ಬೆಂಗಳೂರಿನ 'ಅಂಚೆ ಮತದಾನ ಕೇಂದ್ರಗಳ' ಮಾಹಿತಿ

ಬೆಂಗಳೂರು, ಏಪ್ರಿಲ್ 17: ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಹಿನ್ನೆಲೆಯಲ್ಲಿ ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅಗತ್ಯ ಸೇವೆಗಳ (AVES) ಸಿಬ್ಬಂದಿಗಳಿಗೆ ಮತ ಚಲಾಯಿಸಲು 3 ಲೋಕಸಭಾ ಕ್ಷೇತ್ರಗಳಲ್ಲೂ ಅಂಚೆ ಮತದಾನ ಕೇಂದ್ರ (Postal Voting Center) ವನ್ನು ಸ್ಥಾಪಿಸಲಾಗಿದೆ.

ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1348 ಅಗತ್ಯ ಸೇವೆಗಳ ಸಿಬ್ಬಂದಿಯು ಅಂಚೆ ಮತದಾನ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಅಗತ್ಯ ಸೇವೆ ಸಿಬ್ಬಂದಿಗಳಿಗೆ ದಿನಾಂಕ 19-04-2024 ರಿಂದ 21-04-2024 ರವರೆಗೆ ಮೂರು ದಿನಗಳ ಕಾಲ ಮತದಾನ ನಡೆಯಲಿದೆ.

Bengaluru Lok Sabha Election Bengaluru Postal Voting Centre Address

ಆ ಮೂರು ದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯರೆಗೆ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಅಂಚೆ ಮತದಾನ ಕೇಂದ್ರ ಸ್ಥಾಪಿಸಿರುವ ಸ್ಥಳಗಳ ವಿವರ ಈ ಕೆಳಕಂಡಂತಿದೆ. ಅಗತ್ಯ ಸೇವೆಗಳಲ್ಲಿ ಬರುವ ಮತ್ತು ಅಂಚೆ ಮತದಾನ ಮಾಡುವ ನೋಂದಾಯಿತು, ಸ್ಥಳ ಮಾಹಿತಿ ಗಮನಿಸಬೇಕು.

1. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಿವಿಸಿ

ಚುನಾವಣಾಧಿಕಾರಿಗಳ ಕಛೇರಿ, ಕೊಠಡಿ ಸಂಖ್ಯೆ 17, ನೆಲ ಮಹಡಿ, ಮುಖ್ಯ ಸಾರ್ವಜನಿಕ ಸಂಪರ್ಕಧಿಕಾರಿಗಳ ಕಛೇರಿ ಪಕ್ಕ, ಬಿಬಿಎಂಪಿ ಕೇಂದ್ರ ಕಛೇರಿ, ನರಸಿಂಹ ರಾಜ ವೃತ್ತ, ಬೆಂಗಳೂರು-560002 ಇಲ್ಲಿ ಬೆಂಗಳೂರು ಕೇಂದ್ರ ಲೋಸಕಭಾ ಕ್ಷೇತ್ರದ ಅಂಚೆ ಮತದಾನ ಕೇಂದ್ರ ಸ್ಥಾಪಿಸಲಾಗಿದೆ.

2. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಪಿವಿಸಿ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿ ಅಂಚೆ ಮತದಾನ ಕೇಂದ್ರವನ್ನು ಚುನಾವಣಾಧಿಕಾರಿಗಳ ಕಛೇರಿ, ವಲಯ ಆಯುಕ್ತರು(ದಕ್ಷಿಣ) ರವರ ಕಾರ್ಯಾಲಯ, 2ನೇ ಮಹಡಿ, ಮಹಾನಗರ ಪಾಲಿಕೆ ಕಛೇರಿಗಳ ಸಂಕೀರ್ಣ, 9ನೇ ಕ್ರಾಸ್, 2ನೇ ಬ್ಲಾಕ್, ಜಯನಗರ, ಬೆಂಗಳೂರು-560011 ಇಲ್ಲಿ ಸ್ಥಾಪಿಸಲಾಗಿದೆ.

Bengaluru Lok Sabha Election Bengaluru Postal Voting Centre Address

3. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಪಿವಿಸಿ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ(ರಿ), ಕೇಂದ್ರ ಸಂಘ ಕಟ್ಟಡ, ಸಭಾಂಗಣ, ನೆಲಮಹಡಿ, ಕಂದಾಯ ಭವನ ಹಿಂಬಾಗ, ಕೆ.ಜಿ ರಸ್ತೆ ಬೆಂಗಳೂರು-560009 ಇಲ್ಲಿ ಬೆಂಗಳೂರು ಉತ್ತರ ಲೋಸಕಭಾ ಕ್ಷೇತ್ರದ ಅಂಚೆ ಮತದಾನ ಕೇಂದ್ರ ನಿರ್ಮಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+