ವಿಸ್ಮಯ: ಸ್ಥಳದಲ್ಲೇ ದೇವಸ್ವರೂಪಿ ಮಂಟೇಸ್ವಾಮಿ ಬಸಪ್ಪನ ಪವಾಡ ಕಂಡು ನಿಬ್ಬೆರಗಾದ ಜನ!
ಆಸ್ತಿಕರು ನಂಬುವ ಹಾಗೇ ಭಗವಂತ ಎಲ್ಲಾ ರೂಪದಲ್ಲಿ ಇರುತ್ತಾನೆ ಎನ್ನುವುದಕ್ಕೆ ಮಂಡ್ಯ ಜಿಲ್ಲೆಯ ಐದು ದಶಕಗಳ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಸಿಕ್ಕ ಉದಾಹರಣೆಯೊಂದು ಸೇರ್ಪಡೆಯಾಗಬಹುದು. ಹೌದು, ಅದು ಶಿವನ ಸಹಸ್ರಾರು ಗಣಗಳಲ್ಲಿ ಒಂದಾದ ನಂದಿ/ಬಸವನ ಮೂಲಕ ಇಂತಹ ವಿದ್ಯಮಾನವೊಂದು ನಡೆದಿದೆ.
ಜಿಲ್ಲೆಯ ದೇವಸ್ಥಾನವೊಂದರ ಅರ್ಚಕರು ನಿಧನ ಹೊಂದಿದ್ದರಿಂದ, ಹೊಸ ಅರ್ಚಕರ ನೇಮಕವಾಗಿರಲಿಲ್ಲ. ಗ್ರಾಮಸ್ಥರು ಈ ಸಂಬಂಧ ಎಷ್ಟೇ ಪ್ರಯತ್ನ ಪಟ್ಟರೂ ಸೂಕ್ತರನ್ನು ಆರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಅಲ್ಲಿ ಜಾತ್ರೆ/ಪೂಜೆಗಳು ನಡೆಯುತ್ತಿರಲಿಲ್ಲ.
ಸುಮಾರು ಐದು ದಶಕಗಳಿಂದ ಇದ್ದ ಈ ಸಮಸ್ಯೆಗೆ ದೇವರ ಬಸಪ್ಪ ಒಂದೇ ನಿಮಿಷದಲ್ಲಿ ಪರಿಹಾರ ಸೂಚಿಸಿದ್ದಾನೆ. ಬಸವನ ಮುಂದೆಯೇ ನೂತನ ಅರ್ಚಕ ದೇವಾಲಯದ ಪೂಜೆಯ ಜವಾಬ್ದಾರಿಯನ್ನು ಹೊತ್ತು ಕೊಂಡಿದ್ದಾರೆ.
ಮಂಡ್ಯದ ಮದ್ದೂರಿನ ದೊಡ್ಡಬಾಣಸವಾಗಿಯಲ್ಲಿ ಬಸವ ಈ ಪವಾಡವನ್ನು ಸೃಷ್ಟಿಸಿದ್ದಾನೆ. 58ವರ್ಷಗಳ ಹಿಂದೆ ಕಾಯಿಲೆಯಿಂದ ಬಳಲಿ ಅರ್ಚಕರು ಸಾವನ್ನಪ್ಪಿದ್ದರು. ಅಂದಿನಿಂದ ಇಂದಿನವರೆಗೂ ಅರ್ಚಕರ ನೇಮಕವಾಗಿರಲಿಲ್ಲ. ಕೊಂಡ, ಉತ್ಸವ, ಬಂಡಿ ಹಬ್ಬ ಯಾವುದೂ ನಡೆಯುತ್ತಿರಲಿಲ್ಲ, ಇದು ಗ್ರಾಮಸ್ಥರ ಚಿಂತೆಗೆ ಕಾರಣವಾಗಿತ್ತು.

ಮಂಡ್ಯದ ಮದ್ದೂರಿನ ದೊಡ್ಡಬಾಣಸವಾಗಿ
ಗ್ರಾಮಸ್ಥರೆಲ್ಲಾ ಸಭೆ ಸೇರಿ ಮತ್ತೆ ಹಬ್ಬ ಆಚರಿಸಲು ನಿರ್ಧರಿಸಿದರು. ಇದಕ್ಕಾಗಿ ದೈವಸ್ವರೂಪ ಮಠದ ಹೊನ್ನನಾಯಕನಹಳ್ಳಿಯ ಮಂಟೇಸ್ವಾಮಿ ಬಸಪ್ಪನ ಮೊರೆ ಹೋಗಿ ಅರ್ಚಕರ ನೇಮಕಕ್ಕೆ ಪ್ರಾರ್ಥಿಸಿ ಬಂದಿದ್ದರು. ಅದರಂತೆಯೇ ಗ್ರಾಮಕ್ಕೆ ಆಗಮಿಸಿದ ಬಸಪ್ಪನಿಗೆ ಅದ್ದೂರಿ ಸ್ವಾಗತವನ್ನು ನೀಡಲಾಗಿತ್ತು. ಗ್ರಾಮದ ಬಹುತೇಕ ಎಲ್ಲಾ ಮನೆಗಳಿಗೂ ಪ್ರವೇಶಿಸುವ ಬಸವ ದೇವರ ಮುಂಭಾಗದಲ್ಲಿ ಕೂತಿದ್ದ ಮೂವರನ್ನು ಮೂರು ದೇವಾಲಯಗಳ ಅರ್ಚಕರು ಎಂದು ಸೂಚಿಸುತ್ತಾನೆ.

