ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

Posted By:
Subscribe to Oneindia Kannada
   Karnataka Elections 2018 : 72 ಅಭ್ಯರ್ಥಿಗಳ ಪಟ್ಟಿಯನ್ನ ಅಧಿಕೃತವಾಗಿ ಬಿಡುಗಡೆ ಮಾಡಿದ ಬಿಜೆಪಿ |Oneindia Kannada

   ಬೆಂಗಳೂರು, ಏಪ್ರಿಲ್ 08: ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ 72 ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿಯನ್ನು ಪ್ರಕಟಿಸಿದೆ. ಈಗಾಗಲೇ ಜೆಡಿಎಸ್ ಪಕ್ಷ 126 ಅಭ್ಯರ್ಥಿಗಳ ಅಧಿಕೃತ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ಇನ್ನೂ ತನ್ನ ಪಟ್ಟಿ ಪ್ರಕಟಿಸಿಲ್ಲ.

   ಬಿಜೆಪಿ ಮೂರು ಸುತ್ತಿನ ಸಮೀಕ್ಷೆ ನಂತರ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿದೆ. ಪ್ರಧಾನಿ ಮೋದಿ ನೇತೃತ್ವದ ಚುನಾವಣಾ ಸಮಿತಿ ಭಾನುವಾರದಂದು ಸಭೆ ಸೇರಿ ಈ ಬಗ್ಗೆ ಅಂತಿಮ ನಿರ್ಣಯ ಕೈಗೊಂಡಿದೆ. ನವದೆಹಲಿಯಲ್ಲಿ ಜೆ.ಪಿ ನಡ್ಡಾ ಅವರು ಸುದ್ದಿಗೋಷ್ಠಿ ನಡೆಸಿ, ಅಧಿಕೃತವಾಗಿ ಪಟ್ಟಿ ಪ್ರಕಟಿಸಿದರು.

   Elections 2018: BJP announces list of candidates

   ದೆಹಲಿಯ ಮಹಾನಗರ ಪಾಲಿಕೆ ಹಾಗೂ ಉತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಅನುಸರಿಸಿದ ಮಾನದಂಡವನ್ನೇ ಕರ್ನಾಟಕದಲ್ಲೂ ಅಮಿತ್ ಶಾ ಪಾಲಿಸುತ್ತಿದ್ದಾರೆ. ಇದು ಬಿಜೆಪಿಯ ಹಾಲಿ ಶಾಸಕರು ಹಾಗೂ ಕೆಲವು ಮುಖಂಡರಿಗೆ ಭಾರೀ ಇರಿಸು-ಮುರಿಸು ತಂದಿತ್ತು.

   ಚುನಾವಣೆ 2018 : ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

   ಮೊದಲ ಪಟ್ಟಿಯಂತೆ ಬಿಜೆಪಿಯ ಸಿಎಂ ಅಭ್ಯರ್ಥಿ ಬಿ.ಎಸ್ ಯಡಿಯೂರಪ್ಪ ಅವರು ಶಿಕಾರಿಪುರದಿಂದ ಸ್ಪರ್ಧಿಸಲಿದ್ದಾರೆ. ಅಫ್ಜಲ್ ಪುರ ವಿಧಾನಸಭೆಯಿಂದ ಮಾಲಿಕಯ್ಯ ಗುತ್ತೇದಾರ್, ಬಸವಕಲ್ಯಾಣದಿಂದ- ಮಲ್ಲಿಕಾರ್ಜುನ ಖೂಬಾ ಅವರಿಗೆ ಟಿಕೆಟ್ ಸಿಕ್ಕಿದೆ.

   ಬಿಜೆಪಿಯಲ್ಲಿ ಟಿಕೆಟ್ ಬಿಕ್ಕಟ್ಟು, 10 ಕ್ಷೇತ್ರದಲ್ಲಿ ಬಂಡಾಯ

   72 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಹೀಗಿದೆ:

