ಜುಲೈ 27 ಬಳಿಕ ಈ 6 ರಾಶಿಯವರಿಗೆ ಶುಭಕಾಲ! ಹಣದ ಮಳೆ, ವೃತ್ತಿಜೀವನದಲ್ಲಿ ಭರ್ಜರಿ ಯಶಸ್ಸು
ವೇದ ಜ್ಯೋತಿಷ್ಯದಲ್ಲಿ ಶನಿಯನ್ನು ಕರ್ಮ, ಶಿಸ್ತು ಹಾಗೂ ನ್ಯಾಯದ ಗ್ರಹವೆಂದು ಹೇಳಲಾಗುತ್ತದೆ. ಶನಿಯ ರಾಶಿಯ ಬದಲಾವಣೆ ಅಥವಾ ಚಲನೆಯಲ್ಲಿ ಆಗುವ ಬದಲಾವಣೆಗಳು ಹಲವು ರಾಶಿಗಳ ಜೀವನದ ಮೇಲೆ ಪರಿಣಾಮ ಬೀರುತ್ತವೆ ಎಂದು ನಂಬಲಾಗಿದೆ.
ಜುಲೈ 27ರಂದು ಶನಿಯು ಮೀನ ರಾಶಿಯಲ್ಲಿ ತನ್ನ ವಕ್ರಗತಿ (Retrograde) ಆರಂಭಿಸಲಿದ್ದಾನೆ. ಜ್ಯೋತಿಷ್ಯದ ಪ್ರಕಾರ ಶನಿಯ ವಕ್ರಗತಿ ಎಲ್ಲರಿಗೂ ಒಂದೇ ರೀತಿಯ ಫಲ ನೀಡುವುದಿಲ್ಲ. ಕೆಲವು ರಾಶಿಯವರಿಗೆ ಇದು ಉತ್ತಮ ಅವಕಾಶ, ಆರ್ಥಿಕ ಲಾಭ ಮತ್ತು ವೃತ್ತಿಜೀವನದಲ್ಲಿ ಪ್ರಗತಿಯನ್ನು ತಂದುಕೊಡಬಹುದು ಎಂದು ವಾಸ್ತು ತಜ್ಞರು ಹೇಳುತ್ತಾರೆ.

ಈ ಬಾರಿ ವಿಶೇಷವಾಗಿ ಈ ಆರು ರಾಶಿಯವರಿಗೆ ಅನುಕೂಲಕರ ಫಲಗಳು ಸಿಗುವ ಸಾಧ್ಯತೆ ಇದೆ.
ವೃಷಭ ರಾಶಿ ಫಲ
ವೃಷಭ ರಾಶಿಯವರಿಗೆ ಉದ್ಯೋಗ ಮತ್ತು ಹಣಕಾಸಿನ ವಿಷಯಗಳಲ್ಲಿ ಉತ್ತಮ ಬೆಳವಣಿಗೆ ಕಂಡುಬರುವ ಸಾಧ್ಯತೆ ಇರುತ್ತದೆ. ಸ್ಥಗಿತಗೊಂಡಿದ್ದ ಕೆಲಸಗಳು ಮತ್ತೆ ಪ್ರಾರಂಭವಾಗುವ ಸಾಧ್ಯತೆ ಇದೆ. ಸಂಬಳ ಹೆಚ್ಚಳ ಅಥವಾ ಪದೋನ್ನತಿ ದೊರೆಯಬಹುದು. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುವ ಸಾಧ್ಯತೆಯಿದ್ದು, ಕುಟುಂಬದಲ್ಲೂ ಸಂತೋಷದ ವಾತಾವರಣ ಇರಲಿದೆ.
ಮಿಥುನ ರಾಶಿ ಫಲ
ಮಿಥುನ ರಾಶಿಯವರಿಗೆ ಅದೃಷ್ಟದ ಬೆಂಬಲ ಸಿಗಬಹುದು. ವಿದೇಶ ಪ್ರಯಾಣ, ಉನ್ನತ ಶಿಕ್ಷಣ ಹಾಗೂ ಸರ್ಕಾರಿ ಕೆಲಸಗಳಲ್ಲಿ ಅನುಕೂಲಕರ ಪಲಿತಾಂಶ ದೊರೆಯುವ ಸಾಧ್ಯತೆ ಇದೆ. ವ್ಯಾಪಾರ-ವ್ಯವಹಾರದಲ್ಲಿ ಹೊಸ ಅವಕಾಶಗಳು ಸಿಗಬಹುದು. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿ ಹೊಸ ಯೋಜನೆಗಳು ಯಶಸ್ಸಿನತ್ತ ಸಾಗಬಹುದು.
