ಡಿವೋರ್ಸ್ ಕೇಳಿದ ಹೆಂಡತಿಗೆ ನನ್ನ ‘ಕಿಡ್ನಿ’ ವಾಪಸ್ ಕೊಡು ಎಂದ ಗಂಡ!
ಗಂಡ & ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನೋ ಮಾತಿದೆ, ಆದರೆ ಈಗಿನ ಕಾಲ ಹಂಗೆಲ್ಲಾ ಇಲ್ಲ. ಗಂಡ & ಹೆಂಡತಿ ಜಗಳ ಡಿವೋರ್ಸ್ ತನಕ ಎನ್ನುವಂತೆ ಆಗಿದೆ. ಯಾಕಂದ್ರೆ ಈಗಿನ ತಲೆಮಾರಿನ ಪತಿ & ಪತ್ನಿ ನಡುವೆ ಜಗಳ ಶುರುವಾಯ್ತು ಅಂದ್ರೆ, ಅದು ಕೊನೆಗೂ ವಿಚ್ಛೇದನ ಅಂದ್ರೆ ಡಿವೋರ್ಸ್ ಹಂತಕ್ಕೆ ಬಂದೇ ಬಿಡುತ್ತದೆ. ಹೀಗೆ ಇಲ್ಲೊಂದು ಜೋಡಿಯು ಕೂಡ ಒಟ್ಟಿಗೆ ಬದುಕುವುದು ಬೇಡ ಅಂತಾ ಹೇಳಿದ್ದು, ಕೊನೆಗೆ ಗಂಡ ಈಗ ತನ್ನ ಹೆಂಡತಿ ಕಿಡ್ನಿ ಬೇಕು ಅಂತಾ ಡಿಮ್ಯಾಂಡ್ ಇಟ್ಟಿದ್ದಾನಂತೆ!
ಹೌದು, ಡಿವೋರ್ಸ್ ಆಗುವ ಸಮಯದಲ್ಲೇ ಗಂಡ & ಹೆಂಡತಿ ಪರಸ್ಪರ ಆಸ್ತಿ ಹಂಚಿಕೆಯ ವಿಚಾರವಾಗಿ ಬೀದಿ ಜಗಳ ಮಾಡಿಕೊಳ್ಳೋದು ಗ್ಯಾರಂಟಿ. ಹಾವು & ಮುಂಗುಸಿ ರೀತಿ ಹೀಗೆ ಆಸ್ತಿಗಾಗಿ ಸಪ್ತಪದಿ ತುಳಿದ ಗಂಡ & ಹೆಂಡತಿ ಜಗಳ ಆಡುತ್ತಾರೆ. ಅದೇ ರೀತಿ ಸಪ್ತಪದಿಯನ್ನ ತುಳಿಯದ ಅಮೆರಿಕದಲ್ಲಿ ಕೂಡ ಇದೇ ರೀತಿ ಪತಿ & ಪತ್ನಿ ಆಸ್ತಿಗಾಗಿ ಜಗಳ ಆಡುತ್ತಾರೆ ಅನ್ನಿ. ಆದರೆ ಇದೀಗ ಅಮೆರಿಕದಲ್ಲಿ ವಿಚಿತ್ರವಾದ ಕೇಸ್ ಒಂದು ಕೇಳಿಬಂದಿದೆ. ಅದು ಏನೆಂದರೆ, ಡಿವೋರ್ಸ್ ಕೇಳಿದ ಹೆಂಡತಿ ಬಳಿ ಕಿಡ್ನಿ ವಾಪಸ್ ಕೇಳಿದ್ದಾನಂತೆ ಗಂಡ. ಯಾಕೆ? ಏನು? ಎತ್ತ? ಅನ್ನೋದನ್ನ ತಿಳಿಯಲು ಮುಂದೆ ಓದಿ.

ಇದು ಒಂದು ಕಿಡ್ನಿಯ ಕಥೆ!
ಅಂದಹಾಗೆ ವಿಚ್ಛೇದನ ವೇಳೆ 'ನನ್ನ ಕಿಡ್ನಿಯನ್ನ ನಂಗೆ ವಾಪಸ್ ಕೊಡು' ಎಂದು ಗಂಡನೊಬ್ಬ ಹೆಂಡತಿಗೆ ಕೋರ್ಟ್‌ನಲ್ಲೇ ಕೇಳಿದ್ದಾನೆ. ಈ ಮೂಲಕ ತನ್ನಿಂದ ದೂರ ಆಗುತ್ತಿರುವ ಹೆಂಡತಿಗೆ, ಶಾಕ್ ಕೊಟ್ಟಿದ್ದಾನೆ ಪತಿರಾಯ. ಇಲ್ಲಿ ಆಗಿದ್ದು ಏನೆಂದರೆ, ತನ್ನ ಹೆಂಡತಿಯ 2 ಕಿಡ್ನಿಯೂ ವಿಫಲವಾದ ಕಾರಣ ಗಂಡನೇ ಆಕೆಯ ಸಹಾಯಕ್ಕೆ ಬಂದಿದ್ದ. 2001ರಲ್ಲಿ ಪತಿ ತನ್ನ ಒಂದು ಕಿಡ್ನಿ ದಾನ ಮಾಡಿ ತನ್ನ ಹೆಂಡತಿ ಜೀವ ಉಳಿಸಿದ್ದ. ಆದ್ರೆ ಇಬರಿಬ್ಬರ ನಡುವೆ ಭಿನ್ನಾಭಿಪ್ರಾಯ ಶುರುವಾದ ಕಾರಣ, ವಿಚ್ಛೇದನ ಪಡೆಯಲು ಹೆಂಡತಿ ಕೋರ್ಟ್ ಮೆಟ್ಟಿಲೇರಿದ್ದಾಳೆ. ಇದರಿಂದ, ಕೋಪಗೊಂಡ ಗಂಡ ಕಿಡ್ನಿ ವಾಪಸ್ ಕೇಳಿದ್ದಾನಂತೆ. ಇಲ್ಲವಾದರೆ ಕೋಟಿ ಕೋಟಿ ಹಣವನ್ನ ಕೊಡು ಅಂತಿದ್ದಾನೆ. ಇದು ನಡೆದಿದ್ದು ಯಾವ ದೇಶದಲ್ಲಿ ಗೊತ್ತೆ? ಬನ್ನಿ ತಿಳಿಯೋಣ.
ತನ್ನದೇ ಒಂದು ಕಿಡ್ನಿ ಕೊಟ್ಟಿದ್ದ ಗಂಡ
ವಿದೇಶಿ ಮಾಧ್ಯಮಗಳ ವರದಿ ಪ್ರಕಾರ, 1990ರಲ್ಲಿ ರಿಚರ್ಡ್ ಬಟಿಸ್ಟಾ (ಗಂಡ) & ಡೊನ್ನೆಲ್ (ಹೆಂಡತಿ) ಮದುವೆ ಆಗಿದ್ದರು. ಇವರಿಬ್ಬರೂ ಅಮೆರಿಕ ಮೂಲದವರು. ಈ ದಂಪತಿಗೆ, 3 ಮಕ್ಕಳಿದ್ದಾರಂತೆ. ಹೀಗಿದ್ದಾಗ 2001 ರಲ್ಲಿ ಡೊನ್ನೆಲ್ ಅವರಿಗೆ ಅನಾರೋಗ್ಯ ಕಾಡಿತ್ತು. ಆಕೆಯ ಕಿಡ್ನಿ ಫೇಲ್ ಆಗಿತ್ತಂತೆ, ಹೀಗಾಗಿಯೇ ಕೊನೆಯಲ್ಲಿ ಆತನ ಗಂಡನೇ ಸಹಾಯಕ್ಕೆ ಬಂದಿದ್ದ. ಆಕೆಯ 2 ಕಿಡ್ನಿ ವಿಫಲವಾಗಿವೆ ಅಂತಾ ವೈದ್ಯರು ಘೋಷಿಸಿದ್ದರು. ಈ ವೇಳೆ, ತನ್ನ ಪತ್ನಿ ಜೀವ ಉಳಿಸಲು ಬಟಿಸ್ಟಾ ಮುಂದಾಗಿ ತನ್ನದೇ ಒಂದು ಕಿಡ್ನಿ ದಾನ ಮಾಡಿದ್ದಾನೆ.
ಹೆಂಡತಿಗೆ ಈಗ ಅನೈತಿಕ ಸಂಬಂಧ?
ಇದಾದ ಕೆಲವೇ ವರ್ಷಗಳ ಬಳಿಕ ಪತ್ನಿ ಡೊನ್ನೆಲ್ ಡಿವೋರ್ಸ್‌ನ ಪಡೆಯೋಕೆ ಕೋರ್ಟ್ ಮೊರೆ ಹೋಗಿದ್ದಾಳೆ. ಈ ಘಟನೆ ನಂತರ ರೊಚ್ಚಿಗೆದ್ದ ಗಂಡ, ನನ್ನ ಪತ್ನಿಗೆ ಅನೈತಿಕ ಸಂಬಂಧವಿದೆ ಅಂತಾ ಆರೋಪ ಮಾಡಿದ್ದಾನೆ. ಜೊತೆಗೆ ತಾನು ದಾನ ಮಾಡಿದ್ದ ಕಿಡ್ನಿಯನ್ನ ಈಗ ವಾಪಸ್ ಕೊಡು, ಇಲ್ಲ ಹಣ ವಾಪಸ್ ಕೊಡಿ ಅಂತಿದ್ದಾನೆ. ಕಿಡ್ನಿ ವಾಪಸ್ ಕೊಡದೇ ಇದ್ದರೆ ಸುಮಾರು 1.2 ಮಿಲಿಯನ್ ಪೌಂಡ್ ಅಂದ್ರೆ 12.56 ಕೋಟಿ ರೂಪಾಯಿ ಹಣ ಕೊಡು ಅಂತಾ ಇದೀಗ ಡಿಮ್ಯಾಂಡ್ ಇಟ್ಟಿದ್ದಾನಂತೆ ಗಂಡ!
ಕಿಡ್ನಿ ವಾಪಸ್ ಕೊಟ್ಟರೆ ಹೆಂಡತಿ ಇನ್ನಿಲ್ಲ!
ಇದೀಗ ವೈದ್ಯರು ಹೇಳುವ ಪ್ರಕಾರ ಕಿಡ್ನಿಯನ್ನು ವಾಪಸ್ ನೀಡಲು ಸಾಧ್ಯವಿಲ್ಲ. ಅಕಸ್ಮಾತ್ ಹೀಗೆ ಹೆಂಡತಿಯ ದೇಹದಿಂದ ಏಕೈಕ ಕಿಡ್ನಿಯನ್ನ ಹೊರಗೆ ತೆಗೆಯಲು ಮುಂದಾದರೆ, ಆ ಮಹಿಳೆಯ ಜೀವವೇ ಹೋಗುತ್ತದೆ. ಹೀಗಾಗಿ ಇಂತಹ ಸ್ಥಿತಿಯಲ್ಲಿ ಕಿಡ್ನಿ ವಾಪಸ್ ಕೊಡೋದಕ್ಕೆ ಸಾಧ್ಯವಿಲ್ಲ. ಡೊನ್ನೆಲ್ ತನ್ನ ಮೂತ್ರಪಿಂಡ ಹಿಂದಿರುಗಿಸಲು ಸಾಧ್ಯವಿಲ್ಲ ಅಂತಾನೆ ಇದೀಗ ಕೋರ್ಟ್ ತೀರ್ಪು ನೀಡಿದೆಯಂತೆ. ಹೀಗಾಗಿ ಗಂಡ ಮತ್ತೊಮ್ಮೆ ಬೇಸರದಲ್ಲೇ ಹೆಂಡತಿಯನ್ನ ಬಿಟ್ಟುಕೊಡಲು ಸಿದ್ಧನಾಗಿದ್ದಾನಂತೆ.












Click it and Unblock the Notifications