ವಿಮಾನ ಚಲಿಸುವಾಗಲೇ ತುರ್ತು ನಿರ್ಗಮನ ಬಾಗಿಲು ತೆರೆದ ಪ್ರಯಾಣಿಕ! ಮುಂದೇನಾಯ್ತು

ನವದೆಹಲಿ: ಶಾರ್ಜಾದಿಂದ ಚೆನ್ನೈಗೆ ನೂರಾರು ವಿಮಾನಗಳನ್ನು ಹೊತ್ತು ಬಂದ ವಿಮಾನವು ಲ್ಯಾಂಡ್ ಆಗುವ ಮುನ್ನವೇ ಏರ್‌ ಅರೇಬಿಯಾ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ತುರ್ತು ಬಾಗಿಲು ತೆರೆದ ಘಟನೆ ಇಂದು ಭಾನುವಾರ (ಮೇ 3) ನಡೆದಿದೆ. ಬಾಗಿಲು ತೆರೆಯುತ್ತಿದ್ದಂತೆ ವಿಮಾನದಲ್ಲಿದ್ದ ಪ್ರಯಾಣಿಕರ ಆತಂಕಕ್ಕೊಳಗಾಗಿದ್ದಾರೆ. ಮುಂದಾಗಿದ್ದೇನು?

ಶಾರ್ಜಾದಿಂದ ಚೆನ್ನೈಗೆ ಆಗಮಿಸುತ್ತಿದ್ದ ಏರ್ ಅರೇಬಿಯಾ ವಿಮಾನದಲ್ಲಿ ಇನ್ನೇನು ರನ್‌ವೇಗೆ ಇಳಿಯಲು ಸಿದ್ಧವಾಗುವ ಹೊತ್ತಿಗೆ ವಿಮಾನದಲ್ಲಿದ್ದ 34 ವರ್ಷದ ಪುರುಷ ಪ್ರಯಾಣಿಕರೊಬ್ಬ ತುರ್ತು ನಿರ್ಗಮನ ಬಾಗಿಲು ತೆರೆದಿದ್ದಾನೆ. ಆತನನ್ನು ಬಂಧಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

Air Arabia Flight

231 ಪ್ರಯಾಣಿಕರಿದ್ದ ವಿಮಾನದಲ್ಲಿ ಘಟನೆ

ಈ ವಿಮಾನದಲ್ಲಿ ಸುಮಾರು 231 ಪ್ರಯಾಣಿಕರು ಸಂಚಾರ ಮಾಡುತ್ತಿದ್ದರು. ಇನ್ನೇನು ವಿಮಾನವು ರನ್‌ವೇ ಮತ್ತು ಟರ್ಮಿನಲ್ ಅನ್ನು ಸಂಪರ್ಕಿಸಬೇಕಿತ್ತು. ಅಷ್ಟರೊಳಗೆ ಈ ಘಟನೆ ನಡೆದಿದೆ. ಬಂಧಿತ ಪ್ರಯಾಣಿಕನ್ನು ತೆರೆದಪುದುಕ್ಕೊಟ್ಟೈ ನಿವಾಸಿ ಎಂದು ಗುರುತಿಸಲಾಗಿದೆ. ಘಟನೆ ನಡೆಯುತ್ತಿದ್ದಂತೆ ಎಚ್ಚೆತ್ತ ಪೈಲಟ್ ಸಮಯ ಪ್ರಜ್ಞೆ ಮೆರೆದಿದ್ದಾರೆ. ಕೂಡಲೇ ವಿಮಾನವನ್ನು ನಿಲ್ಲಿಸಿ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದರು. ಘಟನೆಯ ನಂತರ ಪೈಲಟ್ ಅಧಿಕಾರಿಗಳಿಗೆ ಔಪಚಾರಿಕ ದೂರು ಸಹ ನೀಡಿದ್ದು, ಅದರ ಆಧಾರದಲ್ಲಿಯೇ ಪ್ರಯಾಣಿಕನನ್ನು ಬಂಧಿಸಿದ್ದಾರೆ.

ಕರ್ನಾಟಕ; ಹೈ-ಸ್ಪೀಡ್ ರೈಲು, ವಿಮಾನ ಸೇವೆ, ಟೌನ್‌ಶಿಪ್ ಯೋಜನೆಗಳಿಗೆ ಸಚಿವ ಸಂಪುಟ ಅನುಮೋದನೆ
ಕರ್ನಾಟಕ; ಹೈ-ಸ್ಪೀಡ್ ರೈಲು, ವಿಮಾನ ಸೇವೆ, ಟೌನ್‌ಶಿಪ್ ಯೋಜನೆಗಳಿಗೆ ಸಚಿವ ಸಂಪುಟ ಅನುಮೋದನೆ

ಸ್ಥಳಕ್ಕೆ ಬಂದ ಸಿಐಎಸ್‌ಎಫ್, ಸಶಸ್ತ್ರ ಪಡೆ ತಂಡ

ಪೈಲಟ್‌ನಿಂದ ಸಂದೇಶ ಪಡೆದ ಏರ್‍‌ಪೋರ್ಟ್ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿದ್ದಾರೆ. ವಿಮಾನ ಸುಸೂತ್ರವಾಗಿ ಲ್ಯಾಂಡ್ ಆಗುತ್ತಿದ್ದಂತೆ ಬಾಂಬ್ ನಿಷ್ಕ್ರಿಯ ತಜ್ಞರು ಮತ್ತು ಸಶಸ್ತ್ರ ಅಧಿಕಾರಿಗಳನ್ನು ಒಳಗೊಂಡ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರ. ವಿಮಾನ ಹತ್ತಿ ಸಂಪೂರ್ಣವಾಗಿ ಪರಿಶೀಲಿಸಿದರು. ಕೂಡಲೇ ಬಾಗಿಲು ತೆರೆದ ಪ್ರಯಾಣಿಕನನ್ನು ಬಂಧಿಸಿದ್ದಾರೆ. ವಶಕ್ಕೆ ಪಡೆದು ಹೀಗೆ ಬಾಗಿಲು ತೆರೆದ ಹಿಂದೆ ದುರುದುದ್ಧೇಶ ಏನಾದರೂ ಇದಿಯಾ? ಘಟನೆಗೆ ಕಾರಣ ಎಂಬಿತ್ಯಾದಿ ಆಯಾಮಗಳಲ್ಲಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣ ಪ್ರಭಾವ ಹೆಚ್ಚಿರುವ ಇಂದಿನ ದಿನಗಳಲ್ಲಿ ಯುವ ಸಮೂಹ ಅಪಾಯಕಾರಿ ವರ್ತನೆ ತೋರುತ್ತಿದ್ದಾರೆ. ಇಂತಹ ಪ್ರಕರಣಗಳು ಹೆಚ್ಚು ಕಂಡು ಬರುತ್ತಿದ್ದು, ಇಂಥದ್ದೇ ವಿಚಾರಕ್ಕೆ ಈ ಘಟನೆ ನಡೆಯಿತಾ, ಅಥವಾ ವಿಮಾನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದೇ ಅಕಸ್ಮಾತ್ ಆಗಿ ಬಾಗಿಲು ತೆರೆದರಾ ಎಂಬುದು ಶೀಘ್ರವೇ ತನಿಖೆಯಿಂದ ತಿಳಿದು ಬರಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+