Coconut Shell: ತುಮಕೂರಿನಲ್ಲಿ ಮೊಟ್ಟ ಮೊದಲ ಬಾರಿ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ ಚಿಪ್ಪು..

Coconut Shell: ಸಾಮಾನ್ಯವಾಗಿ ಬಹುತೇಕ ಭಾಗಗಳಲ್ಲಿ ತೆಂಗಿನ ಕಾಯಿ ಸುಲಿಯುತ್ತಿದ್ದಂತೆ ಅದರ ಚಿಪ್ಪುಗಳನ್ನು ಎಸೆಯುತ್ತಾರೆ. ಕೆಲವರು ಒಲೆಗೆ ಇಡಲು ಸೌದೆಯಾಗಿ ಬಳಸುತ್ತಾರೆ. ಆದರೆ ಇವುಗಳನ್ನು ಕೂಡಿಟ್ಟುಕೊಂಡು ದಾಖಲೆಯ ಆದಾಯವನ್ನೂ ಪಡೆಯಬಹುದಾಗಿದೆ. ಕರ್ನಾಟಕದ ತುಮಕೂರು ಜಿಲ್ಲೆಯ ತೋವಿನಕೆರೆಯ ರೈತರೊಬ್ಬರು ಚಿಪ್ಪುಗಳನ್ನು ಮಾರಾಟ ಮಾಡಿ ಹೆಚ್ಚು ಲಾಭ ಮಾಡಿಕೊಂಡಿರುವುದೇ ಇದಕ್ಕೆ ಪ್ರಮುಖ ಉದಾಹರಣೆ.

ಹೌದು.. ಕಲ್ಪತರು ನಾಡು ಅಂತಲೇ ಹೆಸರುವಾಸಿಯಾಗಿರುವ ತುಮಕೂರು ಜಿಲ್ಲೆಯ ತಿಪಟೂರು ಕೊಬ್ಬರಿ, ತೆಂಗಿನ ಕಾಯಿ, ಎಳನೀರಿಗೆ ಮೊದಲಿನಿಂದಲೂ ಭಾರಿ ಬೇಡಿಕೆಯಿದೆ. ಆದರೆ ಇದೀಗ ತೆಂಗಿನ ಚಿಪ್ಪು ಮಾರಾಟ ಮಾಡಿ ದಾಖಲೆಯ ಆದಾಯ ಪಡೆಯಬಹುದು ಎಂದು ತೋವಿನಕೆರೆಯ ರೈತರೊಬ್ಬರು ತೋರಿಸಿಕೊಟ್ಟಿದ್ದಾರೆ.

Coconut Shell Price Hits Record in Karnataka 1 000 Shells Sold for 4 500 in Tumakuru Know details

ಕೊಬ್ಬರಿ ಚಿಪ್ಪು ದಾಖಲೆ ಬೆಲೆಗೆ ಮಾರಾಟ

ಎಳನೀರು, ತೆಂಗಿನಕಾಯಿಗೆ ಬೆಲೆ ಹೆಚ್ಚಳ ಆದಂತೆ ಇದೀಗ ಕೊಬ್ಬರಿ ಚಿಪ್ಪಿಗೂ ಭಾರಿ ಬೇಡಿಕೆ ಬಂದಿದೆ. ಇದಕ್ಕೆ ಉದಾಹರಣೆ ಎಂಬಂತೆ ಜಿಲ್ಲೆಯಲ್ಲಿ 1,000 ಕೊಬ್ಬರಿ ಚಿಪ್ಪು ಬರೋಬ್ಬರಿ 4,500 ರೂಪಾಯಿಗೆ ಮಾರಾಟವಾಗಿ ದಾಖಲೆ ಬರೆದಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ.

ರೈತರು ಹೇಳುವುದೇನು?

