ವೈಭವ್ ಆರ್ಭಟ, 4,4,4,4,4,4,4.. 6,6,6.. RCB ಪರ ಕೊಹ್ಲಿ ಜೊತೆ ಕಣಕ್ಕಿಳಿಯುವ ಸ್ಟಾರ್ ಆಟಗಾರನಿಂದ ಭಾರತ ಹೀನಾಯ ಸೋಲು
India vs England 3rd T20I: ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ಮಂಗಳವಾರ (ಜುಲೈ 07) ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ 125 ರನ್‌ಗಳ ಹೀನಾಯ ಸೋಲು ಕಂಡಿತು. ಈ ಸೋಲಿಗೆ ಪ್ರಮುಖ ಕಾರಣವೇ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಜೊತೆ ಆರಂಭಿಕರಾಗಿ ಕಣಕ್ಕಿಳಿಯುವ ಸ್ಟಾರ್ ಆಟಗಾರ. ಹಾಗಾದ್ರೆ ಈ ಕುರಿತ ಸಂಪೂರ್ಣ ವರದಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಇಂಗ್ಲೆಂಡ್ ತಂಡವು ಫಿಲ್ ಸಾಲ್ಟ್, ಜೋಸ್ ಬಟ್ಲರ್ ಹಾಗೂ ಸ್ಯಾಮ್ ಕರನ್ ಆಕ್ರಮಣಕಾರಿ ಆಟದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಬರೋಬ್ಬರಿ 201 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಆದರೆ ಬಳಿಕ ಬ್ಯಾಟ್ ಬೀಸಿದ ಭಾರತ ತಂಡವು 11.4 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಬರೀ 76 ರನ್ ಕಲೆಹಾಕಿ ಹೀನಾಯ ಸೋಲನುಭವಿಸಿತು.

ಭಾರತಕ್ಕೆ ಹೀನಾಯ ಸೋಲು
ಈ ಸೋಲು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ರನ್‌ಗಳ ಆಧಾರದಲ್ಲಿ ಭಾರತಕ್ಕೆ ಎದುರಾದ ಅತ್ಯಂತ ದೊಡ್ಡ ಸೋಲಾಗಿದೆ. ಈ ಹಿಂದೆ 2019ರಲ್ಲಿ ನ್ಯೂಜಿಲೆಂಡ್ ವಿರುದ್ಧ ಅನುಭವಿಸಿದ್ದ 80 ರನ್‌ಗಳ ಸೋಲಿನ ದಾಖಲೆಯನ್ನು ಇದು ಮೀರಿಸಿದೆ. ಇನ್ನೂ ಟೀಮ್ ಇಂಡಿಯಾ ಈ ಸೋಲಿಗೆ ಪ್ರಮುಖ ಕಾರಣವಾಗಿದ್ದು ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಕೊಹ್ಲಿ ಜೊತೆ ಕಣಕ್ಕಿಳಿಯುವ ಫಿಲ್ ಸಾಲ್ಟ್ ಸ್ಫೋಟಕ ಬ್ಯಾಟಿಂಗ್ ಹಾಗೂ ಆರ್‌ಆರ್‌ನ ಜೋಫ್ರಾ ಆರ್ಚರ್, ಜೋಶ್ ಟಂಗ್ ಅವರ ಮಾರಕ ಬೌಲಿಂಗ್ ದಾಳಿ.
ಆರ್‌ಸಿಬಿ ಆಟಗಾರನ ಅಬ್ಬರದ ಬ್ಯಾಟಿಂಗ್ ಪ್ರದರ್ಶನ
ಇಂಗ್ಲೆಂಡ್ ಪರ ಬ್ಯಾಟ್ ಬೀಸಿದ ಆರ್‌ಸಿಬಿಯ ಫಿಲ್ ಸಾಲ್ಟ್ ಆಕ್ರಮಣಕಾರಿ ಆಟ ಆಡಿ ಕೇವಲ 44 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್‌ಗಳ ನೆರವಿನಿಂದ ಬರೋಬ್ಬರಿ 70 ರನ್ ಕಲೆಹಾಕಿದರು. ಉಳಿದಂತೆ ಜೋಸ್ ಬಟ್ಲರ್ 36(21), ಸ್ಯಾಮ್ ಕರನ್ ಅಜೇಯ 41(24), ನಾಯಕ ಹ್ಯಾರಿ ಬ್ರೂಕ್ 16(12), ಜೇಕಬ್ ಬೆಥೆಲ್ 13(9), ವಿಲ್ ಜಾಕ್ಸ್ 14(7) ರನ್ ಸಿಡಿಸಿದರು. ಈ ಮೂಲಕ ಇಂಗ್ಲೆಂಟ್ ತಂಡವು 201 ರನ್‌ಗಳನ್ನು ಪೇರಿಸಿತು.
