Jevargi Constituency: ಜೇವರ್ಗಿ ಕ್ಷೇತ್ರದ ಕಿರು ಪರಿಚಯ
ಜೀವರ್ಗಿ ಮಾರ್ಚ್ 23: ಮುಂಬರುವ ವಿಧಾನಸಭಾ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಜೇವರ್ಗಿ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದು. 2018ರ ಕಳೆದ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಅಜಯ್ ಸಿಂಗ್ ಜಯ ಗಳಿಸಿದ್ದರು. ಭಾರತೀಯ ಜನತಾ ಪಾರ್ಟಿಯ ದೊಡ್ಡಪ್ಪಗೌಡ ಪಾಟೀಲ ನಾರಿಬೋಳ್ 16056 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಜೇವರ್ಗಿ ಕ್ಷೇತ್ರದ ಚುನಾವಣಾ ಇತಿಹಾಸ, ಈಗಿನ ಬೆಳವಣಿಗೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಜೇವರ್ಗಿ ಕರ್ನಾಟಕ ರಾಜ್ಯದ, ಕಲಬುರಗಿ ಜಿಲ್ಲೆಯ ಪಟ್ಟಣ ಪಂಚಾಯತಿ ಮತ್ತು ತಾಲ್ಲೂಕು ಕೇಂದ್ರವಾಗಿದೆ. ಇದು ಜಿಲ್ಲಾ ಕೇಂದ್ರದಿಂದ 43 ಕಿ. ಮೀ ದೂರದಲ್ಲಿದೆ. ಮೊದಲು ಇದನ್ನು ಆಂದೋಲಾ ಎಂದು ಕರೆಯಲಾಗುತ್ತಿತ್ತು. ಸಣ್ಣ ವ್ಯಾಪ್ತಿಯನ್ನು ಹೊಂದಿದ ತಾಲೂಕು ಇದು. ಈ ಹೆಸರಿನ ಜತೆ ಮಾಜಿ ಮುಖ್ಯಮಂತ್ರಿ, ದಿವಂಗತ ಧರಂ ಸಿಂಗ್ ಹೆಸರೂ ತಳುಕು ಹಾಕಿಕೊಂಡೇ ಬಂದಿದೆ. ಅದಕ್ಕೆ ಕಾರಣ ಈ ಕ್ಷೇತ್ರದ ಜನರು 7 ಬಾರಿ ಅವರನ್ನು ಎತ್ತಿ ಆಡಿಸಿದ್ದು.
ಚಿಣಗೇರಿ ಹೊಳೆಯ ಎಡದಂಡೆಯ ಮೇಲಿರುವ ಕಡಕೋಳ ಮಡಿವಾಲೇಶ್ವರ ಮಠ, ಚೌಡೇಶ್ವರಿಯ ಜಾತ್ರೆಗೆ ಪ್ರಸಿದ್ಧಿ ಪಡೆದಿರುವ ಮಳ್ಳಿ ಈ ಜೇವರ್ಗಿ ತಾಲೂಕಿನಲ್ಲಿ ಬರುತ್ತವೆ. ಒಂದಷ್ಟು ಸಕ್ಕರೆ ಕಾರ್ಖಾನೆಗಳೂ ಈ ತಾಲೂಕಿನಲ್ಲಿವೆ.

ಈ ಕ್ಷೇತ್ರದ ರಾಜಕೀಯ ಇತಿಹಾಸ ಕೆದಕಿದರೆ ಜೇವರ್ಗಿಯ ನೆಲೋಗಿ ಗ್ರಾಮದಲ್ಲಿ ಜನಿಸಿದ ಧರಂ ಸಿಂಗ್ ರ ಹೆಸರೇ ಎಲ್ಲೆಲ್ಲೂ ರಾರಾಜಿಸುತ್ತದೆ. ಕಲಬುರಗಿ ಜಿಲ್ಲೆಯ ಮೇಲೂ ಸಾಕಷ್ಟು ಪ್ರಭಾವ ಹೊಂದಿದ್ದ ಧರಂ ಸಿಂಗ್ 1978ರಲ್ಲಿ ಮೊದಲ ಬಾರಿಗೆ ಜೇವರ್ಗಿ ಕ್ಷೇತ್ರದಿಂದ ವಿಧಾನ ಸಭೆ ಪ್ರವೇಶಿಸಿದರು. ನಂತರ ಅವರು ತಿರುಗಿ ನೋಡಿದವರಲ್ಲ.
