ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಶಾಹೀದ್ ಖಕನ್
ಶಾಹೀದ್ ಖಕನ್ ಅಬ್ಬಾಸಿ ಅವರು ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ನೇಮಕ. ನವಾಜ್ ಷರೀಫ್ ಅವರ ಪದಚ್ಯುತಿಯಿಂದ ತೆರವಾಗಿದ್ದ ಪ್ರಧಾನಿ ಪಟ್ಟ.
ಇಸ್ಲಾಮಾಬಾದ್, ಜುಲೈ 29: ನವಾಜ್ ಷರೀಫ್ ರಾಜಿನಾಮೆಯಿಂದ ತೆರವಾಗಿದ್ದ ಪಾಕಿಸ್ತಾನ ಪ್ರಧಾನಿ ಹುದ್ದೆಗೆ, ನವಾಜ್ ಷರೀಫ್ ಅವರ ಪಕ್ಷವಾದ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ (ಪಿಪಿಪಿ) ಮತ್ತೊಬ್ಬ ನಾಯಕ ಶಾಹೀದ್ ಖಕನ್ ಅಬ್ಬಾಸಿ ಅವರು ಹಂಗಾಮಿ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ.
ಅಕ್ರಮ ಆಸ್ತಿ ಪ್ರಕರಣದ ತನಿಖೆಯಲ್ಲಿ ನವಾಜ್ ಷರೀಫ್ ಅವರು ಅಕ್ರಮ ಸಾಬೀತಾದ ಹಿನ್ನೆಲೆಯಲ್ಲಿ, ಪಾಕಿಸ್ತಾನ ಸುಪ್ರೀಂ ಕೋರ್ಟ್ ಷರೀಫ್ ಅವರನ್ನು ಪ್ರಧಾನಿ ಹುದ್ದೆಯಿಂದ ಅನರ್ಹಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಪ್ರಧಾನಿ ಹುದ್ದೆಗೆ ರಾಜಿನಾಮೆ ಸಲ್ಲಿಸಿದ್ದರು.

ತಮ್ಮ ಪದಚ್ಯುತಿಯಾಗುತ್ತಲೇ, ತಮಗೆ ಬೇಕಾದವರನ್ನೇ ನವಾಜ್ ಷರೀಫ್ ಪ್ರಧಾನಿ ಪಟ್ಟಕ್ಕೆ ತಂದಿದ್ದಾರೆ ಎನ್ನಲಾಗಿದೆ. ಪ್ರಧಾನಿ ಪಟ್ಟಕ್ಕೆ ತಮ್ಮ ಕುಟುಂಬದ ಆಪ್ತರಾದ ಮಾಜಿ ರಕ್ಷಣಾ ಸಚಿವ ಖವಾಜಾ ಮೊಹಮ್ಮದ್ ಆಸಿಫ್ ಅವರನ್ನು ತರುವ ಬಗ್ಗೆ ಈ ಮೊದಲು ಮಾತುಕತೆ ನಡೆದಿತ್ತಾದರೂ, ಕೊನೆಗೆ ಶಾಹೀದ್ ಅವರನ್ನೇ ಪಟ್ಟಕ್ಕೆ ಕೂರಿಸಲು ನಿರ್ಧರಿಸಲಾಗಿದೆ.












Click it and Unblock the Notifications