ಕೊಂಬಿನಿಂದ ಅವರನ್ನು ಎಬ್ಬಿಸಿ ದೇವಾಲಯದ ಸರೋವರಕ್ಕೆ ತಳ್ಳಿತು
ಆದರೆ, ಆ ಮೂವರು ಮೊದಲು ಅರ್ಚಕ ಹುದ್ದೆ ನಿಭಾಯಿಸಲು ಒಪ್ಪದೇ ಇದ್ದಾಗ, ಕೊಂಬಿನಿಂದ ಅವರನ್ನು ಎಬ್ಬಿಸಿ ದೇವಾಲಯದ ಸರೋವರಕ್ಕೆ ಬಸವ ಅವರನ್ನು ತಳ್ಳುತ್ತಾನೆ. ಮೂವರೂ ಕೊಳದಲ್ಲಿ ಸ್ಥಾನ ಮಾಡಿ ಬಂದು ಬಸವನಿಗೆ ನಮಸ್ಕರಿಸುತ್ತಾರೆ. ಮೂವರ ಮೇಲೆ ಕೆಲವು ಸೆಕೆಂಡುಗಳ ಕಾಲ ಪಾದವನ್ನು ಇಟ್ಟ ಬಸವ ಆನಂತರ ಅವರನ್ನು ಎಬ್ಬಿಸಿ ದೇವಾಲಯದೊಳಗೆ ತಂದು ಬಿಟ್ಟಿದೆ. ಕಿಕ್ಕಿರುದು ಸೇರಿದ್ದ ಜನಸ್ತೋಮ ಬಸವನ ಪವಾಡವನ್ನು ಕಂಡು ಮೂಕವಿಸ್ಮಿತರಾಗಿದ್ದಾರೆ.

ಅರ್ಚಕರು ನಮ್ಮ ದೇವರ ಬಸವನನ್ನು ನಿಮ್ಮ ಊರಿಗೆ ಕಳುಹಿಸುತ್ತೇವೆ
"ಪಕ್ಕದ ಊರಿನ ಹುಲುವಂದ ಕಬ್ಬಾಳಮ್ಮನ ಬಳಿ ಸುಮಾರು ಐವತ್ತು ವರ್ಷಗಳಿಂದ ಪೂಜೆ/ಉತ್ಸವವು ನಮ್ಮ ಗ್ರಾಮದಲ್ಲಿ ನಡೆಯುತ್ತಿಲ್ಲ, ಇದಕ್ಕೆ ಪರಿಹಾರ ಸೂಚಿಸಬೇಕು ಎಂದು ಪ್ರಾರ್ಥಿಸಿದ್ದೆವು. ಆಗ ಅಲ್ಲಿನ ಅರ್ಚಕರು ನಮ್ಮ ದೇವರ ಬಸವನನ್ನು ನಿಮ್ಮ ಊರಿಗೆ ಕಳುಹಿಸುತ್ತೇವೆ ಎಂದು ಹೇಳಿದ್ದರು. ಅದರಂತೆಯೇ ಬಸವ ನಮ್ಮ ಊರಿಗೆ ಬಂದು, ಮೂರು ದೇವಾಲಯಗಳಿಗೆ ಅರ್ಚಕರನ್ನು ನೇಮಿಸಿ ಹೋಗಿದ್ದಾನೆ"ಎಂದು ಸ್ಥಳೀಯ ಮುಖಂಡರಾದ ಸೋಮಶೇಖರ್ ಹೇಳಿದ್ದಾರೆ.

