Ramayana: ಯಶ್‌ 'ರಾವಣ'ನ ಲುಕ್ ನೋಡಲು ಇನ್ನು ಹೆಚ್ಚು ದಿನ ಕಾಯಬೇಕಿಲ್ಲ, ಗುಡ್‌ನ್ಯೂಸ್‌ ಕೊಟ್ಟ ರಾಮಾಯಣ ಚಿತ್ರತಂಡ

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಜಿದ್ದಾಜಿದ್ದಿನ ಹಾಗೂ ಬಿಗ್ ಬಜೆಟ್ ಪೌರಾಣಿಕ ಚಿತ್ರವಾಗಿ ಮೂಡಿಬರುತ್ತಿರುವ 'ರಾಮಾಯಣ: ಭಾಗ 1' (Ramayana) ಬಿಡುಗಡೆ ದಿನಾಂಕದಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಗಳಿವೆ. ಈ ಹಿಂದೆ 2026ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತೆರೆಗೆ ಬರಲಿದೆ ಎನ್ನಲಾಗಿತ್ತು. ಆದರೆ ಈ ದಿನಾಂಕ ಬದಲಾಗಲಿದೆ ಎನ್ನುವ ಚರ್ಚೆಗಳು ಜೋರಾಗಿವೆ.

ಬಾಲಿವುಡ್ ಹಂಗಾಮಾ ವರದಿ ಮಾಡಿರುವ ಪ್ರಕಾರ, ರಣವೀರ್ ಕಪೂರ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವು 2026ರ ಅಕ್ಟೋಬರ್ 30ರಂದು ಜಾಗತಿಕವಾಗಿ ತೆರೆಕಾಣುವ ಸಾಧ್ಯತೆಯಿದೆ. ಇದೀಗ ನಿಗದಿಗಿಂತ ಒಂದು ವಾರ ಮುಂಚಿತವಾಗಿಯೇ ಚಿತ್ರಮಂದಿರಗಳಿಗೆ ಬರಲಿದೆ ಎಂದು ವರದಿಯಾಗಿದೆ.

Ramayana

ಈ ನಿರ್ಧಾರಕ್ಕೆ ಕಾರಣವೂ ಇದೆ

ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಸಿನಿಮಾ ಬಿಜಿನೆಸ್ ವಿಷಯದಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಮುಂದಾಗಿದ್ದಾರೆ. ದೀಪಾವಳಿಗೂ ಒಂದು ವಾರ ಮುಂಚಿತವಾಗಿ ಚಿತ್ರವನ್ನು ರಿಲೀಸ್ ಮಾಡುವುದರ ಹಿಂದೆ ಒಂದು ಬಲವಾದ ವಾಣಿಜ್ಯ ಲೆಕ್ಕಾಚಾರವಿದೆ. ಹಬ್ಬದ ರಜೆಗಳು ಆರಂಭವಾಗುವ ಮುನ್ನವೇ ಸಿನಿಮಾ ಬಿಡುಗಡೆಯಾದರೆ, ಮೊದಲ ವಾರದಲ್ಲೇ ಚಿತ್ರದ ಬಗ್ಗೆ ಸಾರ್ವಜನಿಕರಲ್ಲಿ ಉತ್ತಮವಾದ ಅಭಿಪ್ರಾಯ ಮೂಡುತ್ತದೆ ಎನ್ನುವ ಲೆಕ್ಕಾಚಾರ ಇದೆ.

ಒಮ್ಮೆ ಪಾಸಿಟಿವ್ ಟಾಕ್ ಕ್ರಿಯೇಟ್ ಆದ ನಂತರ, ದೀಪಾವಳಿ ಹಬ್ಬದ ಸರಣಿ ರಜೆಗಳು ಆರಂಭವಾಗುತ್ತವೆ. ಇದರಿಂದಾಗಿ ಮೊದಲ ವಾರ ಗಳಿಸುವುದಕ್ಕಿಂತಲೂ ಹೆಚ್ಚಿನ ಕಲೆಕ್ಷನ್ ಅನ್ನು ಚಿತ್ರವು ತನ್ನ ಎರಡನೇ ವಾರದಲ್ಲಿ ಹಬ್ಬದ ರಜೆಗಳ ಸುವರ್ಣಾವಕಾಶವನ್ನು ಬಳಸಿಕೊಂಡು ಗಳಿಸಲಿದೆ. ಮೊದಲ ವಾರಕ್ಕಿಂತ ಎರಡನೇ ವಾರದಲ್ಲಿ ಬಾಕ್ಸ್ ಆಫೀಸ್ ಗಳಿಕೆ ಉತ್ತುಂಗಕ್ಕೇರುವಂತೆ ಮಾಡುವುದು ಚಿತ್ರತಂಡದ ಮುಖ್ಯ ಆಲೋಚನೆ ಎಂದು ಹೇಳಲಾಗುತ್ತಿದೆ.

