Dhurandhar 2 OTT release: ಒಟಿಟಿಗೆ ಬರ್ತಿದೆ ‘ಧುರಂಧರ್ 2’, ಕಾದಿದೆ ಬಿಗ್ ಸರ್‌ಪ್ರೈಸ್, ಎಲ್ಲಿ ಯಾವಾಗ ತಿಳಿಯಿರಿ
ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡು ಇತಿಹಾಸ ನಿರ್ಮಿಸಿದ್ದ ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2: ದಿ ರಿವೇಂಜ್' (Dhurandhar 2: The Revenge) ಸಿನಿಮಾ ಈಗ ಡಿಜಿಟಲ್ ಪರದೆಯ ಮೇಲೆ ಅಬ್ಬರಿಸಲು ಸಿದ್ಧವಾಗಿದೆ. ಆದಿತ್ಯ ಧರ್ ನಿರ್ದೇಶನದ ಈ ಚಿತ್ರದ ಒಟಿಟಿ ಬಿಡುಗಡೆಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಸಿಹಿಸುದ್ದಿ ಸಿಕ್ಕಿದೆ.
ಅಧಿಕೃತವಾಗಿ ಸ್ಟ್ರೀಮಿಂಗ್ ಸಂಸ್ಥೆಗಳು ಘೋಷಣೆ ಮಾಡುವ ಮೊದಲೇ ಸೋಷಿಯಲ್ ಮೀಡಿಯಾದಲ್ಲಿ ಈ ಚಿತ್ರದ ಒಟಿಟಿ ಟೈಟಲ್ ಕಾರ್ಡ್ ವೈರಲ್ ಆಗಿದೆ. ಒಟಿಟಿಯಲ್ಲಿ ಈ ಚಿತ್ರಕ್ಕೆ 'ಧುರಂಧರ್ ದ ರಿವೇಂಜ್ (ರಾ ಆಂಡ್ ಅಂದೇಖಾ)' ಎಂದು ಹೆಸರಿಡಲಾಗಿದೆ ಎಂದು ಹೇಳಲಾಗುತ್ತಿದೆ. ಅಭಿಮಾನಿಗಳು ಒಟಿಟಿ ಸೈಟ್‌ಗಳಲ್ಲಿ ಲಿಸ್ಟ್ ಆಗಿರುವ ಈ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಸಂಭ್ರಮಿಸುತ್ತಿದ್ದಾರೆ.

ಬಿಡುಗಡೆ ಯಾವಾಗ?
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ 8 ವಾರಗಳನ್ನು ಪೂರೈಸಿರುವ ಈ ಸಿನಿಮಾ, ಇದೇ ಮೇ 15ರಿಂದ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿರಲಿದೆ. ವರದಿಗಳ ಪ್ರಕಾರ, ಅಂತರರಾಷ್ಟ್ರೀಯ ಪ್ರೇಕ್ಷಕರಿಗಾಗಿ ನೆಟ್‌ಫ್ಲಿಕ್ಸ್ 'ರಾ ಆಂಡ್ ಅಂದೇಖಾ' ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದರೆ, ಭಾರತೀಯ ಪ್ರೇಕ್ಷಕರಿಗಾಗಿ ಜಿಯೋ ಹಾಟ್‌ಸ್ಟಾರ್ ಅದೇ ದಿನ ಡಿಜಿಟಲ್ ಪ್ರೀಮಿಯರ್ ಆಯೋಜಿಸಿದೆ. ಮೇ 15ರಂದು ಏಕಕಾಲಕ್ಕೆ ಎರಡೂ ವೇದಿಕೆಗಳಲ್ಲಿ ಈ ಸಿನಿಮಾ ಲಭ್ಯವಿರಲಿದೆ.
Jaggesh: ಒಂದೆರಡು ಸಿನಿಮಾ ಮಾಡಿದ ತಕ್ಷಣ ಅಹಂಕಾರ ಬೇಡ, ಅಣ್ಣಾವ್ರ ಶಕ್ತಿ ಗೊತ್ತಿಲ್ಲದೆ ಮಾತನಾಡಬೇಡಿ: ಜಗ್ಗೇಶ್ ಎಚ್ಚರಿಕೆ
ರಣವೀರ್ ಸಿಂಗ್ ಅವರ ಆ್ಯಕ್ಷನ್ ಅವತಾರ ಮತ್ತು ಆದಿತ್ಯ ಧರ್ ಅವರ ಮೇಕಿಂಗ್ ಶೈಲಿಗೆ ಮನಸೋತಿದ್ದ ಪ್ರೇಕ್ಷಕರು ಈಗ ಮನೆಯಲ್ಲೇ ಕುಳಿತು ಈ ಚಿತ್ರವನ್ನು ನೋಡಲು ಕಾತರರಾಗಿದ್ದಾರೆ. ಬಿಗ್ ಬಜೆಟ್‌ನಲ್ಲಿ ತಯಾರಾಗಿದ್ದ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆದಿದ್ದು, ಈಗ ಡಿಜಿಟಲ್ ವೇದಿಕೆಯಲ್ಲೂ ಹೊಸ ದಾಖಲೆ ನಿರ್ಮಿಸುವ ನಿರೀಕ್ಷೆಯಿದೆ.