ಕಳಪೆ ದಾಖಲೆ ಬರೆದ ಟೀಮ್ ಇಂಡಿಯಾ
ಬ್ಯಾಟಿಂಗ್‌ಗೆ ಪೂರಕವಾಗಿದ್ದ ಪಿಚ್‌ನಲ್ಲಿ 202 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತದ ಬ್ಯಾಟಿಂಗ್ ಲೈನ್‌ಅಪ್ ಸಂಪೂರ್ಣವಾಗಿ ಕುಸಿಯಿತು. ವೈಭವ್ ಸೂರ್ಯವಂಶಿ ಮತ್ತು ಇಶಾನ್ ಕಿಶನ್ ತಲಾ 13 ರನ್ ಗಳಿಸಿದ್ದೇ ಭಾರತದ ಪರ ಗರಿಷ್ಠ ಸ್ಕೋರ್ ಎನಿಸಿತು. ಇಂಗ್ಲೆಂಡ್ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ಭಾರತ ಕೇವಲ 76 ರನ್‌ಗಳಿಗೆ ಆಲೌಟ್ ಆಗಿ ಹೀನಾಯ ಸೋಲು ಕಂಡಿತು. ಈ ಸೋಲಿನೊಂದಿಗೆ ಭಾರತ ತಂಡ ತನ್ನ ಕಳೆದ 5 ಟಿ20 ಪಂದ್ಯಗಳಲ್ಲಿ ಒಂದನ್ನೂ ಗೆಲ್ಲಲು ಸಾಧ್ಯವಾಗದಂತಹ ಕಳಪೆ ದಾಖಲೆಗೂ ಪಾತ್ರವಾಗಿದೆ.
ತಂಡದ ಪರ ಗರಿಷ್ಠ ರನ್ ಕಲೆಹಾಕಿದ ವೈಭವ್, ಕಿಶನ್
ಟೀಮ್ ಇಂಡಿಯಾ ಪರ ಬ್ಯಾಟ್ ಬೀಸಿದ ಅಭಿಷೇಕ್ ಶರ್ಮಾ 10(7), ವೈಭವ್ ಸೂರ್ಯವಂಶಿ 13(5), ಇಶಾನ್ ಕಿಶನ್ 13(9), ಅಕ್ಷರ್ ಪಟೇಲ್ 10(4) ರನ್ ಕಲೆಹಾಕಿದರೆ, ಉಳಿದ ಬ್ಯಾಟರ್‌ಗಳು ಒಂದಕ್ಕಿ ದಾಟಲು ಸಾಧ್ಯವಾಗಲಿಲ್ಲ. ಈ ಮೂಲಕ ಕೊನೇ ಪಕ್ಷ ಭಾರತ ಈ ಪಂದ್ಯದಲ್ಲಿ ಒಟ್ಟಾರೆ 100 ರನ್ ದಾಟದೆಯೋ ಬರೀ 76 ರನ್‌ಗೆ ತನ್ನೆಲ್ಲಾ ವಿಕೆಟ್ ಒಪ್ಪಿಸಿ ಇಂಗ್ಲೆಂಡ್ ತಂಡಕ್ಕೆ ಶರಣಾಯಿತು. ಒಟ್ಟಿನಲ್ಲಿ ಹೇಳುವುದಾದರೆ ಭಾರತದ ಬೌಲಿಂಗ್ ವಿಭಾಗದಲ್ಲಿ ಬೌಲರ್‌ಗಳು ದುಬಾರಿಯಾದರೆ, ಮತ್ತೊಂದೆಡೆ ಬ್ಯಾಟಿಂಗ್‌ನಲ್ಲೂ ಸಹ ತೀವ್ರ ಕಳಪೆ ಪ್ರದರ್ಶನ ತೋರಿದ್ದೇ ಈ ಸೋಲಿಗೆ ಪ್ರಮುಖ ಕಾರಣವಾಗಿದೆ.












Click it and Unblock the Notifications