ಟ್ರಾಫಿಕ್‌ನಲ್ಲಿ ಬೈಕ್ ನಿಲ್ಲಿಸಿ ಲ್ಯಾಪ್ಟಾಪ್‌ನಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿ; ವೈರಲ್ ಆಯ್ತು ವಿಡಿಯೋ

ಬೆಂಗಳೂರು: ಸೋಶಿಯಲ್‌ ಮೀಡಿಯಾದಲ್ಲಿ ಪ್ರತಿದಿನ ನೂರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಆದರೆ, ಕೆಲವು ವಿಡಿಯೋಗಳು ಮಾತ್ರ ಸಮಾಜದ ಕಟು ವಾಸ್ತವವನ್ನ ಕಣ್ಣಿಗೆ ಕಟ್ಟುವಂತೆ ತೋರಿಸುತ್ತವೆ.ಹಾಗಿಯೇ ಇತ್ತೀಚೆಗೆ ಲಿಂಕ್‌ಡಿನ್‌ನಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಭಾರತೀಯ ಕಾರ್ಪೊರೇಟ್ ವಲಯದಲ್ಲಿ ಉದ್ಯೋಗಿಗಳು ಎದುರಿಸುತ್ತಿರುವ ಕಾರ್ಪೊರೇಟ್ ಕೆಲಸದ ಒತ್ತಡ ಹಾಗೂ ಕಣ್ಮರೆಯಾಗುತ್ತಿರುವ ವರ್ಕ್-ಲೈಫ್ ಬ್ಯಾಲೆನ್ಸ್ ಕುರಿತು ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.

ಟ್ರಾಫಿಕ್ ಸಿಗ್ನಲ್‌ನಲ್ಲೂ ಬಿಡುವಿಲ್ಲದ ಕೆಲಸ: ವೈರಲ್ ವಿಡಿಯೋದಲ್ಲೇನಿದೆ?

ಸಾಮಾನ್ಯವಾಗಿ ಟ್ರಾಫಿಕ್ ಸಿಗ್ನಲ್ ಬಿದ್ದಾಗ ಜನ ವಾಹನ ನಿಲ್ಲಿಸಿ ಸ್ವಲ್ಪ ರೆಸ್ಟ್‌ ಮಾಡುತ್ತಾರೆ ಅಥವಾ ಸುತ್ತಮುತ್ತಲಿನ ವಾತಾವರಣ ವೀಕ್ಷಿಸುತ್ತಿರುತ್ತಾರೆ. ಆದರೆ, ವೈರಲ್ ಆಗಿರುವ ಈ ವಿಡಿಯೋದಲ್ಲಿ, ಸಂಚಾರ ದಟ್ಟಣೆಯಿಂದಾಗಿ ಸುಮಾರು 5 ನಿಮಿಷಗಳ ಕಾಲ ಟ್ರಾಫಿಕ್ ಸಿಗ್ನಲ್‌ನಲ್ಲಿ ಬೈಕ್ ನಿಂತಾಗ, ಬೈಕ್ ಸವಾರನೊಬ್ಬ ತನ್ನ ಬ್ಯಾಗ್‌ನಿಂದ ಲ್ಯಾಪ್ಟಾಪ್ ಹೊರತೆಗೆದು ರಸ್ತೆಯಲ್ಲೇ ಕೆಲಸ ಮಾಡಲು ಪ್ರಾರಂಭಿಸಿದ್ದಾನೆ. ಬಸ್ ಒಂದರ ಒಳಗಿನಿಂದ ತೆಗೆದ ಈ ಚಿಕ್ಕ ವಿಡಿಯೋದಲ್ಲಿ, ಆತ ಬೈಕ್‌ನಲ್ಲಿ ಕುಳಿತು ಓಪನ್ ಮಾಡಿದ ಲ್ಯಾಪ್ಟಾಪ್‌ನಲ್ಲಿ ಗಮನವಿಟ್ಟು ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.

Man

"ಸಿಗ್ನಲ್‌ನಲ್ಲಿ 5 ನಿಮಿಷ ಟ್ರಾಫಿಕ್ ಜಾಮ್ ಆದರೂ, ಈ ವ್ಯಕ್ತಿ ಬೈಕ್ ಮೇಲೆ ಕುಳಿತು ಲ್ಯಾಪ್ಟಾಪ್ ತೆಗೆದು ಕೆಲಸ ಮಾಡಲು ಶುರುಮಾಡಿದ್ದಾನೆ. ದಿನಕ್ಕೆ 8 ಗಂಟೆ ಕೆಲಸ ಮಾಡಿದ ಮೇಲೆಯೂ ಮನೆಗೆ ಹೋಗುವ ಹಾದಿಯಲ್ಲಿ ಈ ರೀತಿ ಕೆಲಸ ಮಾಡಬೇಕಾಗಿದೆ. ಅಂದರೆ ಮನೆ ತಲುಪಿದ ಮೇಲೆಯೂ ಈತ ಕೆಲಸ ಮುಂದುವರಿಸುತ್ತಾನೆ ಎಂದರ್ಥ. ಭಾರತದಲ್ಲಿ ಜನ ನಿಧಾನವಾಗಿ ಯಂತ್ರಗಳಾಗಿ ಬದಲಾಗುತ್ತಿದ್ದಾರೆ" ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಶೇರ್‌ ಆಗುತ್ತಿದೆ.

ನೆಟ್ಟಿಗರ ಆಕ್ರೋಶ

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಈ ರೀತಿ ಬೈಕ್ ಮೇಲೆ ಕುಳಿತು ಲ್ಯಾಪ್ಟಾಪ್ ಬಳಸುವುದು ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದರೆ, ಇನ್ನು ಬಹುತೇಕ ನೆಟ್ಟಿಗರು ಭಾರತದ ಟಾಕ್ಸಿಕ್‌ ಕಾರ್ಪೊರೇಟ್ ವರ್ಕ್‌ ಕಲ್ಚರ್‌ ಅನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ. "8 ಗಂಟೆಯ ಉದ್ಯೋಗ + ಪ್ರಯಾಣದ ಸಮಯ + ಮನೆ = ಒಟ್ಟು 14 ರಿಂದ 16 ಗಂಟೆಗಳ ಸುದೀರ್ಘ ದುಡಿಮೆ. ಇದನ್ನು ಸಾಧನೆ ಅಥವಾ ಮಹತ್ವಾಕಾಂಕ್ಷೆ ಎಂದು ಕರೆಯಲಾಗುವುದಿಲ್ಲ, ಇದು ಸಂಪೂರ್ಣ ಶೋಷಣೆ. ನಮಗೆ ಇದಕ್ಕಿಂತ ಉತ್ತಮವಾದ ಮತ್ತು ನೆಮ್ಮದಿಯ ಜೀವನದ ಹಕ್ಕಿದೆ" ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

ಉದ್ಯೋಗ ಕಳೆದುಕೊಳ್ಳುವ ಭೀತಿ

ಕಾರ್ಪೊರೇಟ್ ಕಂಪನಿಗಳು ಉದ್ಯೋಗಿಗಳಲ್ಲಿ ಸೃಷ್ಟಿಸಿರುವ ಉದ್ಯೋಗ ಕಳೆದುಕೊಳ್ಳುವ ಭೀತಿಯೇ ಇದಕ್ಕೆ ಮುಖ್ಯ ಕಾರಣ ಎಂದು ಮತ್ತೊಬ್ಬ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ. "ನಮಗೆ ಇಷ್ಟವಿಲ್ಲದಿದ್ದರೂ ನಾವು ಕೆಲಸ ಮಾಡಲೇಬೇಕಾದ ಅನಿವಾರ್ಯತೆಯನ್ನ ಕಂಪನಿಗಳು ಸೃಷ್ಟಿಸಿವೆ. ಆಫೀಸ್ ಮುಗಿದ ಮೇಲೆಯೂ ಕೆಲಸದ ಮೇಲ್ವಿಚಾರಣೆ ಮಾಡುವ ವ್ಯವಸ್ಥೆಯಿಂದಾಗಿ ಉದ್ಯೋಗಿಗಳಿಗೆ ಕುಟುಂಬದೊಂದಿಗೆ ಕಳೆಯಲು ಸಮಯವೇ ಸಿಗುತ್ತಿಲ್ಲ. ಈ ರೀತಿ ಅತಿ ಒತ್ತಡ ತೆಗೆದುಕೊಂಡು ದುಡಿಯುವುದು ಆರೋಗ್ಯ ಮತ್ತು ಕುಟುಂಬ ಜೀವನಕ್ಕೆ ತೀವ್ರ ಮಾರಕ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ, ಉದ್ಯೋಗಿ ತಮ್ಮ ಕುಟುಂಬಕ್ಕೆ ನೀಡಲು ಸಮಯವಿಲ್ಲದಿದ್ದರೆ, ಈ ರೀತಿ ಸಂಪಾದನೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂಬ ಅಭಿಪ್ರಾಯಗಳೂ ಕೇಳಿಬಂದಿವೆ. ಒಟ್ಟಾರೆಯಾಗಿ ಈ ವಿಡಿಯೋ ಭಾರತೀಯ ಉದ್ಯೋಗಿಗಳ ಪ್ರಸ್ತುತ ಮಾನಸಿಕ ಸ್ಥಿತಿ ಮತ್ತು ಕಾರ್ಪೊರೇಟ್ ಜಗತ್ತಿನ ಕಠೋರ ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+