Tesla car: ಮೈಸೂರು ಚಾಮುಂಡಿ ಬೆಟ್ಟದಲ್ಲಿ ಅಮೆರಿಕಾದ ಟೆಸ್ಲಾ ಕಾರು-ಮಾಲೀಕ ಹೇಳಿದ್ದೇನು ಗೊತ್ತಾ?
ಮೈಸೂರು, ಜನವರಿ, 17: ಅಮೆರಿಕಾದ ಐಷಾರಾಮಿ ಕೆಂಪು ಬಣ್ಣದ ಟೆಸ್ಲಾ ಕಾರು ಇತ್ತೀಚೆಗಷ್ಟೇ ಬೆಂಗಳೂರಿನ ರಸ್ತೆಗಳು ಕಾಣಿಸಿಕೊಂಡಿದ್ದು, ಈ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗಿತ್ತು. ಇದೀಗ ಮೈಸೂರು ಚಾಮುಂಡಿ ಬೆಟ್ಟದಲ್ಲೂ ಈ ಕಾರು ಕಾಣಿಸಿಕೊಂಡಿದ್ದು, ಈ ವಿಡಿಯೋವು ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಇದರ ಉದ್ಪಾದನೆ ಎಲ್ಲಿ, ಇದಕ್ಕಿರುವ ಮಾನ್ಯತೆ ಎಂಥಹದ್ದು ಹಾಗೂ ಮಾಲೀಕ ಹೇಳಿದ್ದೇನು ಎಂದು ಇಲ್ಲಿ ತಿಳಿಯಿರಿ.
ಅಲ್ಲದೆ ಮೈಸೂರು ಚಾಮುಂಡಿ ಬೆಟ್ಟದ ಬಳಿ ನಿಲ್ಲಿಸಿದ ತಕ್ಷಣ ಈ ಕಾರನ್ನು ನೋಡಲು ಜನಸಾಗರವೇ ಹರಿದುಬಂದಿದೆ. ಅಲ್ಲದೆ ಈ ವೇಳೆ ಜನ ಐಷಾರಾಮಿ ಟೆಸ್ಲಾ ಕಾರನ್ನು ಕಣ್ತುಂಬಿಕೊಳ್ಳುವುದಲ್ಲದೆ, ಇದರಲ್ಲಿರುವ ವಿಶೇಷತೆಗಳನ್ನು ನೋಡಿ ಆಶ್ಚರ್ಯಕ್ಕೊಳಗಾಗಿದ್ದಾರೆ.

ಅಲ್ಲದೆ ಇನ್ನು ಶ್ರೀರಾಮನ ಹಾಡಂತೂ ಬರೀ ದೇಶ ಅಲ್ಲದೆ ವಿದೇಶಗಳಲ್ಲೂ ಸದ್ದು ಮಾಡುತ್ತಿದೆ. ಮೊನ್ನೆಯಷ್ಟೇ ವಿಶ್ವಹಿಂದೂ ಪರಿಷತ್ ಅಮೆರಿಕದ ಘಟಕ ಟೆಸ್ಲಾ ಕಂಪನಿಯ ಕಾರುಗಳ ಲೈಟ್ ಶೋ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ವೇಳೆ ಕಾರುಗಳ ಮೂಲಕ ರಾತ್ರೋರಾತ್ರಿ ಜೈಶ್ರೀರಾಮ್.. ಜೈಶ್ರೀರಾಮ್ ಮ್ಯೂಸಿಕಲ್ ಲೈಟ್ ಶೋ ನಡೆಸಿದ್ದು, ಈ ವಿಡಿಯೋವೂ ಕೂಡ ಭಾರೀ ವೈರಲ್ ಆಗುತ್ತಿದೆ.
ಚಾಮುಂಡಿ ಬೆಟ್ಟದ ಮಾರ್ಗದ ರಸ್ತೆಯಲ್ಲಿ ಸಾಗುತ್ತಿರುವ ಕೆಂಪು ಬಣ್ಣದ ಟೆಸ್ಲಾ ಕಾರನ್ನು ನೋಡಿಸ ಇತರ ಸವಾರರು ನೋಡಿ ಆಶ್ಚರ್ಯಕ್ಕೊಳಗಾಗಿದ್ದಾರೆ. ಇನ್ನು ಕೆಲವು ಬೈಕರ್ಸ್ ಟೆಸ್ಲಾ ಕಾರನ್ನು ಹಿಂಬಾಲಿಸಿಕೊಂಡು ಸಾಗಿದ್ದಾರೆ. ಬಳಿಕ ಕೊನೆಗೆ ಚಾಮುಂಡಿ ಬೆಟ್ಟದ ಮುಂದೆ ಕಾರು ನಿಲ್ಲಿಸಿದ ತಕ್ಷಣ ಜನ ಇದನ್ನು ನೋಡಲು ಮುಗಿಬಿದ್ದಿದ್ದಾರೆ.
