ಉಪಚುನಾವಣೆಯಲ್ಲಿ ಬಿಜೆಪಿ ಜಯಭೇರಿ: ಪಶ್ಚಿಮ ಬಂಗಾಳದಲ್ಲೂ ದೊಡ್ಡ ಬದಲಾವಣೆ: ಬೊಮ್ಮಾಯಿ ಭವಿಷ್ಯ

ಕೊಪ್ಪಳ: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಮರು ಮತ ಎಣಿಕೆಯಲ್ಲಿ ಬಿಜೆಪಿ ನಾಯಕ ಗೆದ್ದಿದ್ದು, ಮೋಸ ಮಾಡಿದ ಕಾಂಗ್ರೆಸ್‌ಗೆ ಸೋಲಾಗಿದೆ. ಇನ್ನೂ ರಾಜ್ಯದ ಬಾಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ಇದೇ ವೇಳೆ ರಾಜ್ಯ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಇಂದು ಭಾನುವಾರ ಕೊಪ್ಪಳದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆದ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ನಲ್ಲಿಯೂ ಬಿಜೆಪಿ ಬಹುಮತ ಪಡೆಯಲಿದೆ. ನಾಳೆ ಉಪ ಚುನಾವಣೆ ಫಲಿತಾಂಶದಲ್ಲಿ ನನಗೆ ಅಪಾರ ನಂಬಿಕೆ ಇದೆ ಎಂದು ಹೇಳಿದರು.

Basavaraj Bommai

ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ. ನಾವು ಮಾಡಿರುವ ಸಾಧನೆಗಳು ಮತ್ತು ಚುನಾವಣೆಯಲ್ಲಿ ಸಂಘಟಿತವಾದ ಪ್ರಚಾರದ ಪರಿಣಾಮ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಗಳಿಸುವ ವಿಶ್ವಾಸ ಇದೆ. ಅಲ್ಲದೇ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ನಲ್ಲಿ ಕೂಡಾ ಬಿಜೆಪಿ ಗೆಲ್ಲುತ್ತದೆ ಎಂದು ಈಗಾಗಲೇ ಬಿಡುಗಡೆ ಅದ ಮತದಾನೋತ್ತರ ಸಮೀಕ್ಷೆಗಳು ತಿಳಿಸಿವೆ. ಪಶ್ಚಿಮ ಬಂಗಾಳದಲ್ಲಿ ಈ ಸಲ ದೊಡ್ಡ ಪರಿವರ್ತನೆಯಾಗಲಿದೆ. ಭಾರತದ ರಾಜಕಿಯ ದಿಕ್ಸೂಚಿ ಬದಲಾವಣೆಯಾಗುವ ಪಲಿತಾಂಶ ಬರತ್ತದೆ ಎಂದು ಅವರು ಭವಿಷ್ಯ ನುಡಿದರು.

Tungabhadra Dam: 315 ಕೋಟಿ ರೂ ವೆಚ್ಚದಲ್ಲಿ 33 ಕ್ರಸ್ಟ್‌‌ಗೇಟ್ ಅಳವಡಿಕೆ ಪೂರ್ಣ, ಉದ್ಘಾಟನೆ ಶೀಘ್ರ: ಡಿಕೆ ಶಿವಕುಮಾರ್
Tungabhadra Dam: 315 ಕೋಟಿ ರೂ ವೆಚ್ಚದಲ್ಲಿ 33 ಕ್ರಸ್ಟ್‌‌ಗೇಟ್ ಅಳವಡಿಕೆ ಪೂರ್ಣ, ಉದ್ಘಾಟನೆ ಶೀಘ್ರ: ಡಿಕೆ ಶಿವಕುಮಾರ್

ಮರು ಎಣಿಕೆ: ಕಾಂಗ್ರೆಸ್ ಗೆ ಮುಖಭಂಗ

2023ರಲ್ಲಿ ನಡೆದಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಸಂಬಂಧ ನೆನ್ನೆ ಶನಿವಾರ (ಮೇ 2) ಮರು ಮತ ಎಣಿಕೆ ನಡೆದವು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಾಗಿದೆ. ಕಾಂಗ್ರೆಸ್ ರಾಜ್ಯವನ್ನು ಅಧೊಗತಿಗೆ ತೆಗೆದುಕೊಂಡು ಹೋಗಿ ಪ್ರಾಚೀನ ಕಾಲಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಚುನಾವಣೆಯನ್ನೂ ಪ್ರಾಚೀನಕಾಲಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ತಂತ್ರಜ್ಞಾನ ಬಹಳಷ್ಟು ಮುಂದೆ ಹೋಗಿದೆ.

ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಕೂಡಾ ಹಲವು ಚುನಾವಣೆಗಳಾಗಿವೆ. ಕಾಂಗ್ರೆಸ್ ಪಕ್ಷ ಸೋಲುತ್ತಿರುವುದರಿಂದ ಬ್ಯಾಲೇಟ್ ಪೇಪರ್ ಕಡೆಗೆ ಹೋಗುತ್ತಿದೆ. ಆದರೆ, ಬ್ಯಾಲೆಟ್ ಪೇಪರ್ ನಲ್ಲಿ ಮೋಸ ಮಾಡಿ ಗೆದ್ದು ಈಗ ಸೋತಿರುವುದು ಕಾಂಗ್ರೆಸ್ ಗೆ ಮುಖಭಂಗ ಆಗಿದೆ ಎಂದು ಅವರು ಟೀಕಿಸಿದರು.

Sringeri: ಮತ ಮರುಎಣಿಕೆಯಲ್ಲಿ ಅಕ್ರಮ ಬಯಲು, ಬಿಜೆಪಿಗೆ ಗೆಲುವು: 'ಮತಗಳ್ಳ' ಇವರೇ ಎಂದ ಆರ್.ಅಶೋಕ್
Sringeri: ಮತ ಮರುಎಣಿಕೆಯಲ್ಲಿ ಅಕ್ರಮ ಬಯಲು, ಬಿಜೆಪಿಗೆ ಗೆಲುವು: 'ಮತಗಳ್ಳ' ಇವರೇ ಎಂದ ಆರ್.ಅಶೋಕ್

ರಾಜ್ಯದಲ್ಲಿ ಆಡಳಿತ ಹಳಿ ತಪ್ಪಿದೆ ಎಂದ ಅವರು, ಕಾಂಗ್ರೆಸ್ ಸರ್ಕಾರ ಸತ್ತೋಗಿದೆ, ರಾಜ್ಯದಲ್ಲಿ ಆಡಳಿತ ಸ್ಥಗಿತವಾಗಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+