ಅಲ್ಲಿಂದ ನಿರಂತರವಾಗಿ 2004ರವರೆಗೆ 7 ಬಾರಿ ಈ ಕ್ಷೇತ್ರದಲ್ಲಿ ಅವರು ವಿಜಯ ಪತಾಕೆ ಹಾರಿಸಿದ್ದರು. ಜೇವರ್ಗಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾಗಲೇ 2004ರ ಮೇ ನಿಂದ 2006ರ ಜನವರಿವರೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಗದ್ದುಗೆಯನ್ನೂ ಅವರು ಏರಿದ್ದರು. ಆದರೆ ವಿಚಿತ್ರವೆಂದರೆ ಸತತ 7 ಗೆಲುವು ಜತೆಗೆ 1980ರಲ್ಲೊಮ್ಮೆ ಲೋಕಸಭೆಗೂ ಕಲಬುರಗಿಯಿಂದ ಪ್ರವೇಶಿಸಿ ಸೋಲರಿಯದ ರಾಜಕಾರಣಿಯಾಗಿದ್ದ ಧರಂ ಸಿಂಗ್ 2008ರಲ್ಲಿ ಮಾತ್ರ ಸೋಲುಂಡರು! ಅದೂ 70 ಮತಗಳ ಅಂತರದಲ್ಲಿ!! ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಎರಡು ವರ್ಷಗಳ ತರುವಾಯ ನಡೆದ ಚುನಾವಣೆಯಲ್ಲಿ ಬಿಜೆಪಿಯ ದೊಡ್ಡಪ್ಪಗೌಡ ನಾರೀಬೋಳ ವಿರುದ್ಧ ಅವರು ಸೋಲಬೇಕಾಯಿತು.

ಮುಂದೆ ಧರಂ ಸಿಂಗ್ ಬೀದರ್ ನಿಂದ ಲೋಕಸಭೆ ಪ್ರವೇಶಿಸಿದರು, 2013ರಲ್ಲಿ ಅವರ ಮಗ ಅಜಯ್ ಸಿಂಗ್ ಇಲ್ಲಿ ಚುನಾವಣೆಗೆ ನಿಂತು 36 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಬಿಜೆಪಿಯ ದೊಡ್ಡಪ್ಪಗೌಡರಿಗೆ ಸೋಲುಣಿಸಿದ್ದರು. ಹೀಗೆ ಕ್ಷೇತ್ರ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಬಂದಿತ್ತು.
ಕ್ಷೇತ್ರದಲ್ಲಿ ಕಾಂಗ್ರೆಸ್ ಹಿಡಿತ ಬಲವಾಗಿದೆ. ಜತೆಗೆ ಧರಂ ಸಿಂಗ್ ನಿಧನವಾದರೂ ಕುಟುಂಬ ಜೇವರ್ಗಿಯಲ್ಲಿ ತನ್ನ ಪ್ರಾಬಲ್ಯ ಉಳಿಸಿಕೊಂಡಿದೆ. ಜೆತೆಗೆ ಜೆಡಿಎಸ್, ಬಿಜೆಪಿಗೆ ನೆಲೆ ಇದೆಯಾದರೂ ಗೆಲುವಿನ ಸಮೀಪ ಬರುವುದು ಕಷ್ಟ. ಹಾಗಾಗಿ ಈ ಬಾರಿಯೂ ಅಜಯ್ ಸಿಂಗ್ ಗೆಲುವನ್ನು ನಿರೀಕ್ಷಿಸುವುದರಲ್ಲಿ ಯಾವುದೇ ತಪ್ಪಿಲ್ಲ.

ಆದರೆ ಒಂದೇ ಒಂದು.. ಧರಂ ಸಿಂಗ್ ಈ ಕ್ಷೇತ್ರದಿಂದ ಮುಖ್ಯಮಂತ್ರಿಯಾದರೂ ಕ್ಷೇತ್ರದಲ್ಲಿ ಹೇಳಿಕೊಳ್ಳುವ ಯಾವ ಅಭಿವೃದ್ಧಿಗಳೂ ನಡೆದಿಲ್ಲ. ಶೈಕ್ಷಣಿಕ ಪ್ರಗತಿಯಲ್ಲಂತೂ ತಾಲೂಕು ಭಾರೀ ಹಿಂದುಳಿದಿದೆ. ರಾಷ್ಟ್ರೀಯ ಸಾಕ್ಷರತೆ ಸರಾಸರಿ ಶೇ. 59.5ಕ್ಕಿಂತಲೂ ಕನಿಷ್ಟ ಅಂದರೆ ಶೇಕಡಾ 53 ಸಾಕ್ಷರತೆಯನ್ನು ತಾಲೂಕು ಹೊಂದಿರುವುದು ನಿಜಕ್ಕೂ ಅವಮಾನಕರ.
