ಸೈಬೀರಿಯಾದಲ್ಲೊಂದು ಹಿಂದೂ ನಗರಿ: ಮರಗಟ್ಟುವ ಚಳಿಯಲ್ಲೂ ನಿತ್ಯ ನಡೆಯುತ್ತದೆ ಕೃಷ್ಣಭಜನೆ

ಸೈಬೀರಿಯಾದ ಆಳದಲ್ಲಿ, ಮರಗಟ್ಟುವ ಚಳಿಯಲ್ಲಿಯೂ ನಿತ್ಯ "ಹರೇ ಕೃಷ್ಣ" ಭಜನೆ ಕೇಳ ಸಿಗುತ್ತದೆ. ಇದು ಯಾವುದೋ ಸಿನಿಮಾ ಕತೆಯೂ ಅಲ್ಲ, ಕಟ್ಟು ಕತೆಯೂ ಅಲ್ಲ. ಸೈಬೀರಿಯಾದಲ್ಲಿರುವ ಹಿಂದೂ ನಗರಿ ಅಥವಾ ಹಿಂದೂ ಗ್ರಾಮ ಎಂದು ಪ್ರಸಿದ್ಧವಾಗಿರುವ ರಷ್ಯಾದ ಒಮ್ಸ್ಕ್ ಪ್ರದೇಶದಲ್ಲಿರುವ ಒಕುನೆವೊ ಎಂಬ ಪುಟ್ಟ ಹಳ್ಳಿಯಲ್ಲಿ ಕಣ್ಣಿಗೆ ಬೀಳುವ ದೃಶ್ಯ. ಇಲ್ಲಿ ತಾಪಮಾನ ಮೈನಸ್ 40 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆವರೆಗೆ ಇಳಿಯುತ್ತದೆ. ಇಂಥಹ ಕೊರೆಯುವ ಚಳಿಯಲ್ಲಿಯೂ ಇಲ್ಲಿ "ಹರೇ ಕೃಷ್ಣ" ಮಂತ್ರಗಳ ಜಪ, ಭಜನೆ ಮತ್ತು ಶಿವನ ಆರಾಧನೆ ನಡೆಯುತ್ತಿರುತ್ತದೆ. ಇದನ್ನು "ರಷ್ಯಾದ ಹಿಂದೂ ಗ್ರಾಮ" ಅಥವಾ "ಸೈಬೀರಿಯಾದ ಮಿನಿ ಇಂಡಿಯಾ" ಎಂದು ಕರೆಯಲಾಗುತ್ತದೆ. ಈ ಹಳ್ಳಿಯಲ್ಲಿ ನಿತ್ಯವೂ ಹಿಂದೂ ಧಾರ್ಮಿಕ ವಿಧಿಗಳನ್ನು ನಡೆಸಲಾಗುತ್ತದೆ. ಹಿಂದೂ ಧರ್ಮದ ಪಠಣಗಳನ್ನು ಪಠಿಸಲಾಗುತ್ತದೆ. ಕೃಷ್ಣ ಭಜನೆ, ಶಿವ ಪೂಜೆ ನಡೆಯುತ್ತಿರುತ್ತದೆ.

ಕೊರೆಯುವ ಚಳಿಯಲ್ಲಿಯೂ ಆರತಿ, ಭಜನೆ:

ಇಲ್ಲಿ ಓಂಕಾರ ಶಿವ ಧಾಮ ಆಶ್ರಮ ಇದ್ದು, ಇಸ್ಕಾನ್ ಸಂಸ್ಥೆಯೂ ಇಲ್ಲಿ ಕೃಷ್ಣನ ಆರಾಧನೆ ಮತ್ತು ಭಜನೆಗಳನ್ನು ನಡೆಸುತ್ತದೆ. ಅಲ್ಲದೆ, ಈ ಪ್ರದೇಶದಲ್ಲಿ ಹಿಂದೆ ಹನುಮಂತನ ಭವ್ಯ ವೈದಿಕ ದೇವಾಲಯವಿತ್ತು ಎಂದು ಕೂಡಾ ಹೇಳಲಾಗುತ್ತದೆ. ಪ್ರಸ್ತುತ ಈ ಪ್ರದೇಶದಲ್ಲಿ ಅತ್ಯಂತ ಕಠಿಣ ಚಳಿಗಾಲದಲ್ಲೂ ಇಲ್ಲಿನ ಸ್ಥಳೀಯ ರಷ್ಯನ್ ಭಕ್ತರು ಕೇಸರಿ ವಸ್ತ್ರ ಧರಿಸಿ, ಸಾಂಪ್ರದಾಯಿಕ ಆರತಿ, ಯಜ್ಞ ಮತ್ತು ಭಜನೆಗಳನ್ನು ಮಾಡುತ್ತಾರೆ.

Siberia Hidden Hindu Village

ಹಿಂದೂ ಸಂಸ್ಕೃತಿ, ಯೋಗ ಮತ್ತು ಜಪ:

ಹಾಗಿದ್ದರೆ ಒಕುನೆವೊ ನಿಜವಾಗಿಯೂ ಹಿಂದೂ ಗ್ರಾಮವೇ? ಎನ್ನುವುದನ್ನು ನೋಡುವುದಾದರೆ ಇದನ್ನು ಸಂಪೂರ್ಣ ಹಿಂದೂ ನಗರ ಎಂದು ಹೇಳಲು ಸಾಧ್ಯವಿಲ್ಲ. ಓಕುನೆವೊದಲ್ಲಿ ಕೃಷ್ಣ ದೇವಾಲಯವಿದೆ. ಹಾಗೆಯೇ ಹರೇ ಕೃಷ್ಣ ಚಳವಳಿಯ ಅನುಯಾಯಿಗಳೂ ಇಲ್ಲಿದ್ದಾರೆ. ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳು ಮತ್ತು ಧಾರ್ಮಿಕ ಆಚರಣೆಗಳಲ್ಲಿ ಇಲ್ಲಿನ ಗ್ರಾಮಸ್ಥರು ಭಜನೆಗಳನ್ನು ಪಠಿಸುತ್ತಿತ್ತಾರೆ.ರಷ್ಯಾದ ಸಾಂಪ್ರದಾಯಿಕ ಮರದ ಮನೆಗಳು ಮತ್ತು ಹಿಮದ ನಡುವೆ ಹಿಂದೂ ಸಂಸ್ಕೃತಿ, ಯೋಗ ಮತ್ತು ಜಪಗಳು ಇಲ್ಲಿ ಹಾಸುಹೊಕ್ಕಾಗಿವೆ.

ಇಷ್ಟಿದ್ದರೂ ಈ ಗ್ರಾಮವನ್ನು ಸಂಪೂರ್ಣವಾಗಿ ಹಿಂದೂ ವಸಾಹತು ಎಂದು ಕಟ್ಟುನಿಟ್ಟಾಗಿ ವ್ಯಾಖ್ಯಾನಿಸುವುದು ಸಾಧ್ಯವಿಲ್ಲ. ಈ ಹಳ್ಳಿಯನ್ನು ವಿವಿಧ ಆಧ್ಯಾತ್ಮಿಕ ದೃಷ್ಟಿಕೋನಗಳ ಜನರು ವಾಸಿಸುವ ಪ್ರದೇಶ ಎಂದು ಕರೆಯಬಹುದು.ಪುಟ್ಟ ಹಳ್ಳಿಯ ಈ ವೈಶಿಷ್ಟ್ಯವೇ ಓಕುನೆವೊವನ್ನು ಪ್ರವಾಸಿಗರಲ್ಲಿ ಪ್ರಸಿದ್ಧವಾಗಿಸಿದೆ.

ಅದ್ಭುತ ವಾಸ್ತುಶಿಲ್ಪಕ್ಕೆ ಹೆಸರಾದ ದಕ್ಷಿಣ ಭಾರತದ 7 ಪ್ರಸಿದ್ಧ ದೇವಾಲಯಗಳು
ಅದ್ಭುತ ವಾಸ್ತುಶಿಲ್ಪಕ್ಕೆ ಹೆಸರಾದ ದಕ್ಷಿಣ ಭಾರತದ 7 ಪ್ರಸಿದ್ಧ ದೇವಾಲಯಗಳು

ಕೊರೆಯುವ ಚಳಿಯಲ್ಲಿಯೂ ಭಜನೆ:

ಒಕುನೆವೊ ಇಷ್ಟೊಂದು ಆಸಕ್ತಿದಾಯಕವಾಗಿರಲು ಒಂದು ಕಾರಣವೆಂದರೆ ಸಂಸ್ಕೃತಿ ಮತ್ತು ದೃಶ್ಯಾವಳಿಗಳ ನಡುವಿನ ತೀವ್ರ ವ್ಯತ್ಯಾಸ. ಸೈಬೀರಿಯನ್ ಭೂದೃಶ್ಯವು ಅಲ್ಲಿನ ಚಳಿ, ಹಿಮ, ಹಿಮಭರಿತ ನದಿಗಳು, ದಟ್ಟವಾದ ಕಾಡುಗಳಿಗೆ ವಿಶ್ವಾದ್ಯಂತ ಹೆಸರುವಾಸಿಯಾಗಿದೆ. ಸೈಬೀರಿಯಾದ ಕೆಲವು ಭಾಗಗಳಲ್ಲಿ ಚಳಿಗಾಲದಲ್ಲಿ ತಾಪಮಾನ -40°C ಗೆ ಇಳಿಯುತ್ತದೆ. ಆ ಹಿನ್ನೆಲೆಯಲ್ಲಿ, ಜನರು ಕೃಷ್ಣ ಭಜನೆಗಳನ್ನು ಹಾಡುವುದು, ಯೋಗಾಭ್ಯಾಸ ಮಾಡುವುದು ಅಥವಾ ವೈದಿಕ ತತ್ವಶಾಸ್ತ್ರವನ್ನು ಅನುಸರಿಸುವುದು ಬಹುತೇಕ ಸಾಧ್ಯವೇ ಇರದ ಮಾತು. ಆದರೂ ಇಲ್ಲಿ ಇವೆಲ್ಲಾ ನಡೆಯುತ್ತದೆ ಎನ್ನುವುದೇ ಒಕುನೆವೊ ಇಂಟರ್ನೆಟ್‌ನಲ್ಲಿ ವೈರಲ್ ಆಗಲು ಕಾರಣ.

ಇದು ಪ್ರವಾಸಿ ತಾಣವಲ್ಲ:

ಆದರೆ, ಒಕುನೆವೊ ಇನ್ನೂ ಒಂದು ಸಣ್ಣ ಗ್ರಾಮೀಣ ಸಮುದಾಯವಾಗಿಯೇ ಉಳಿದಿದೆ. ಈ ಸ್ಥಳವು ನಿಜವಾಗಿಯೂ ಪ್ರವಾಸಿ ಆಕರ್ಷಣೆಯನ್ನು ಪಡೆದಿಲ್ಲ. ಅಥವಾ ರಷ್ಯಾದ ಇತರ ರೆಸಾರ್ಟ್‌ಗಳಂತೆ ವಿಶಿಷ್ಟವಾದ ಅಭಿವೃದ್ಧಿಯ ಮಟ್ಟವನ್ನು ಹೊಂದಿಲ್ಲ. ಈ ಸ್ಥಳಕ್ಕೆ ಭೇಟಿ ನೀಡಿದಾಗ, ಪ್ರವಾಸಿಗರು ಇನ್ನೂ ಹೆಚ್ಚಾಗಿ ಗ್ರಾಮೀಣ ಸೈಬೀರಿಯಾದತ್ತ ಹೆಜ್ಜೆ ಹಾಕುತ್ತಾರೆ. ಹಿಮದಿಂದ ಆವೃತವಾದ ಈ ಭಾರತೀಯ ಹಳ್ಳಿಗೆ ಅಷ್ಟಾಗಿ ಜನ ಬರುವುದಿಲ್ಲ.

ಈ ಹೋಟೆಲ್‌ನಲ್ಲಿ ತಿಂಡಿ ಮಾಡಲು 5 ಗಂಟೆ ಚಾರಣ ಮಾಡಲೇಬೇಕು... ಇಲ್ಲಿ ರಸ್ತೆ, ವಾಹನ ಸೌಕರ್ಯ ಇಲ್ಲವೇ ಇಲ್ಲ
ಈ ಹೋಟೆಲ್‌ನಲ್ಲಿ ತಿಂಡಿ ಮಾಡಲು 5 ಗಂಟೆ ಚಾರಣ ಮಾಡಲೇಬೇಕು... ಇಲ್ಲಿ ರಸ್ತೆ, ವಾಹನ ಸೌಕರ್ಯ ಇಲ್ಲವೇ ಇಲ್ಲ

ವೀಡಿಯೊಗಳಲ್ಲಿನ ದೊಡ್ಡ ತಪ್ಪು ತಿಳುವಳಿಕೆ:

ಒಕುನೆವೊ ಸಂಪೂರ್ಣವಾಗಿ ಹಿಂದೂ ಅಥವಾ ರಷ್ಯಾದೊಳಗಿನ ಅಪರಿಚಿತ ಭಾರತೀಯ ನಾಗರಿಕತೆ ಎಂದು ಅಂತರ್ಜಾಲದಲ್ಲಿ ಸಾಮಾನ್ಯವಾಗಿ ಬಿಂಬಿಸಲಾಗಿದೆ. ಈ ಗ್ರಾಮದಲ್ಲಿ ಹಿಂದೂ ಮತ್ತು ವೈದಿಕ ಅಂಶಗಳ ಉಪಸ್ಥಿತಿಯು ಕಳೆದ ಕೆಲವು ದಶಕಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎನ್ನುವುದು ನಿಜ. ಹಾಗಂತ ರಷ್ಯಾದೊಳಗಿನ ಭಾರತದ ಕಲ್ಪನೆಯೇ ಒಕುನೆವೊ ಕುತೂಹಲಕಾರಿಯಾಗಿರುವುದಕ್ಕೆ ಕಾರಣ ಎಂದು ಹೇಳುವುದು ಕೂಡಾ ಸರಿಯಲ್ಲ. ಬದಲಾಗಿ ಆಧ್ಯಾತ್ಮಿಕ ಚಳುವಳಿಗಳು, ಸಂಪ್ರದಾಯಗಳು ಮತ್ತು ತಮ್ಮ ಮೂಲದಿಂದ ದೂರದ ಪ್ರದೇಶಗಳನ್ನು ಹೇಗೆ ತಲುಪಬಹುದು ಎನ್ನುವುದಕ್ಕೆ ಇದು ಸಾಕ್ಷಿಯಾಗಬಹುದು. ಸೈಬೀರಿಯಾದ ಹೃದಯಭಾಗದಲ್ಲಿ " ಹರೇ ಕೃಷ್ಣ " ಮಂತ್ರಗಳು ಕೇಳಿ ಬರುತ್ತಿರುವುದು ಒಕುನೆವೊ ಇಂಟರ್ನೆಟ್‌ನಲ್ಲಿ ಇಷ್ಟು ಜನಪ್ರಿಯವಾಗಲು ಕಾರಣ ಎನ್ನುವುದು ಕೂಡಾ ಸತ್ಯ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+