Pink Line Metro: ಗುಲಾಬಿ ಮಾರ್ಗಕ್ಕೆ ಅಂತಿಮ ಸ್ಪರ್ಶ; ಗಮನ ಸೆಳೆದ ಹೊಸ ನಿಲ್ದಾಣಗಳ ಸೌಂದರ್ಯ

ಬೆಂಗಳೂರು: ನಮ್ಮ ಮೆಟ್ರೋ ಹೊಸ ಮಾರ್ಗಗಳ ಪೈಕಿ ಈ ವರ್ಷ ಗುಲಾಬಿ ಮಾರ್ಗವು ಲೊಕಾರ್ಪಣೆಗೆ ಸಜ್ಜಾಗಿದೆ. ಈ ಮಾರ್ಗದ 18 ನಿಲ್ದಾಣಗಳ ನಿರ್ಮಾಣ ಕೆಲಸ ಸಂಪೂರ್ಣ ಮುಗಿದಿದ್ದು, ಇದೀಗ ಅಂತಿಮ ಸ್ಪರ್ಶ ಪಡೆದಿವೆ. ನಿಲ್ದಾಣಗಳು ಬಣ್ಣಗಳಿಂದ ಕಂಗೊಳಿಸುತ್ತಿದ್ದು, ಅವುಗಳ ವಿನ್ಯಾಸ ಗಮನ ಸೆಳೆಯುತ್ತಿದೆ. ನಿಲ್ದಾಣಗಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಮುಂದಿನ ಕೆಲವೇ ವಾರಗಳಲ್ಲಿ ಮೊದಲ ಹಂತದ 'ಕಾಳೇನ ಅಗ್ರಹಾರ-ತಾವರೆಕರೆ'ವರೆಗಿನ ಮಾರ್ಗವು ಪ್ರಯಾಣಿಕರಿಗೆ ಮುಕ್ತಗೊಳ್ಳಲಿದೆ.

ಗುಲಾಬಿ ಮಾರ್ಗವು ಕಾಳೇನ ಅಗ್ರಹವಾರದಿಂದ ನಾಗರವಾರವರೆಗೆ 21 ಕಿಲೋ ಮೀಟರ್‍ ಉದ್ದವಿದೆ. ಅದರಲ್ಲಿ 7.5 ಕಿಲೋ ಮೀಟರ್ ಮಾರ್ಗವನ್ನು (ಕಾಳೇನ ಅಗ್ರಹವಾರ-ತಾವರೆಕರೆ) ಕಳೆದ ಮೇ ತಿಂಗಳಲ್ಲಿ ತೆರೆಯಲು ಪ್ಲ್ಯಾನ್ ಮಾಡಿಕೊಳ್ಳಲಾಗಿತ್ತು. ಆದರೆ ಕಾರಣಾಂತರಗಳಿಂದ ಮುಂದಿನ ಆಗಸ್ಟ್ 15ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಮಗದ ಮೂಲಗಳು ತಿಳಿಸಿವೆ. ಇದಕ್ಕೆ ಪೂರಕವಾಗಿ ರೈಲು ಶಾಸನ ಬದ್ಧ ಪರೀಕ್ಷೆ ಈಗಾಗಲೇ ಪೂರ್ಣಗೊಂಡಿದೆ. ಎಲ್ಲ ಅಂತಿಮ ಕೆಲಸಗಳು ಮುಗಿದಿದ್ದು, ಉದ್ಘಾಟನೆಯೊಂದೇ ಬಾಕಿ ಇದೆ.

Bengaluru Pink Line Metro dp

ಗುಲಾಬಿ ಮಾರ್ಗದ ಮೆಟ್ರೋ ನಿಲ್ದಾಣಗಳು ಸುಣ್ಣ, ಬಣ್ಣ ಕಂಡಿವೆ. ಉದ್ಘಾಟನೆಗೆ ಸಜ್ಜಾದ 7.5 ಕಿಲೋ ಮೀಟರ್ ಮಾರ್ಗದಲ್ಲಿ 6 ಮೆಟ್ರೋ ನಿಲ್ದಾಣಗಳು ತಲೆ ಎತ್ತಿದ್ದು, ಪ್ರಯಾಣಿಕರ ಸೇವೆಗೆ ರೆಡಿಯಾಗಿವೆ. ಈ ಕುರಿತು ಫೋಟೋಗಳನ್ನು ಕರ್ನಾಟಕ ಡೆವಲಪ್‌ಮೆಂಟ್ ಇಂಡೆಕ್ಸ್ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಪಾಟ್ರಿಟೌನ್‌ ಮೆಟ್ರೋ ನಿಲ್ದಾಣದ ಫೋಟೋ ನೋಡಿದ ಕೆಲವರು, 'ಅದ್ಭುತ ವಿನ್ಯಾಸವೆಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನು ನೋಡಿದರೆ 1877ರ ಕಾಲಕ್ಕೆ ಹೋದಂತಾಗುತ್ತದೆ. ತಂಬುಸಾಮಿ ಚೆಟ್ಟಿಯಾರ್ ಬಾಲಕಿಯರ ಸರ್ಕಾರಿ ತಮಿಳು ಶಾಲೆ ನೆನಪಿಗೆ ಬರುತ್ತದೆ' ಎಂದಿದ್ದಾರೆ. 'ಒಂದು ಪ್ರದೇಶದ ಸೌಂದರ್ಯ ಬಿಂಬಿಸುತ್ತಿದೆ' ಎಂದು ಇನ್ನೊಬ್ಬರು ತಿಳಿಸಿದ್ದಾರೆ.

