CJP: ಸಿಜೆಪಿ ಸಭೆಗೆ ಅನುಮತಿ ಇಲ್ಲ, ಇದು ಪೊಲೀಸರ ನಿರ್ಧಾರ; ಸಂಪುಟ ಪುನರ್ ರಚನೆಗೆ ಬೇಡಿಕೆ ಸಹಜ; ಜಿ.ಪರಮೇಶ್ವರ್

ಬೆಂಗಳೂರು: ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಧಿಕ ಬೆಂಬಲಿಗರನ್ನು ಪಡೆಯುತ್ತಾ ಜಿರಳೆ ಜನತಾ ಪಾರ್ಟಿ (CJP) ಮುನ್ನಡೆಯುತ್ತಿದೆ. ಈ ಪಕ್ಷಕ್ಕೆ ಇದೀಗ ಬೆಂಗಳೂರಿನಲ್ಲಿ ಹಿನ್ನಡೆ ಆಗಿದೆ. ನಾಳೆ ಭಾನುವಾರ (ಮೇ 24) ನಗರದ ಟೌನ್‌ಹಾಲ್ ಬಳಿ ನಾಳೆ ನಡೆಯಬೇಕಿದ್ದ ಕಾಕ್ರೋಜ್ ಜನತಾ ಪಾರ್ಟಿ ಬಹಿರಂಗ ಸಭೆಗೆ ಪೊಲೀಸ್ ಅನುಮತಿ ನಿರಾಕರಿಸಿದ್ದಾರೆ. ಅನುಮತಿ ನೀಡುವುದು ಪೊಲೀಸರಿಗೆ ಬಿಟ್ಟದ್ದು ಎಂದು ತಿಳಿಸಿದ ಗೃಹ ಸಚಿವ ಜಿ.ಪರಮೇಶ್ವರ್ ಅವರು, ನಟ ದರ್ಶನ್ ಆತ್ಮಹತ್ಯೆ, ಸಚಿವ ಸಂಪುಟ ಸಭೆ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದ ಬಳಿಕ ಸುದ್ದಿಗಾರರೊಂದಿಗೆ ಶನಿವಾರ ಮತಾನಡಿದ ಸಚಿವರು, ಸಿಜೆಪಿ ಯಾವ ಉದ್ದೇಶಕ್ಕೆ ಸಭೆ ಮಾಡುತ್ತಿದ್ದಾರೆ. ಒಂದು ಸಮಾವೇಶ ಮಾಡಿದಾಗ ಯಾರೆಲ್ಲ ಬರ್ತಾರೆ ಅಂತ ಪೊಲೀಸರು ಪರಿಶೀಲಿಸುತ್ತಾರೆ. ಬಳಿಕ ಅನುಮತಿ ಕೊಡೋದು ಬಿಡೋದು ಪೊಲೀಸರಿಗೆ ಬಿಟ್ಟ ವಿಚಾರ. ಪೊಲೀಸರು ನಿರಾಕರಣೆ ಮಾಡಿದ್ದಾರೆ ಎಂದರೆ ಅದರ ಹಿಂದೆ ಒಂದಷ್ಟು ವಿಷಯಗಳು ಇರುತ್ತವೆ. ಪೊಲೀಸರ ಕೆಲಸ ಪೊಲೀಸರು ಮಾಡುತ್ತಾರೆ. ರಾಜಕಾರಣಿಗಳು ಮಾಡೋ ಕೆಲಸ ರಾಜಕಾರಣಿಗಳು ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Bengaluru

ಜೈಲಲ್ಲಿ ನಟ ದರ್ಶನ್ ಆತ್ಮಹತ್ಯೆ ಯತ್ನ ವದಂತಿ

ಜೈಲಲ್ಲಿ ನಟ ದರ್ಶನ್ ಆತ್ಮಹತ್ಯೆ ಯತ್ನ ವದಂತಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ವದಂತಿಗಳು ಕೇಳಿದಾಗ ನಾನು ಪೊಲೀಸ್ ಅಧಿಕಾರಿಗಳಿಂದ ಮೌಖಿಕವಾಗಿ ಉತ್ತರ ಕೇಳಿದ್ದೆ. ಅದಕ್ಕೆ ಅವರು ಅಂತಹ ಯಾವುದೇ ಘಟನೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವದಂತಿ ಹೊರತು ಬೇರೆ ವಿಚಾರ ಇಲ್ಲ ಎಂದು ಸ್ಪಷ್ಟಪಡಿಸಿದರು.

Tumkur Metro: ಬೆಂಗಳೂರು-ತುಮಕೂರು ಮೆಟ್ರೋ DPR ಸ್ವೀಕರಿಸಿದ ಸರ್ಕಾರ, ಗೃಹ ಸಚಿವರು ಹೇಳಿದ್ದೇನು?
Tumkur Metro: ಬೆಂಗಳೂರು-ತುಮಕೂರು ಮೆಟ್ರೋ DPR ಸ್ವೀಕರಿಸಿದ ಸರ್ಕಾರ, ಗೃಹ ಸಚಿವರು ಹೇಳಿದ್ದೇನು?

ಸಂಪುಟ ಪುನಃರಚನೆಗೆ ಶಾಸಕರು ಒತ್ತಾಯ: ಅದರಲ್ಲಿ ತಪ್ಪಿಲ್ಲ

ಸಂಪುಟ ಪುನಾರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯಸಭೆ, ಪರಿಷತ್ ಚುನಾವಣೆ ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಎಂದಿನಂತೆ ಅದರ ಪಾಡಿಗೆ ಅದು ನಡೆಯುತ್ತದೆ. ಅಭ್ಯರ್ಥಿಗಳ ಕುರಿತು ಪಕ್ಷದ ಅಧ್ಯಕ್ಷರು, ಹೈಕಮಾಂಡ್, ಮುಖ್ಯಮಂತ್ರಿಗಳ ನಿರ್ಧಾರ ಅಂತಿಮವಾಗಿರುತ್ತದೆ.

