Gold Price: ಚಿನ್ನ ಖರೀದಿದಾರರಿಗೆ ಗುಡ್ ನ್ಯೂಸ್! ನಾಲ್ಕೇ ದಿನದಲ್ಲಿ ₹2,350 ಇಳಿಕೆ, ಇಂದು ಮತ್ತೆ ಭರ್ಜರಿ ಕುಸಿತ

Gold Rate Today: ಬೆಂಗಳೂರು ಸೇರಿದಂತೆ ದೇಶದ ಚಿನ್ನಾಭರಣ ಪ್ರಿಯರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ ದಾಖಲಾಗುತ್ತಿದ್ದು, ಇಂದು ಬುಧವಾರ (ಜುಲೈ 8) ಸಹ ಭರ್ಜರಿ ಇಳಿಕೆ ಆಗಿದೆ. ಕಳೆದ ನಾಲ್ಕು ದಿನಗಳಲ್ಲಿ ನೆಗಟಿವ್ ಟ್ರೆಂಡ್‌ನಲ್ಲಿ ಬಂಗಾರದ ಮೌಲ್ಯ ಸಾಗಿದೆ. ಇನ್ನು ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಆಗದೇ ಯಥಾ ಸ್ಥಿತಿ ಮುಂದುವರಿದಿದೆ.

ಕೊಲ್ಲಿ ರಾಷ್ಟ್ರಗಳ ನಡುವಿನ ಯುದ್ಧ ನಿಲ್ಲುವಂತೆ ಕಾಣುತ್ತಿಲ್ಲ. ಇಂಧನ ಬೆಲೆ ಏರಿಕೆ, ಡಾಲರ್ ಮತ್ತು ರೂಪಾಯಿ ಮೌಲ್ಯದ ಬದಲಾವಣೆ, ವಿದೇಶಿ ಬ್ಯಾಂಕ್‌ಗಳ ಬಡ್ಡಿ ದರ ಏರಿಕೆ ಸೇರಿದಂತೆ ಜಾಗತಿಕ ಅನಿಶ್ಚಿತತೆ ಕಾರಣದಿಂದಾಗಿ ಚಿನ್ನದ ಬೆಲೆಯು ದಾಖಲೆ ಮಟ್ಟದಲ್ಲಿ ಇಳಿಕೆ ಕಾಣುತ್ತಿದೆ. ಆರ್ಥಿಕ ತಜ್ಞರ ಪ್ರಕಾರ, ಮುಂದಿನ ಮೂರು ತಿಂಗಳಲ್ಲಿ (ಅಕ್ಟೋಬರ್) ಯುಎಸ್, ಜಪಾನ್, ಇಂಗ್ಲೆಂಡ್ ರಿಸರ್ವ್ ಬ್ಯಾಂಕ್‌ಗಳು ಬಡ್ಡಿ ದರ ಹೆಚ್ಚಿಸುವ ಸಾಧ್ಯತೆ ಇದೆ. ಆಗಲೂ ಬಂಗಾರ-ಬೆಳ್ಳಿ ಬೆಲೆಗಳಲ್ಲಿ ಭಾರೀ ಬದಲಾವಣೆ ಆಗಲಿದೆ ಎಂದು ಊಹಿಸಲಾಗಿದೆ.

Gold Rate Today

ಒಂದೇ ದಿನಕ್ಕೆ ಚಿನ್ನದ ಬೆಲೆ ಭರ್ಜರಿ ಇಳಿಕೆ

22 ಕ್ಯಾರಟ್ ಮತ್ತು 24ಕ್ಯಾರಟ್ ಚಿನ್ನದ ಬೆಲೆಯು ಭಾರತೀಯ ಮಾರುಕಟ್ಟೆಗಳಲ್ಲಿ ಜುಲೈ 4ರಿಂದ ನಿಂತರವಾಗಿ ಕುಸಿಯುತ್ತಿದೆ. ಇಂದು ಬುಧವಾರ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯು 70 ರೂಪಾಯಿಯಂತೆ 10 ಗ್ರಾಂಗೆ 700 ರೂಪಾಯಿ ಕಡಿಮೆಯಾಗಿದೆ. ಈ ಮೂಲಕ ಅದರ ಒಟ್ಟು ದರ 1,32,450 ರೂಪಾಯಿ ತಲುಪಿದೆ.

Gold Price on July 7th: ಇಂದು ಚಿನ್ನದ ಬೆಲೆಯಲ್ಲಿ ಭರ್ಜರಿ ಕುಸಿತ, ಬೆಂಗಳೂರು ಸೇರಿ ವಿವಿಧೆಡೆ ಎಷ್ಟಿದೆ ದರ?
Gold Price on July 7th: ಇಂದು ಚಿನ್ನದ ಬೆಲೆಯಲ್ಲಿ ಭರ್ಜರಿ ಕುಸಿತ, ಬೆಂಗಳೂರು ಸೇರಿ ವಿವಿಧೆಡೆ ಎಷ್ಟಿದೆ ದರ?

ಇನ್ನೂ 24 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆಯು 77 ರೂಪಾಯಿಯಂತೆ 10 ಗ್ರಾಂ ಚಿನ್ನಕ್ಕೆ ಬರೋಬ್ಬರಿ 770 ರೂಪಾಯಿ ಇಳಿಕೆ ಆಗಿದೆ. ಈ ಮೂಲಕ ಅದರ ಒಟ್ಟು ದರ 1,44,490 ರೂಪಾಯಿ ಮುಟ್ಟಿದೆ.

ಅದೇ ರೀತಿ 18 ಕ್ಯಾರಟ್ ಚಿನ್ನದ ಒಂದು ಗ್ರಾಂಗೆ 57 ರೂ, 10ಗ್ರಾಂಗೆ 570 ರೂಪಾಯಿ ಕುಸಿಯುವ ಮೂಲಕ ಒಟ್ಟು ಬೆಲೆ 1,08,370 ರೂಪಾಯಿ ತಲುಪಿದೆ ಎಂದು ಮಾರುಕಟ್ಟೆ ಮೂಲಗಳು ಮಾಹಿತಿ ನೀಡಿವೆ.

ನಾಲ್ಕೇ ದಿನಕ್ಕೆ 2350 ರೂಪಾಯಿ ಕುಸಿತ!

ಚಿನ್ನಾಭರಣಕ್ಕೆ ಬಳಕೆ ಆಗುವ 22 ಕ್ಯಾರಟ್ ಚಿನ್ನದ ಹತ್ತು ಗ್ರಾಂ ಕಳೆದ ನಾಲ್ಕು ದಿನಗಳಿಂದ ಬರೋಬ್ಬರಿ 2350 ರೂಪಾಯಿ ಇಳಿಕೆ ಆದಂತಾಗಿದೆ. ದರ ಇಳಿಕೆ ಕಾದು ಚಿನ್ನ ಖರೀದಿಸಲು ಕಾಯುತ್ತಿದ್ದ ಗ್ರಾಹಕರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಈ ವಾರಾಂತ್ಯದವರೆಗೂ ಚಿನ್ನದ ದರ ಇಳಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಬೆಳ್ಳಿ 1ಕೆಜಿ ದರದಲ್ಲಿ ಯಥಾ ಸ್ಥಿತಿ

ಕೈಗಾರಿಕೆ ಹಾಗೂ ಚಿನ್ನಾಭರಣ ತಯಾರಿಕಗೆ ಹೆಚ್ಚು ಬಳಕೆ ಆಗುವ ಬಿಳಿ ಲೋಹ ಬೆಳ್ಳಿ ದರವು ಇಂದು ಯಥಾಸ್ಥಿತಿಯಲ್ಲಿದೆ. ಕಳೆದ ಐದು ದಿನಗಳಲ್ಲಿ ಒಮ್ಮೆ ಮಾತ್ರವೇ 1 ಕೆಜಿ ಚಿನ್ನಕ್ಕೆ 5000 ರೂಪಾಯಿ ಇಳಿಕೆ ಆಗಿದ್ದು ಬಿಟ್ಟರೆ ಮಂಗಳವಾರದಿಂದ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಇಂದು ಒಂದು ಕೆಜಿ ಬೆಳ್ಳಿಗೆ 2,45,000 ರೂಪಾಯಿ ಇದೆ. ಇದರ ಬೆಲೆ ಇಳಿಕೆ ಆಗುವುದು ಅನುಮಾನವಾಗಿದ್ದು, ಈ ವಾರಾಂತ್ಯಕ್ಕೆ ಕೊಂಚ ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.

ಇಂದಿನ 22k ಚಿನ್ನದ (1ಗ್ರಾಂ) ನಗರವಾರು ದರ

ಬೆಂಗಳೂರು: 13,245 ರೂಪಾಯಿ

ಚೆನ್ನೈ : 13,330 ರೂಪಾಯಿ

ಮುಂಬೈ : 13,245 ರೂಪಾಯಿ

ದೆಹಲಿ: 13,260 ರೂಪಾಯಿ

ಕೊಲ್ಕತ್ತಾ : 13,245 ರೂಪಾಯಿ

ಪುಣೆ: 13,245 ರೂಪಾಯಿ

ವಡೋದರಾ: 13,245 ರೂಪಾಯಿ

ಹೈದರಾಬಾದ್: 13,245 ರೂಪಾಯಿ

ಕೇರಳ: 13,245 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+