ಮೆಟ್ರೋ ನಿಲ್ದಾಣಗಳ ಮಾಹಿತಿ

ನಿಲ್ದಾಣಗಳ ಹೊರ ಭಾಗದಲ್ಲಿ ಕಾಮಗಾರಿ ಸಲಕರಣೆ, ತ್ಯಾಜ್ಯಗಳಿದ್ದು, ಅವುಗಳ ತೆರವು ಗೊಳಿಸಿ, ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ, ಜೆಪಿ ನಗರ ನಾಲ್ಕನೇ ಹಂತ, ತಾವರೆಕರೆ ನಿಲ್ದಾಣಗಳಲ್ಲಿ ಮೊದಲ ಹಂತದಲ್ಲಿ ಸೇವೆ ಆರಂಭವಾಗಲಿದೆ. ನಂತರ ತಾವರೆಕೆರೆ-ನಾಗವಾರ ವರೆಗಿನ 13.5 ಕಿಲೋ ಮೀಟರ್ ಸುರಂಗ ಮಾರ್ಗವು ಇದೇ ಡಿಸೆಂಬರ್ 2026ಕ್ಕೆ ತೆರೆಯಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಅದರಡಿ ಜಯದೇವ ಆಸ್ಪತ್ರೆ, ಎ.ಟಿ.ದಕ್ಷಿಣ, ಲ್ಯಾಂಗ್ ಫೋರ್ಡ್ ಟೌನ್, ನ್ಯಾಷನಲ್ ಕಾಲೇಜು, ಎಂಜಿ ರಸ್ತೆ, ಶಿವಾಜಿನಗರ, ಕೆಂಟೋನ್ಮೆಂಟ್, ಪಾಟರಿ ಟೌನ್, ಟ್ಯಾನರಿ ರಸ್ತೆ, ವೆಂಕಟೇಶ್ವರ' ನಿಲ್ದಾಣಗಳು ನಿರ್ಮಾಣಗೊಂಡಿದ್ದು, ಬಣ್ಣಗಳಿಂದ ಕಂಗೊಳಿಸುತ್ತಿವೆ.

BMRCL ಭರದ ಸಿದ್ಧತೆ

ವಾರಗಳ ಹಿಂದೆ ನಾಲ್ಕು ಪಿಂಕ್ ರೈಲುಗಳ ಆರ್ ಡಿ ಎಸ್ ಒ ಟೆಸ್ಟಿಂಗ್ ಮುಗಿದಿದೆ. ಶಾಸನ ಬದ್ಧ ಎಲ್ಲ ಪರೀಕ್ಷೆಗಳು ಪೂರ್ಣಗೊಂಡಿದ್ದು, ಟ್ರಯಲ್ ಪ್ರಯಾಣ ಪತ್ರ, ಅಂತಿಮ ಅನುಮೋದನೆ ನೀಡುತ್ತಿದ್ದಂತೆ ಆಗಸ್ಟ್ 15ರಂದು ಮಾರ್ಗ ತೆರೆಯಲು ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳು ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ನಿಲ್ದಾಣಗಳಲ್ಲಿ ಎಲ್ಲ ವ್ಯವಸ್ಥೆಗಳು ಸ್ಥಾಪನೆಯಾಗಿರುವುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ.

ಕಾಮಗಾರಿಗೆ ವೇಗ ನೀಡಿ, ಮಾರ್ಗ ತೆರೆಯಿರಿ

ಇತ್ತೀಚೆಗೆ ನಮ್ಮ ಮೆಟ್ರೋ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಕೃಷ್ಣ ಬೈರೇಗೌಡ ಅವರು ನಮ್ಮ ಮೆಟ್ರೋ ಕಾಮಗಾರಿಗೆ ವೇಗ ನೀಡಬೇಕು. ಜೊತೆಗೆ ಹೊಸ ಮಾರ್ಗಗಳನ್ನು ತ್ವರಿತವಾಗಿ ತೆರೆದು ಪ್ರಯಾಣಿಕರಿಗೆ ನಿತ್ಯದ ಸಂಚಾರ ಕಿರಿ ಕಿರಿಯಿಂದ ಮುಕ್ತಿ ನೀಡುವಂತೆ ತಿಳಿಸಿದ್ದರು. ಅದರಂತೆ ಹೊಸ ಮಾರ್ಗದ ತೆರೆಯಲು ಅಧಿಕಾರಿಗಳು ಉತ್ಸುಕರಾಗಿದ್ದು, ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+