Get Updates
Get notified of breaking news, exclusive insights, and must-see stories!

Lok Sabha Election: ಲೋಕಸಭಾ ಚುನಾವಣೆಯಲ್ಲಿ ಮತಗಟ್ಟೆ ಹುಡುಕುವುದು ಈಗ ಸುಲಭ!

ಬೆಂಗಳೂರು, ಏಪ್ರಿಲ್. 16: ಸಾರ್ವತ್ರಿಕ ಚುನಾವಣೆಗೆ ದೇಶವೇ ಸಜ್ಜಾಗುತ್ತಿದೆ. ರಾಜಕೀಯ ಪಕ್ಷಗಳು ಪ್ರಚಾರ, ಪರಸ್ಪರ ಕೆಸರೆರಚಾಟಗಳಲ್ಲಿ ತೊಡಗಿಕೊಂಡಿವೆ. ಇತ್ತ, ಚುನಾವಣಾ ಆಯೋಗ ಹಲವು ಹೊಸ ಪ್ರಯೋಗಗಳ ಮೂಲಕ ಮತದಾರರನ್ನು ಮತದಾನ ಮಾಡುವಂತೆ ಪ್ರೇರೇಪಿಸುತ್ತಿವೆ.

ಮೊದಲ ಬಾರಿ ಮತದಾನ ಮಾಡಲು ಹೊರಟಿರುವ ಮತದಾರರಿಗೆ ಅನುಕೂಲ ಮಾಡಿಕೊಡಲು ಕ್ಯೂಆರ್ ಕೋಡ್ ವೋಟರ್ ಸ್ಲಿಪ್‌ಗಳನ್ನು ಚುನಾವಣಾ ಆಯೋಗ ಮುದ್ರಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮತಗಟ್ಟೆಯನ್ನು ಸುಲಭವಾಗಿ ಹುಡುಕಲು ಸಾಧ್ಯವಾಗುವಂತೆ ಈ ವೋಟರ್ ಸ್ಲಿಪ್‌ಗಳಲ್ಲಿ ಮತಗಟ್ಟೆಯ ಕ್ಯೂಆರ್ ಕೋಡ್ ಮುದ್ರಿಸಲಾಗಿದೆ.

Lok Sabha Election 2024 Important Information for Voters QR Code On Voter Slip

ರಾಜ್ಯದಲ್ಲಿ ನಗರ ಪ್ರದೇಶದ ಕ್ಷೇತ್ರಗಳಲ್ಲಿ ಈ ಸೌಲಭ್ಯ ಜಾರಿಯಾಗಿದೆ. ನಗರದ ನಿವಾಸಿಗಳು ಕ್ಯೂಆರ್ ಕೋಡ್ ಮೂಲಕ ತಮ್ಮ ಮತಗಟ್ಟೆಯನ್ನು ಸುಲಭವಾಗಿ ತಲುಪಬಹುದಾಗಿದೆ. ಈ ಬಗ್ಗೆ ರಾಜ್ಯ ಚುನಾವಣಾಧಿಕಾರಿ ಮತ್ತಷ್ಟು ಮಾಹಿತಿಯನ್ನು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರಿಗಾಗಿ ಹಂಚಿಕೊಂಡಿದ್ದಾರೆ. ಪ್ರತಿ ಮತವೂ ಅಮೂಲ್ಯ, ಒಬ್ಬ ಮತದಾರನೂ ಹೊರಗುಳಿಯಬಾರದು ಎಂಬ ಉದ್ದೇಶದಿಮದ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

"ಬೆಂಗಳೂರು ಸೇರಿದಂತೆ ರಾಜ್ಯದ ಮಹಾನಗರ ಪಾಲಿಕೆಗಳ ಮತದಾರರಿಗೆ ತಮ್ಮ ಮತಗಟ್ಟೆಯನ್ನು ಸುಲಭವಾಗಿ ಹುಡುಕಲು ಸಾಧ್ಯವಾಗುವಂತೆ ಈ ಬಾರಿ ಮನೆ‌ ಮನೆಗೆ ಹಂಚುವ ಓಟರ್ ಸ್ಲಿಪ್ ಗಳಲ್ಲಿ ಮತಗಟ್ಟೆಯ QR Code ಮುದ್ರಿಸಲಾಗಿದೆ. ಇದು ದೇಶದಲ್ಲಿಯೇ ಮೊದಲ ಪ್ರಯೋಗವಾಗಿದೆ. ಇದರಿಂದ ನಗರವಾಸಿಗಳು ಈ QR Code ಸ್ಕ್ಯಾನ್ ಮಾಡುವ ಮೂಲಕ ತಮ್ಮ ಮತಗಟ್ಟೆಯನ್ನು ಸುಲಭವಾಗಿ ತಲುಪಬಹುದಾಗಿದೆ" ಎಂದು ಮಾದರಿ ಓಟರ್ ಸ್ಲಿಪ್ ಫೋಟೋವನ್ನು ಹಂಚಿಕೊಂಡಿದ್ದಾರೆ.

Lok Sabha Election 2024 Important Information for Voters QR Code On Voter Slip

ಮತದಾರರರು ಗಮನಹರಿಸಬೇಕಾದ ಪ್ರಮುಖ ಅಂಶಗಳು

1. ಮತದಾನದ ವೇಳೆ ಮುಕ್ತಾಯಗೊಳ್ಳುವ ಸಮಯದಲ್ಲಿ ಸರತಿಯ ಸಾಲಿನಲ್ಲಿರುವ ಎಲ್ಲಾ ಮತದಾರರಿಗೂ ಮತ ಚಲಾಯಿಸಲು ಅವಕಾಶ ನೀಡತಕ್ಕದ್ದು.

2. ಮಹಿಳೆಯರಿಗಾಗಿ ಪ್ರತ್ಯೇಕ ಸರತಿಯ ಸಾಲುಗಳಿವೆ: ಹಿರಿಯ ನಾಗರಿಕರಿಗೆ ಮತದಾನ ಮಾಡಲು ಆದ್ಯತೆ ನೀಡಲಾಗುವುದು.

3. ಅಂಧ ಮತ್ತು ಅಶಕ್ತ ಮತದಾರರು ಮತದಾನ ಮಾಡಲು ಅವರೊಡನೆ ವಯಸ್ಕ ಸಂಗಾತಿಯೊಬ್ಬರನ್ನು ಕರೆದೊಯ್ಯಲು ಅನುಮತಿ ನೀಡಬಹುದಾಗಿದೆ.

4. ಮೊಬೈಲ್ ಫೋನ್, ಕ್ಯಾಮರದಂತಹ ಉಪಕರಣಗಳನ್ನು ಮತಗಟ್ಟೆಯೊಳಗೆ ಬಿಡುವುದಿಲ್ಲ.

5. ನಿರ್ದಿಷ್ಟ ಅಭ್ಯರ್ಥಿಗೆ ಮತ ಹಾಕುವಂತೆ ಹಣ ಅಥವಾ ಇನ್ನಾವುದೇ ಅಮಿಷ ನೀಡುವುದು ಅಥವಾ ಪಡೆಯುವುದು ಕಾನೂನಿನಡಿ ಭ್ರಷ್ಟ ಮಾರ್ಗ.

6. ಮತಗಟ್ಟೆಯನಲ್ಲಿ ನಿಮ್ಮನ್ನು ಗುರುತಿಸುವ ಉದ್ದೇಶಕ್ಕಾಗಿ ಈ ಚೀಟಿ. ಈ ಮತದಾರ ಚೀಟಿಯನ್ನು ಮತದಾನ ಮಾಡಲು ಒಪ್ಪಿ ಕೊಳ್ಳುವುದಿಲ್ಲ. ನಿಮ್ಮ ಭಾವಚಿತ್ರವುಳ್ಳ ಗುರುತಿನ ಚೀಟಿ ಅಥವಾ ಚುನಾವಣಾ ಆಯೋಗವು ನಿರ್ಧಿಷ್ಟಪಡಿಸಿರುವ ಬದಲಿ 11 ದಾಖಲೆಗಳ ಪೈಕಿ ಯಾವುದಾದರೊಂದನ್ನು ತರಬೇಕಾಗಿ ಕೋರಲಾಗಿದೆ ಎಂದು ಪ್ರಮುಖ ಅಂಶಗಳನ್ನು ಹಂಚಿಕೊಂಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+