Get Updates
Get notified of breaking news, exclusive insights, and must-see stories!

Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ

Horoscope March 12: ಮಾರ್ಚ್ 12ರಂದು ಗುರುವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎಂಬ ಮಾಹಿತಿ ನೀಡಲಾಗಿದ್ದು, ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯವಾಗಿದೆ. ಮಾರ್ಚ್ 12ರ ದಿನ ಭವಿಷ್ಯ ಪ್ರಕಾರ, ಈ 12 ರಾಶಿಯವರ ಭವಿಷ್ಯ, ಫಲಾಫಲಗಳು ಹೇಗಿರುತ್ತವೆ. ಈ ದಿನ ನಿಮ್ಮ ಪರವಾಗಿದೆಯೋ ಅಥವಾ ವಿರುದ್ಧವಾಗಿದೆಯೋ ಎಂಬ ಪೂರ್ಣ ವಿವರ ಇಲ್ಲಿದೆ.

2026 ಮಾರ್ಚ್ 12 ರ ದ್ವಾದಶ ರಾಶಿಗಳ ದಿನ ಭವಿಷ್ಯ

ಮೇಷ ರಾಶಿ:

ಗುರುವಿನ ನೇರ ಚಲನೆಯ ಶುಭ ಪ್ರಭಾವ ನಿಮಗೆ ವಿದೇಶ ಪ್ರಯಾಣದ ಯೋಗವನ್ನು ತರಲಿದೆ. ವೃತ್ತಿಯಲ್ಲಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲು ಇದು ಸೂಕ್ತ ಸಮಯ. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯ ನಿರ್ಧಾರಗಳು ಅಗತ್ಯ. ಪ್ರೇಮಜೀವನದಲ್ಲಿ ಮಧುರ ಕ್ಷಣಗಳು ಕಾದಿವೆ. ಮನೆಯಲ್ಲಿ ಹಿರಿಯರೊಂದಿಗೆ ಮಾತುಕತೆ ಸುಧಾರಿಸುತ್ತದೆ. ಸಂಜೆಯ ವೇಳೆಗೆ ಸ್ನೇಹಿತರೊಂದಿಗೆ ಭೇಟಿಯಾಗಬಹುದು. ಮಾರ್ಚ್ ತಿಂಗಳು ನಿಮಗೆ ಅದೃಷ್ಟದ ಸಮಯವಾಗಿದ್ದು, ಬೇಡಿದ ವರ ಪ್ರಾಪ್ತಿಯಾಗಲಿದೆ . ದೈಹಿಕ ಸಾಮರ್ಥ್ಯದಲ್ಲಿ ಕೊರತೆ ಕಂಡುಬಂದರೆ ವ್ಯಾಯಾಮದ ಮೊರೆ ಹೋಗಿ.

Horoscope March 12

ವೃಷಭ ರಾಶಿ:

ಗುರುವಿನ ನೇರ ಚಲನೆಯಿಂದ ನಿಮ್ಮ ಆದಾಯದ ಹೊಸ ಮೂಲಗಳು ಕಾಣಿಸಿಕೊಳ್ಳುವ ಸೂಚನೆ ಇದೆ. ಹಿಂದಿನ ಹೂಡಿಕೆಗಳಿಂದ ಲಾಭ ಬರಬಹುದು. ವ್ಯಾಪಾರಸ್ಥರಿಗೆ ವಿಸ್ತರಣೆಯ ಯೋಜನೆಗೆ ಶುಭ ದಿನ. ಕುಟುಂಬದಲ್ಲಿ ಯಾವುದೋ ಶುಭ ಕಾರ್ಯ ನಡೆಯಬಹುದು. ಜೀವನಶೈಲಿಯಲ್ಲಿ ಬದಲಾವಣೆ ತಂದುಕೊಳ್ಳಲು ಇದು ಒಳ್ಳೆಯ ಸಮಯ. ಮನೆಯ ವಾತಾವರಣ ಪ್ರಸನ್ನವಾಗಿರುತ್ತದೆ. ಸ್ನೇಹಿತರೊಬ್ಬರ ಸಲಹೆ ನಿಮಗೆ ಲಾಭ ತರಬಹುದು. ದೈಹಿಕ ಶ್ರಮದ ಕೆಲಸಗಳಿಂದ ಸ್ವಲ್ಪ ವಿಶ್ರಾಂತಿ ಪಡೆಯಿರಿ. ವಿದೇಶದಲ್ಲಿ ಹೂಡಿಕೆ ಮಾಡಲು ಅವಕಾಶಗಳು ಸಿಗಲಿದೆ .

Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ

ಮಿಥುನ ರಾಶಿ:

ಗುರುವು ನಿಮ್ಮ ರಾಶಿಯಲ್ಲಿ ನೇರವಾಗಿರುವುದರಿಂದ ಇದು ನಿಮ್ಮ ಅದೃಷ್ಟದ ದಿನವಾಗಿದೆ. ನಿಮ್ಮ ವ್ಯಕ್ತಿತ್ವ ಗಮನಾರ್ಹವಾಗಿ ಸುಧಾರಿಸಲಿದೆ. ವಿದೇಶದಲ್ಲಿ ವ್ಯಾಪಾರ ವ್ಯವಹಾರ ಮಾಡಲು ಇದು ಸರಿಯಾದ ಸಮಯ. ನಿಮ್ಮ ಮಾತು ಪ್ರಭಾವಶಾಲಿಯಾಗಿದ್ದು, ಅನೇಕ ಯೋಜನೆಗಳಲ್ಲಿ ಯಶಸ್ಸು ಸಾಧಿಸುವಿರಿ. ಒಂಟಿಗಳಿಗೆ ವಿವಾಹ ಪ್ರಸ್ತಾಪಗಳು ಬರಬಹುದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದು, ಆಧ್ಯಾತ್ಮಿಕತೆಯ ಕಡೆಗೆ ಒಲವು ಹೆಚ್ಚಾಗುತ್ತದೆ. ವೃತ್ತಿ ಜೀವನದಲ್ಲಿ ಅಪಾರವಾದ ಯಶಸ್ಸು ದೊರಕುವ ಯೋಗ ನಿರ್ಮಾಣಗೊಳ್ಳುವುದು.

ಕರ್ಕಾಟಕ ರಾಶಿ:

ಇಂದು ನಿಮ್ಮ ಭಾವನಾತ್ಮಕ ಬೆಳವಣಿಗೆಗೆ ಪೂರಕ ದಿನ. ಕುಟುಂಬದಲ್ಲಿ ಮಹತ್ವದ ಘಟನೆಗಳು ನಡೆಯಬಹುದು. ವೃತ್ತಿಯಲ್ಲಿ ಹೊಸ ದಿಕ್ಕಿನ ಸೂಚನೆಗಳು ಕಾಣಿಸಿಕೊಳ್ಳುತ್ತವೆ. ಮೇಲಾಧಿಕಾರಿಗಳಿಂದ ಮೆಚ್ಚುಗೆ ಸಿಗುವ ಸಾಧ್ಯತೆ ಇದೆ. ಆದಾಯ ಉತ್ತಮವಾಗಿದ್ದರೂ ಅನಗತ್ಯ ಖರ್ಚು ಹೆಚ್ಚಾಗಬಹುದು. ಕುಟುಂಬದಲ್ಲಿ ಸಂತೋಷದ ವಾತಾವರಣವಿದ್ದು, ದಾಂಪತ್ಯ ಜೀವನದಲ್ಲಿ ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಮುಖ್ಯ. ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಧ್ಯಾನ ಮತ್ತು ಯೋಗದಿಂದ ಲಾಭ. ಪಿತ್ರಾರ್ಜಿತ ಸಂಪತ್ತಿನಿಂದ ಲಾಭ ಸಿಗಬಹುದು.

