Gold Price Today: ಮತ್ತೆ ಏರಿಕೆ ಕಂಡ ಬಂಗಾರ ಬೆಲೆ, ಜುಲೈ 23ರಂದು ನಿಮ್ಮ ನಗರದಲ್ಲಿ ಎಷ್ಟಿದೆ ಚಿನ್ನದ ದರ?
ಬೆಂಗಳೂರು: ನಮ್ಮ ದೇಶದ ಜನರಿಗೆ ಅದ್ರಲ್ಲೂ ವಿಶೇಷವಾಗಿ ಮಹಿಳೆಯರು ಚಿನ್ನ ಅಥವಾ ಬೆಳ್ಳಿ ಖರೀದಿಸಲು ಸಾಲು ಸಾಲು ಹಬ್ಬಗಳು ಹಾಗೂ ಮದುವೆಯಂತಹ ಶುಭ ಸಮಾರಂಭಗಳೇ ಬರಬೇಕು ಎನ್ನುವುದೇನು ಇಲ್ಲ. ಹಾಗಾಗಿ ದೇಶಾದಾದ್ಯಂತ ಆಭರಣ ಖರೀದಿ ಜೋರಾಗಿದೆ. ಮಾರುಕಟ್ಟೆಯ ನಿರಂತರ ಏರಿಳಿತಗಳ ನಡುವೆ ಇಂದು, ಅಂದರೆ ಜುಲೈ 23, 2026ರಂದು ಚಿನ್ನದ ದರದಲ್ಲಿ ಕೊಂಚ ಏರಿಕೆ ಕಂಡುಬಂದಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ ಟ್ರೆಂಡ್‌ಗಳ ಆಧಾರದ ಮೇಲೆ ನೋಡುವುದಾದರೆ, ಚಿನ್ನದ ದರದಲ್ಲಿ ಅಲ್ಪ ಮಟ್ಟದ ಏರಿಕೆಯಾಗಿದ್ದು ಆಭರಣ ಪ್ರಿಯರಿಗೆ ಸ್ವಲ್ಪ ನಿರಾಸೆಯಾಗಿದೆ. ಆದರೆ, ಬೆಳ್ಳಿ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಪ್ರಮುಖವಾಗಿ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆಯ ಕುರಿತು ಗ್ರಾಹಕರು ಹೆಚ್ಚಿನ ಕುತೂಹಲ ಹೊಂದಿದ್ದು, ಇಂದಿನ ಆಭರಣ ಮಾರುಕಟ್ಟೆಯ ನಿಖರ ಮಾಹಿತಿ ಇಲ್ಲಿದೆ.

ನಿನ್ನೆಯ ಮಾರುಕಟ್ಟೆ ದರಕ್ಕೆ ಹೋಲಿಸಿದರೆ, ಇಂದು ಚಿನ್ನದ ದರದಲ್ಲಿ ಗ್ರಾಂಗೆ ಸಲ್ಪ ಏರಿಕೆ ದಾಖಲಾಗಿದೆ. ನಿನ್ನೆ (ಜುಲೈ 22) ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 13,430 ರೂಪಾಯಿ ಇತ್ತು. ಆದರೆ ಇಂದು ಈ ದರದಲ್ಲಿ 70 ರೂಪಾಯಿ ಏರಿಕೆಯಾಗಿ, 13,500 ರೂಪಾಯಿಗೆ ತಲುಪಿದೆ. ಅದೇ ರೀತಿ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ನಿನ್ನೆ 14,651 ರೂಪಾಯಿ ಇದ್ದು, ಇಂದು 14,728 ರೂಪಾಯಿಗೆ ಅಂದರೆ 77 ರೂಪಾಯಿ ಹೆಚ್ಚಳ ಆಗಿದೆ.
