದ್ದರೂ ಅವರ ಪ್ರಚಾರ ಮಾಡಿ ಗೆಲ್ಲಿಲಿಸಿದ್ದೆ, ಆದರೆ ಅವರು ನನಗೆ ಮೋಸ ಮಾಡಿದರು' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

12 ಹಾಲಿ ಶಾಸಕರಿಗೆ ಟಿಕೆಟ್ ನೀಡದೆ ರಣತಂತ್ರ ಹೂಡಿದ ಕಾಂಗ್ರೆಸ್

ಅರ್ಜಿ ಹಾಕಿರಲಿಲ್ಲ ಅಂಬರೀಶ್

ಅರ್ಜಿ ಹಾಕಿರಲಿಲ್ಲ ಅಂಬರೀಶ್

ಅಂಬರೀಶ್‌ ಅವರ ಟಿಕೆಟ್‌ಗಾಗಿ ಅರ್ಜಿಯೇ ಹಾಕಿರಲಿಲ್ಲ. ಅವರು ಸ್ಪರ್ಧಿಸುವುದೂ ಕೂಡ ಅನುಮಾನವೇ ಆಗಿತ್ತು. ಆರೋಗ್ಯ ಸರಿ ಇಲ್ಲದ ಕಾರಣ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎನ್ನಲಾಗಿತ್ತು.

ಕಳೆದ ಚುನಾವಣೆಯಲ್ಲೂ ರವಿ ಆಕಾಂಕ್ಷಿ

ಕಳೆದ ಚುನಾವಣೆಯಲ್ಲೂ ರವಿ ಆಕಾಂಕ್ಷಿ

ಗಣಿಗ ರವಿಕುಮಾರ್ ಅವರು ಕಳೆದ ಚುನಾವಣೆಯಲ್ಲೂ ಕಾಂಗ್ರೆಸ್ ಟಿಕೆಟ್ ಅಭ್ಯರ್ಥಿಯಾಗಿದ್ದರು. ಸಾಕಷ್ಟು ಸಂಖ್ಯೆಯಲ್ಲಿ ಯುವ ಬೆಂಬಲಿಗರನ್ನು ಹೊಂದಿರುವ ರವಿ ಅವರಿಗೆ ಈ ಬಾರಿ ಟಿಕೆಟ್ ಪಕ್ಕಾ ಎನ್ನಲಾಗುತ್ತಿತ್ತು ಆದರೆ ಈಗ ಅದು ಅಂಬರೀಶ್ ಪಾಲಾಗಿದೆ.

ಅಂಬರೀಶ್ ಜನಪ್ರಿಯತೆ ಕುಸಿತ?

ಅಂಬರೀಶ್ ಜನಪ್ರಿಯತೆ ಕುಸಿತ?

ಅನಾರೋಗ್ಯವೋ ಅಥವಾ ಬೇಜವಬ್ದಾರಿಯೋ ಅಂಬರೀಶ್‌ ಅವರು ಗೆದ್ದ ಮೇಲೆ ಕ್ಷೇತ್ರದ ಕಡೆ ಬಂದಿದ್ದೇ ಕಡಿಮೆ ಹಾಗಾಗಿ ಅವರ ವಿರುದ್ಧ ಆಗಾಗ ಸಾರ್ವಜನಿಕರು ಬಹಿರಂಗವಾಗಿ ಅಸಹನೆ ವ್ಯಕ್ತಪಡಿಸಿದ್ದರು. ಮಂಡ್ಯದಲ್ಲಿ ಅಂಬರೀಶ್ ಅವರ ಜನಪ್ರಿಯತೆ ಕುಸಿತ ಕಂಡಿದೆ ಎನ್ನಲಾಗುತ್ತಿದೆ.

ರಮ್ಯಾ ತಾಯಿ ಸ್ಪರ್ಧೆ?

ರಮ್ಯಾ ತಾಯಿ ಸ್ಪರ್ಧೆ?

ಮಂಡ್ಯ ಕಾಂಗ್ರೆಸ್‌ ಮುಖಂಡರ ಮೇಲೆ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಉಸ್ತುವಾರಿ ರಮ್ಯಾ ಅವರ ತಾಯಿ // ಅವರು ಮಂಡ್ಯದಿಂದಲೇ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿದ್ದರು. ಅವರು ಅಂಬರೀಶ್‌ ಅವರ ಮೇಲೆ ಮುನಿಸಿನಿಂದಲೇ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎನ್ನಲಾಗಿತ್ತು.

ಮಾತು ತಪ್ಪಿದರಾ ಅಂಬಿ

ಮಾತು ತಪ್ಪಿದರಾ ಅಂಬಿ

ಗಣಿಗ ರವಿಕುಮಾರ್ ಹೇಳುವಂತೆ, 2013ರ ಚುನಾವಣೆಯಲ್ಲೇ ಅಂಬರೀಶ್ ಹಾಗೂ ಗಣಿಗ ರವಿ ಅವರ ನಡುವೆ ಒಪ್ಪಂದವಾಗಿತ್ತು. 'ಇದು ನನ್ನ ಕೊನೆ ಚುನಾವಣೆ' ಎಂದು ಹೇಳಿ ತಮಗೆ ಬೆಂಬಲ ನೀಡುವಂತೆ ಅಂಬರೀಶ್ ಕೇಳಿದ್ದರಂತೆ. ಅದಕ್ಕೆ ಒಪ್ಪಿ ರವಿ ಹಾಗೂ ಅವರ ಬೆಂಬಲಿಗರು ಅಂಬರೀಶ್ ಅವರ ಪರ ಪ್ರಚಾರ ಮಾಡಿದ್ದರಂತೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mandya ticket issued to Actor Ambarish mean while Rebellion started in Mandya congress. another ticket aspirant Ravi Kumar Ganiga's supporters destroyed Mandya congress party office.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