ಹೆರಿಗೆ ರಜೆ ಮುಗಿಸಿ ಬರುವಷ್ಟರಲ್ಲಿ ಕೆಲಸವೇ ಹೋಯ್ತು: ಎದೆಗುಂದದೆ ಸ್ವಂತ ಬ್ಯುಸಿನೆಸ್ ಶುರು ಮಾಡಿದ ಭಾರತದ ಈ ಮಹಿಳೆ

ಇತ್ತೀಚಿನ ದಿನಗಳಲ್ಲಿ ಈ ಕಾರ್ಪೋರೇಟ್‌ ಜಗತ್ತಿನಲ್ಲಿ ಕೆಲಸ ಉಳಿಸಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿದೆ. ಉದ್ಯೋಗ ಭದ್ರತೆ ಎನ್ನುವುದೇ ಕಣ್ಮರೆಯಾಗುತ್ತಿದೆ. ಎಷ್ಟೇ ಕಷ್ಟಪಟ್ಟು ದುಡಿದರೂ, ಎಂತಹದ್ದೇ ಉನ್ನತ ಹುದ್ದೆಯಲ್ಲಿದ್ದರೂ ಕೆಲಸಕ್ಕೆ ಮಾತ್ರ ಗ್ಯಾರಂಟಿ ಇಲ್ಲ ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ನಮ್ಮ ಕಣ್ಮುಂದೆ ನಡೆಯುತ್ತಿರುವ ದೊಡ್ಡ ದೊಡ್ಡ ಲೇಆಫ್‌ಗಳೇ ಸಾಕ್ಷಿ. ಇದೀಗ ಯುರೋಪ್‌ನ ಎಸ್ಟೋನಿಯಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಮಹಿಳೆಯೊಬ್ಬರಿಗೆ ಇಂತಹದ್ದೇ ಕಹಿ ಅನುಭವವಾಗಿದೆ.

ಹೌದು, ಹೆರಿಗೆ ರಜೆ ಮುಗಿಸಿ ಮತ್ತೆ ಕೆಲಸಕ್ಕೆ ಮರಳಿದ ಅವರಿಗೆ ಕಂಪನಿ ದಿಢೀರ್ ಶಾಕ್ ನೀಡಿದೆ. ಆದರೆ, ಈ ಲೇಆಫ್‌ನಿಂದ ಅವರೇನು ಹೆದರಲಿಲ್ಲ. ಬದಲಿಗೆ ಅವರು ಇದನ್ನೇ ಒಂದು ಸವಾಲಾಗಿ ಸ್ವೀಕರಿಸಿ, ತಮ್ಮದೇ ಆದ ಸ್ವಂತ ಉದ್ಯಮ ಕಟ್ಟಲು ಮುಂದಾಗಿದ್ದಾರೆ. ಅವರ ಈ ಯಶಸ್ಸಿನ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗ್ತಿದೆ.

Indian Woman

ತಾರೀನಾ ಅವರ ಲೇಆಫ್ ಅನುಭವ

ತಾರೀನಾ ಎಂಬ ಭಾರತೀಯ ಮಹಿಳೆಯೊಬ್ಬರು ಕಳೆದ ಏಳು ವರ್ಷಗಳಿಂದ ಎಸ್ಟೋನಿಯಾದಲ್ಲಿ ನೆಲೆಸಿದ್ದರು. ಇತ್ತೀಚೆಗೆ ಇವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಒಂದು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಹೆರಿಗೆ ರಜೆಯ ನಂತರ ಅನಿರೀಕ್ಷಿತವಾಗಿ ಕೆಲಸ ಕಳೆದುಕೊಂಡ ಬಗ್ಗೆ ವಿವರಿಸಿದ್ದಾರೆ.

"ಕೆಲಸದಲ್ಲಿ ಪ್ರಾಮಾಣಿಕವಾಗಿ ಹಾಗೂ ಕಷ್ಟಪಟ್ಟು ದುಡಿದರೆ ನಮ್ಮ ಉದ್ಯೋಗ ಯಾವಗಳು ಸೇಫ್‌ ಆಗಿರುತ್ತೆ ಎಂದು ನಾನು ಯಾವಾಗಲೂ ನಂಬಿದ್ದೆ. ನನ್ನ ವೃತ್ತಿಜೀವನದ ಅತ್ಯಂತ ಸುರಕ್ಷಿತ ಹಂತ ಎಂದು ನಾನು ಭಾವಿಸಿದ್ದ ಹೆರಿಗೆ ರಜೆಯ ಸಮಯದಲ್ಲಿಯೇ ನನ್ನನ್ನು ಕೆಲಸದಿಂದ ತೆಗೆದುಹಾಕಿದರು. ಇದನ್ನ ನಾನು ನಿಜವಾಗಲೂ ನಿರೀಕ್ಷಿಸಿರಲಿಲ್ಲ," ಎಂದು ಅವರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಉದ್ಯೋಗ ಕಳೆದುಕೊಂಡ ಆರಂಭಿಕ ದಿನಗಳಲ್ಲಿ, ತಾವು ಇಷ್ಟು ದಿನ ಕಷ್ಟಪಟ್ಟು ಮಾಡಿದ ಕೆಲಸವೇಲ್ಲ ವೇಸ್ಟ್‌ ಆಯ್ತೆ ಎಂಬ ಭಾವನೆ ಅವರಲ್ಲಿ ಕಾಡಿತ್ತಂತೆ.

