ಐಡಿ ಕಾರ್ಡ್ ಕಡ್ಡಾಯ: ಬೆಂಗಳೂರು ಪಬ್, ಬಾರ್‌ಗಳಿಗೆ ಹೊಸ ನಿಯಮ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ರಾಜ್ಯದಲ್ಲಿ ಹದಿ ಹರೆಯದವರು ಮದ್ಯ, ತಂಬಾಕು ವ್ಯಸನಗಳಿಂದ ಅನಾರೋಗ್ಯಕ್ಕೆ ತುತ್ತಾಗುವ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಅಧ್ಯಯದಿಂದ ಸಾಭೀತಾಗಿದೆ. ಇದರ ಬೆನ್ನಲ್ಲೇ ಅಪ್ರಾಪ್ತ ವಯಸ್ಕರ ಪ್ರವೇಶ ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ. ಈ ಸಂಬಂಧ ಬೆಂಗಳೂರಿನ ಬ್ರೂವರೀಸ್, ಬಾರ್, ಪಬ್‌ಗಳು, ಲಾಂಜ್‌ಗಳು, ಮಧ್ಯ ಮಾರಾಟ ಸಂಸ್ಥೆಗಳು, ರೆಸ್ಟೋರೆಂಟ್‌ಗಳಿಗೆ ನೋಟಿಸ್ ಜಾರಿ ಮಾಡುವಂತೆ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆ ನೀಡಿದ್ದಾರೆ.

ಹದಿಹರೆಯದವರು ಪಬ್‌ಗಳು, ಬ್ರೂವರೀಸ್‌ಗಳು, ಬಾರ್‌ಗಳು, ಕ್ಲಬ್‌ಗಳು, ಲಾಂಜ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಮದ್ಯ ಮಾರಾಟ ಮಾಡುವ ಸಂಸ್ಥೆಗಳ ಪ್ರವೇಶಕ್ಕೆ ಐಡಿ ಕಾರ್ಡ್ ಅನ್ನು ಈ ಮೂಲಕ ಕಡ್ಡಾಯಗೊಳಿಸಲಾಗಿದೆ. ಅಪ್ರಾಪ್ತರಿಗೆ ಮದ್ಯ ಮಾರಾಟ ಮಾಡದಂತೆ ಕ್ರಮ ಕೈಗೊಳ್ಳಲು ನಗರ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

Bengaluru Bars

ಹದಿ ಹರೆಯದವರಲ್ಲಿ ಅನಾರೋಗ್ಯ; ಆತಂಕ ಮೂಡಿಸಿದ ವರದಿ

ರಾಜಧಾನಿ ಬೆಂಗಳೂರಿನಲ್ಲಿ 4,093 ವಿದ್ಯಾರ್ಥಿಗಳನ್ನು ಒಳಗೊಂಡು ಇತ್ತೀಚೆಗೆ ನಡೆಸಿದ ಅಧ್ಯಯನದ ವರದಿಯೊಂದು ಆಘಾತಕಾರಿ ಅಂಶಗಳನ್ನು ಬಹಿರಂಗೊಳಿಸಿದೆ. ಇದು ಸಾಮಾಜಿಕವಾಗಿಯೂ ಗಂಭೀರ ಕಳವಳಗಳನ್ನು ಸೃಷ್ಟಿಸಿದೆ. ಅಧ್ಯಯನದ ಪ್ರಕಾರ, ಮೂವರು ಹದಿಹರೆಯದವರಲ್ಲಿ ಒಬ್ಬರು ಮದ್ಯ ಅಥವಾ ತಂಬಾಕು ಸೇವನೆಯಿಂದಾಗಿ ಅನಾರೊಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂಬುದು ಸಾಬೀತಾಗಿದೆ.

ಬೆಂಗಳೂರು ಔಟರ್ ರಿಂಗ್ ರಸ್ತೆ ಪ್ರಯಾಣಿಕರಿಗೆ ನಿರಾಶೆ, ನೀಲಿ ಮಾರ್ಗಕ್ಕೆ ಮೆಟ್ರೋ ಬಂದರೂ ಡೆಡ್‌ಲೈನ್ ವಿಸ್ತರಣೆ?
ಬೆಂಗಳೂರು ಔಟರ್ ರಿಂಗ್ ರಸ್ತೆ ಪ್ರಯಾಣಿಕರಿಗೆ ನಿರಾಶೆ, ನೀಲಿ ಮಾರ್ಗಕ್ಕೆ ಮೆಟ್ರೋ ಬಂದರೂ ಡೆಡ್‌ಲೈನ್ ವಿಸ್ತರಣೆ?

ಶೇ.33ರಷ್ಟು ಮಂದಿ ಮದ್ಯ ವ್ಯಸನಿಗಳು

ಅಷ್ಟೇ ಅಲ್ಲದೇ ಶೇ.33ರಷ್ಟು ಜನರು ಮದ್ಯ ವ್ಯಸನದಿಂದ ಬಳಲುತ್ತಿದ್ದಾರೆ. ಒಟ್ಟಾರೆ ಸುಮಾರು ಶೇ.18ರಷ್ಟು ಹದಿಹರೆಯದವರು ತಂಬಾಕು ವ್ಯಸನಿಗಳಾಗಿದ್ದಾರೆ ಎಂದು ವರದಿಯು ತಿಳಿಸಿದೆ.ಮದ್ಯಪಾನಕ್ಕೆ ವಯಸ್ಸಿನ ಮಿತಿ ಸರಾಸರಿ ವಯಸ್ಸು 17ಇದ್ದರೂ ಸಹಿತ ಕೆಲವು ಪ್ರಕರಣಗಳಲ್ಲಿ 8ನೇ ವಯಸ್ಸಿನಲ್ಲೇ ಎಣ್ಣೆ ಚಟಕ್ಕೆ ಅಂಟಿಕೊಳ್ಳುತ್ತಿದ್ದಾರೆ.

