SWR: ಬಸವ ಎಕ್ಸ್‌ಪ್ರೆಸ್ ಗದಗವರೆಗೆ ವಿಸ್ತರಣೆ ಬೇಡಿಕೆ: ಉತ್ತರ ಕರ್ನಾಟಕ ರೈಲು ಸಮಸ್ಯೆ ಪರಿಹಾರಕ್ಕೆ ಒತ್ತಾಯ

South Western Railway: ನೈಋತ್ಯ ರೈಲ್ವೆ ವ್ಯಾಪ್ತಿಯ ಕರ್ನಾಟದಲ್ಲಿ ಗದಗ ಸುತ್ತಮುತ್ತಲಿನ ರೈಲು ಸಂಪರ್ಕ ಸುಧಾರಿಸಬೇಕಿದೆ. ರೈಲ್ವೆ ಇಲಾಖೆಯಿಂದ ಹೊಸ ಮಾರ್ಗಗಳ ನಿರ್ಮಾನ, ಸಮೀಕ್ಷೆಗೆ ಅನುಮೋದನೆ, ರೈಲು ಹಳಿ ವಿದ್ಯುದೀಕರಣದಂತಹ ಕೆಲಸಗಳನ್ನು ನಡೆಸಿದೆ. ಹೀಗಿದ್ದರೂ ಗದಗ, ಕಲಬುರಗಿ, ಬಾಗಲಕೋಟೆ ವ್ಯಾಪ್ತಿಯಲ್ಲಿ ರೈಲುಗಳ ಕೊರತೆ ಇದೆ. ಈ ಸಮಸ್ಯೆ ಪರಿಹಾರಕ್ಕೆ ಆ ಭಾಗದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಒಳಗೊಂಡಂತೆ ನಾಗರಿಕರು ಒಂದಿಷ್ಟು ಬೇಡಿಕೆ ಇಟ್ಟಿದ್ದಾರೆ. ಅದರಲ್ಲಿ ಪ್ರಮುಖವಾದದ್ದು 'ಬಸವ ಎಕ್ಸ್‌ಪ್ರೆಸ್' ರೈಲು ವಿಸ್ತರಣೆಯು ಒಂದು.

ಮೈಸೂರು-ಬಾಗಲಕೋಟೆ ಮಧ್ಯ ಸಂಚಾರ ಮಾಡುವ 'ಬಸವ ಎಕ್ಸ್‌ಪ್ರೆಸ್' (Basava Express Rail) ರೈಲು ಗದಗವರೆಗೆ ವಿಸ್ತರಿಸಿದರೆ ಸಾಕಷ್ಟು ಅನುಕೂಲವಾಗಲಿದೆ. ಈ ಕುರಿತು ಖುದ್ದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಪತ್ರ ಬರೆದು ಎರಡು ವರ್ಷವಾದರೂ, ಅದಕ್ಕೆ ಇನ್ನೂವರೆಗೆ ಸ್ಪಂದನೆ ಸಿಕ್ಕಿಲ್ಲವೆಂದು ಈ ಭಾಗದ ನಾಗರಿಕರು ಅಸಮಾಧಾನ ಹೊರ ಹಾಕಿದ್ದಾರೆ.

Basava Express Train

ಪತ್ರದಲ್ಲಿ ಯತ್ನಾಳ್ ಅವರು, 'ಬಸವ ಎಕ್ಸ್‌ಪ್ರೆಸ್ ರೈಲು'ಮೈಸೂರಿನಿಂದ ಮಧ್ಯಾಹ್ನ 1.30ಕ್ಕೆ ಹೊರಟು ಮರುದಿನ ಬೆಳಗ್ಗೆ 11.10ಕ್ಕೆ ಬಾಗಲಕೋಟೆ ನಿಲ್ದಾಣ ತಲುಪುತ್ತದೆ. ಅದೇ ದಿನ ಮಧ್ಯಾಹ್ನ 2.30ಕ್ಕೆ ಬಾಗಲಕೋಟೆಯಿಂದ ಮರಳಿ ಬಿಡುತ್ತದೆ. ಕೆಲವು ಗಂಟೆಗಳ ಸಮಯ ಬಾಲಕೋಟೆಯಲ್ಲಿ ರೈಲು ನಿಲ್ಲುತ್ತದೆ.