ತಾಯ್ತನದ ನಡುವೆ ಸ್ವಂತ ಉದ್ಯಮದತ್ತ ಒಲವು

ಮಗುವಿನ ಆರೈಕೆ, ಹೊಸ ಉದ್ಯೋಗಕ್ಕಾಗಿ ಹುಡುಕಾಟ ಹಾಗೂ ಅದರಿಂದ ಬರುತ್ತಿದ್ದ ರಿಜೆಕ್ಷನ್ ಇಮೇಲ್‌ಗಳು ಇವೆಲ್ಲದರ ನಡುವೆ ತಾರೀನಾ ಅವರಿಗೆ ಹೊಸ ಆಲೋಚನೆ ಹೊಳೆದಿದೆ. ಬೇರೊಬ್ಬರ ಕಂಪನಿಯನ್ನು ಬೆಳೆಸುವುದಕ್ಕಾಗಿ ತಮ್ಮ ಸಂಪೂರ್ಣ ಶ್ರಮ ಮತ್ತು ಕ್ರಿಯೇಟಿವಿಟಿ ಏಕೆ ಖರ್ಜು ಮಾಡಬೇಕು? ಆ ಶ್ರಮವನ್ನು ತಮ್ಮದೇ ಆದ ಸ್ವಂತ ಉದ್ಯಮ ಕಟ್ಟಲು ಏಕೆ ಬಳಸಬಾರದು? ಎಂಬ ಪ್ರಶ್ನೆ ಅವರಲ್ಲಿ ಮೂಡಿದೆ.

ಈ ಆಲೋಚನೆಯೇ ಇಂದು ಅವರ ಬದುಕಿನ ದಿಕ್ಕನ್ನೇ ಬದಲಿಸಿದೆ. ಇದೀಗ ಅವರು ತಮ್ಮದೇ ಆದ ಹೊಸ ಪಯಣವನ್ನು ಆರಂಭಿಸಲು ನಿರ್ಧರಿಸಿದ್ದಾರೆ. ಕಂಟೆಂಟ್ ಕ್ರಿಯೇಷನ್, ಫ್ರೀಲ್ಯಾನ್ಸಿಂಗ್ ಅಥವಾ ಬೇರೆ ಯಾವುದಾದರೂ ಹೊಸ ಉದ್ಯಮದ ಮೂಲಕ ಶೂನ್ಯದಿಂದ ಬ್ಯುಸಿನೆಸ್ ಕಟ್ಟುವ ಪ್ರಕ್ರಿಯೆಯನ್ನು ಅವರು ಹಂತ ಹಂತವಾಗಿ ಮಾಡುತ್ತಿದ್ದಾರೆ ಹಾಗೂ ಇನ್ನೊಬ್ಬರ ನಿರ್ಧಾರದ ಮೇಲೆ ಅವಲಂಬಿಸದೇ ಜೀವನವನ್ನ ಕಟ್ಟಿಕೊಳ್ಳುತ್ತಿದ್ದಾರೆ.

ನೆಟ್ಟಿಗರಿಂದ ಭಾರಿ ಬೆಂಬಲ

ತಾರೀನಾ ಇಟ್ಟ ಈ ಹೆಜ್ಜೆ ಕೇವಲ ಅವರ ಬದುಕನ್ನ ಮಾತ್ರವಲ್ಲದೆ, ಇಂತಹದ್ದೇ ಪರಿಸ್ಥಿತಿ ಎದುರಿಸುತ್ತಿರುವ ಇತರರಿಗೂ ಸ್ಫೂರ್ತಿಯಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋಗೆ ನೆಟ್ಟಿಗರಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ತಾಯ್ತನವನ್ನು ನಿಭಾಯಿಸುತ್ತಲೇ ತಮ್ಮದೇ ಆದ ಸ್ವತಂತ್ರ ಬದುಕು ಕಟ್ಟಿಕೊಳ್ಳಲು ಹೊರಟಿರುವ ಅವರ ನಿರ್ಧಾರವನ್ನು ಅನೇಕರು ಶ್ಲಾಘಿಸಿದ್ದಾರೆ. "ನೀವು ಯಾವುದೇ ಕ್ಷೇತ್ರವನ್ನ ಆಯ್ಕೆ ಮಾಡಿಕೊಂಡರೂ ಅದರಲ್ಲಿ ಖಂಡಿತ ಯಶಸ್ಸು ಸಾಧಿಸುತ್ತೀರಿ," ಎಂದು ಒಬ್ಬರು ಕಾಮೆಂಟ್ ಮಾಡಿದರೆ, "ನಿಮ್ಮ ಈ ಹೊಸ ಆರಂಭಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ," ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+