ಪಠಾಣ್ ಕೋಟ್ ದಾಳಿ : ಮೌಲಾನಾ ಮಸೂದ್‌ ಅಜರ್ ಯಾರು?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜನವರಿ 14 : ಪಂಜಾಬಿನ ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಜೈಷ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌ನನ್ನು ವಶಕ್ಕೆ ಪಡೆದಿರುವುದಾಗಿ ಹೇಳಿದೆ.

ಮೌಲಾನಾ ಮಸೂದ್‌ ಅಜರ್‌ ಮೊದಲು ಭಾರತದ ವಶದಲ್ಲಿದ್ದ. ಪತ್ರಕರ್ತನ ಸೋಗಿನಲ್ಲಿ ಭಾರತಕ್ಕೆ ಬಂದು ಸಿಕ್ಕಿಬಿದ್ದಿದ್ದ. ಕಂದಹಾರ್ ವಿಮಾನ ಅಪಹರಣವಾದಾಗ, ನೂರಾರು ಪ್ರಯಾಣಿಕರ ಜೀವವನ್ನು ಉಳಿಸಲು ಭಾರತ ಅಜರ್‌ನನ್ನು ಬಿಡುಗಡೆ ಮಾಡಿತು. [ನಿಜಕ್ಕೂ ಪಾಕ್ ಮಸೂದ್ ವಶಕ್ಕೆ ಪಡೆದಿದೆಯೇ?]

terrorism

1994ರಲ್ಲಿ ಮೊದಲ ಬಾರಿಗೆ ಅಜರ್‌ನನ್ನು ಶ್ರೀನಗರದಲ್ಲಿ ಬಂಧಿಸಲಾಗಿತ್ತು. ಪೊಲೀಸರ ಬಳಿ ತಾನು ಪತ್ರಕರ್ತನೆಂದು ಅಜರ್ ಹೇಳಿಕೊಂಡಿದ್ದ. ಗುಪ್ತಚರ ಇಲಾಖೆ ಅಜರ್ ಬಗ್ಗೆ ಮಾಹಿತಿ ನೀಡಿದ ಬಳಿಕ ಪೊಲೀಸರಿಗೂ ತಾವು ಬಂಧಿಸಿದ ವ್ಯಕ್ತಿ ಎಷ್ಟು ಮುಖ್ಯವಾದವನು ಎಂಬುದು ತಿಳಿಯಿತು. [ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]

ಹರ್ಕತ್-ಉಲ್-ಮುಜಾಹಿದ್ದೀನ್ ಸಂಘಟನೆ ಪರವಾಗಿ ಕೆಲಸ ಮಾಡಲು ಮೊದಲು ಅಜರ್ ಶ್ರೀನಗರಕ್ಕೆ ಬಂದಿದ್ದ. ಆಗ ಅಜರ್ ಯಾವುದೇ ಉಗ್ರ ಸಂಘಟನೆ ಮುಖ್ಯಸ್ಥನಾಗಿರಲಿಲ್ಲ. ಅಜರ್ ಅದ್ಭುತ ಮಾತುಗಾರ. ಆದ್ದರಿಂದ, ಜಮ್ಮು ಮತ್ತು ಕಾಶ್ಮೀರದಲ್ಲಿನ ಯುವಕರನ್ನು ಸೆಳೆಯಲು ಪಾಕ್ ಆತನನ್ನು ಕಳುಹಿಸಿತ್ತು. ಕಾಶ್ಮೀರದ ಪರವಾದ ಹೋರಾಟದ ಭಾಗವಾಗಿ ಅಜರ್ ಭಾರತಕ್ಕೆ ಬಂದಿದ್ದ. [ಪಠಾಣ್ ಕೋಟ್ ವಾಯುನೆಲೆಯ ವಿಶೇಷತೆಗಳೇನು?]

5 ವರ್ಷಗಳ ಕಾಲ ಅಜರ್ ಭಾರತದ ವಶದಲ್ಲಿದ್ದ. ಆದರೆ, ಅಜರ್‌ನನ್ನು ಬಿಡಿಸಲೇಬೇಕು ಎಂದು ನಿರ್ಧರಿಸಿದ್ದ ಆತನ ಸಹೋದರ ಮೊಹಮದ್ ರಫಲ್ ಕಂದಹಾರ್ ವಿಮಾನ ಅಪಹರಣದ ಸಂಚು ರೂಪಿಸಿದ್ದ. ವಿಮಾನ ಅಪಹರಣವಾದಾಗ ಒತ್ತಡಕ್ಕೆ ಒಳಗಾದ ಭಾರತ ಸರ್ಕಾರ ಅಜರ್‌ನನ್ನು ಬಿಡುಗಡೆ ಮಾಡಿತು.

ಬಿಡುಗಡೆಗೊಂಡ ಅಜರ್ ಪಾಕಿಸ್ತಾನಕ್ಕೆ ತೆರಳಿದ ಬಳಿಕ ಜೈಷ್-ಏ-ಮೊಹಮದ್ ಉಗ್ರ ಸಂಘಟನೆಯನ್ನು ಆರಂಭಿಸಿದೆ. 2001ರಲ್ಲಿ ಇದೇ ಸಂಘಟನೆಯ ಉಗ್ರರು ದೆಹಲಿಯಲ್ಲಿನ ಸಂಸತ್ ಭವನದ ಮೇಲೆ ದಾಳಿ ಮಾಡಿದ್ದರು.

ಇಂದು ಲಷ್ಕರ್-ಏ-ತೋಯ್ಬಾ ಸಂಘಟನೆ ಮುಖ್ಯಸ್ಥ ಹಫೀನ್ ಹೊರತು ಪಡಿಸಿದರೆ ಅಜರ್ ಅತ್ಯಂತ ಅಪಾಯಕಾರಿ ವ್ಯಕ್ತಿಯಾಗಿದ್ದಾನೆ ಎಂದು ಗುಪ್ತಚರ ಇಲಾಖೆ ಹೇಳಿದೆ. ಸದ್ಯ, ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಗೆ ಸಂಬಂಧಿಸಿದಂತೆ ಅಜರ್‌ನನ್ನು ಪಾಕ್ ವಶಕ್ಕೆ ಪಡೆದುಕೊಂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It appears as though we are back to square one where Maulana Masood Azhar is concerned. India has been told that Azhar the chief of the Jaish-e-Mohammad who masterminded the Pathankot attack has been detained. While India is ascertaining that information, we must remember that this was a man India had in its custody.
Please Wait while comments are loading...