Ram Mandir Rath Yatra: 48 ರಾಜ್ಯಗಳು, 8,000 ಮೈಲುಗಳು, 851 ದೇವಾಲಯಗಳು: ರಾಮಮಂದಿರ ರಥ ಯಾತ್ರೆ ಚಿಕಾಗೋದಿಂದ ಆರಂಭ
ರಾಮಮಂದಿರ ರಥಯಾತ್ರೆಯು ಸೋಮವಾರದಿಂದ (ಮಾರ್ಚ್ 25) ಆರಂಭವಾಗಲಿದೆ. ಈ ಬೃಹತ್ ಯಾತ್ರೆ ಚಿಕಾಗೋದಿಂದ ಪ್ರಾರಂಭವಾಗಿ ಮುಂದಿನ 30 ದಿನಗಳ ಕಾಲ 48 ರಾಜ್ಯಗಳ ಮೂಲಕ 851 ದೇವಾಲಯಗಳು ಸೇರಿದಂತೆ ಒಟ್ಟು 8,000 ಮೈಲುಗಳು ಸಾಗಲಿದೆ.
ಈ ಯಾತ್ರೆ ವೇಳೆ ಟೊಯೊಟಾ ಸಿಯೆನ್ನಾ ವ್ಯಾನ್ ಮೇಲೆ ನಿರ್ಮಿಸಲಾದ ರಥದಲ್ಲಿ ಅಯೋಧ್ಯೆಯ ರಾಮಮಂದಿರದಿಂದ ವಿಶೇಷ ಪ್ರಸಾದ ಮತ್ತು ಪ್ರಾಣ ಪ್ರತಿಷ್ಠಾ ಪೂಜಿತ ಅಕ್ಷತೆಯ ಕಲಶದೊಂದಿಗೆ ಶ್ರೀ ರಾಮ, ಸೀತಾ, ಲಕ್ಷ್ಮಣ ಮತ್ತು ಹನುಮಾನ್ ಪ್ರತಿಮೆಗಳನ್ನು ಒಯ್ಯಲಾಗುತ್ತದೆ. ರಥಯಾತ್ರೆಯನ್ನು ವಿಶ್ವ ಹಿಂದೂ ಪರಿಷತ್ ಆಫ್ ಅಮೇರಿಕಾ (VHPA) ಆಯೋಜಿಸುತ್ತಿದೆ.

"ರಾಮ ಮಂದಿರ ಉದ್ಘಾಟನೆಯು ಪ್ರಪಂಚದಾದ್ಯಂತದ 1.5 ಶತಕೋಟಿ ಹಿಂದೂಗಳ ಹೃದಯವನ್ನು ಗೆದ್ದಿದೆ. ಇದು ಹೊಸ ಶಕ್ತಿ ಮತ್ತು ನಂಬಿಕೆಗೆ ಕಾರಣವಾಗಿದೆ. ರಾಷ್ಟ್ರವ್ಯಾಪಿ ರಥಯಾತ್ರೆ ಮಾರ್ಚ್ 25 ರಂದು USA ಯ ಚಿಕಾಗೋದಿಂದ ಪ್ರಾರಂಭವಾಗಲಿದೆ ಮತ್ತು 8000 ಮೈಲುಗಳಷ್ಟು ಪ್ರಯಾಣಿಸಲಿದೆ. ಇದು ಯುಎಸ್‌ಎಯಲ್ಲಿ 851 ದೇವಾಲಯಗಳು ಮತ್ತು ಕೆನಡಾದ ಸುಮಾರು 150 ದೇವಾಲಯಗಳಿಗೆ ಭೇಟಿ ನೀಡಲಿದೆ'' ಎಂದು ಪ್ರಧಾನ ಕಾರ್ಯದರ್ಶಿ ಅಮಿತಾಭ್ ಮಿತ್ತಲ್ ತಿಳಿಸಿದರು. ರಥ ಯಾತ್ರೆಯ ಕೆನಡಾ ವಿಭಾಗವನ್ನು ಕೆನಡಾದ ವಿಶ್ವ ಹಿಂದೂ ಪರಿಷತ್ ಆಯೋಜಿಸಿದೆ.
"ಈ ರಥಯಾತ್ರೆಯ ಉದ್ದೇಶವು ಹಿಂದೂ ಧರ್ಮದ ಜಾಗೃತಿ, ಶಿಕ್ಷಣ ಮತ್ತು ಸಬಲೀಕರಣವಾಗಿದೆ" ಎಂದು ಯುನೈಟೆಡ್ ಸ್ಟೇಟ್ಸ್‌ನ ಎಲ್ಲಾ ದೇವಾಲಯಗಳ ಉನ್ನತ ಸಂಸ್ಥೆಯಾಗಿರುವ ಹಿಂದೂ ಮಂದಿರ ಎಂಪವರ್‌ಮೆಂಟ್ ಕೌನ್ಸಿಲ್ (HMEC) ನ ತೇಜಲ್ ಶಾ ಹೇಳಿದರು. ಯಾತ್ರೆಯು ಎಲ್ಲಾ ಹಿಂದೂಗಳಿಗೆ ಒಗ್ಗೂಡಲು ಮತ್ತು ಭಾಗವಹಿಸಲು ಅವಕಾಶವನ್ನು ಒದಗಿಸುತ್ತದೆ. ಇದು ಹಿಂದೂ ನೀತಿ ಮತ್ತು ಧರ್ಮದ ಪುನರುಜ್ಜೀವನಕ್ಕೆ ಕಾರಣವಾಗುತ್ತದೆ ಎಂದು ಅವರು ಹೇಳಿದರು.

"ನಮಗೆ ಮತ್ತು ವಿಶೇಷವಾಗಿ ನಮ್ಮ ಭವಿಷ್ಯದ ಪೀಳಿಗೆಗೆ ಜಾಗೃತಿ ಮೂಡಿಸಲು ಮತ್ತು ಪ್ರಪಂಚದಾದ್ಯಂತ ಹಿಂದೂ ಧರ್ಮವನ್ನು ಹರಡಲು ಅಭಿಯಾನದಲ್ಲಿ ಒಗ್ಗಟ್ಟಾಗಿ ಮತ್ತು ಬಲವಾಗಿ ಉಳಿಯುವುದು ಬಹಳ ಮುಖ್ಯ" ಎಂದು ಶಾ ಹೇಳಿದರು.
ಮಿತ್ತಲ್ ಪ್ರಕಾರ, ಈ ಯಾತ್ರೆಯನ್ನು ಯೋಜಿಸಲು ಮತ್ತು ಸಂಘಟಿಸಲು ಸಹಾಯ ಮಾಡಲು ಹಲವಾರುನ್ ಸ್ವಯಂಸೇವಕರು VHPA ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಅಮೇರಿಕಾದ 800 ಕ್ಕೂ ಹೆಚ್ಚು ದೇವಸ್ಥಾನಗಳಿಗೆ ವ್ಯಾನ್ ಅನ್ನು ಕೊಂಡೊಯ್ಯುವ ಹಿಂದೂ ಸಮುದಾಯದಿಂದ ಈ ರೀತಿಯ ಯಾತ್ರೆಯನ್ನು ಆಯೋಜಿಸಿರುವುದು ಯುಎಸ್‌ನಲ್ಲಿ ಇದೇ ಮೊದಲು.

ಯಾತ್ರೆಯು ಇಲಿನಾಯ್ಸ್‌ನ ಶುಗರ್ ಗ್ರೋವ್‌ನಲ್ಲಿ ಹನುಮಾನ್ ಜಯಂತಿಯ ಶುಭ ದಿನವಾದ ಏಪ್ರಿಲ್ 23 ರಂದು ಮುಕ್ತಾಯಗೊಳ್ಳಲಿದೆ. ರಥಯಾತ್ರೆಯು ಎಲ್ಲಾ ಪ್ರಮುಖ ದೇವಾಲಯಗಳನ್ನು ಮಾತ್ರವಲ್ಲದೆ ಚಿಕ್ಕ ದೇವಾಲಯಗಳಿಗೂ ಸಹ ಭೇಟಿ ನೀಡಲಿದೆ. "ನಾವು USA ನಲ್ಲಿರುವ ಪ್ರತಿಯೊಂದು ಮಂದಿರಕ್ಕೂ ಭೇಟಿ ನೀಡಲಿದ್ದೇವೆ" ಎಂದು ಶಾ ಹೇಳಿದರು. ಜನವರಿಯಲ್ಲಿ ಯುಎಸ್‌ನಲ್ಲಿ ನಡೆದ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ದೇವಾಲಯಗಳಿಗೆ ಸಹ ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
"ಹಿಮದೂಗಳ ಭಾಗವಹಿಸುವಿಕೆಯನ್ನು ನಾವು ಪ್ರಶಂಸಿಸುತ್ತೇವೆ ಮತ್ತು ಇದು ಅವರಿಗೆ ಒಂದು ರೀತಿಯ ಕೃತಜ್ಞತೆಯಾಗಿದೆ. ಭಾರತದಿಂದ ನಾವು ಪಡೆದ ರಥದಲ್ಲಿ ನಾವು ಸಾಗಿಸಲಿರುವ ರಾಮ್ ಲಾಲ್ಲಾ ಅವರ ಪ್ರತಿಕೃತಿಯ ಆಶೀರ್ವಾದವನ್ನು ಯುಎಸ್ ಜನರು ಪಡೆಯಲಿದ್ದಾರೆ. ವ್ಯಾನ್‌ನಲ್ಲಿ ಅಕ್ಷತೆ ಮತ್ತು ಕಲಶವಿದೆ, ಇದು ನಮ್ಮ ಸಂಸ್ಕೃತಿಯಲ್ಲಿ ಸಾಕಷ್ಟು ಮಹತ್ವವನ್ನು ಹೊಂದಿದೆ'' ಎಂದು ತೇಜಲ್ ಶಾ ಹೇಳಿದರು.












Click it and Unblock the Notifications