ಹಿಂದಿನ ಚುನಾವಣೆ:
ಜಿಲ್ಲೆಯ ಜೇವರ್ಗಿ ವಿಧಾನ ಸಭಾ ಕ್ಷೇತ್ರ ಭಾರಿ ಕುತೂಹಲ ಮೂಡಿಸುವ ಕ್ಷೇತ್ರವಾಗಿದೆ. ಈ ಕ್ಷೇತ್ರವು ಮಾಜಿ ಮುಖ್ಯಮಂತ್ರಿ ಧಿವಂಗತ ಎನ್ ಧರ್ಮಸಿಂಗ್ ರವರ ಸತತ ಗೆಲುವಿನ ಕ್ಷೇತ್ರವಾದ್ದರಿಂದ ಭಾರಿ ಚರ್ಚೆ ಆಗುವ ಕ್ಷೇತ್ರವಾಗಿದೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ(2013) ಕಾಂಗ್ರೆಸ್ ಪಕ್ಷದ ಅಜಯ್ ಸಿಂಗ್ 36, 700 ಮತಗಳ ಪಡೆದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟಿಲ್ ನರಿಬೋಳ ಅವರನ್ನು ಸೋಲಿಸಿದ್ದರು.

ಇದಕ್ಕಿಂತ ಮೊದಲು ದೊಡ್ಡಪ್ಪಗೌಡ ಮಾಜಿ ಮುಖ್ಯಮಂತ್ರಿಯಾದ ಧರ್ಮಸಿಂಗ್ ಅವರನ್ನು 51 ಮತಗಳಿಂದ ಸೋಲಿಸಿದ್ದರು. ಕಳೆದ ಚುನಾವಣೆಯಲ್ಲಿ ಡೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅವರು 30,338 ಮತಗಳು ಪಡೆದರು ಅದೆ ರೀತಿ ಜೆಡಿಎಸ್ ನ ಕೇದಾರಲಿಂಗಯ್ಯ ಹಿರೇಮಠ ಅವರು 24,920 ಮತಗಳು ಪಡೆದರು.
ಜೇವರ್ಗಿಯಲ್ಲಿ ತ್ರೀಕೋನ ಸ್ಪರ್ದೆ:
ಜೇವರ್ಗಿಯಲ್ಲಿ ಕಟ್ಟಾ ಬಿಜೆಪಿ ಶಿವಲಿಂಗಪ್ಪಗೌಡ ಪಾಟೀಲ್ ಪುತ್ರ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ಜಿಲ್ಲಾ ಬಿಜೆಪಿ ಗ್ರಾಮೀಣ ಅದ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಜತೆಗೆ ಎನ್ ಧರ್ಮಸಿಂಗರವರ ಪುತ್ರ ಡಾ. ಅಜಯಸಿಂಗ್ ರವರು ಜೇವರ್ಗಿ ಕ್ಷೇತ್ರದಲಿ ಶಾಸಕರಾಗಿ ಅನೇಕ ಅಭಿವೃದ್ಧಿ ಕಾಮಗಾರಿಗಳು ಮಾಡಿದ್ದಾರೆ. ಇವರ ಜೋತೆಗೆ ಕರ್ನಾಟಕ ಪ್ರಾದೇಶಿಕ ಪಕ್ಷವಾದ ಜೆಡಿಎಸ್‍ನ ಕೇದಾರಲಿಂಗಯ್ಯ ಹಿರೇಮಠ ಅವರು ರೈತ ನಾಯಕರಾಗಿ ರೈತರ ಸಮಸ್ಯೆಗಳು ಸ್ಪದೆನೆ ಮಾಡಿ ರೈತ ನಾಯಕರಾಗಿದ್ದಾರೆ ಇದರಿಂದ ಕ್ಷೇತ್ರದಲ್ಲಿ ಮೂರು ಪಕ್ಷಗಳ ಭಲಾಭಲ ತೋರಿಸುವ ವೇಧಿಕೆಯಾಗಲ್ಲಿದೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications