Daily Horoscope: ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ, ವ್ಯವಹಾರದಲ್ಲಿ ಉತ್ತಮ ಲಾಭ, ಸಮಸ್ಯೆಗಳಿಗೆ ಪರಿಹಾರ
Horoscope June 26: ಶುಕ್ರವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಶುಕ್ರವಾರ ರಾಹುಕಾಲವು ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:00 ರವರೆಗೆ ಇರುತ್ತದೆ. 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.
ಮೇಷ ರಾಶಿ (Aries):
ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಗಳಿಕೆಗೆ ಉತ್ತಮ ಅವಕಾಶಗಳು ಇರುತ್ತವೆ. ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ಉದ್ಯೋಗ ಬದಲಾವಣೆಯೊಂದಿಗೆ ಉತ್ತಮ ಬೆಳವಣಿಗೆಯ ಸಾಧ್ಯತೆ ಇದೆ. ಅವಿವಾಹಿತರಿಗೆ ಒಳ್ಳೆಯ ಸುದ್ದಿ ಸಿಗಲಿದೆ.

ವೃಷಭ ರಾಶಿ (Taurus):
ಇಡೀ ದಿನ ಸಂತೋಷದಿಂದ ಕೂಡಿರುವುದು. ನಿಮ್ಮ ಕಠಿಣ ಪರಿಶ್ರಮ ಇಂದು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಪಡೆಯಬಹುದು. ಈ ಸಮಯದಲ್ಲಿ ನಿಮ್ಮ ಖರ್ಚುಗಳನ್ನು ನಿಯಂತ್ರಿಸಬೇಕು. ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಈ ರಾಶಿಯವರಿಗೆ ಹೆಚ್ಚಿನ ಲಾಭವಾಗುವುದು.
ಮಿಥುನ ರಾಶಿ (Gemini):
ಈ ದಿನ ನಿಮಗೆ ಅನುಕೂಲರವಾಗಿರಲಿದೆ. ಕೆಲಸದಲ್ಲಿ ನಿಮ್ಮ ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯುತ್ತದೆ. ಬಡ್ತಿ ಪಡೆಯುವ ಸಾಧ್ಯತೆಗಳು ಹೆಚ್ಚು. ವೈವಾಹಿಕ ಸಂಬಂಧ ಸುಧಾರಿಸುತ್ತದೆ. ವಿಶೇಷ ಕೆಲಸಗಳಿಗಾಗಿ ಹಣ ಖರ್ಚು ಮಾಡಬೇಕಾಗಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು.
ಕರ್ಕಾಟಕ ರಾಶಿ (Cancer):
ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ. ವೃತ್ತಿಜೀವನದಲ್ಲಿ ಗಮನಾರ್ಹ ಬೆಳವಣಿಗೆಯಾಗುವುದು. ಉತ್ತಮ ಉದ್ಯೋಗಾವಕಾಶಗಳು ಸಿಗುತ್ತವೆ. ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರೆ, ಇಂದು ಒಳ್ಳೆಯ ಸುದ್ದಿ ಸಿಗುತ್ತದೆ.ಅವಿವಾಹಿತರಿಗೆ ವಿವಾಹ ಮಾತುಕತೆ ನಡೆಯುವ ಸಾಧ್ಯತೆ ಇದೆ.
ಸಿಂಹ ರಾಶಿ (Leo):
ವ್ಯವಹಾರದಲ್ಲಿ ಉತ್ತಮ ಲಾಭವಾಗುವುದು. ಆದರೆ ಕೆಲವು ವಿಷಯಗಳಲ್ಲಿ ಎಚ್ಚರಿಕೆಯೂ ಅಗತ್ಯ. ಹೊಸ ಯೋಜನೆಯನ್ನು ಆರಂಭಿಸುವ ಸಾಧ್ಯತೆ ಇದೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ಆಸ್ತಿಯನ್ನು ಖರೀದಿಸುವ ಬಗ್ಗೆ ಯೋಚಿಸಬಹುದು. ವೈವಾಹಿಕ ಜೀವನದಲ್ಲಿ ಕೆಲವು ಗೊಂದಲಗಳು ಕಾಣಿಸಿಕೊಳ್ಳುವುದು.
