Lok Sabha Election 2024: ಈ 6 ಜಿಲ್ಲೆಗಳಲ್ಲಿ 0% ಮತದಾನ-ಎಲ್ಲಿ ಹಾಗೂ ಕಾರಣ ಏನು?
ನವದೆಹಲಿ, ಏಪ್ರಿಲ್, 19: ಇಂದು (ಏಪ್ರಿಲ್ 19) ದೇಶದ ಹಲವೆಡೆ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದೆ. ಹಾಗೆಯೇ ನಾಗಲ್ಯಾಂಡ್‌ನಲ್ಲಿ ಮತದಾನ ಡೆಯುತ್ತಿದ್ದು, ಇಲ್ಲಿನ 6 ಜಿಲ್ಲೆಗಳಲ್ಲಿ 0% ಮತದಾನ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇದಕ್ಕೆ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಪ್ರತ್ಯೇಕ ಆಡಳಿತಕ್ಕೆ ಒತ್ತಾಯಿಸುತ್ತಿರುವ ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಷನ್ (ಇಎನ್‌ಪಿಒ) ಸಾರ್ವಜನಿಕ ತುರ್ತು ಪರಿಸ್ಥಿತಿ ಘೋಷಿಸಿದ್ದು, ಈ ಚುನಾವಣೆಯನ್ನು ಬಹಿಷ್ಕಾರ ಮಾಡುವಂತೆ ಸ್ಥಳೀಯರಿಗೆ ಕರೆ ನೀಡಿತ್ತು ಎನ್ನಲಾಗಿದೆ. ಅದರಂತೆಯೇ ಇದೀಗ ಇಲ್ಲಿನ 6 ಜಿಲ್ಲೆಗಳಲ್ಲಿ ಮತದಾನವೇ ಆಗಿಲ್ಲ ಎಂದು ತಿಳಿದುಬಂದಿದ್ದು, ಇದು ಆಶ್ಚರ್ಯಕರ ಸಂಗತಿಯಾಗಿದೆ.

ನಾಗಾಲ್ಯಾಂಡ್‌ನ ಆರು ಜಿಲ್ಲೆಗಳಾದ ಸೋನ್, ಟ್ಯೂನ್ಸಾಂಗ್, ಲಾಂಗ್ಲೆಂಗ್, ಕಿಫಿರ್, ಶಮಾಟರ್ ಮತ್ತು ನೋಕ್ಲಾಕ್ನಲ್ಲಿ ಇಂದು ಬಹುತೇಕ ಶೂನ್ಯ ಮತದಾನ ಆಗಿದೆ ಎಂದು ತಿಳಿದುಬಂದಿದೆ.
ಚುನಾವಣಾ ಪ್ರಕ್ರಿಯೆಗೆ ಅಡ್ಡಿಪಡಿಸಿದ ಹಿನ್ನೆಲೆ ಈಶಾನ್ಯ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಇಎನ್‌ಪಿಒಗೆ ನೋಟಿಸ್ ನೀಡಿದ್ದಾರೆ. ನಾಗಾಲ್ಯಾಂಡ್ ಮುಖ್ಯ ಚುನಾವಣಾಧಿಕಾರಿ ಆರ್.ವ್ಯಾಸನ್ ಅವರು ತಮ್ಮ ಶೋಕಾಸ್ ನೋಟಿಸ್‌ನಲ್ಲಿ ಭಾರತೀಯ ದಂಡ ಸಂಹಿತೆಯಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಇನ್ನು ಕೊಹಿಮಾದ ಶಾಲೆಯೊಂದರಲ್ಲಿ ಮತ ಚಲಾಯಿಸಿದ ನಂತರ ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ ಮಾತನಾಡಿ, ಪೂರ್ವ ನಾಗಾಲ್ಯಾಂಡ್ ಮತ್ತು ಆ ಪ್ರದೇಶದಲ್ಲಿ ವಾಸಿಸುವ ಜನರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಸ್ವಾಯತ್ತ ಸಂಸ್ಥೆಯ ಸಂವಿಧಾನವನ್ನು ಪ್ರಸ್ತಾಪ ಮಾಡಿದೆ. ಜನ ಬಂದು ಮತ ಚಲಾಯಿಸಬೇಕು. ಚುನಾವಣಾ ಆಯೋಗವು ಪೂರ್ವ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್‌ಗೆ ಮತದಾನ ಮಾಡದಂತೆ ಜನರಿಗೆ ಕರೆ ನೀಡಿದ್ದಕ್ಕೆ ಶೋಕಾಸ್ ನೋಟಿಸ್ ನೀಡಿದೆ ಎಂದು ತಿಳಿಸಿದ್ದಾರೆ.












Click it and Unblock the Notifications