   ಕ್ರಮ ಸಂಖ್ಯೆ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಹೆಸರು
   01 ನಿಪ್ಪಾಣಿ ಶಶಿಕಲಾ ಜೊಲ್ಲೆ
   02 ಅಥಣಿ ಲಕ್ಷ್ಮಣ ಸವದಿ
   03 ಕಾಗವಾಡ ಭರಮಗೌಡ ಎಚ್ ಕಾಗೆ
   04 ಕುಡಚಿ(ಎಸ್ ಸಿ)
   ಪಿ. ರಾಜೀವ್
   05 ರಾಯಭಾಗ(ಎಸ್ ಸಿ)
   ದುರ್ಯೋಧನ ಐಹೊಳೆ
   06 ಹುಕ್ಕೇರಿ ಉಮೇಶ್ ಕತ್ತಿ
   07 ಅರಬಾವಿ ಬಾಲಚಂದ್ರ ಜಾರಕಿಹೊಳಿ
   08 ಬೆಳಗಾವಿ ಗ್ರಾಮಾಂತರ
   ಸಂಜಯ್ ಪಾಟೀಲ್
   09 ಬೈಲಹೊಂಗಲ ಡಾ. ವಿಶ್ವನಾಥ್ ಪಾಟೀಲ್
   10 ಸವದತ್ತಿ ಎಲ್ಲಮ್ಮ
   ಆನಂದ್ ವಿಶ್ವನಾಥ್ ಮಾಮನಿ
   11 ಮುಧೋಳ(ಎಸ್ ಸಿ)
   ಗೋವಿಂದ ಕಾರಜೋಳ
   12 ಮುದ್ದೇಬಿಹಾಳ ಎ.ಎಸ್ ಪಾಟೀಲ್ ನಡಹಳ್ಳಿ
   13 ಬಬಲೇಶ್ವರ ವಿಜುಗೌಡ ಪಾಟೀಲ್
   14 ಬಿಜಾಪುರ ನಗರ ಬಸವನಗೌಡ ಪಾಟೀಲ್ ಯತ್ನಾಳ್
   15 ಸಿಂದಗಿ ರಮೇಶ್ ಭೂಸನೂರ್
   16 ಅಫ್ಜಲಪುರ
   ಮಾಲಿಕಯ್ಯ ಗುತ್ತೇದಾರ್
   17 ಶಹಾಪುರ(ಎಸ್ ಟಿ)
   ನರಸಿಂಹ ನಾಯ್ಕ್
   18 ಸುರಪುರ ಗುರು ಪಾಟೀಲ್ ಶಿರವಾಳ್
   19 ಗುಲಬರ್ಗಾ ದಕ್ಷಿಣ
   ದತ್ತಾತ್ರೇಯ ಪಾಟೀಲ್ ರೇವೂರ್
   20 ಆಳಂದ ಸುಭಾಷ್ ಗುತ್ತೇದಾರ್
   21 ಬಸವಕಲ್ಯಾಣ ಮಲ್ಲಿಕಾರ್ಜುನ ಖೂಬಾ
   22 ಔರಾದ್(ಎಸ್ ಸಿ) ಪ್ರಭು ಚೌಹಾಣ್
   23 ರಾಯಚೂರು ಗ್ರಾಮೀಣ (ಎಸ್ ಟಿ) ತಿಪ್ಪರಾಜು ಹವಲ್ದಾರ್
   24 ರಾಯಚೂರು ಡಾ. ಶಿವರಾಜ್ ಪಾಟೀಲ್
   25 ದೇವದುರ್ಗ (ಎಸ್ ಟಿ) ಶಿವನಗೌಡ ಪಾಟೀಲ್
   26 ಲಿಂಗಸುಗೂರು(ಎಸ್ ಸಿ) ಮಾನಪ್ಪ ವಜ್ಜಲ್
   27 ಕುಷ್ಟಗಿ ದೊಡ್ಡನಗೌಡ ಪಾಟೀಲ್
   28 ಧಾರವಾಡ ಅಮೃತ್ ದೇಸಾಯಿ
   29 ಹುಬ್ಳಿ-ಧಾರವಾಡ ಕೇಂದ್ರ ಜಗದೀಶ್ ಶೆಟ್ಟರ್
   30 ಹುಬ್ಳಿ-ಧಾರವಾಡ ಪಶ್ಚಿಮ ಅರವಿಂದ ಬೆಲ್ಲದ್
   31 ಕಾರವಾರ ರೂಪಾಲಿ ನಾಯ್ಕ್
   32 ಶಿರಸಿ ಕಾಗೇರಿ ವಿಶ್ವೇಶ್ವರ ಹೆಗ್ಡೆ
   33 ಹಾನಗಲ್ ಸಿ.ಎಂ ಉದಾಸಿ
   34 ಶಿಗ್ಗಾಂವಿ ಬಸವರಾಜ ಬೊಮ್ಮಾಯಿ
   35 ಹಿರೇಕೆರೂರು ಯು.ಬಿ ಬಣಕರ್
   36 ವಿಜಯನಗರ(ಹೊಸಪೇಟೆ) ಗವಿಯಪ್ಪ
   37 ಕಂಪ್ಲಿ(ಎಸ್ ಟಿ) ಟಿ.ಎಚ್ ಸುರೇಶ್ ಬಾಬು
   38 ಸಂಡೂರು (ಎಸ್ ಟಿ) ಬಿ ರಾಘವೇಂದ್ರ
