IMD Weather Forecast: ಚಂಡಮಾರುತ ಪ್ರಸರಣ, ಮುಂದಿನ 5 ದಿನ ಈ ಭಾಗಗಳಲ್ಲಿ ಧಾರಾಕಾರ ಮಳೆ: ಹವಾಮಾನ ವರದಿ
India Rain Alert: ಸಮುದ್ರ ಭಾಗದಲ್ಲಿ ನಿರಂತರ ಬದಲಾವಣೆ, ವಾಯು ಚಂಡಮಾರುತ ಪ್ರಸರಣ ಮುಂದುವರಿದರೂ ಸಹಿತ ಅನೇಕ ಭಾಗಗಳಲ್ಲಿ ಶಾಖದ ಅಲೆಯ ಪ್ರಭಾವ ಕಡಿಮೆ ಆಗಿಲ್ಲ. ಇದೀಗ ಮುಂದಿನ 5 ದಿನ ಅಧಿಕ ತಾಪಮಾನ ಜೊತೆಗೆ ಬಿರುಗಾಳಿ ಮಳೆ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ದೇಶದ ದಕ್ಷಿಣ ಒಳನಾಡು ಹಾಗೂ ಕರಾವಳಿ ರಾಜ್ಯಗಳಲ್ಲಿ ತಾಪಮಾನ ಕೊಂಚ ತಗ್ಗಿದೆ. ಆದರೆ ಉತ್ತರ ಪ್ರದೇಶ, ದೆಹಲಿ, ಹರಿಯಾಣ, ಅಸ್ಸಾಂ ಸೇರಿ ಅನೇಕ ರಾಜ್ಯಗಳಲ್ಲಿ ಒಣಹವೆ ಮುಂದುವರಿಸಿದೆ. ವಿವಿಧ ಭಾಗಗಳಲ್ಲಿ ತೀವ್ರ ಹವಾಮಾನ ವೈಪರೀತ್ಯ ಕಂಡು ಬಂದಿದೆ. ಪೂರ್ವ ಮಧ್ಯಪ್ರದೇಶ, ಪೂರ್ವ ಉತ್ತರ ಪ್ರದೇಶ, ಹರಿಯಾಣ, ಚಂಡೀಗಢ, ದೆಹಲಿ ಮತ್ತು ವಿದರ್ಭದ ಪ್ರತ್ಯೇಕ ಸ್ಥಳಗಳಲ್ಲಿ ಶಾಖದ ಅಲೆ ಮುಂದುವರಿಯುವ ಸಾಧ್ಯತೆ ಇದೆ.

ಒಡಿಶಾ, ಪಂಜಾಬ್, ರಾಜಸ್ಥಾನ, ಬಿಹಾರ, ಛತ್ತೀಸ್‌ಗಢ, ಜಾರ್ಖಂಡ್, ಲಂಗಾಣ, ಪಶ್ಚಿಮ ಮಧ್ಯಪ್ರದೇಶ ಮತ್ತು ಪಶ್ಚಿಮ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲೂ ಗರಿಷ್ಠ ಬಿಸಿಲು ಮೇಲುಗೈ ಸಾಧಿಸಲಿದೆ. ಈ ಭಾಗದಲ್ಲಿ ಜೂನ್ ಮೊದಲ ವಾರ ಮಳೆ ಎದುರಾಗುವ ಸಾರ್ಧಯತೆ ಇದೆ. ಸದ್ಯ ಹಗಲು ಮಾತ್ರವಲ್ಲದೇ ರಾತ್ರಿ ವೇಳೆಯೂ ಈ ಭಾಗದಲ್ಲಿ ಸಾಮಾನ್ಯಕ್ಕಿಂತ ಬೆಚ್ಚಗಿನ ವಾತಾವರಣ ನಿರ್ಮಾಣವಾಗುತ್ತಿದೆ.
ಕರಾವಳಿ, ಸಮುದ್ರದಲ್ಲಿ ಬಿರುಗಾಳಿಯ ಎಚ್ಚರಿಕೆ
ಅಂಡಮಾನ್ ನಿಕೋಬಾರ್, ಲಕ್ಷದ್ವೀಪಗಳು, ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯ ವಿವಿಧ ಭಾಗಗಳಲ್ಲಿ ವಾಯು ಚಂಡಮಾರುತ ನಿರ್ಮಾಣವಾಗಲಿದೆ. ಇನ್ನೊಂದು ವಾರ ಇದರ ತೀವ್ರತೆ ಕಂಡು ಬರುವ ನಿರೀಕ್ಷೆಗಳು ಇವೆ. ಈ ವಾತಾವರಣ ಮುಂಗಾರು ಮಳೆ (Monsoon Rain) ಆಗಮನಕ್ಕೆ ಪೂರಕವಾಗಿದೆ.
ಮುದ್ರದಲ್ಲಿ ಬಿರುಗಾಳಿಯ ವೇಗ ಹೆಚ್ಚಾಗಲಿದೆ. ಅರಬ್ಬಿ ಸಮುದ್ರದ ವ್ಯಾಪ್ತಿಗೆ ಬರುವ ಕೇರಳ, ಕರ್ನಾಟಕ ಕರಾವಳಿ, ಲಕ್ಷದ್ವೀಪ, ಮಾಲ್ಡೀವ್ಸ್, ಕೊಮೊರಿನ್ ಪ್ರದೇಶ ಹಾಗೂ ಆಗ್ನೇಯ ಅರೇಬಿಯನ್ ಸಮುದ್ರದ ಹೆಚ್ಚಿನ ಭಾಗಗಳಲ್ಲಿ ಗಂಟೆಗೆ 40 ರಿಂದ 60 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಇದರೊಂದಿಗೆ ಮಳೆಯ ಆಗಮಿಸುವ ನಿರೀಕ್ಷೆ ಇದೆ. ದಕ್ಷಿಣ ಬಂಗಾಳ ಕೊಲ್ಲಿಯ ಬಹುತೇಕ ಭಾಗಗಳಲ್ಲೂ ಗಂಟೆಗೆ 40 ಕಿ.ಮೀ ವೇಗದ ಗಾಳಿ ಈಗಾಗಲೇ ಬೀಸುತ್ತಿದೆ ಎಂದು ಐಎಂಡಿ ತಿಳಿಸಿದೆ.
ಈ ಭಾಗಗಳಲ್ಲಿ ಭಾರೀ ಮಳೆಯ ಎಚ್ಚರಿಕೆ
ಮುಂದಿನ 5 ದಿನ ಪಶ್ಚಿಮ ಬಂಗಾಳ, ಸಿಕ್ಕಿಂ, ಅಸ್ಸಾಂ, ಮೇಘಾಲಯ, ಉಪ ಹಿಮಾಲಯದ ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಅತ್ಯಂತ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಇವುಗಳೊಂದಿಗೆ ಅಂಡಮಾನ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ಕೇರಳ, ಮಣಿಪುರ, ಮಿಜೋರಾಂ, ಮಾಹೆ, ಲಕ್ಷದ್ವೀಪ, ನಾಗಾಲ್ಯಾಂಡ್, ತ್ರಿಪುರ ಹಾಗೂ ತಮಿಳುನಾಡು, ಪುದುಚೇರಿಗಳಲ್ಲಿ ಸಹ ಧಾರಾಕಾರ ಮಳೆ ಆಗಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ಆಂಧ್ರಪ್ರದೇಶ, ಜಾರ್ಖಂಡ್ ಮತ್ತು ಉತ್ತರ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಗಂಟೆಗೆ 50-60 ಕಿ.ಮೀ ವೇಗದ ಬಲವಾದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗಲಿದೆ. ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯದಲ್ಲಿ ಗಂಟೆಗೆ 30-40 ಕಿ.ಮೀ ವೇಗದ ಬಿರುಗಾಳಿ ಮಿಂಚು ಸಹಿತ ವ್ಯಾಪಕ ಮಳೆ ಆಗಲಿದೆ. ಬಿಹಾರ, ಜಮ್ಮು-ಕಾಶ್ಮೀರ-ಲಡಾಖ್-ಗಿಲ್ಗಿಟ್-ಬಾಲ್ಟಿಸ್ತಾನ್, ಕೇರಳ, ಕೊಂಕಣ, ಗೋವಾ, ಲಕ್ಷದ್ವೀಪ, ಮಧ್ಯ ಮಹಾರಾಷ್ಟ್ರ, ಒಡಿಶಾ, ರಾಯಲಸೀಮಾ, ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಕರಾವಳಿ ಪ್ರದೇಶಗಳು, ತಮಿಳುನಾಡು, ತೆಲಂಗಾಣ, ಪಶ್ಚಿಮ ಬಂಗಾಳದಲ್ಲೂ ಗುಡುಗು ಸಹಿತ ಮಳೆ ಆಗಲಿದೆ. ಏಕಕಾಲದಲ್ಲಿ ಭಾರೀ ಮಳೆ, ಅಧಿಕ ಬಿಸಿಲಿನ ವಾತಾವರಣ ಭಾರತದಲ್ಲಿ ನಿರ್ಮಾಣವಾಗಲಿದೆ.














Click it and Unblock the Notifications