ವೃದ್ಧರ ಗೌಪ್ಯ ಮತದಾನ ವೇಳೆ ಅಕ್ರಮ: ಸಿಪಿಎಂ ಏಜೆಂಟ್ ಹಸ್ತಕ್ಷೇಪ: Video Viral
ಬೆಂಗಳೂರು, ಏಪ್ರಿಲ್ 20: ದೇಶಾದ್ಯಂತ ಲೋಸಕಭಾ ಚುನಾವಣೆ ಕಾವು ಹೆಚ್ಚಾಗಿದ್ದು, ವಿವಿಧ ರಾಜ್ಯಗಳಲ್ಲಿ ಮೊದಲ ಹಂತದ ಮತದಾನ ಏಪ್ರಿಲ್ 19ರಂದು ನಡೆದಿದೆ. ಈ ನಡುವೆ ಹಿರಿಯ ನಾಗರಿಕರಿಗಾಗಿ ಚುನಾವಣಾ ಅಧಿಕಾರಿಗಳು ಕೈಗೊಂಡಿದ್ದ ಮನೆಯಿಂದ ಗೌಪ್ಯ ಮತದಾನದಲ್ಲಿ ಕೇರಳದ ಗಡಿ ಭಾಗದ ಕ್ಷೇತ್ರದಲ್ಲಿ ನಿಯಮ ಉಲ್ಲಂಘನೆ ಆಗಿದೆ. ಈ ಕುರಿತ ವಿಡಿಯೋ ವೈರಲ್ ಆಗಿದೆ.
ಹೌದು, ಕೇರಳದ ಗಡಿಗೆ ಹೊಂದಿಕೊಂಡ ಕಾಸರಗೋಡಿನಲ್ಲಿ ಮನೆಯಲ್ಲಿ ವೃದ್ಧರೊಬ್ಬರು ಮತದಾನ ಮಾಡುವಾಗ ಸಿಪಿಎಂ

(Communist Party of India (Marxist) ಏಜೆಂಟ್ ಒಬ್ಬರು ವೃದ್ಧರಿಗೆ ಸ್ವಯಂ ಪ್ರೇರಿತ ಮತಕ್ಕೆ ಅವಕಾಶ ನೀಡದೇ ಇದಕ್ಕೆ ಮತ ಹಾಕಿ ಎಂದು ಸೂಚಿಸಿದ್ದಾನೆ. ಸ್ವಯಂಪ್ರೇರಿತ ಮತದಾನಕ್ಕೆ ಅವಕಾಶ ನೀಡಿಲ್ಲ. ಈ ಕುರಿತು ಲೋಕಸಭಾ ಕ್ಷೇತ್ರದ ಬಿಜೆಪಿ ನಾಯಕಿ ಎಂಎಲ್ ಅಶ್ವಿನಿ ತಿಳಿಸಿದ್ದಾರೆ. ವಿಡಿಯೋ ಅನ್ನು ಅವರು ತಮ್ಮ ಟ್ವಿಟ್ಟರ್ (X) ನಲ್ಲಿ ಹಂಚಿಕೊಂಡಿದ್ದಾರೆ.
ನನ್ನ ಕ್ಷೇತ್ರದಲ್ಲಿ ಸಿಪಿಎಂ ಏಜೆಂಟ್ ವಯೋವೃದ್ಧ ಮಹಿಳೆಯ ಮತವನ್ನು ಕದಿಯುತ್ತಿರುವ ಆಘಾತಕಾರಿ ದೃಶ್ಯಾವಳಿ ಬಹಿರಂಗವಾಗಿದೆ ಎಂದು ಹೇಳಿದರು.
ಚುನಾವಣಾ ಅಕ್ರಮ ಖಂಡನೀಯ
ಹಿರಿಯ ನಾಯಗರಿಕರಿಗೆ ಮನೆಯ ಮತದಾನ ಪ್ರಕ್ರಿಯೆ ಮಾಡುವ ಈ ವೇಳೆ ಈ ಅಕ್ರಮ ನಡೆದಿದೆ. ಪ್ರಜಾಪ್ರಭತ್ವ ವ್ಯವಸ್ಥೆಯಲ್ಲಿ ಈ ನಡೆ ಬೇಸರ ತಂದಿದೆ. ನಮ್ಮ ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಸಮಗ್ರತೆಯನ್ನು ಎತ್ತಿ ಹಿಡಿಯಲು ಬದ್ಧವಾಗಿರುವ ಅಭ್ಯರ್ಥಿಯಾಗಿ, ನಾನು ಯಾವುದೇ ರೀತಿಯ ಚುನಾವಣಾ ಅಕ್ರಮ ಖಂಡಿಸುತ್ತೇನೆ ಎಂದರು.