   39 ಮೊಳಕಾಲ್ಮೂರು(ಎಸ್ ಟಿ) ಬಿ ಶ್ರೀರಾಮುಲು
   40 ಚಿತ್ರದುರ್ಗ ಜಿ. ಎಚ್ ತಿಪ್ಪಾರೆಡ್ಡಿ
   41 ಹಿರಿಯೂರು ಪೂರ್ಣಿಮಾ ಶ್ರೀನಿವಾಸ್
   42 ಹೊಸದುರ್ಗ ಗೂಳಿಹಟ್ಟಿ. ಡಿ ಶೇಖರ್
   43 ದಾವಣಗೆರೆ ಉತ್ತರ ಎಸ್. ಎ ರವೀಂದ್ರನಾಥ್
   44 ಶಿವಮೊಗ್ಗ ಕೆ.ಎಸ್ ಈಶ್ವರಪ್ಪ
   45 ಶಿಕಾರಿಪುರ ಬಿ.ಎಸ್ ಯಡಿಯೂರಪ್ಪ
   46 ಕುಂದಾಪುರ ಹಾಲಾಡಿ ಶ್ರೀನಿವಾಸ ಶೆಟ್ಟಿ
   47 ಕಾರ್ಕಳ ವಿ ಸುನೀಲ್ ಕುಮಾರ್
   48 ಶೃಂಗೇರಿ ಡಿ. ಎನ್ ಜೀವರಾಜ್
   49 ಚಿಕ್ಕಮಗಳೂರು ಸಿ.ಟಿ ರವಿ
   50 ತುಮಕೂರು ಗ್ರಾಮೀಣ ಬಿ ಸುರೇಶ್ ಗೌಡ
   51 ಕೆಜಿಎಫ್ (ಎಸ್ ಸಿ) ವೈ ಸಂಪಂಗಿ
   52 ಯಲಹಂಕ ಎಸ್. ಆರ್ ವಿಶ್ವನಾಥ್
   53 ರಾಜರಾಜೇಶ್ವರಿನಗರ ಪಿ.ಎಂ ಮುನಿರಾಜು ಗೌಡ
   54 ದಾಸರಹಳ್ಳಿ ಎಸ್ ಮುನಿರಾಜು
   55 ಮಲ್ಲೇಶ್ವರಂ ಡಾ. ಸಿ.ಎನ್ ಅಶ್ವಥನಾರಾಯಣ
   56 ಹೆಬ್ಬಾಳ ಡಾ. ವೈ.ಎ ನಾರಾಯಣ ಸ್ವಾಮಿ
   57 ಸಿ. ವಿ ರಾಮನ್ ನಗರ(ಎಸ್ ಸಿ) ಎಸ್ ರಘು
   58 ರಾಜಾಜಿನಗರ ಸುರೇಶ್ ಕುಮಾರ್
   59 ಗೋವಿಂದರಾಜ ನಗರ ವಿ ಸೋಮಣ್ಣ
   60 ಚಿಕ್ಕಪೇಟೆ ಉದಯ್ ಗರುಡಾಚಾರ್
   61 ಬಸವನಗುಡಿ ರವಿ ಸುಬ್ರಹ್ಮಣ್ಯ
   62 ಪದ್ಮನಾಭನಗರ ಆರ್ ಅಶೋಕ್
   63 ಜಯನಗರ ಬಿ.ಎನ್ ವಿಜಯ್ ಕುಮಾರ್
   64 ಮಹದೇವಪುರ (ಎಸ್ ಸಿ) ಅರವಿಂದ ಲಿಂಬಾವಳಿ
   65 ಬೊಮ್ಮನಹಳ್ಳಿ ಸತೀಶ್ ರೆಡ್ಡಿ
   66 ಬೆಂಗಳೂರು ದಕ್ಷಿಣ ಎಂ. ಕೃಷ್ಣಪ್ಪ
   67 ಆನೇಕಲ್ (ಎಸ್ ಸಿ) ಎ ನಾರಾಯಣಸ್ವಾಮಿ
   68 ಹೊಸಕೋಟೆ ಶರತ್ ಬಚ್ಚೇಗೌಡ
   69 ಚನ್ನಪಟ್ಟಣ ಸಿ.ಪಿ ಯೋಗೇಶ್ವರ
   70 ಶ್ರೀರಂಗಪಟ್ಟಣ ನಂಜುಂಡೇಗೌಡ
   71 ಸುಳ್ಯ (ಎಸ್ ಸಿ) ಎಸ್ ಅಂಗಾರ
   72 ಮಡಿಕೇರಿ ಅಪ್ಪಚ್ಚು ರಂಜನ್

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Bharatiya Janata Party (BJP) today(Apr 8) announced official list of 72 candidates for Karnataka assembly elections 2018

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