Boycott Polls :ಪ್ರಾಮಾಣಿಕವಾಗಿ ನೀರು ಒದಗಿಸದಿದ್ದರೆ 'ಮತದಾನ ಬಹಿಷ್ಕಾರ', ಧರಣಿ
ಬೆಂಗಳೂರು, ಏಪ್ರಿಲ್ 12: ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಮತ್ತೊಂದೆಡೆ ಲೋಕಸಭಾ ಚುನಾವಣೆ ಕಾವು ಹೆಚ್ಚಾಗುತ್ತಿದೆ. ಈ ನಡುವೆ ನಗರದ ಅಪಾರ್ಟ್‌ಮೆಂಟ್‌ನಿವಾಸಿಗಳು ಲೋಕಸಭಾ ಚುನಾವಣೆ ವೇಳೆ ಮತದಾನ ಬಹಿಷ್ಕರಿಸುವುದಾಗಿ ಹೇಳಿದ್ದಾರೆ. ಇದು ಮತದಾನ ಜಾಗೃತಿ ಮೂಡಿಸುತ್ತಿರುವ ಬಿಬಿಎಂಪಿಗೆ ತಲೆನೋವಾಗಿ ಪರಿಣಮಿಸಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಯಾವುದೇ ಮೂಲಸೌಕರ್ಯ ಶುಲ್ಕವನ್ನು ವಿಧಿಸದೆ ಬಡಾವಣೆಗಳಿಗೆ ಕಾವೇರಿ ನೀರು ನೀಡಲಾಗುತ್ತಿದೆ. ಹೀಗೆಂದು ಆರೋಪಿಸಿರುವ ಜೆಪಿ ನಗರ 8 ನೇ ಪಿಎಚ್‌ಎಸ್‌ನ ರಾಯಲ್ ಲೇಕ್‌ಫ್ರಂಟ್ ನಿವಾಸಿಗಳು (RLF) ಅದೇ ಸಂಪರ್ಕ ನಮಗೆ ಒದಗಿಸಲು 2.3 ಕೋಟಿ ರೂ. ನೀಡಿದ್ದೇವೆ. ನಮಗೆ ಪ್ರಾಮಾಣಿಕವಾಗಿ ನೀರು ನೀಡಲಾಗಿಲ್ಲ.

ಮತದಾನ ಮಾಡದಿರಲು RLF ನಿರ್ಧಾರ
ಸಮರ್ಪಕವಾಗಿ ಬಡಾವಣೆಗಳಂತೆ ನಮಗೂ ನೀರು ಪೂರೈಕೆ ಮಾಡದಿದ್ದರೆ ನಾವು ಮತದಾನ ಮಾಡುವುದಿಲ್ಲ ಎಂದು ಅಪಾರ್ಟ್ಮೆಂಟ್ ನಿವಾಸಿಗಳು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡದಿರಲು ನಿರ್ಧರಿಸಿದ್ದಾರೆ. ಈ ಕುರಿತು ಬ್ಯಾನರ್ ಹಾಕಿಕೊಂಡು ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದು TNIE ವರದಿ ಮಾಡಿದೆ.
ರಾಯಲ್ ಲೇಕ್‌ಫ್ರಂಟ್ ನಿವಾಸಿಗಳು (RLF) ಬ್ಯಾನರ್‌ನಲ್ಲಿ ''ಬಡಾವಣೆಯ ನಾಗರಿಕರಿಂದ ಮತದಾನ ಬಹಿಷ್ಕಾರ' ಕನಿಷ್ಟ ಮೂಲಸೌಕರ್ಯಗಳ ಕೊರತೆ ಪ್ರಾಮಾಣಿಕ ತೆರಿಗೆದಾರರಿಗೆ ನೀರು ಕೊಡಿ' ಎಂದು ಕನ್ನಡ ಮತ್ತು ಆಂಗ್ಲ ಎರಡು ಭಾಷೆಯಲ್ಲಿ ಬ್ಯಾನರ್ ಅಳವಡಿಸಿ ಜಲಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಚುನಾವಣಾ ಅಧಿಕಾರಿಗಳಿಗೆ ಪತ್ರ: ಅದರಲ್ಲೇನಿದೆ?
ನೀರು ಸಂಪರ್ಕ ವಿಚಾರವಾಗಿ ಏಪ್ರಿಲ್ 10 ರಂದ ರಾಯಲ್ ಲೇಕ್‌ಫ್ರಂಟ್ ರೆಸಿಡೆನ್ಸಿ ನಿವಾಸಿಗಳು ಮತ್ತು ಸೈಟ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಮುಖ್ಯ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಸದರಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಪತ್ರದಲ್ಲಿ ತಿಳಿಸಿದ್ದರು. ಜಲಮಂಡಳಿಯ ನಿರಾಸಕ್ತಿ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ಬೆಂಗಳೂರು ಜಲಮಂಡಳಿಯು (BWSSB) ರಾಯಲ್ ಲೇಕ್‌ಫ್ರಂಟ್ ರೆಸಿಡೆನ್ಸಿಯ ಸುತ್ತಮುತ್ತಲಿನ ಸ್ಥಳ, ಉದ್ಯಾನದಂತಹ ಸಾಮಾನ್ಯ ಪ್ರದೇಶಗಳಲ್ಲಿ ಹಾಗೂ ಯಾವುದೇ ಮೂಲಸೌಕರ್ಯ ಶುಲ್ಕಗಳನ್ನು ವಿಧಿಸದೆಯೇ ಆದಾಯ ಮತ್ತು 'ಬಿ-ಖಾತಾ' ಲೇಔಟ್‌ಗಳ ನಿವಾಸಿಗಳಿಗೆ ಮೂಲಸೌಕರ್ಯ ಶುಲ್ಕ ವಿಲ್ಲದೇ ನೀರು ಒದಗಿಸುತ್ತದೆ.