ಸಿಂಹ ರಾಶಿ:

ಮಾರ್ಚ್ 11 ರ ಗುರು ಸಂಚಾರದ ಶುಭ ಪ್ರಭಾವ ನಿಮ್ಮ ಪ್ರಗತಿ ಮತ್ತು ಪ್ರಭಾವವನ್ನು ಹೆಚ್ಚಿಸಲಿದೆ. ನಿಮ್ಮ ಮಾತು ಮತ್ತು ನಿರ್ಧಾರಗಳಿಗೆ ಮಹತ್ವ ಹೆಚ್ಚಾಗುತ್ತದೆ. ಹೊಸ ಪ್ರಾಜೆಕ್ಟ್ಗಳು ಅಥವಾ ಜವಾಬ್ದಾರಿಗಳು ಸಿಗಬಹುದು. ಉದ್ಯೋಗ ಬದಲಾವಣೆ ಯೋಚಿಸುತ್ತಿದ್ದರೆ ಸೂಕ್ತ ಅವಕಾಶ ದೊರೆಯುವ ಸಾಧ್ಯತೆ ಇದೆ. ಹಠಾತ್ ಧನ ಪ್ರಾಪ್ತಿಯಾಗುವ ಯೋಗ ನಿರ್ಮಾಣಗೊಳ್ಳಲಿದೆ . ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗೆ ಉತ್ತಮ ಫಲಿತಾಂಶ ಸಿಗಬಹುದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಬೇಕು.

ಕನ್ಯಾ ರಾಶಿ:

ಗುರುವಿನ ನೇರ ಚಲನೆಯು ನಿಮಗೆ ಯಶಸ್ಸು ಮತ್ತು ಸಂತೋಷವನ್ನು ತರಲಿದೆ. ನಿಮ್ಮ ವೈವಾಹಿಕ ಜೀವನವು ಸಂತೋಷದಿಂದ ಕೂಡಿರುವುದು ಮತ್ತು ಈ ಅವಧಿಯಲ್ಲಿ ನೀವು ವಿವಾಹಕ್ಕಾಗಿ ಉತ್ತಮ ಪ್ರಸ್ತಾಪಗಳನ್ನು ಪಡೆದುಕೊಳ್ಳುವಿರಿ . ವೃತ್ತಿಪರರಿಗೆ ಲಾಭದ ಸಾಧ್ಯತೆ ಇದೆ. ಆರ್ಥಿಕ ಲಾಭದ ಜೊತೆಗೆ, ಸಂಬಂಧಗಳಲ್ಲಿ ಸಾಮರಸ್ಯ ಮತ್ತು ಬೆಂಬಲ ಇರುತ್ತದೆ. ಪಾಲುದಾರಿಕೆಯಲ್ಲಿ ಕೆಲಸ ಮಾಡುವುದರಿಂದ ಅಪಾರ ಲಾಭ ದೊರಕುವುದು. ಕುಟುಂಬದಲ್ಲಿ ಸಂತೋಷದ ವಾತಾವರಣವಿದೆ.

ತುಲಾ ರಾಶಿ:

ಗುರು ಸಂಚಾರದ ಪ್ರಭಾವದಿಂದ ನಿಮ್ಮ ಕೆಲಸದಲ್ಲಿ ಹೊಸ ಜವಾಬ್ದಾರಿಗಳು ದೊರಕುವುದು. ನಿಮ್ಮ ಆತ್ಮವಿಶ್ವಾಸ ವೇಗವಾಗಿ ಹೆಚ್ಚಾಗಬಹುದು. ವಿದೇಶದಲ್ಲಿ ಕೆಲಸ ಮಾಡುವ ನಿಮ್ಮ ಕನಸು ಈಡೇರಬಹುದು. ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗುವ ಸಾಧ್ಯತೆಗಳಿವೆ. ಗೌರವ ಹೆಚ್ಚಾಗುವ ಯೋಗವಿದೆ. ಹೊಸ ಹೂಡಿಕೆಗೆ ಸೂಕ್ತ ಸಮಯ. ಕಲಾ ಮತ್ತು ಸೃಜನಶೀಲ ಕ್ಷೇತ್ರದವರಿಗೆ ಉತ್ತಮ ದಿನ. ದೀರ್ಘಕಾಲದ ಯೋಜನೆಗಳು ಪೂರ್ಣಗೊಳ್ಳುವುದರಿಂದ ನಿಮ್ಮ ಖ್ಯಾತಿ, ಗೌರವ, ಸ್ಥಾನ ಬದಲಾಗುವುದು.