KSRTC Bus Strike: ನಾಲ್ಕು ಸಾರಿಗೆ ಸಂಸ್ಥೆಗಳ ನೌಕರರಿಂದ ಮತ್ತೆ ಅನಿರ್ದಿಷ್ಟಾವಧಿ ಮುಷ್ಕರ
KSRTC Bus Strike: ನಾಲ್ಕು ಸಾರಿಗೆ ಸಂಸ್ಥೆಗಳ ನೌಕರರಿಂದ ಮತ್ತೆ ಅನಿರ್ದಿಷ್ಟಾವಧಿ ಮುಷ್ಕರ

ಇನ್ನೊಂದೆಡೆ ವಿಜಯಪುರದಿಂದ ಗದಗಿಗೆ ಬೆಳಗ್ಗೆ 7.45ರಿಂದ ಮಧ್ಯಾಹ್ನ 2.30 ಗಂಟೆತನಕ ಯಾವುದೇ ರೈಲುಗಳ ಸಂಚಾರ ಇರುವುದಿಲ್ಲ. ಈ ಸಮಯದಲ್ಲಿ ಗದಗಿಗೆ ತೆರಳಲು ರೈಲು ಸಾರಿಗೆ ಅಡಚಣೆ ಉಂಟಾಗುತ್ತಿದೆ. ಆದ್ದರಿಂದ ಮೈಸೂರಿನಿಂದ ಬರುವ ಬಸವ ಎಕ್ಸ್‌ಪ್ರೆಸ್ ರೈಲನ್ನು ಗದಗಿಗೆ ವಿಸ್ತರಣೆ ಮಾಡಿದರೆ ಈ ಭಾಗದ ಜನರಿಗೆ ಹೆಚ್ಚುವರಿ ರೈಲು ಸೇವೆ ಸಿಕ್ಕಂತಾಗುತ್ತದೆ ಎಂದು ಅವರು ಕೋರಿದ್ದಾರೆ.

ಗದಗ-ಕಲಬುರಗಿ ರೈಲು ಸಂಪರ್ಕ ಸುಧಾರಿಸಿ

ಸೋಲ್ಲಾಪುರ, ಅಕ್ಕಲಕೋಟೆ, ದುದನಿ, ಗಾಣಗಾಪುರ ಹಾಗೂ ಕಲಬುರಗಿಗೆ ತೆರಳುವ ಪ್ರಯಾಣಿಕರಿಗೆ ಗದಗ-ಕಲಬುರಗಿ ಮಧ್ಯದಲ್ಲಿ ಸಾರಿಗೆ ಸಂಪರ್ಕ ಸುಧಾರಿಸಿದಂತಾಗುತ್ತದೆ. ಕಲಬುರಗಿ, ವಿಜಯಪುರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಸಿಗುತ್ತದೆ. ವ್ಯಾಪಾರ, ಇನ್ನಿತರ ಉದ್ದೇಶಗಳಿಗೆ ಜನರ ಸಂಚಾರಕ್ಕೂ ಸಹಾಯವಾಗುತ್ತದೆ. ಈ ಸಂಬಂಧ ಕೂಡಲೇ ಸೂಕ್ತ ಕ್ರಮ ಜರುಗಿಸುವಂತೆ ಅವರು ಮನವಿ ಮಾಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಸ್ಪಂದನೆ ಇನ್ನೂವರೆಗೂ ಬಂದಿಲ್ಲ ಎಂದು ಆ ಭಾಗದ ಜನರು ದೂರಿದ್ದಾರೆ.