ಸಿಂಹ ರಾಶಿ ಫಲ
ಸಿಂಹ ರಾಶಿಯ ಜಾತಕದವರಿಗೆ ಮುಂಬರುವ ದಿನಗಳಲ್ಲಿ ಆರ್ಥಿಕ ಲಾಭದ ಸಾಧ್ಯತೆ ಹೆಚ್ಚಾಗಬಹುದು. ವ್ಯವಹಾರ ಮಾಡುವವರಿಗೆ ಉತ್ತಮ ಆದಾಯ ದೊರೆಯಬಹುದು. ಉದ್ಯೋಗಸ್ಥರಿಗೆ ಕಚೇರಿಯಲ್ಲಿ ಗೌರವ ಮತ್ತು ಜವಾಬ್ದಾರಿ ಹೆಚ್ಚಾಗಬಹುದು. ಸಾಲದ ಹೊರೆ ಕಡಿಮೆಯಾಗುವ ಜೊತೆಗೆ ಉಳಿತಾಯ ಹೆಚ್ಚಿಸುವ ಅವಕಾಶಗಳು ಒದಗಿ ಬರಲಿವೆ.
ತುಲಾ ರಾಶಿ ಫಲ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಲಾ ರಾಶಿಯವರಿಗೆ ಅನಿರೀಕ್ಷಿತ ಧನಲಾಭದ ಸಾಧ್ಯತೆ ಇದೆ ಎಂದು ಜ್ಯೋತಿಷ್ಯ ಹೇಳುತ್ತದೆ. ಹೂಡಿಕೆಗಳಿಂದ ಉತ್ತಮ ಆದಾಯ ಬರಬಹುದು. ಆಸ್ತಿ ಸಂಬಂಧಿತ ವಿಚಾರಗಳಲ್ಲಿ ಅನುಕೂಲಕರ ಬೆಳವಣಿಗೆ ಆಗಬಹುದು. ಉದ್ಯೋಗದಲ್ಲಿ ಹೊಸ ಅವಕಾಶಗಳು ದೊರೆತು ದೀರ್ಘಕಾಲದ ಕನಸು ಮತ್ತು ಗುರಿಗಳನ್ನು ಸಾಧಿಸಲು ಇದು ಸಕಾಲವಾಗಿದೆ.
ಧನು ರಾಶಿ ಫಲ
ಧನು ರಾಶಿಯ ಜಾತಕದವರಿಗೆ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಹೊಸ ವ್ಯವಹಾರ ಆರಂಭಿಸಲು ಇದು ಅನುಕೂಲಕರ ಸಮಯವಾಗಬಹುದು. ದೀರ್ಘಾವಧಿಯ ಹೂಡಿಕೆಗಳಿಂದ ಉತ್ತಮ ಲಾಭ ದೊರೆಯುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಬೆಂಬಲ ಸಿಗಬಹುದು.
ಮಕರ ರಾಶಿ ಫಲ
ಮಕರ ರಾಶಿಯ ಜಾತಕದವರಿಗೆ ಈ ಹಿಂದೆ ಮಾಡಿದ ಪರಿಶ್ರಮಕ್ಕೆ ಈಗ ಫಲ ಸಿಗುವ ಸಮಯ ಎಂದು ಹೇಳಲಾಗುತ್ತದೆ. ಆರ್ಥಿಕ ಸಮಸ್ಯೆಗಳು ಕಡಿಮೆಯಾಗಬಹುದು. ಆದಾಯ ಹೆಚ್ಚಾಗುವ ಜೊತೆಗೆ ಉದ್ಯೋಗದಲ್ಲಿ ಸ್ಥಿರತೆ ಮತ್ತು ಗೌರವ ದೊರೆಯಬಹುದು. ಕುಟುಂಬದ ಬೆಂಬಲ ಹಾಗೂ ಮಾನಸಿಕ ನೆಮ್ಮದಿ ಕೂಡ ಹೆಚ್ಚಾಗುವ ಸಾಧ್ಯತೆ ಇದೆ.














Click it and Unblock the Notifications