ವೆನಿಜುವೆಲಾದಲ್ಲಿ ಮತದಾನದ ವೇಳೆ ಹಿಂಸಾಚಾರಕ್ಕೆ 10 ಬಲಿ

Subscribe to Oneindia Kannada

ವೆನಿಜುವೆಲಾ, ಜುಲೈ 31: ಆರ್ಥಿಕ ದಿವಾಳಿಯ ಅಂಚಿಗೆ ಬಂದು ನಿಂತಿರುವ ವೆನಿಜುವೆಲಾದಲ್ಲಿ ಭಾನುವಾರ ಸಂಸತ್ತಿಗೆ ನಡೆದ ಮತದಾನ ಹಿಂಸೆಯಲ್ಲಿ ಕೊನೆಗೊಂಡಿದೆ. ಮತದಾನ ಮುಗಿಯುವ ವೇಳೆ ಕನಿಷ್ಠ ಹತ್ತು ಜನ ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಇಡೀ ದೇಶವೇ ಹಿಂಸಾಚಾರಕ್ಕೆ ನಲುಗಿ ಹೋಗಿದೆ.

ಜರ್ಮನಿಯ ನೈಟ್ ಕ್ಲಬ್ ನಲ್ಲಿ ಶೂಟೌಟ್, ಇಬ್ಬರು ಸ್ಥಳದಲ್ಲೇ ಸಾವು

ಒಂದು ಕಾಲದ ತೈಲ ವ್ಯಾಪಾರಿ ಶ್ರೀಮಂತ ದೇಶ ವೆನಿಜುವೆಲಾ ಅರಬ್ ಬಿಕ್ಕಟ್ಟಿನ ನಂತರ ತೈಲ ಬೆಲೆಯಲ್ಲಾದ ಇಳಿಕೆಯಿಂದ ಸಂಕಷ್ಟಕ್ಕೆ ಸಿಲುಕಿದೆ. ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ನಿರುದ್ಯೋಗ, ಆರ್ಥಿಕ ಹಿಂಜರಿತದಿಂದ ಜನ ತತ್ತರಿಸಿದ್ದಾರೆ.

Venezuela vote unrest, 10 killed, many injured

ದೇಶದ ಜನರು ಹಲವು ತಿಂಗಳ ಹಿಂದಿನಿಂದಲೂ ಹಾಲಿ ಅಧ್ಯಕ್ಷ ನಿಕೋಲಸ್ ಮದುರೋ ವಿರುದ್ಧ ಭಾರಿ ಪ್ರತಿಭಟನೆಗಳನ್ನು ನಡೆಸಿದ್ದರು. ಹಲವು ಸಂದರ್ಭಗಳಲ್ಲಿ ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದು 120ಕ್ಕೂ ಹೆಚ್ಚು ಜನರು ಅಸು ನೀಗಿದ್ದರು.

ನವಾಜ್ ಷರೀಫ್ ತಮ್ಮ ಶೆಹ್ಬಾಜ್ ಷರೀಫ್ ಪಾಕಿಸ್ತಾನದ ಮುಂದಿನ ಪಿಎಂ

ಈ ಎಲ್ಲಾ ಪ್ರತಿಭಟನೆಗಳ ನಂತರ ಇದೀಗ ವೆನಿಜುವೆಲಾದಲ್ಲಿ ಭಾನುವಾರ ಐತಿಹಾಸಿಕ ಚುನಾವಣೆ ನಡೆದಿತ್ತು. ಆದರೆ, ಈ ಚುನಾವಣೆಯನ್ನು ಬಹಿಷ್ಕರಿಸಿ ದೇಶದ ಬಲಪಂಥೀಯ ಸಂಘಟನೆಗಳು ಕರೆ ನೀಡಿದ್ದವು. ಈ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಕನಿಷ್ಠ ಹತ್ತು ಜನರು ಬಲಿಯಾಗಿದ್ದಾರೆ. ಇವರಲ್ಲಿ ಚುನಾವಣಾ ಅಭ್ಯರ್ಥಿಗಳೂ ಸೇರಿದ್ದಾರೆ.

'ಇದೊಂದು ನಾಟಕದ ಚುನಾವಣೆ' ಎಂಬುದು ಅಲ್ಲಿನ ವಿರೋಧ ಪಕ್ಷಗಳ ಕೂಗು. "ಸರ್ವಾಧಿಕಾರಿಯಂತೆ ಮೆರೆಯುತ್ತಿರುವ ಮದುರೋ ಅಧಿಕಾರದಿಂದ ಕೆಳಕ್ಕಿಳಿಯಬೇಕು. ಅಲ್ಲಿಯವರೆಗೆ ಯಾವ ಚುನಾವಣೆಗಳಿಗೂ ಬೆಲೆ ಇಲ್ಲ," ಎಂಬುದು ಅವುಗಳ ವಾದ.

ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಶಾಹೀದ್ ಖಕನ್

ಹೀಗಿದ್ದೂ ಮದುರೋ ಅಧಿಕಾರದಿಂದ ಕೆಳಕ್ಕಿಳಿಯಲು ಒಪ್ಪುತ್ತಿಲ್ಲ. ಪರಿಣಾಮ ದೇಶದ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿದ್ದು ದೇಶ ಅರಾಜಕತೆಯತ್ತ ಮುಖ ಮಾಡಿದೆ. ಇರಾಕ್, ಸಿರಿಯಾದಂತೆ ಇಲ್ಲೂ ದೇಶದ ಮೇಲಿನ ನಿಯಂತ್ರಣ ಸರಕಾರದ ಕೈಯಿಂದ ನಿಧಾನವಾಗಿ ತಪ್ಪಿ ಹೋಗುತ್ತಿದ್ದು ಎಚ್ಚರಿಕೆಯ ಗಂಟೆ ಬಾರಿಸುತ್ತಿದೆ.

Bihar CM Nitish Kumar Face To Trust Vote In Bihar Assembly | Oneindia Kannada

ಇಂದು ವೆನಿಜುವೆಲಾ ಸಂಸತ್ತಿಗೆ ನಡೆದ ಚುನಾವಣೆಯ ಫಲಿತಾಂಶ ಹೊರ ಬೀಳುವ ಸಾಧ್ಯತೆ ಇದೆ. ಈ ವೇಳೆ ಮತ್ತಷ್ಟು ಹಿಂಸೆ ಭುಗಿಲೆದ್ದರೆ ಆಶ್ಚರ್ಯವಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At least nine people, including an election candidate, have been killed in the past 24 hours in Venezuela as the country voted for an new legislative body.
Please Wait while comments are loading...