ಸರ್‌ಪ್ರೈಸ್ ಏನು?
ಆದಿತ್ಯ ಧರ್ ನಿರ್ದೇಶನದ ಈ ಚಿತ್ರದ ಒಟಿಟಿ ಹಕ್ಕುಗಳು ಭಾರಿ ಮೊತ್ತಕ್ಕೆ ಮಾರಾಟವಾಗಿದ್ದು, ಬಿಡುಗಡೆಯ ದಿನಾಂಕದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸುದ್ದಿಯಾಗಿದೆ. ಸ್ಟ್ರೀಮಿಂಗ್ ಸಂಸ್ಥೆಗಳು ಅಧಿಕೃತ ಘೋಷಣೆ ಮಾಡುವ ಮೊದಲೇ ಸೋಷಿಯಲ್ ಮೀಡಿಯಾದಲ್ಲಿ ಒಟಿಟಿ ಟೈಟಲ್ ಕಾರ್ಡ್‌ನ ಸ್ಕ್ರೀನ್‌ಶಾಟ್‌ಗಳು ಲೀಕ್ ಆಗಿವೆ. ವಿಶೇಷವೆಂದರೆ, ಒಟಿಟಿಯಲ್ಲಿ ಈ ಚಿತ್ರಕ್ಕೆ 'ಧುರಂಧರ್ ದ ರಿವೇಂಜ್ (ರಾ ಆಂಡ್ ಅಂದೇಖಾ)' ಎಂದು ಹೆಸರಿಡಲಾಗಿದೆ. ಈ ನೋಡದ ಸನ್ನಿವೇಶಗಳ ಆವೃತ್ತಿಯು ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗದ ಕೆಲವು ವಿಶೇಷ ದೃಶ್ಯಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಬಾಕ್ಸ್ ಆಫೀಸ್ ಸುನಾಮಿ ಎಬ್ಬಿಸಿದ್ದ 'ಧುರಂಧರ್ 2 ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿದ್ದಕ್ಕಿಂತಲೂ ಹೆಚ್ಚಿನ ದೃಶ್ಯಗಳನ್ನು ಈ ಡಿಜಿಟಲ್ ಆವೃತ್ತಿ ಒಳಗೊಂಡಿರಲಿದೆ ಎಂಬುದು ಈಗ ಅಧಿಕೃತವಾಗಿದೆ. ಒಟಿಟಿಯಲ್ಲಿ ಈ ಚಿತ್ರದ ಒಟ್ಟು ಅವಧಿ ಬರೋಬ್ಬರಿ 3 ಗಂಟೆ 52 ನಿಮಿಷ 24 ಸೆಕೆಂಡ್ ಇರಲಿದೆ ಎಂದು ವರದಿಯಾಗಿದೆ. ಅಂದರೆ, ಚಿತ್ರಮಂದಿರಗಳಲ್ಲಿ ಕತ್ತರಿ ಬಿದ್ದಿದ್ದ ದೃಶ್ಯಗಳು ಅಥವಾ ವಿಶೇಷವಾಗಿ ಚಿತ್ರೀಕರಿಸಲಾದ ಹೆಚ್ಚುವರಿ ಸನ್ನಿವೇಶಗಳನ್ನು ಈ 'ಅನ್-ಸೆನ್ಸರ್ಡ್' ಆವೃತ್ತಿಯಲ್ಲಿ ಪ್ರೇಕ್ಷಕರು ವೀಕ್ಷಿಸಬಹುದು.
ಮೇ 15ರಂದು ಮಧ್ಯರಾತ್ರಿ 12:00 ಗಂಟೆಗೆ ಸಿನಿಮಾ ಸ್ಟ್ರೀಮಿಂಗ್ ಆರಂಭವಾಗಲಿದೆ. ಈ ಚಿತ್ರವು HD ಮತ್ತು 4K ಫಾರ್ಮ್ಯಾಟ್‌ಗಳಲ್ಲಿ ಲಭ್ಯವಿರಲಿದ್ದು, ಅತ್ಯುತ್ತಮ ದೃಶ್ಯ ಗುಣಮಟ್ಟವನ್ನು ನೀಡಲಿದೆ. ಮನೆಯಲ್ಲೇ ಚಿತ್ರಮಂದಿರದ ಅನುಭವ ನೀಡಲು Dolby 5.1 ಆಡಿಯೋ ಸಪೋರ್ಟ್ ಕೂಡ ಇರಲಿದೆ. ರಣವೀರ್ ಸಿಂಗ್ ಮತ್ತು ಆದಿತ್ಯ ಧರ್ ಅವರ ಈ ಬಿಗ್ ಬಜೆಟ್ ಚಿತ್ರದ ಹೊಸ ವರ್ಷನ್ ನೋಡಲು ಸಿನಿಪ್ರಿಯರು ತುದಿಗಾಲಿನಲ್ಲಿ ಕಾಯುತ್ತಿದ್ದು, ಮೇ 15ರ ಮಧ್ಯರಾತ್ರಿಯಿಂದಲೇ ಈ ಹಬ್ಬ ಆರಂಭವಾಗಲಿದೆ.












Click it and Unblock the Notifications