ಈ ಘಟನೆ ಬೆಳಕಿಗೆ ಬಂದ ಕೂಡಲೇ ಆ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳನ್ನು ಅಮಾನತುಗೊಳಿಸಿರುವುದು ಹೊಣೆಗಾರಿಕೆ ಮತ್ತು ಪಾರದರ್ಶಕತೆ ಖಾತ್ರಿಪಡಿಸುವ ನಿಟ್ಟಿನಲ್ಲಿ ಸರಿಯಾದ ನಿರ್ಧಾರ ಎಂದು ಆಯೋಗ ನಿರ್ಧಾರವನ್ನು ಸ್ವಾಗತಿಸಿದರು.
ಭಾರತೀಯ ಚುನಾವಣಾ ವ್ಯವಸ್ಥೆಯಲ್ಲಿ ನ್ಯಾಯ ಮತ್ತು ಪ್ರಾಮಾಣಿಕತೆಯ ತತ್ವಗಳನ್ನು ಎತ್ತಿ ಹಿಡಿಯಲು ನಾವೆಲ್ಲರೂ ಶ್ರಮಿಸಬೇಕು. ಮತದಾರರು ಸ್ವಯಂ ಪ್ರೇರಿತವಾಗಿ ಎಲ್ಲರೂ ಆಮಿಷಕ್ಕೆ ಒಳಗಾಗದೇ ಮತ ಚಲಾಯಿಸಬೇಕು ಎಂದರು.
Shocking footage reveals CPM agent allegedly 'stealing' elderly woman's vote in my constituency.
— M.L.Ashwini (Modi Ka Parivar) (@AshwiniML2) April 19, 2024
It's disheartening to learn about the recent incident involving irregularities in the home voting process. As a candidate committed to upholding the integrity of our democratic… pic.twitter.com/uuG9chKAK2
ಮತದಾರರು ಜಾಗರೂಕರಾಗಬೇಕು
ಮತದಾರರು ಜಾಗರೂಕರಾಗಿರಲು ಮತ್ತು ಯಾವುದೇ ದುರ್ವರ್ತನೆ ಅಥವಾ ಅಕ್ರಮಗಳ ನಿದರ್ಶನಗಳು ಕಂಡು ಬಂದರೆ ವರದಿ ಮಾಡಬೇಕು ಎಂದು ಅವರು ಮನವಿ ಮಾಡಿದರು. ಪ್ರತಿ ಮತವು ಚುನಾವಣೆ ಮೇಲೆ ಪರಿಣಾಮ ಭೀರುತ್ತದೆ. ಪ್ರತಿಯೊಬ್ಬ ನಾಗರಿಕನ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಗೌರವಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಒಟ್ಟಾಗಿ ಕೆಲಸ ಮಾಡೋಣ ಎಂದು ಅವರು ಕರೆ ನೀಡಿದರು.
ಭಾರತೀಯ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ನಾಗರಿಕರಿಗೆ ಮತ್ತು ವಿಶೇಷ ಚೇತನರಿಗೆ ಮನೆಯಿಂದ ಗೌಪ್ಯ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಇದರನ್ವಯ ಕಾರಗೋಡಿನಲ್ಲಿ ಹಿರಿಯ ನಾಗರಿಕರಿಂದ ಮತದಾನ ಮಾಡುವಾಗಿ ಸಿಪಿಎಂ ಕಡೆಯ ವ್ಯಕ್ತಿಯೊಬ್ಬರು ವೃದ್ಧರೊಬ್ಬರು ಮತದಾನ ಮಾಡುವಾಗ ಹಸ್ತಕ್ಷೇಪ ಮಾಡಿದ ವಿಡಿಯೋ ವೈರಲ್ ಆಗಿದೆ. ಆನ್‌ಲೈನ್ ನಲ್ಲಿ ಹರಿದಾಡುತ್ತಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications