ಬೆಂಗಳೂರಿನ ಪ್ರಮುಖ ಜಂಕ್ಷನ್ ಅಭಿವೃದ್ಧಿಗೆ ಮುಂದಾದ ಬೆಂಗಳೂರು ಆಡಳಿತ, ಇಲ್ಲಿದೆ ಮಾಹಿತಿ

ಬೆಂಗಳೂರಿನ ಪ್ರಮುಖ ಜಂಕ್ಷನ್ ಅಭಿವೃದ್ಧಿಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪ್ರಮುಖ ಪಾಲಿಕೆಯೊಂದು ಮುಂದಾಗಿದೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಬನಶಂಕರಿ ಜಂಕ್ಷನ್ ಅಭಿವೃದ್ಧಿ ಕುರಿತಂತೆ ಜುಲೈ 8ರ ಬುಧವಾರ ಪಾಲಿಕೆ ಆಯುಕ್ತರಾದ ಕೆ.ಎನ್ ರಮೇಶ್ ಅವರು ವಿವಿಧ ಇಲಾಖೆಗಳ ಅಧಿಕಾರಿಗಳೊಡನೆ ಜಯನಗರದ ಪಾಲಿಕೆ ಸಭಾಂಗಣದಲ್ಲಿ ಸಭೆ ನಡೆಸಿದರು.

ಪಾದಚಾರಿಗಳ ಸುರಕ್ಷತೆಗಾಗಿ ಪಾಲಿಕೆ ವತಿಯಿಂದ ಪಾದಚಾರಿ ಸ್ಕೈ ವಾಕ್ ಕಾಮಗಾರಿಯನ್ನು ಉದ್ದೇಶಿಸಲಾಗಿದ್ದು ಸದರಿ ಕಾಮಗಾರಿಗಾಗಿ ಭೂಮಿ ಪೂಜೆ ಮಾಡಲಾಗಿದೆ. ಪ್ರಸ್ತುತ ಬಿಸ್ಮೈಲ್ ವತಿಯಿಂದ ಬನಶಂಕರಿ ಜಂಕ್ಷನ್ ನಲ್ಲಿ ಉಂಟಾಗುತ್ತಿರುವ ಸಂಚಾರದಟ್ಟಣೆಯನ್ನು ತಗ್ಗಿಸುವ ಹಿತದೃಷ್ಟಿಯಿಂದ ಫ್ಲೈ ಓವರ್ ಹಾಗೂ ಅಂಡರ್ ಪಾಸ್ ನಿರ್ಮಾಣ ಕಾಮಗಾರಿಯನ್ನು ನಿರ್ಮಿಸಲು ಸಹ ಉದ್ದೇಶಿಸಲಾಗಿರುವುದರಿಂದ ಹಾಲಿ ಸ್ಕೈವಾಕ್ ಕಾಮಗಾರಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿರುತ್ತದೆ. ಆದುದರಿಂದ ಈ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಇರುವಂತಹ ಸಾಧಕ ಬಾಧಕಗಳ ಕುರಿತಂತೆ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿಸಿದ್ದಾರೆ.

Bengaluru

Bengaluru: ಪಾದಚಾರಿ ಸ್ನೇಹಿ ಸ್ಕೈ ವಾಕ್ ನಿರ್ಮಾಣ ಸೂಕ್ತ

ಸಲಹೆಗಾರರರಾದ ವೆಂಕಟರಮಣ ಅಸೋಸಿಯೇಟ್ಸ್‌ ಸಂಸ್ಥೆಯ ವಾಸ್ತುಶಿಲ್ಪಿ ನರೇಶ್ ನರಸಿಂಹನ್ ಅವರು ಮಾತನಾಡಿ ಬನಶಂಕರಿ ಜಂಕ್ಷನ್‌ನಲ್ಲಿ ಪ್ರತಿನಿತ್ಯ ಸಂಚಾರ ಮಾಡುವ ಪಾದಚಾರಿಗಳು ಹಾಗೂ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡುವಂತಹ ಭಕ್ತಾದಿಗಳ ಸಂಚಾರ ಹೆಚ್ಚಾಗಿಇರುವುದರಿಂದ ಈ ಜಂಕ್ಷನ್‌ನಲ್ಲಿ ಪಾದಚಾರಿಗಳ ಸುರಕ್ಷತೆಗಾಗಿ ಸುಸಜ್ಜಿತ ಸ್ಕೈವಾಕ್ ಅವಶ್ಯಕತೆ ಇರುತ್ತದೆ. ಪ್ರತ್ಯೇಕ ಬಸ್ ಲೇನ್ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದರಿಂದ ಈ ಜಂಕ್ಷನ್ ಸಂಚಾರ ದಟ್ಟಣೆ ಕಡಿಮೆಗೊಳಿಸಬಹುದೆಂದು ಅಭಿಪ್ರಾಯಪಟ್ಟರು.

ಸಲಹೆಗಾರರು ಮತ್ತು ಪಾಲಿಕೆ ಮುಖ್ಯ ಎಂಜಿನಿಯರರು ಮಾತನಾಡಿ ಪಾಲಿಕೆ ಮತ್ತು ಬಿಎಂಆರ್‌ಸಿಎಲ್ ಪ್ರಸ್ತುತ ನಡೆಸಿರುವ ಅಧ್ಯಯನಗಳನ್ವಯ ಪಾದಚಾರಿಗಳ ಸುರಕ್ಷತೆಗಾಗಿ ಈ ಜಂಕ್ಷನ್‌ಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳ ತುದಿಗಳನ್ನು ಜೋಡಿಸುವ ಒಂದು ಸ್ಕೈವಾಕ್ ನಿರ್ಮಿಸುವುದು ಅತ್ಯಗತ್ಯವಾಗಿದೆ ಹಾಗೂ ಇದನ್ನು ಮತ್ತಷ್ಟು ಸುಂದರ ಮತ್ತು ಪಾದಚಾರಿ ಸ್ನೇಹಿಯನ್ನಾಗಿ ಮಾಡುವುದು ಬಹಳ ಮುಖ್ಯವಾಗಿದೆ. ಇದು ಪಾದಚಾರಿಗಳಿಗೆ ಸುರಕ್ಷಿತವಾದ ನಡಿಗೆಯ ಹಾದಿಗಳನ್ನು ಕಲ್ಪಿಸುವುದು ಪಾದಚಾರಿಗಳಿಗೆ ಮೊದಲ ಆದ್ಯತೆ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶಗಳಿಗೂ ಅನುಗುಣವಾಗಿದೆ ಎಂದು ತಿಳಿಸಿದ್ದಾರೆ.

ಸ್ಕೈ ವಾಕ್ ನಿರ್ಮಿಸಿದರೂ ಗ್ರೇಡ್ ಸೆಪರೇಟರ್ ನಿರ್ಮಾಣಕ್ಕೆ ಅವಕಾಶವಿರಲಿ

ಬಿಸ್ಮೈಲ್ ನ ಕಾರ್ಯಕಾರಿ ನಿರ್ದೇಶಕರಾದ ಪ್ರಹ್ಲಾದ್ ಅವರು ಮಾತನಾಡಿ ತಾವು ಆ ಜಂಕ್ಷನ್‌ನಲ್ಲಿ ಸ್ಕೈವಾಕ್ ನಿರ್ಮಿಸುವುದರ ವಿರುದ್ಧವಾಗಿಲ್ಲ ಎಂದು ಪ್ರಹ್ಲಾದ್ ಸ್ಪಷ್ಟಪಡಿಸಿ, ಭವಿಷ್ಯದ ದೃಷ್ಟಿಯಿಂದ ಸ್ಕೈವಾಕ್ ಜೊತೆಗೆ ಆ ಜಂಕ್ಷನ್‌ನಲ್ಲಿ 'ಗ್ರೇಡ್ ಸಪರೇಟರ್' (ಫ್ಲೈಓವರ್ ಅಥವಾ ಅಂಡರ್‌ಪಾಸ್) ನಿರ್ಮಿಸುವ ಸಾಧ್ಯತೆಯನ್ನೂ ಪರಿಶೀಲಿಸಬೇಕು ಎಂದು ಅವರು ಪುನರುಚ್ಚರಿಸಿದರು. ಸ್ಕೈವಾಕ್ ಕೂಡ ಒಂದು ಪ್ರಮುಖ ಅಂಶವಾಗಿದೆ, ಆದರೆ ಭವಿಷ್ಯದಲ್ಲಿ ಆ ಜಂಕ್ಷನ್‌ನಲ್ಲಿ ಗ್ರೇಡ್ ಸಪರೇಟರ್ ನಿರ್ಮಿಸಲು ಅದು ಒಂದು ಅಡ್ಡಿಯಾಗಬಾರದು; ಏಕೆಂದರೆ ವಿಪರೀತ ವಾಹನ ಸಂಚಾರದಿಂದಾಗಿ ಆ ಜಂಕ್ಷನ್ ಈಗಾಗಲೇ ಭಾರಿ ದಟ್ಟಣೆಯಿಂದ ಕೂಡಿದೆ" ಎಂದು ಅಭಿಪ್ರಾಯಪಟ್ಟರು.

ಈ ಎರಡು ಅಭಿಪ್ರಾಯಗಳನ್ನು ಗಂಭೀರವಾಗಿ ಆಲಿಸಿದ ಆಯುಕ್ತರು ಈ ಎರಡು ಕಾಮಗಾರಿಗಳ ಅವಶ್ಯಕತೆ ಹಾಗೂ ಖರ್ಚು ವೆಚ್ಚಗಳು, ಸಾಧಕ ಬಾದಕಗಳ ಕುರಿತಂತೆ ಸಮಗ್ರವಾಗಿ ಪರಿಶೀಲನೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ನೀಡಲಾಗುವುದೆಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+