KA-09-rider ಎನ್ನುವ ಇನ್‌ಸ್ಟಾ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇನ್ನು ಕಾರಿನ ಮಾಲೀಕ ಡೋರ್ ತೆರೆದು ಜನರ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದರು. ಕಾರಿನ ವಿಶೇಷತೆ ಸೇರಿದಂತೆ ಕೆಲ ಮಾಹಿತಿಗಳನ್ನು ಅಲ್ಲಿ ನೆರೆದಿದ್ದ ಜನರಿಗೆ ನೀಡಿದ್ದಾರೆ. ಟೆಸ್ಲಾ ಕಾರುಗಳ ಡೋರ್ ಮೇಲಕ್ಕೆ ತೆರೆದುಕೊಳ್ಳುತ್ತದೆ. ಇದನ್ನು ಫೋಟೋ ತೆಗೆದುಕೊಳ್ಳಲಿ ಜನರು ಮುಗಿಬಿದ್ದಿದ್ದರು.
ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಕಾರು ವಿಶ್ವದ ಬಹುಬೇಡಿಕೆಯ ಎಲೆಕ್ಟ್ರಿಕ್ ಕಾರು ಆಗಿದೆ. ಆದರೆ ಈ ಕಾರು ಭಾರತದಲ್ಲಿ ಮಾರಾಟ ಆರಂಭಿಸಲು ಹಲವು ಸುತ್ತಿನ ಮಾತುಕತೆ ನಡೆಸಿದೆ. 2015ರಿಂದ ಟೆಸ್ಲಾ ಭಾರತ ಪ್ರವೇಶಕ್ಕೆ ನಿರಂತರ ಮಾತುಕತೆ ನಡೆಯುತ್ತಿದೆ. ಯಾವೂದೂ ಕೂಡ ಅಂತಿಮ ಆಗಿಲ್ಲ. ಇತ್ತೀಚೆಗೆ ಟೆಸ್ಲಾ ಭಾರತದಲ್ಲಿ ಹೂಡಿಕೆಗೆ ತಯಾರಿ ಮಾಡಿಕೊಂಡಿರುವ ಮಾಹಿತಿಯನ್ನು ಬಹಿರಂಗಪಡಿಸಿತ್ತು.
ಇನ್ನು ಚೀನಾದಲ್ಲಿ ಟೆಸ್ಲಾ ಉತ್ಪಾದನೆ ಘಟಕ ಇದೆ. ಭಾರತದಲ್ಲಿ ಉತ್ಪಾದನೆ ಆಗುವ ಕಾರುಗಳನ್ನು ಇಂಡೋ ಪೆಸಿಫಿಕ್ ವಲಯದಲ್ಲಿ ರಫ್ತು ಮಾಡುವ ಸಾಧ್ಯತೆ ಇದೆ. ಟೆಸ್ಲಾ ಭಾರತದಲ್ಲಿ ತನ್ನ ಘಟಕವನ್ನು ಗುಜರಾತ್‌ನಲ್ಲಿ ತೆರೆಯುವುದು ಬಹುತೇಕ ಅಂತಿಮ ಆಗಿದೆ. ಆದರೆ ಇದುವರೆಗೂ ಅಧಿಕೃತ ಘೋಷಣೆ ಆಗಿಲ್ಲ. ವೈಬ್ರೆಂಟ್ ಗುಜರಾತ್ ಸಮ್ಮಿಟ್‌ನಲ್ಲಿ ಈ ಬಗ್ಗೆ ಕೆಲ ನಿರ್ಧಾರಗಳು ಹೊರಬರವ ನಿರೀಕ್ಷೆಯಿತ್ತು. ಆದರೆ ಟೆಸ್ಲಾ ಕುರಿತ












Click it and Unblock the Notifications