ಕನ್ಯಾ ರಾಶಿ (Virgo):
ಈ ದಿನ ನಿಮ್ಮ ಪಾಲಿಗೆ ಮಿಶ್ರ ಫಲ ನೀಡುವುದು. ಸ್ನೇಹಿತರಿಂದ ಸಂತೋಷದ ಸುದ್ದಿ ಕೇಳುವಿರಿ. ವ್ಯವಹಾರವನ್ನು ಮುನ್ನಡೆಸುವ ಬಗ್ಗೆ ಹೊಸ ಆಲೋಚನೆಗಳೊಂದಿಗೆ ಕೆಲಸ ಮಾಡುವಿರಿ. ನಿಮ್ಮ ಪ್ರಯತ್ನಕ್ಕೆ ಸಂಗಾತಿಯ ಬೆಂಬಲ ಸಿಗುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ತುಲಾ ರಾಶಿ (Libra):
ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ಉತ್ತಮ ಅವಕಾಶಗಳು ಸಿಗುತ್ತವೆ. ಹೊಸ ಕ್ಷೇತ್ರದಲ್ಲಿಯೂ ಯಶಸ್ಸು ಸಿಗುವುದು. ಕೆಲಸ ಮಾಡುವಾಗ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ನಿಮ್ಮ ಜಾತಕ ಫಲದಿಂದಾಗಿ ಸಂಗಾತಿಗೆ ಉತ್ತಮ ದಿನವಾಗಿರುತ್ತದೆ.
ವೃಶ್ಚಿಕ ರಾಶಿ (Scorpio):
ಬಾಕಿ ಇರುವ ಅನೇಕ ಕೆಲಸಗಳು ಪೂರ್ಣಗೊಳ್ಳುತ್ತವೆ. ಆರ್ಥಿಕ ಲಾಭ ಮತ್ತು ಸಾಮಾಜಿಕ ಗೌರವ ಹೆಚ್ಚುವುದು. ಮಾನಸಿಕ ಶಾಂತಿ ಹೆಚ್ಚುವುದು. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿ ವಹಿಸುವಿರಿ. ಆರೋಗ್ಯದ ಬಗ್ಗೆ ಗಮನ ಇರಲಿ. ಕಾಲು ನೋವಿನ ಸಮಸ್ಯೆ ಕಾಡಬಹುದು.
ಧನು ರಾಶಿ (Sagitarius):
ಕೆಲಸದಲ್ಲಿ ನೀವು ಗಮನಾರ್ಹ ಯಶಸ್ಸನ್ನು ಸಾಧಿಸುವಿರಿ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹೊಸ ಕ್ಷೇತ್ರಗಳಿಂದ ಹಣವನ್ನು ಗಳಿಸಲು ಪ್ರಯತ್ನಿಸುವಿರಿ. ಇದರಲ್ಲಿ ಯಶಸ್ಸೂ ಸಿಗುವುದು. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೊಂದುವಿರಿ. ಖರ್ಚುಗಳು ಕಡಿಮೆಯಾಗುತ್ತವೆ, ಕೈಯ್ಯಲ್ಲಿ ಹಣ ಉಳಿಯುವುದು ಸಾಧ್ಯವಾಗುತ್ತದೆ.
ಮಕರ ರಾಶಿ (Capricorn):
ದುಬಾರಿ ವಸ್ತು ಖರೀದಿಸಲ ಹಣ ಖರ್ಚು ಮಾಡುವಿರಿ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವ ಸಾಧ್ಯತೆಯಿದೆ. ಕುಟುಂಬದಲ್ಲಿ ಶುಭ ಕಾರ್ಯ ನೆರವೇರುವುದು.
ಕುಂಭ ರಾಶಿ (Aquarous):
ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ. ವ್ಯವಹಾರದಲ್ಲಿ ನೀವು ಬಯಸಿದ ಯಶಸ್ಸನ್ನು ಸಾಧಿಸುವಿರಿ. ಆದಾಯದಲ್ಲಿ ಉತ್ತಮ ಲಾಭವಾಗುವ ಸಾಧ್ಯತೆಯಿದೆ. ಕುಟುಂಬದಲ್ಲಿ ಪ್ರೀತಿ ಸಾಮರಸ್ಯ ಬೆಳೆಯುವುದು. ಮಾತನಾಡುವಾಗ ಯೋಚಿಸಿ ಶಬ್ದಗಳನ್ನು ಬಳಸಿ.
ಮೀನ ರಾಶಿ (Pisces):
ಮಾಡುವ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆ ಇದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಗಮನಾರ್ಹವಾಗಿ ವೃದ್ಧಿಸುವ ಸಾಧ್ಯತೆಯಿದೆ.ಕುಟುಂಬದಲ್ಲಿ ಸಂತೋಷದ ವಾತಾವರಣ ಇರುವುದು. ಆರೋಗ್ಯದ ಬಗ್ಗೆ ವಿಶೇಷ ಗಮನ ಕೊಡಿ.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications