ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಉಗ್ರವಾದಿ ರಾಷ್ಟ್ರ ಎಂದು ಘೋಷಿಸಿದ ಅಮೆರಿಕ

ಪಾಕಿಸ್ತಾನವನ್ನು ಉಗ್ರವಾದಿಗಳ ಸ್ವರ್ಗವೆಂದು ಘೋಷಿಸಿದ ಅಮೆರಿಕ. ಅಲ್ಲಿನ ಸಂಸತ್ತಿನಲ್ಲಿ ಮಂಡನೆಯಾಗುವ ವಾರ್ಷಿಕ ಉಗ್ರವಾದದ ವರದಿಯಲ್ಲಿ ಉಲ್ಲೇಖ.

|
Google Oneindia Kannada News

ವಾಷಿಂಗ್ಟನ್, ಜುಲೈ 20: ಬಹುದಿನಗಳಿಂದ ಭಾರತದ ಒತ್ತಾಯಕ್ಕೆ ಅಮೆರಿಕ ಸರ್ಕಾರ ಕೊನೆಗೂ ಕಿವಿಗೊಟ್ಟಿದೆ. ಪಾಕಿಸ್ತಾನವನ್ನು ಭಯೋತ್ಪಾದಕ ನೆಲೆ ಎಂದು ಘೋಷಿಸಿದೆ. ಪಠಾಣ್ ಕೋಟ್ ದಾಳಿಯ ಮುಖ್ಯ ರೂವಾರಿ ಅಜರ್ ಮಸೂದ್ ಅವರನ್ನು ಇತ್ತೀಚೆಗೆ ಅಮೆರಿಕ ಜಾಗತಿಕ ಉಗ್ರನೆಂದು ಘೋಷಣೆ ಮಾಡಿತ್ತು. ಇದಾದ ನಂತರ, ಪಾಕಿಸ್ತಾನಕ್ಕೆ ಅಮೆರಿಕದಿಂದ ಸಿಗುತ್ತಿರುವ ಮತ್ತೊಂದು ಪೆಟ್ಟು ಇದಾಗಿದೆ.

ಪಠಾಣ್ ಕೋಟ್ ದಾಳಿ : ಮೌಲಾನಾ ಮಸೂದ್‌ ಅಜರ್ ಯಾರು?ಪಠಾಣ್ ಕೋಟ್ ದಾಳಿ : ಮೌಲಾನಾ ಮಸೂದ್‌ ಅಜರ್ ಯಾರು?

ಪಾಕಿಸ್ತಾನವನ್ನು ಉಗ್ರ ಪೋಷಕ ರಾಷ್ಟ್ರವೆಂದು ಘೋಷಿಸಿರುವುದು ರಾಜತಾಂತ್ರಿಕ ಮಟ್ಟದಲ್ಲಿ ಇದು ಭಾರತಕ್ಕೆ ದೊಡ್ಡ ಸಂಭ್ರಮವನ್ನು ತಂದುಕೊಟ್ಟಿದ್ದರೆ, ಪಾಕಿಸ್ತಾನಕ್ಕೆ ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಅಪಮಾನ ತಂದಿದೆ.

US lists Pakistan among countries providing 'safe havens' to terrorists

ವಾರ್ಷಿಕವಾಗಿ, ಅಮೆರಿಕದ ಸಂಸತ್ತಿನಲ್ಲಿ ಮಂಡನೆಯಾಗುವ 'ಕಂಟ್ರಿ ರಿಪೋರ್ಟ್ ಆನ್ ಟೆರರಿಸಂ' ಎಂಬ ವರದಿಯಲ್ಲಿ ಈ ವಿಚಾರವನ್ನು ಉಲ್ಲೇಖಿಸಲಾಗಿದೆ. ಲಷ್ಕರ್-ಎ-ತೊಯ್ಬಾ, ಜೈಷ್-ಎ-ಮೊಹಮ್ಮದ್ ನಂಥ ಉಗ್ರ ಸಂಘಟನೆಗಳಿಗೆ ಆಶ್ರಯ ನೀಡುವ ಮೂಲಕ, ಉಗ್ರ ಸಂಘಟನೆಗಳ ಸ್ವರ್ಗ ಎನ್ನುವಂಥ ಪರಿಸ್ಥಿತಿ ಪಾಕಿಸ್ತಾನದಲ್ಲಿದೆ. ಹೀಗಾಗಿ, ಆ ದೇಶವನ್ನು ಉಗ್ರವಾದ ಬೆಂಬಲಿಸುವ ರಾಷ್ಟ್ರವೆಂದು ಕರೆಯಲು ಅಡ್ಡಿಯಿಲ್ಲ ಎಂದು ಅಮೆರಿಕ ಸರ್ಕಾರ ಅಭಿಪ್ರಾಯಪಟ್ಟಿದೆ.

ವಿಶ್ವಸಂಸ್ಥೆಯಿಂದ ಉಗ್ರ ಮಸೂದ್ ನಿಷೇಧ: ಭಾರತಕ್ಕೆ ಚೀನಾ ಅಡ್ಡಗಾಲು?ವಿಶ್ವಸಂಸ್ಥೆಯಿಂದ ಉಗ್ರ ಮಸೂದ್ ನಿಷೇಧ: ಭಾರತಕ್ಕೆ ಚೀನಾ ಅಡ್ಡಗಾಲು?

ಇದಲ್ಲದೆ, ಈ ವರದಿಯಲ್ಲಿ ಒಟ್ಟು 8 ರಾಷ್ಟ್ರಗಳನ್ನು ಉಗ್ರವಾದಿ ಪೋಷಕ ರಾಷ್ಟ್ರಗಳೆಂದು ಅಮೆರಿಕ ಹೆಸರಿಸಿದೆ. ಪಾಕಿಸ್ತಾನ, ಆಫ್ಘಾನಿಸ್ತಾನ, ಸೊಮಾಲಿಯಾ, ಟ್ರಾನ್ಸ್ ಸಹಾರಾ, ಸುಲು/ಸುಲಾವೆಸಿ ಲಿಟೋರಲ್, ಸದರನ್ ಫಿಲಿಪ್ಪೀನ್ಸ್, ಈಜಿಪ್ಟ್, ಇರಾಕ್, ಲಿಬಿಯಾ, ಯೆಮೆನ್, ಲೆಬನಾನ್, ಲಿಬಿಯಾ, ಯೆಮೆನ್, ಕೊಲಂಬಿಯಾ ಹಾಗೂ ವೆನೆಜುವೆಲಾ ರಾಷ್ಟ್ರಗಳು ಈ ಪಟ್ಟಿಯಲ್ಲಿವೆ.

ಅಲ್ಲದೆ, ಪಾಕಿಸ್ತಾನದ ಬೆಂಬಲದಿಂದಲೇ ಈ ದೇಶದ ಉಗ್ರರು ಭಾರತದ ಮೇಲೆ ಸತತವಾಗಿ ದಾಳಿ ಮಾಡಲು ಸಾಧ್ಯವಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದಕ್ಕೆ ನಾನಾ ಉದಾಹರಣೆಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಪ್ರಮುಖವಾಗಿ ಕಳೆದ ವರ್ಷ ನಡೆದಿದ್ದ ಪಠಾಣ್ ಕೋಟ್ ಮೇಲಿನ ಉಗ್ರರ ದಾಳಿಯನ್ನು ಒತ್ತಿ ಹೇಳಿದೆ.

English summary
The US on Wednesday listed Pakistan among the nations and regions providing "safe havens" to terrorists, saying terror groups like the LeT and JeM continue to operate, train, organise and fund raise inside the country in 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X