ವಿವಿಧ ಬಡಾವಣೆಗಳಿಗೆ ಶುಲ್ಕವಿಲ್ಲದೇ ನೀರು
ಬಿಡಿಎ ವ್ಯಾಪ್ತಿಯ ಬಡಾವಣೆಗಳಾದ ಬಾಲಾಜಿ ಲೇಔಟ್, ವಾಜರಹಳ್ಳಿ, ರಘುವನಹಳ್ಳಿಯ ಬಿಸಿಎಂಸಿ ಲೇಔಟ್, ನಾರಾಯಣನಗರ ಹಂತ 1 ಮತ್ತು ಹಂತ 2, ದೊಡ್ಡಕಲ್ಲಸಂದ್ರ, ಬಿಡಿಎ ನೌಕರರ ಬಡಾವಣೆ, ದೊಡ್ಡಕಲ್ಲಸಂದ್ರ ಮತ್ತು ಬಿಸಿಸಿ ಎಚ್‌ಎಸ್ ಬಡಾವಣೆಗಳಿಗೆ ಜಲಮಂಡಳಿಯು ಮೂಲಸೌಕರ್ಯದ ಚಾರ್ಜ್ (ಶುಲ್ಕ) ಹಾಕದೇ ನೀರು ನೀಡುತ್ತಿರುವುದು ಗಮನಕ್ಕೆ ಬಂದಿದೆ.
ಮೂಲಸೌಕರ್ಯ ಶುಲ್ಕ ಕಟ್ಟದ ಬಡಾವಣೆಗಳ ಮನೆಗೆ ನೀರಿನ ಸಂಪರ್ಕ ಮತ್ತು ಭೂಗತ ಒಳಚರಂಡಿ (ಯುಜಿಡಿ) ಸಂಪರ್ಕಗಳನ್ನು ಕಲ್ಪಿಸಲಾಗಿದೆ ಎಂದು ಚುನಾವನಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಫ್ಲ್ಯಾಟ್ ನಿವಾಸಿಗಳು ವಿವರಿಸಿದ್ದಾರೆ.
ಬೋರ್‌ವೆಲ್ ಬತ್ತಿ ಹೋಗಿ ನೀರಿಗೆ ಪರದಾಟ
ರಾಯಲ್ ಲೇಕ್‌ಫ್ರಂಟ್ ನಿವಾಸಿಗಳು (RLF) ಯುಜಿಡಿ ಸೌಲಭ್ಯ ಹೊಂದಿದ್ದು, ಇಲ್ಲಿ ಬೋರ್‌ವೆಲ್ ನೀರಿನ ಸೇವೆಗಳ ಮೂಲಕ ಸಮುದಾಯ ನೀರು ಪೂರೈಕೆ ಆಗುತ್ತಿತ್ತು. ಬರಗಾಲ ಹಿನ್ನೆಲೆ ಈ ಬಾರಿ ಬೋರ್‌ವೆಲ್ ಬತ್ತಿ ಹೋಗಿದೆ. ನಾವು ಖಾಸಗಿ ಟ್ಯಾಂಕರ್ ನೀರಿನ ಮೇಲೆ ಅವಲಂಬಿತವಾಗಿದೆ.
ಸುಮಾರು 20 ವರ್ಷಗಳಿಂದ ಜಲಮಂಡಳಿಯಿಂದ ಕಾವೇರಿ ನೀರಿನ ಸಂಪರ್ಕ ಪಡೆಯಲು ಯತ್ನಿಸುತ್ತಿದ್ದೇವೆ. ಅದಕ್ಕಾಗಿ ಸಂಘದ ನಿವಾಸಿಗಳು ಓಡಾಡಿದ್ದಾರೆ. ನೀರು ಸಂಪರ್ಕ ಪಡೆಯಲು ಅಧಿಕಾರಿಗಳು 104 ಕೋಟಿ ರೂ. ಪಾವತಿಸಲು ಸೂಚಿಸಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಜಲಮಂಡಳಿ ಅಧಿಕಾರಿಗಳು ಪರಿಗಣಿಸದೆ ನಿರ್ಲಕ್ಷಿಸಿದ್ದಾರೆ. ಇದು ಹೀಗೆ ಮುಂದುವರಿದರೆ ಲೋಕಸಭಾ ಚುನಾವಣೆ ಮಾತ್ರವಲ್ಲದೇ ಮುಂದಿನ ಎಲ್ಲ ಚುನಾವಣೆಗಳ ಮತದಾನ ಬಹಿಷ್ಕರಿಸುತ್ತೇವೆ ಎಂದು ತಿಳಿಸಿದರು.












Click it and Unblock the Notifications