ಗದಗ ಜಂ.ನಿಂದ ಸೋಲ್ಲಾಪುರಕ್ಕೆ ಇಲ್ಲಿಂದ ರೈಲು ಬಿಡಿ

ವಿಜಯಪುರದಿಂದ ಸೋಲ್ಲಾಪುರ ಕಡೆಗೆ ತೆರಳುವ ರೈಲುಗಳನ್ನು ಗದಗ ಜಂಕ್ಷನ್‌ನಿಂದ ಆರಂಭಿಸಕೆಂಬ ಆಗ್ರಹ ಕೇಳಿ ಬಂದಿದೆ. ಮತ್ತು ಈ ಜಿಲ್ಲೆಯ ಜನರ ಸಮಯ ಹಣ ಉಳಿಸುವ ಸಲುವಾಗಿ ದಶಕದ ಹಿಂದೆ ಘೋಷಿಸಿದ ಯಲವಿಗಿ-ಗದಗ ರೈಲ ಮಾರ್ಗದ ನಿರ್ಮಾಣ ತ್ವರಿತವಾಗಿ ಶುರು ಮಾಡಬೇಕೆಂದು ಗದಗ ರೈಲು ಬಳಕೆದಾರರು ಆಗ್ರಹಿಸಿದ್ದಾರೆ.

ಜನ ಓಡಾಡದ ನಿಲ್ದಾಣದಲ್ಲಿ ರೈಲು ನಿಲುಗಡೆ

ಅದೇ ರೀತಿ ಬೆಂಗಳೂರು - ಮೈಸೂರಿನ ನಡುವೆ ಓಡಾಡುವ ಸರಿಸುಮಾರು 5ರಿಂದ 6 ರೈಲುಗಳು ಹೆಚ್ಚಿನ ಜನರೇ ಓಡಾಡದ ರೈಲು ನಿಲ್ದಾಣ ಮದ್ದೂರಿನಲ್ಲಿ ನಿಲುಗಡೆ ಕೊಡುತ್ತವೆ. ಅದೇ ಸಾವಿರಾರು ಸಂಖ್ಯೆಯಲ್ಲಿ ಓಡಾಡುವ ಚನ್ನಪಟ್ಟಣದಲ್ಲಿ ನಿಲ್ಲುವುದಿಲ್ಲ. ಈ ವಿಚಾರವನ್ನು ಸೋಮಣ್ಣ ಅವರು ಹಾಗೂ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ನಾಗರಿಕು ವಿನಂತಿಸಿದ್ದಾರೆ.

ಗದಗ-ಯಲವಿಗಿ ಮಾರ್ಗ ನಿರ್ಮಾಣ ಶುರುಮಾಡಿ

ಇದೆಲ್ಲ ನೋಡಿದರೆ ಉತ್ತರ ಕರ್ನಾಟಕದ ಗದಗ ಸುತ್ತಮುತ್ತ ರೈಲಿನ ಸಂಪರ್ಕ ಜಾಲ ಸುಧಾರಿಸಬೇಕು. ಅಗತ್ಯ ರೈಲುಗಳ ವಿಸ್ತರಣೆ, ಹೊಸ ರೈಲುಗಳ ಬಿಡುಗಡೆಗೆ ರೈಲ್ವೆ ಇಲಾಖೆ ಮುಂದಾಗಬೇಕಿದೆ. ಇನ್ನೂ ಗದಗ-ಯಲವಿಗಿ ರೈಲು ಹೊಸ ಮಾರ್ಗ ಯೋಜನೆಯ ವಿಸ್ತೃತ ಯೋಜನಾ ವರದಿ ಸಿದ್ದವಾಗಿದೆ. ಕಾಮಗಾರಿಗೆ ಶೀಘ್ರವೇ ಆರಂಭವಾಗುವ ಭರವಸೆ ಸಿಕ್ಕಿದೆ. ಇನ್ನೂ ಗದಗ-ವಾಡಿ ಜಂಕ್ಷನ್ ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿದೆ. ಪೂರ್ಣಗೊಂಡ ಸ್ಥಳದಲ್ಲಿ ರೈಲು ಸಂಚಾರ ನಡೆಸಲಾಗುತ್ತಿದೆ. ರೈಲ್ವೆ ಇಲಾಖೆ ಎಲ್ಲ ಕಾಮಗಾರಿಗಳಿಗೆ ವೇಗ ನೀಡಿದಲ್ಲಿ, ಈ ಭಾಗದ ಪ್ರಯಾಣಿಕರ ಆದ್ಯತೆಗಳಿಗೆ ಮನ್ನಣೆ ನೀಡಿದಲ್ಲಿ ಮುಂಬರುವ ವರ್ಷಗಳಲ್ಲಿ ಸಾರಿಗೆ ಸಂಪರ್ಕ ಸುಧಾರಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+