ಸಂಪುಟ ಪುನಾರಚನೆಗೆ ಶಾಸಕರು ಒತ್ತಾಯಿಸುವುದರಲ್ಲಿ ತಪ್ಪೇನಿಲ್ಲ. ಶಾಸಕರು ಆ ರೀತಿ ಕೇಳುವುದು ಸಹಜ. ಸಚಿವರಾಗಲು ಅವರಿಗೂ ಸಾಮರ್ಥ್ಯ ಇದೆ. ಆದರೆ ಸಂಪುಟದಲ್ಲಿ ಶೇ 15 ರಷ್ಟು ಮಾತ್ರ ಖಾತೆಗಳ ಭರ್ತಿ ಮಾಡಿಕೊಳ್ಳಬೇಕಿರುತ್ತದೆ. ಹಾಗಾಗಿ ಸಂಖ್ಯೆಗಳು ಕಡಿಮೆ ಇರುತ್ತದೆ. ಕೆಲವು ಹಿರಿಯ ಮಂತ್ರಿಗಳನ್ನು ಕೈ ಬಿಡುತ್ತಾರೆ ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.

ಸಂಪುಟ ಪುನಾರಚನೆಯಾದರೆ ನನ್ನ ಖಾತೆ ಬದಲಾವಣೆ ಆಗಲ್ಲ. ನಾನು ಖಾತೆ ಬದಲಾವಣೆಗೆ ಕೇಳಿಲ್ಲ. ನನಗೆ ನನ್ನ ಖಾತೆ ಬಗ್ಗೆ ಯಾವುದೇ ಅಸಮಾಧಾನ ಇಲ್ಲವೆಂದು ಸ್ಪಷ್ಟಪಡಿಸಿರುವ ಅವರು, ಸಮರ್ಥವಾಗಿ ಗೃಹ ಇಲಾಖೆ ನಡೆಸಿದ್ದೇನೆ. ಇದೂವರೆಗೆ ಎಲ್ಲ ಸೇರಿದರೆ ಎಂಟು ವರ್ಷಗಳ ಕಾಲ ಗೃಹ ಇಲಾಖೆ ನಿಭಾಯಿಸಿದ್ದೇನೆ. ಆ ಬಗ್ಗೆ ನನಗೆ ಬೇಸರವೇನಿಲ್ಲ. ಗೃಹ ಇಲಾಖೆ ಜತೆ ಬೇರೆ ಖಾತೆ ನೀಡಿದರೂ ಅದರ ಜವಾಬ್ದರಿ ನಿಭಾಯಿಸುತ್ತೇನೆ. ಸಿಎಂ ಸ್ಥಾನ ಕೊಟ್ಟರೂ ನಿಭಾಯಿಸುತ್ತೇನೆ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಬಕ್ರೀದ್ ಕುರ್ಬಾನಿಗೆ‌ ರಕ್ಷಣೆ ಕೋರಿ ವಕ್ಫ್ ಬೋರ್ಡ್ ಪತ್ರ ಬರೆದ ವಿಚಾರ, ದೊಡ್ಡ ದೊಡ್ಡ ಹಬ್ಬಗಳ ಸಂದರ್ಭದಲ್ಲಿ ಪೊಲೀಸರು ಎಂದಿನಂತೆ ಸಾಮಾನ್ಯವಾಗಿ ಎಚ್ಚರಿಕೆ ವಹಿಸುತ್ತಾರೆ. ಹೆಚ್ಚುವರಿ ಎಚ್ಚರಿಕೆ ಅಗತ್ಯವಾದಲ್ಲಿ ಅದನ್ನು ನೋಡಿಕೊಳ್ಳುತ್ತಾರೆ. ವಕ್ಫ್ ಬೋರ್ಡ್ ಸದಸ್ಯರಿಗೆ ಹಬ್ಬದ ಕುರಿತು ಹೊಂದಿರುವ ಆತಂಕದ ಬಗ್ಗೆ ಮಾಹಿತಿ ಇಲ್ಲ. ಪತ್ರಕ್ಕೆ ಪೊಲೀಸರು ಸೂಕ್ತವಾಗಿ ಸ್ಪಂದಿಸುತ್ತಾರೆ ಎಂದರು.

ಲಾಡ್ಲೆ ಮಶಾಕ್ ದರ್ಗಾ ಕೇಸ್‌ಗಳ ವಾಪಸ್‌ಗೆ ಬಿಜೆಪಿ, ಹಿಂದೂಪರ ಸಂಘಟನೆಗಳಿಂದ ವಿರೋಧಿಸುತ್ತಿವೆ. ಅದು ಅವರಿಗೆ ಬಿಟ್ಟ ವಿಚಾರ, ಎಲ್ಲರಿಗೂ ಸರಿಸಮಾನವಾಗಿ ನೋಡಿಕೊಳ್ಳಬೇಕು ಅಂತ ಸಂವಿಧಾನದಲ್ಲಿದೆ. ಕಾಂಗ್ರೆಸ್ ಅದನ್ನೇ ಮಾಡಿಕೊಂಡು ಬರುತ್ತಿದೆ. ಹಿಂದುಳಿದವರು, ತುಳಿತಕ್ಕೆ, ನಿರ್ಲಕ್ಷ್ಯಕ್ಕೆ ಒಳಗಾದವರಿಗೆ ಒಂದಿಷ್ಟು ಕಾರ್ಯಕ್ರಮ ನೀಡುವುದು ಕಾಂಗ್ರೆಸ್ ಕೆಲಸ. ಅದನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+