ವೃಶ್ಚಿಕ ರಾಶಿ:

ಗುರುವಿನ ನೇರ ಚಲನೆಯಿಂದ ನಿಮ್ಮ ಪ್ರೇಮ ಸಂಬಂಧವು ಇನ್ನಷ್ಟು ಬಲಗೊಳ್ಳುವುದು. ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಕೊನೆಗೊಳ್ಳಬಹುದು. ದೀರ್ಘಕಾಲದ ವಿವಾದಗಳು ಬಗೆಹರಿಯುವ ಸೂಚನೆ ಇದೆ. ಅನಗತ್ಯ ಖರ್ಚುಗಳಿಂದ ಮುಕ್ತರಾಗಿ ಹಣ ಉಳಿಸುವಲ್ಲಿ ಯಶಸ್ವಿಯಾಗುವಿರಿ. ಸಂಶೋಧನಾ ಕ್ಷೇತ್ರದವರಿಗೆ ಮಹತ್ವದ ಸಾಧನೆಯ ದಿನ. ಮಕ್ಕಳಿಗೆ ಸಂಬಂಧಿಸಿದಂತೆ ಶುಭ ಸುದ್ದಿ ಲಭಿಸುವ ಯೋಗವು ನಿರ್ಮಾಣಗೊಳ್ಳುವುದು . ರಹಸ್ಯಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರಿಕೆ ಅಗತ್ಯ. ರಾತ್ರಿ ಧ್ಯಾನ ಮಾಡುವುದರಿಂದ ಮನಸ್ಸಿಗೆ ಶಾಂತಿ.

ಧನು ರಾಶಿ:

ಗುರುವಿನ ನೇರ ಚಲನೆಯು ನಿಮಗೆ ವಿಶೇಷವಾಗಿ ಶುಭಕರವಾಗಿದೆ. ಅದೃಷ್ಟ ಬಲಗೊಳ್ಳುತ್ತದೆ ಮತ್ತು ಕಠಿಣ ಪರಿಶ್ರಮ ಫಲ ನೀಡುತ್ತದೆ. ಉದ್ಯೋಗ ಅಥವಾ ವ್ಯವಹಾರದಲ್ಲಿ ಲಾಭದ ಸೂಚನೆಗಳಿವೆ. ಈ ಮಾರ್ಚ್ ತಿಂಗಳಲ್ಲಿ ಸುಖ, ಸಮೃದ್ಧಿಯಲ್ಲಿ ಬಹಳಷ್ಟು ವೃದ್ದಿಯಾಗುವುದು . ಹೊಸ ವಾಹನ ಅಥವಾ ಹೊಸ ಮನೆಯನ್ನು ಖರೀದಿಸುವ ಯೋಗ ದೊರಕುವುದು. ಕುಟುಂಬದಲ್ಲಿ ಸಂತೋಷ ಮತ್ತು ನೆಮ್ಮದಿ ಹೆಚ್ಚಾಗಲಿದೆ. ಹೊಸ ಹೂಡಿಕೆಗಳು ಮತ್ತು ವೃತ್ತಿ ನಿರ್ಧಾರಗಳಿಗೆ ಇದು ಉತ್ತಮ ಸಮಯ.

ಮಕರ ರಾಶಿ:

ಗುರು ಸಂಚಾರದ ಪ್ರಭಾವದಿಂದ ಸಹೋದರ, ಸಹೋದರಿಯರ ಸಂಪೂರ್ಣ ಬೆಂಬಲ ದೊರಕುವುದು. ವೃತ್ತಿಯಲ್ಲಿ ದೊಡ್ಡ ಜವಾಬ್ದಾರಿ ಸಿಗಬಹುದು. ಅಧಿಕಾರಿಗಳು ನಿಮ್ಮ ಕಾರ್ಯಕ್ಷಮತೆಯನ್ನು ಮೆಚ್ಚುವ ಸಾಧ್ಯತೆ ಇದೆ. ಅಲ್ಪ ದೂರ ಪ್ರಯಾಣಿಸುವುದರಿಂದ ಹೆಚ್ಚಿನ ಲಾಭವನ್ನು ಗಳಿಸುವಿರಿ. ಮಾರ್ಕೆಟಿಂಗ್ ಮತ್ತು ನೆಟ್ವರ್ಕಿಂಗ್ ಗೆ ಸಂಬಂಧಿಸಿದ ವ್ಯಾಪಾರ, ವ್ಯವಹಾರವನ್ನು ಮಾಡುವವರಿಗೆ ಅಪಾರ ಲಾಭ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷದ ವಾತಾವರಣ ಇರುತ್ತದೆ. ಎಲುಬು ಮತ್ತು ಹಲ್ಲುಗಳ ಆರೈಕೆಗೆ ಗಮನ ಕೊಡಿ.

