Get Updates
Get notified of breaking news, exclusive insights, and must-see stories!

Lok Sabha Election 2024: ಮತದಾರರನ್ನು ಪ್ರೋತ್ಸಾಹಿಸಲು ನೂತನ ಪ್ರಯತ್ನ: ರಾಯಚೂರು ಮತ ಕೇಂದ್ರಗಳಲ್ಲಿ ಆಕರ್ಷಕ ಚಿತ್ರ

ರಾಯಚೂರ, ಏಪ್ರಿಲ್ 19- ಲೋಕಸಭೆ ಚುನಾವಣೆ ಹಿನ್ನೆಲೆ ಅಭ್ಯರ್ಥಿಗಳು ಮತದಾರರ ಓಲೈಕೆಗಾಗಿ ನಾನಾ ತಂತ್ರ ರೂಪಿಸುತ್ತಿದ್ದಾರೆ. ಇದೇ ವೇಳೆ ಜಿಲ್ಲಾ ಸ್ವೀಪ್ ಸಮಿತಿಯು ಮತದಾನ ಹೆಚ್ಚಳಕ್ಕೆ ಹಲವು ಕಸರತ್ತು ಮಾಡುತ್ತಿದೆ. ಮತಗಟ್ಟೆಗಳಲ್ಲಿ ಜಿಲ್ಲೆಯ ಸೊಬಗು ಬಣ್ಣಿಸುವ ಚಿತ್ರಗಳನ್ನು ಬಿಡಿಸಿ ಮತದಾರರನ್ನು ಆಕರ್ಷಿಸಲು ಮುಂದಾಗಿದೆ.

ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಮತದಾನ ಪ್ರಮಾಣ ಕಡಿಮೆಯಾಗದಂತೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಈ ಬಾರಿ ಸನ್ನದ್ಧವಾಗಿರುವುದು ಕಂಡು ಬರುತ್ತಿದೆ. ಮತಗಟ್ಟೆಗಳತ್ತ ಮತದಾರರನ್ನು ಸೆಳೆಯುವುದಕ್ಕಾಗಿ ಅವುಗಳ ರೂಪವನ್ನೇ ಬದಲಿಸಿ ಜಾಗೃತಿ ಮೂಡಿಸುತ್ತಿದೆ.

Raichur District Sweep Committee is a new effort to attract voters

ರಾಯಚೂರು -ಯಾದಗಿರಿ ಸೇರಿ ಎರಡೂ ಜಿಲ್ಲೆಗಳಲ್ಲಿ 1853 ಮತಗಟ್ಟೆಗಳು ಇವೆ. ಇದರಲ್ಲಿ ಒಂದು ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ 7 ಥೀಮ್ ಮತಗಟ್ಟೆ , 7 ಎಥಿಕಲ್ ಕಲ್ಚರ್ ಮತಗಟ್ಟೆ , 7 ವಿಕಲಾಂಗರಿಗಾಗಿ ವಿಶೇಷ ಮತಗಟ್ಟೆ , 7 ಯುವ ಮತದಾರರ ಮತಗಟ್ಟೆ , 35 ಸಖಿ ಬೂತ್ ಮತಗಟ್ಟೆಗಳ ಮೂಲಕ ಮತದಾರರನ್ನು ಸೆಳೆಯಲು ಜಿಲ್ಲಾ ಸ್ವೀಪ್ ಕಮಿಟಿ ಹೆಜ್ಜೆ ಇಟ್ಟಿದೆ. ಇದರಲ್ಲಿ ಬಣ್ಣ ಬಣ್ಣದ ಜಿಲ್ಲೆಯ ಹಿರಿಮೆಯನ್ನ ಸಾರುವ ಥೀಮ್ ಮತಗಟ್ಟೆ ಅತ್ಯಂತ ಅಕರ್ಷಣೀಯವಾಗಿ ಸಿದ್ಧಗೊಳ್ಳುತ್ತಿವೆ. ಇದರಿಂದ ಸರಕಾರಿ ಶಾಲೆಗಳು ಸಹ ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳುತ್ತಿವೆ.

ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ 19,93,755 ಮತದಾರರಿದ್ದು ಈ ಬಾರಿ ನೂರಕ್ಕೆ ನೂರು ಮತದಾನದ ಗುರಿಯನ್ನು ಜಿಲ್ಲಾಡಳಿತ ಹೊಂದಿದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಮತಗಟ್ಟೆಗಳಲ್ಲಿ ನಾನಾ ಚಿತ್ರಗಳನ್ನು ಬಿಡಿಸಿದ್ದ ಕಲಾವಿದರೇ ಈ ಬಾರಿಯೂ ಆಕರ್ಷಕ ಚಿತ್ರಗಳನ್ನು ಬಿಡಿಸುತ್ತಿದ್ದಾರೆ. ಚಿತ್ರಗಳನ್ನು ನೋಡಲು ಮತಗಟ್ಟೆ ಕಡೆಗೆ ಜನ ಬರುತ್ತಾರೆ. ಇದರಿಂದ ಮತದಾನ ಪ್ರಮಾಣ ಹೆಚ್ಚಾಗಲಿ ಎಂದು ಅಧಿಕಾರಿಗಳು ಮತದಾನ ಜಾಗೃತಿಗೆ ಮುಂದಾಗಿದ್ದಾರೆ.

