ಜರ್ಮನಿಯ ನೈಟ್ ಕ್ಲಬ್ ನಲ್ಲಿ ಶೂಟೌಟ್, ಇಬ್ಬರು ಸ್ಥಳದಲ್ಲೇ ಸಾವು

Subscribe to Oneindia Kannada

ಮ್ಯೂನಿಚ್, ಜುಲೈ 30: ಜರ್ಮನಿಯ ಕಾನ್ಸ್ಟಾನ್ಸ್ ನಗರದ ನೈಟ್ ಕ್ಲಬ್ ನಲ್ಲಿ ಬಂದೂಕುಧಾರಿಯೊಬ್ಬ ಯದ್ವಾತದ್ವ ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರಿಗೆ ಗಂಭೀರ ಗಾಯಗಳಾಗಿವೆ. ಓರ್ವ ಪೊಲೀಸ್ ಅಧಿಕಾರಿಗೂ ಗಾಯವಾಗಿದೆ.

ಭಾನುವಾರ ಈ ಘಟನೆ ನಡೆದಿದ್ದು ಪೊಲೀಸರ ಪ್ರತಿದಾಳಿಗೆ ಗಂಭೀರ ಗಾಯಗೊಂಡಿದ್ದ ಬಂದೂಕುಧಾರಿ ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

 Two people killed in German nightclub shootout

ಕಾನ್ಸ್ಟಾನ್ಸ್ ನಗರದ ಮಾಕ್ಸ್ ಸ್ಟ್ರೊಮೆಯರ್ ರಸ್ತೆಯಲ್ಲಿರುವ 'ಗ್ರೆ ನೈಟ್ ಕ್ಲಬ್'ನಲ್ಲಿ ಈ ದಾಳಿ ನಡೆದಿದೆ. ನೈಟ್ ಕ್ಲಬ್ ನಲ್ಲಿದ್ದ ಗ್ರಾಹಕರು ಅಡಗಿ ಕುಳಿತಿದ್ದರಿಂದ ಹೆಚ್ಚಿನ ಹಾನಿ ನಡೆದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Indian Para-Swimmer Forced To Beg in Germany | Oneindia Kannada

ಇನ್ನು ಹೆಚ್ಚಿನ ಬಂದೂಕುಧಾರಿಗಳು ಇದೇ ರೀತಿ ದಾಳಿಗೆ ನಗರದಲ್ಲಿ ಸಂಚು ರೂಪಿಸಿರಬಹುದು ಎಂಬ ಅನುಮಾನದ ಮೇಲೆ ನಗರಕ್ಕೆ ಹೆಲಿಕಾಪ್ಟರ್ ತರಿಸಿಕೊಳ್ಳಲಾಗಿದೆ. ಮತ್ತು ಭಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Two people have been killed and three seriously injured in a nightclub shooting in the German city of Constance.
Please Wait while comments are loading...