ವಯಸ್ಸಿನ ನಿಯಮ ಪಾಲನೆ ಕಡ್ಡಾಯ

ಇದು ಕೇವಲ ಪರವಾನಗಿ ಸಮಸ್ಯೆಯಲ್ಲ. ಇದು ಯುವ ಸುರಕ್ಷತೆ ಮತ್ತು ಸಾರ್ವಜನಿಕ-ಆರೋಗ್ಯ ಸಮಸ್ಯೆಯಾಗಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ. ಎಲ್ಲಾ ಎಣ್ಣೆ (ಮದ್ಯ) ಅಂಗಡಿ ಮಾರಾಟ ಮಾಡುವ ಸಂಸ್ಥೆಗಳಲ್ಲಿ ಅಪ್ರಾಪ್ತರ ಪ್ರವೇಶ ಮತ್ತು ಸೇವೆಯ ಮೊದಲು ಕಟ್ಟುನಿಟ್ಟಾದ ವಯಸ್ಸಿನ ಪರಿಶೀಲನಾ ಪ್ರೋಟೋಕಾಲ್‌ಗಳನ್ನು ಪಾಲಿಸಬೇಕು. ಈ ಬಗ್ಗೆ ಪೊಲೀಸರು ನಿಗಾ ವಹಿಸಬೇಕು. ವಯಸ್ಸಿನ ಕಂಡು ಹಿಡಿಯಲು ರಿವು ಸರ್ಕಾರದ ಪುರಾವೆ, ಆಧಾರ, ಓಟರ್ ಐಡಿಯಂತಹ ಪುರಾವೆ (ಐಡಿ ಕಾರ್ಡ್) ಪರಿಶೀಲಿಸಬೇಕು. ಅಪ್ರಾಪ್ತರಿಗೆ ಮುಲಾಜಿಲ್ಲದೇ ಎಣ್ಣ ಇಲ್ಲವೆಂದು ಕಳುಹಿಸಬೇಕು. ನಿಯಮ ಪಾಲಿಸದೇ, ಅಪ್ರಾಪ್ತರಿಗೆ ಎಣ್ಣೆ ಒದಗಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಮಾರಾಟಗಾರರೇ ಹೊಣೆ!

ನಿಯಮ ಉಲ್ಲಂಘನೆ ಆದಲ್ಲಿ ಮದ್ಯ ಮಾರಾಟದಂಗಡಿ/ಸಂಸ್ಥೆಗಳ ಮಾಲೀಕರು, ವ್ಯವಸ್ಥಾಪಕರು ಮತ್ತು ಪರವಾನಗಿ ಹೊಂದಿರುವವರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದಿದ್ದಾರೆ. ಇಂದಿನ ಬೆಳವಣಿಗೆ ನೋಡಿದರೆ ಶೀಘ್ರವೇ ಮದ್ಯ ಮಾರಾಟ ಮಳಿಗೆಗಳ ಮುಂದೆ 'ಗುರುತಿನ ಚೀಟಿ ಇಲ್ಲದೇ ಪ್ರವೇಶವಿಲ್ಲ, ಅಪ್ರಾಪ್ತ ವಯಸ್ಕರಿಗೆ ಮದ್ಯಪಾನವಿಲ್ಲ' ಎಂಬ ಬೋರ್ಡ್ ಕಂಡರು ಅಚ್ಚರಿ ಇಲ್ಲ.

Karnataka Weather: ಮುಂದಿನ 48 ಗಂಟೆ ಕರಾವಳಿ, ಒಳನಾಡು ಜಿಲ್ಲೆಗಳಲ್ಲಿ ಭರ್ಜರಿ ಮಳೆ ಎಚ್ಚರಿಕೆ, ರೆಡ್ ಅಲರ್ಟ್
Karnataka Weather: ಮುಂದಿನ 48 ಗಂಟೆ ಕರಾವಳಿ, ಒಳನಾಡು ಜಿಲ್ಲೆಗಳಲ್ಲಿ ಭರ್ಜರಿ ಮಳೆ ಎಚ್ಚರಿಕೆ, ರೆಡ್ ಅಲರ್ಟ್

ಶಾಪ್‌ನ ಪ್ರವೇಶ ದ್ವಾರದಲ್ಲಿ ಸದಾ ಸಿಸಿಟಿವಿ ಕಾರ್ಯ ನಿರ್ವಹಿಸಬೇಕು, ಸೆರೆಯಾದ ದೃಶ್ಯಾವಳಿಗಳನ್ನು ಡಿಲೀಟ್ ಮಾಡುವಂತಿಲ್ಲ. ವಾಣಿಜ್ಯ ಲಾಭಕ್ಕಾಗಿ ಮಕ್ಕಳ ಜೀವನ, ಭವಿಷ್ಯದೊಂದಿಗೆ ಆಟವಾಡುವುದನ್ನು ಸಹಿಸುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+