Raichur District Sweep Committee is a new effort to attract voters

ನಾನಾ ತಾಲ್ಲೂಕುಗಳಲ್ಲಿ ಕ್ಯಾಂಡಲ್ ಮಾರ್ಚ, ಸೈಕಲ್ ಜಾಥಾ , ಮಹಿಳೆ ಯರಿಂದ ಕಾಲ್ನಡಿಗೆ ಜಾಥಾ , ವಿಶೇಷ ಸ್ವೀಪ್ ವಾಹನ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುತ್ತಿರುವುದರ ಜತೆಗೆ ಮತ್ತೊಂದು ಹೊಸ ಪ್ರಯತ್ನ ಮಾಡುತ್ತಿದೆ. ಮತಗಟ್ಟೆಗಳ ಗೋಡೆಗಳಿಗೆ ಜಿಲ್ಲೆಯ ಐತಿಹಾಸಿಕ ತಾಣಗಳ ಚಿತ್ರ ಬಿಡಿಸಿ ಜನರನ್ನು ಆಕರ್ಷಿಸಲು ಮುಂದಾಗಿದೆ. ನವರಂಗ ದರ್ವಾಜ , ಮುದಗಲ್ ಕೋಟೆ, ಹಟ್ಟಿ ಚಿನ್ನದಗಣಿ , ಅಶೋಕನ ಶಿಲಾ ಶಾಸನಗಳು ಮತಗಟ್ಟೆಗಳಲ್ಲಿ ರಾರಾಜಿಸುತ್ತಿರುವುದು ಕಂಡು ಬರುತ್ತಿದೆ.

ಜಿಲ್ಲೆಯಲ್ಲಿ ಈ ಬಾರಿ ಥ್ರೀಮ್ ಮತಗಟ್ಟೆ , ಎಥಿಕಲ್ ಕಲ್ಚರ್ ಮತಗಟ್ಟೆ ಸೇರಿ ನಾನಾ ಮತಗಟ್ಟೆಗಳನ್ನು ಸ್ಥಾಪಿಸಿದ್ದು , ಅದರಂತೆ ಈ ಮತಗಟ್ಟೆಗಳಲ್ಲಿ ಐತಿಹಾಸಿಕ ತಾಣಗಳ ಚಿತ್ರಗಳನ್ನು ಬಿಡಿಸಲಾಗಿದೆ ಎಂದು ರಾಯಚೂರು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ತುಕಾರಾಮ ಪಾಚಿಡ್ವೆ ಹೇಳಿದರು.

ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿ ನೂತನ ಹೆಜ್ಜೆ ಇಟ್ಟಿದೆ. ರಾಯಚೂರು ಲೋಕಸಭೆ ಕ್ಷೇತ್ರದ 8 ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಜಿಲ್ಲೆಯ ಐತಿಹಾಸಿಕ ಸ್ಥಳ ಪರಿಚಯಿಸುವ ಚಿತ್ರಗಳನ್ನು ಸರಕಾರಿ ಶಾಲೆಗಳಲ್ಲಿನ ಮಾಡಿರುವ ಮತಗಟ್ಟೆಗಳ ಗೋಡೆಗಳಲ್ಲಿ ಬಿಡಿಸಲಾಗುತ್ತಿದೆ. ಸದ್ಯ ಮೊದಲ ಹಂತದ ಚಿತ್ರಗಳನ್ನು ಬಿಡಿಸಲಾಗಿದೆ ಎಂದು ಚಿತ್ರ ಕಲಾವಿದ ಅಮರೇಗೌಡ ಹೇಳಿದರು.

Raichur District Sweep Committee is a new effort to attract voters

ಎರಡನೇ ಹಂತದ ಚುನಾವಣೆ: ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ

ರಾಜ್ಯದಲ್ಲಿ ಎರಡನೇ ಹಂತದಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಬಿರುಸಾಗಿದ್ದು, 90 ಅಭ್ಯರ್ಥಿಗಳು ಗುರುವಾರ ಉಮೇದುವಾರಿಕೆ ಸಲ್ಲಿಸಿದರು.

ಗುರುವಾರ ಬಿ.ವೈ.ರಾಘವೇಂದ್ರ, ಉಮೇಶ್‌ ಜಾಧವ್ ಸೇರಿ 90 ಅಭ್ಯರ್ಥಿಗಳಿಂದ 104 ಉಮೇದುವಾರಿಕೆ ಸಲ್ಲಿಕೆಯಾಗಿದೆ. ಈವರೆಗೆ ಒಟ್ಟು 241 ಅಭ್ಯರ್ಥಿಗಳಿಮದ 351 ನಾಮಪತ್ರ ಸಲ್ಲಿಕೆಯಾದಂತಾಗಿದೆ. ನಾಮಪತ್ರ ಸಲ್ಲಿಸಲು ಶುಕ್ರವಾರ ಕೊನೆಯ ದಿನವಾಗಿದೆ.

ಗುರುವಾರ ವಿವಿಧ ಪಕ್ಷದ ಅಭ್ಯರ್ಥಿಗಳು ಬೃಹತ್ ರ್ಯಾಲಿ ಮತ್ತು ಸಮಾವೆಶಗಳನ್ನು ನಡೆಸುವ ಮೂಲಕ ಶಕ್ತಿ ಪ್ರದರ್ಶಿಸಿದರು. ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ, ಕಲಬುರಗಿಯಲ್ಲಿ ಬಿಜೆಪಿ ಉಮೇಶ್ ಜಾಧವ್, ಬಾಗಲಕೋಟೆಯಲ್ಲಿ ಬಿಜೆಪಿ ಸಂಸದ ಗದ್ದಿಗೌಡರ್, ಚಿಕ್ಕೋಡಿಯಲ್ಲಿ ಕಾಂಗ್ರೆಸ್‌ನ ಪ್ರಿಯಾಂಕಾ ಜಾರಕಿಹೊಳಿ, ಧಾರವಾಡದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+