ಇನ್ನು ಬೆಳ್ಳಿಯ ವಿಷಯಕ್ಕೆ ಬಂದರೆ, ಬೆಳ್ಳಿ ದರದಲ್ಲಿ ಗ್ರಾಹಕರಿಗೆ ಸಮಾಧಾನಕರ ಸಂಗತಿ ಎಂದರೆ ಯಾವುದೇ ಬದಲಾವಣೆ ಕಂಡುಬಂದಿಲ್ಲ. ನಿನ್ನೆ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 1 ಕೆಜಿ ಬೆಳ್ಳಿಗೆ 2,40,000 ರೂಪಾಯಿ ಇತ್ತು. ಇಂದೂ ಕೂಡ ಅದೇ ಬೆಲೆಯಲ್ಲಿ ವಹಿವಾಟು ಮುಂದುವರಿದಿದ್ದು, 1 ಗ್ರಾಂ ಬೆಳ್ಳಿಯ ಬೆಲೆ 240 ರೂಪಾಯಿ ಆಗಿದೆ.
ದೇಶದ ಪ್ರಮುಖ ನಗರವಾರು 22 ಕ್ಯಾರಟ್ 1ಗ್ರಾಂ ಚಿನ್ನದ ಬೆಲೆ ಪಟ್ಟಿ
ಸ್ಥಳೀಯ ಆಮದು ಸುಂಕ, ಸಾಗಾಟ ವೆಚ್ಚ ಹಾಗೂ ಬೇಡಿಕೆಗೆ ಅನುಗುಣವಾಗಿ ನಗರದಿಂದ ನಗರಕ್ಕೆ ದೇಶದಾದ್ಯಂತ ಚಿನ್ನದ ಬೆಲೆಯಲ್ಲಿ ಕೊಂಚ ಬದಲಾಗುತ್ತದೆ. ಜುಲೈ 23ರ ಇಂದಿನ ಮಾರುಕಟ್ಟೆಯ ನಿಖರ ದರಗಳು (22 ಕ್ಯಾರಟ್ 1 ಗ್ರಾಂಗೆ) ಈ ಕೆಳಗಿನಂತಿವೆ:
ಬೆಂಗಳೂರು - 13,500 ರೂಪಾಯಿ
ದೆಹಲಿ - 13,515 ರೂಪಾಯಿ
ಚೆನ್ನೈ - 13,431 ರೂಪಾಯಿ
ಮುಂಬೈ - 13,500 ರೂಪಾಯಿ
ಹೈದರಾಬಾದ್ - 13,500 ರೂಪಾಯಿ
ಅಹಮದಾಬಾದ್ - 13,505 ರೂಪಾಯಿ
ಪುಣೆ - 13,500 ರೂಪಾಯಿ
ಕೋಲ್ಕತ್ತಾ - 13,500 ರೂಪಾಯಿ
ಆಭರಣ ಖರೀದಿದಾರರೇ ಗಮನಿಸಿ: ಗ್ರಾಹಕರು ಚಿನ್ನ ಖರೀದಿಸುವಾಗ ಕಡ್ಡಾಯವಾಗಿ ಬಿಐಎಸ್ ಹಾಲ್‌ಮಾರ್ಕ್ ಇರುವ ಶುದ್ಧ ಚಿನ್ನವನ್ನೇ ಖರೀದಿಸಿ. ಇಲ್ಲಿ ನೀಡಲಾಗಿರುವ ಮೇಲ್ಕಂಡ ದರಗಳು ಕೇವಲ ಮೂಲ ಬೆಲೆಯಾಗಿದ್ದು, ಮಳಿಗೆಗಳಲ್ಲಿ ಆಭರಣ ಖರೀದಿಸುವಾಗ ಈ ಬೆಲೆಯ ಮೇಲೆ 3% ಜಿಎಸ್‌ಟಿ ಹಾಗೂ ಪ್ರತಿ ಆಭರಣದ ವಿನ್ಯಾಸಕ್ಕೆ ತಕ್ಕಂತೆ ಮೇಕಿಂಗ್ ಚಾರ್ಜಸ್ ಸೇರ್ಪಡೆಯಾಗಲಿದೆ ಎಂಬುದನ್ನು ಗ್ರಾಹಕರು ನೆನಪಿನಲ್ಲಿಡಬೇಕು.


Click it and Unblock the Notifications