ಇಲ್ಲಿನ ಸ್ಥಳೀಯ ರೈತರೊಬ್ಬರು 6,000 ಸಾವಿರ ಚಿಪ್ಪುಗಳನ್ನು 27,000 ರೂಪಾಯಿಗೆ ಮಾರಾಟ ಮಾಡಿದ್ದಾರೆ. ಕೊಬ್ಬರಿ ಚಿಪ್ಪು ಇಷ್ಟೊಂದು ದುಬಾರಿ ಬೆಲೆಗೆ ಮಾರಾಟ ಆಗಿರುವುದು ಜಿಲ್ಲೆಯಲ್ಲಿ ಇದೇ ಮೊಟ್ಟ ಮೊದಲು ಎಂದು ತಿಳಿದುಬಂದಿದೆ. ಈ ಅಂಕಿಅಂಶಗಳ ಪ್ರಕಾರ, ಪ್ರತಿ ಚಿಪ್ಪಿಗೆ 4.50 ರೂಪಾಯಿ ಸಿಗುತ್ತಿದೆ. ತೂಕದ ಲೆಕ್ಕದಲ್ಲಿ ಕ್ವಿಂಟಲ್‌ಗೆ 3,600 ರೂಪಾಯಿಯಂತೆ ವ್ಯಾಪಾರಿಗಳು ಖರೀದಿ ಮಾಡುತ್ತಿದ್ದಾರೆ,' ಎಂದು ಚಿಪ್ಪು ಮಾರಾಟ ಮಾಡಿದ ರೈತ ಟಿ.ಎಸ್‌.ಲೋಕೇಶ್‌ ಹೇಳಿದರು ಅಂತಾ ವರದಿ ಮಾಡಿದೆ.

ಕೊಬ್ಬರಿ ಚಿಪ್ಪಿನ ಬೆಲೆ ಏರಿಕೆಗೆ ಕಾರಣ ಏನು?

ತೆಂಗು ಹೆಚ್ಚು ಬೆಳೆಯುವ ಕೇರಳ, ತಮಿಳುನಾಡಿನಲ್ಲೂ ಚಿಪ್ಪಿನ ಉತ್ಪಾದನೆ ಕಡಿಮೆಯಾಗಿದೆ. ಆದ್ದರಿಂದ ಕರ್ನಾಟಕದ ಚಿಪ್ಪಿಗೆ ಬೇಡಿಕೆ ಹೆಚ್ಚಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಎಳನೀರು, ತೆಂಗಿನಕಾಯಿಗೆ ಉತ್ತಮ ಬೆಲೆ ಸಿಗುತ್ತಿದೆ. ಇದರಿಂದ ಬೆಳೆಗಾರರು ಕಾಯಿ ಒಣಗುವ ಮುನ್ನವೇ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಕೊಬ್ಬರಿ ಉತ್ಪಾದನೆ ಕಡಿಮೆಯಾಗಿದೆ. ಇದು ಕೂಡ ಚಿಪ್ಪು ಕೊರತೆ ಆಗಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಜೋನಿಗರಹಳ್ಳಿ ಚಿಪ್ಪು ಖರೀದಿದಾರ ಪ್ರಸಾದ್‌ ಹೇಳಿರುವ ಪ್ರಕಾರ, 'ತೆಂಗಿನಕಾಯಿಗಳ ಇಳುವರಿ ಕಡಿಮೆ ಆಗಿರುವುದು ಸಹ ಚಿಪ್ಪಿನ ಬೆಲೆ ಏರಿಕೆಯಾಗಲು ಪ್ರಮಖ ಕಾರಣವಾಗಿದೆ. ಹಿಂದೆ ವಾರಕ್ಕೆ ಒಂದು ಟನ್ ಚಿಪ್ಪನ್ನು ರೈತರಿಂದ ಖರೀದಿಸುತ್ತಿದ್ದೆ. ಆದರೆ ಈಗ ತಿಂಗಳಿಗೆ ಒಂದು ಟನ್ ಸಿಗುವುದೂ ಕಷ್ಟವಾಗಿದೆ,' ಎಂದು ಹೇಳಿದರು.

ಕೊಬ್ಬರಿ ಚಿಪ್ಪಿನಿಂದ ಏನೆಲ್ಲಾ ಪ್ರಯೋಜನಾಗಳಿವೆ?

ಪ್ರಸ್ತುತ ಮಾರುಕಟ್ಟೆಯಲ್ಲಿ ಕೊಬ್ಬರಿ ಚಿಪ್ಪಿನ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ವರ್ತಕರು ಅಂದಾಜಿಸಿದ್ದಾರೆ. ಕೊಬ್ಬರಿ ಉತ್ಪಾದನೆಗೆ ರೈತರು ಹೆಚ್ಚಿನ ಆದ್ಯತೆ ನೀಡಿದರೆ ಚಿಪ್ಪಿನ ಲಭ್ಯತೆ ಹೆಚ್ಚಾಗಿ ಬೆಲೆ ಇಳಿಕೆಯಾಗಬಹುದು ಎಂಬ ಲೆಕ್ಕಾಚಾರವಿದೆ. ಆದರೂ ಸದ್ಯದ ಪರಿಸ್ಥಿತಿಯಲ್ಲಿ ಇದಕ್ಕೆ ಬೇಡಿಕೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಏರಿಕೆಯಾದರೂ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ.

ಅಲ್ಲದೆ ರಾಜ್ಯದ ಕೊಬ್ಬರಿ ಚಿಪ್ಪಿನಿಂದ ತಯಾರಾಗುವ ಇದ್ದಿಲಿಗೆ ಹೊರರಾಜ್ಯಗಳಲ್ಲಿ ಭಾರಿ ಬೇಡಿಕೆಯಿದೆ. ಇಲ್ಲಿನ ವ್ಯಾಪಾರಿಗಳು ಚಿಪ್ಪನ್ನು ಸುಟ್ಟು ಇದ್ದಿಲನ್ನಾಗಿ ಪರಿವರ್ತಿಸಿ ವಿವಿಧ ರಾಜ್ಯಗಳಿಗೆ ಪೂರೈಕೆ ಮಾಡುತ್ತಾರೆ. ಅಲ್ಲಿನ ಕಾರ್ಖಾನೆಗಳಲ್ಲಿ ಇದನ್ನ ಸ್ವಚ್ಛಗೊಳಿಸಿ, ಒಣಗಿಸಿ, ನಿಗದಿತ ಗಾತ್ರಕ್ಕೆ ತಕ್ಕಂತೆ ಕತ್ತರಿಸಿ ಪ್ಯಾಕ್ ಮಾಡಿ ವಿದೇಶಗಳಿಗೂ ರಫ್ತು ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ತುಮಕೂರಿನ ಚಿಪ್ಪು ಕಾರ್ಖಾನೆ ಮಾಲೀಕರಾದ ಶ್ರೀಕಾಂತ್ ಅವರ ಪ್ರಕಾರ, 'ಕೊಬ್ಬರಿ ಚಿಪ್ಪನ್ನು ಕೇವಲ ಇದ್ದಿಲಿಗೆ ಮಾತ್ರವಲ್ಲದೆ ಇನ್ನು ಹಲವು ಉದ್ಯಮಗಳಲ್ಲಿ ಪ್ರಮುಖ ಕಚ್ಚಾ ವಸ್ತುವಾಗಿ ಬಳಕೆ ಮಾಡಲಾಗುತ್ತದೆ. ಸೌಂದರ್ಯವರ್ಧಕಗಳು, ಮುಖದ ಕ್ರೀಮ್‌ಗಳು, ನೀರು ಶುದ್ಧೀಕರಣದ ಪ್ರಕ್ರಿಯೆ ಸೇರಿದಂತೆ ಹಲವು ಉದ್ದೇಶಗಳಿಗಾಗಿ ಕೊಬ್ಬರಿ ಚಿಪ್ಪನ್ನು ಬಳಕೆ ಮಾಡಲಾಗುತ್ತದೆ. ಆದ್ದರಿಂದ ಇದಕ್ಕೆ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಬೇಡಿಕೆಯಿದೆ,' ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಇಲ್ಲಿನ ಕೊಬ್ಬರಿ ಚಿಪ್ಪು ಇದೇ ಮೊಟ್ಟ ಮೊದಲ ಬಾರಿ ದಾಖಲೆಯ ಮೊತ್ತಕ್ಕೆ ಮಾರಾಟವಾಗಿರುವುದು ರಾಜ್ಯದ ವಿಶೇಷತೆ ಎಂತಹದ್ದು ಎಂಬುದನ್ನ ಎತ್ತಿತೋರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+