ಕುಂಭ ರಾಶಿ:

ಗುರು ಸಂಚಾರದ ಪ್ರಭಾವದಿಂದ ನಿಮ್ಮ ಸಾಮಾಜಿಕ ಸಂಪರ್ಕಗಳು ಬಲಗೊಳ್ಳುತ್ತವೆ. ಸ್ನೇಹಿತರಿಂದ ಅನಿರೀಕ್ಷಿತ ಲಾಭ ಸಿಗಬಹುದು. ಸಮಾಜಮುಖಿ ಕಾರ್ಯಗಳಲ್ಲಿ ನಿಮ್ಮ ಪಾತ್ರ ಮಹತ್ವದ್ದಾಗಿರುತ್ತದೆ. ಹೊಸ ತಂತ್ರಜ್ಞಾನ ಮತ್ತು ನಾವೀನ್ಯತೆಯ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ. ವೃತ್ತಿಯಲ್ಲಿ ಹೊಸ ಅವಕಾಶಗಳು ದೊರೆಯಬಹುದು. ಮನೆ ಮತ್ತು ಕುಟುಂಬದಲ್ಲಿ ಶಾಂತಿ ಇರುತ್ತದೆ. ರಕ್ತಪರಿಚಲನಾ ವ್ಯವಸ್ಥೆ ಸುಧಾರಿಸಲು ಯೋಗ ಸಹಾಯಕ. ಗುಂಪಿನಲ್ಲಿ ಕೆಲಸ ಮಾಡುವುದರಿಂದ ಹೆಚ್ಚಿನ ಲಾಭ. ಕುಂಭ ರಾಶಿಯಲ್ಲಿ ಪಂಚಗ್ರಹ ಯೋಗ ರೂಪುಗೊಂಡಿದೆ.

ಮೀನ ರಾಶಿ:

ಗುರುವಿನ ನೇರ ಚಲನೆಯು ನಿಮಗೆ ತುಂಬಾ ಸಕಾರಾತ್ಮಕ ಫಲಿತಾಂಶ ತರಲಿದೆ. ನಿಮ್ಮ ಕೆಲಸದಲ್ಲಿ ಯಶಸ್ಸು ದೊರಕುತ್ತದೆ. ಮಾರ್ಚ್ ಆರಂಭದಲ್ಲಿ ಶುಕ್ರನು ನಿಮ್ಮ ರಾಶಿಗೆ ಪ್ರವೇಶಿಸಿದ್ದು, ವಿಶೇಷ ಶುಭಫಲಗಳನ್ನು ನೀಡುತ್ತಿದೆ . ವ್ಯವಹಾರದಲ್ಲಿ ಲಾಭದ ಸೂಚನೆಗಳಿವೆ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಕುಟುಂಬ ಸಾಮರಸ್ಯ ಉಳಿಯುತ್ತದೆ. ಜ್ಞಾನ ಮತ್ತು ಕಲಿಕೆಗೆ ಇದು ಅನುಕೂಲಕರ ಅವಧಿಯಾಗಿದೆ. ವ್ಯಕ್ತಿತ್ವ ಆಕರ್ಷಕವಾಗಿದ್ದು, ಸಾಮಾಜಿಕ ಸಂಬಂಧಗಳು ಸುಧಾರಿಸುತ್ತವೆ. ಶನಿಯು ನಿಮ್ಮ ರಾಶಿಯಲ್ಲಿರುವುದರಿಂದ ಸ್ವಲ್ಪ ಜಾಗರೂಕತೆ ಅಗತ್ಯ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+