ವೈರಲ್ ಆದ ಬಿಕಿನಿ ವಿಡಿಯೋ ನನ್ನದಲ್ಲ: ನಟಿ ರುಕ್ಮಿಣಿ ವಸಂತ್ ಸ್ಪಷ್ಟನೆ, ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ
ವೈರಲ್ ಆದ ಬಿಕಿನಿ ವಿಡಿಯೋ ನನ್ನದಲ್ಲ: ನಟಿ ರುಕ್ಮಿಣಿ ವಸಂತ್ ಸ್ಪಷ್ಟನೆ, ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ

ರಿಲೀಸ್ ಸುಳಿವು ಕೊಟ್ಟಿದ್ದ ಯಶ್

ಈ ಬಿಡುಗಡೆ ದಿನಾಂಕದ ಮುನ್ಸೂಚನೆ ಇತ್ತೀಚೆಗಷ್ಟೇ ರಾಕಿಂಗ್ ಸ್ಟಾರ್ ಯಶ್ ಅವರ ಇಂಟರ್ನ್ಯಾಷನಲ್ ಸಂದರ್ಶನವೊಂದರ ಮೂಲಕವೇ ಸಿಕ್ಕಿತ್ತು. ಚಿತ್ರದ ಬಗ್ಗೆ ಮಾತನಾಡುತ್ತಾ ಯಶ್ ಅವರು, 'ರಾಮಾಯಣ' ಚಿತ್ರವನ್ನು ನಾವು ಅಕ್ಟೋಬರ್ ಕೊನೆಯ ವಾರದಲ್ಲಿ ಬರುವ ದೀಪಾವಳಿ ಹಬ್ಬದ ಸಮಯಕ್ಕೆ ಪ್ಲಾನ್ ಮಾಡುತ್ತಿದ್ದೇವೆ ಎಂದು ಸುಳಿವು ನೀಡಿದ್ದರು. ಅಕ್ಟೋಬರ್ 30ರಂದು ಚಿತ್ರವನ್ನು ಪ್ರೀಪೋನ್ ಮಾಡುವುದರಿಂದ ಕೇವಲ ಭಾರತೀಯ ಬಾಕ್ಸ್ ಆಫೀಸ್ ಮಾತ್ರವಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲೂ ಚಿತ್ರಕ್ಕೆ ಭರ್ಜರಿ ಸ್ಕ್ರೀನ್‌ಗಳು ಸಿಗಲಿವೆ. ನವೆಂಬರ್ 6ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿರುವ ದೊಡ್ಡ ಹಾಲಿವುಡ್ ಚಿತ್ರಗಳಾದ 'ಗಾಡ್ಜಿಲ್ಲಾ ಮೈನಸ್ ಝೀರೋ' (Godzilla Minus Zero) ಮತ್ತು 'ದಿ ಕ್ಯಾಟ್ ಇನ್ ದಿ ಹ್ಯಾಟ್' (The Cat in the Hat) ಸಿನಿಮಾಗಳ ಪೈಪೋಟಿಯಿಂದ 'ರಾಮಾಯಣ' ಪಾರಾಗಬಹುದು.

450 ಕೋಟಿಯ ಡೀಲ್

ವರದಿಗಳ ಪ್ರಕಾರ, ಚಿತ್ರದ ವಿತರಣಾ ಹಕ್ಕುಗಳಿಗಾಗಿ ಭಾರಿ ಮಾತುಕತೆಗಳು ನಡೆಯುತ್ತಿದ್ದು, ಸುಮಾರು 450 ಕೋಟಿ ರೂಪಾಯಿಗಳ ಬೃಹತ್ ಮೊತ್ತದ ಒಪ್ಪಂದ ಅಂತಿಮ ಹಂತದಲ್ಲಿದೆ ಎನ್ನಲಾಗಿದೆ. ಈ ಒಪ್ಪಂದ ಮುಗಿಯುತ್ತಿದ್ದಂತೆಯೇ ಚಿತ್ರತಂಡ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಲಿದೆ. ಯೋಜನೆಯ ಪ್ರಕಾರ, 'ರಾಮಾಯಣ: ಭಾಗ 1' 2026ರ ದೀಪಾವಳಿಗೆ ಹಾಗೂ ಇದರ ಮುಂದುವರಿದ ಭಾಗ 'ರಾಮಾಯಣ: ಭಾಗ 2' 2027ರ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+