ಐದು ದಶಕಗಳ ಸಮಸ್ಯೆಗೆ ಬಸಪ್ಪ ಪರಿಹಾರ ಸೂಚಿಸಿ ತನ್ನ ಮೂಲ ಸ್ಥಾನಕ್ಕೆ ತೆರಳಿದ್ದಾನೆ
ಚೌಡೇಶ್ವರಿ ದೇವಾಲಯ, ಪಟ್ಟಲಮ್ಮ ದೇವಾಲಯ ಮತ್ತು ಮಾರ್ಕೋನಹಳ್ಳಿ ಅಮ್ಮನ ದೇವಾಲಯಕ್ಕೆ ಬಸವ ಅರ್ಚಕರನ್ನು ನೇಮಿಸಿದ್ದಾನೆ. ಐತಿಹಾಸಿಕ ಸ್ಥಳವಾದ ತಣ್ಣೂರು ಕೆರೆಯಲ್ಲಿ ಪವಿತ್ರ ಸ್ನಾನದ ನಂತರ ಮೂವರು ಅರ್ಚಕರಾಗಿ ಪೂಜೆಯನ್ನು ಸಲ್ಲಿಸಿದ್ದಾರೆ. ಹೂತು ಹೋದ ಸ್ಥಳಗಲ್ಲಿ ದೇವರ ವಿಗ್ರಹವನ್ನು ಪತ್ತೆ ಹಚ್ಚುತ್ತಿದ್ದ ಮಂಟೇಸ್ವಾಮಿ ಬಸಪ್ಪ ಈ ಅರ್ಚಕರನ್ನು ನೇಮಿಸುವ ಮೂಲಕ ವಿಸ್ಮಯ ಮರೆದಿದ್ದಾನೆ. ಆ ಮೂಲಕ, ಐದು ದಶಕಗಳ ಸಮಸ್ಯೆಗೆ ಬಸಪ್ಪ ಪರಿಹಾರ ಸೂಚಿಸಿ ತನ್ನ ಮೂಲ ಸ್ಥಾನಕ್ಕೆ ತೆರಳಿದ್ದಾನೆ. (ಮಾಹಿತಿ: ಟಿವಿ9)
Recommended Video
-
PV Sindhu: ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಪತಿ ಸ್ವಿಮ್ಮಿಂಗ್ ಪೂಲ್ನಲ್ಲಿ ಈಜು ಸಾಹಸ: ಫಿಟ್ನೆಸ್ ತಜ್ಞರು ಹೇಳಿದ್ದೇನು? -
Dog Satish: ಇನ್ಸ್ಟಾಗ್ರಾಂ ಯಾರ ಅಪ್ಪಂದೂ ಅಲ್ಲ, ವಿಡಿಯೋ ಡಿಲೀಟ್ ಮಾಡಲ್ಲ, ನನಗೆ ಮೀಟರ್ ಇದೆ: ಡಾಗ್ ಸತೀಶ್ -
Vrial News: ಕೆಲಸದಿಂದ ತೆಗೆದ ಬಳಿಕ ಪುಕ್ಕಟೆ ಸಹಾಯ ಕೇಳಿದ ಮಾಜಿ ಬಾಸ್: ನೌಕರ ಕೊಟ್ಟ ಉತ್ತರ ವೈರಲ್ -
Toxic: ಅವಸರಕ್ಕಿಂತ ತಾಳ್ಮೆ ಮುಖ್ಯ: ಟಾಕ್ಸಿಕ್ ಬಿಡುಗಡೆ ಮುಂದೂಡಿದ ಬೆನ್ನಲ್ಲೇ ಯಶ್ ಬೆಂಬಲಕ್ಕೆ ನಿಂತ ಅಭಿಮಾನಿಗಳು -
Gold Rate: ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ; ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ? -
Sourav Ganguly: ಟಿ20 ವಿಶ್ವಕಪ್ 2026; ಸಂಜು ಆಟಕ್ಕೆ ಮನಸೋತು ಬಿಸಿಸಿಐಗೆ ಬಿಸಿ ಮುಟ್ಟಿಸಿದ 'ದಾದಾ' ಸೌರವ್ ಗಂಗೂಲಿ -
Today Horoscope Mar 3: ಹುಣ್ಣಿಮೆಯ ದಿನ ಚಂದ್ರಗ್ರಹಣ, ಈ ರಾಶಿಯವರ ಆರೋಗ್ಯದಲ್ಲಿ ಏರುಪೇರು -
ಬೆಂಗಳೂರು ಆಡಳಿತ ಬಿಬಿಎಂಪಿಯಿಂದ ಜಿಬಿಎಗೆ: 5 ಪಾಲಿಕೆಗಳ ರಚನೆ, ಹೊಸ ಪ್ರದೇಶಗಳ ಸೇರ್ಪಡೆಯಿಂದ ರಿಯಲ್ ಎಸ್ಟೇಟ್ಗೆ ಬಂಪರ್ -
Property: ಖಾತಾ ಎಂದರೇನು, ಇ, ಬಿ - ಎ ಖಾತಾಗಳ ವ್ಯತ್ಯಾಸ, ಆಸ್ತಿದಾರರಿಗೆ ಹೇಗೆ ಲಾಭ ಇಲ್ಲಿದೆ ಸಂಪೂರ್ಣ ವಿವರ -
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆ ಸಂಭ್ರಮ: 'ಸಂಗೀತ' ರಾತ್ರಿಯ ನೆನಪುಗಳನ್ನು ಹಂಚಿಕೊಂಡ ನಟಿ -
National Highway: ರಾಷ್ಟ್ರೀಯ ಹೆದ್ದಾರಿ-373 ಕಾಮಗಾರಿ ಎಲ್ಲಿಗೆ ಬಂತು? -
Horoscope March 4: ಈ ರಾಶಿಯವರಿಗೆ ವೃತ್ತಿಯಲ್ಲಿ ಸುಧಾರಣೆ, ಆರೋಗ್ಯ ಕಾಳಜಿ ಮುಖ್ಯ, ದಿನ ಭವಿಷ್ಯ ಇಲ್ಲಿದೆ












Click it and Unblock the Notifications