Bengaluru Rent: ದೆಹಲಿಗಿಂತ ಬೆಂಗಳೂರಿನಲ್ಲಿ 4 ಪಟ್ಟು ಮನೆ ಬಾಡಿಗೆ ಹೆಚ್ಚು, ಕಲ್ಚರಲ್ ಶಾಕ್ ಬಗ್ಗೆ Google ಎಂಜಿನಿಯರ್ ಮಾತು

Bengaluru Rent: ಬೆಂಗಳೂರಿನ ಬಾಡಿಗೆ ಮನೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಸುತ್ತಿನ ವಿಷಯ ಚರ್ಚೆ ಆಗುತ್ತಿದೆ. ದೆಹಲಿ - ಎನ್‌ಸಿಆರ್‌ನಿಂದ ಬೆಂಗಳೂರು ನಗರಕ್ಕೆ ಸ್ಥಳಾಂತರಗೊಂಡಿರುವುದು ಕಲ್ಚರಲ್ ಶಾಕ್ ಆಗಿದೆ ಎಂದು ಗೂಗಲ್ ಸಾಫ್ಟ್‌ವೇರ್ ಎಂಜಿನಿಯರ್‌ವೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಬಾಡಿಗೆ ಹೆಚ್ಚಾಗಿರುವುದು ಹಾಗೂ ಟ್ರಾಫಿಕ್ ಸಮಸ್ಯೆ ವಿಚಾರಗಳು ಮತ್ತೊಮ್ಮೆ ಚರ್ಚೆಯ ಮುನ್ನೆಲೆಗೆ ಬಂದಂತೆ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಬೆಂಗಳೂರು ಹಾಗೂ ದೆಹಲಿ ಎನ್‌ಸಿಆರ್‌ನ ಬಗ್ಗೆ ಗೂಗಲ್ ಸಾಫ್ಟ್‌ವೇರ್ ಹೇಳಿರುವುದು ಏನು, ಈ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ನೆಟ್ಟಿಗರು ಹೇಳಿದ್ದೇನು ಎನ್ನುವ ಸಂಪೂರ್ಣ ವಿವರ ಈ ಲೇಖನದಲ್ಲಿ ಇದೆ.

ಸೋಶಿಯಲ್ ಮೀಡಿಯಾ ಎಕ್ಸ್‌ ಪೋಸ್ಟ್‌ನಲ್ಲಿ ಗೂಗಲ್ ಸಾಫ್ಟ್‌ವೇರ್ ಎಂಜಿನಿಯರ್ ವೈಭವ್ ಅಗರ್ವಾಲ್ ಅವರು ಈಚೆಗೆ ಬೆಂಗಳೂರು ನಗರಕ್ಕೆ ಸ್ಥಳಾಂತರಗೊಂಡಿದ್ದಾರೆ. ದೆಹಲಿ - ಎನ್‌ಸಿಆರ್ ಹಾಗೂ ಬೆಂಗಳೂರಿನಲ್ಲಿ ಜೀವನ ವೆಚ್ಚವನ್ನು ಅವರು ಹೋಲಿಕೆ ಮಾಡಿದ್ದಾರೆ. 20,000ದಿಂದ 25,000 ರೂ.ಗಳಿಗೆ ಉತ್ತಮ ವಸತಿ ಪ್ರದೇಶ, ಮೂರು ಮಲಗುವ ಕೋಣೆ ಇರುವ ಯೋಗ್ಯವಾದ ಅಪಾರ್ಟ್‌ಮೆಂಟ್ ಫರಿದಾಬಾದ್‌ನಲ್ಲಿ ಸಿಗುತ್ತದೆ. ಆದರೆ ಬೆಂಗಳೂರಿಗೆ ಬಂದ ಮೇಲೆ ಕಲ್ಚರಲ್ ಶಾಕ್ ಎದುರಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.

Bengaluru Rent

ಅಗರ್ವಾಲ್ ಅವರ ಪ್ರಕಾರ, ಬೆಂಗಳೂರಿನ ಮಹದೇವಪುರದಲ್ಲಿ ಇದೇ ರೀತಿಯ ಅಪಾರ್ಟ್‌ಮೆಂಟ್ ತಿಂಗಳಿಗೆ 80,000 ರೂ.ಗಳಿಗಿಂತ ಹೆಚ್ಚು ವೆಚ್ಚವಾಗುತ್ತದೆ. ಜೊತೆಗೆ ನಿರ್ವಹಣಾ ಶುಲ್ಕಗಳು ಸುಮಾರು 10,000-15,000 ರೂ.ಗಳ ವರೆಗೆ ಇದೆ. ಐಟಿ - ಬಿಟಿ ಉದ್ಯೋಗ, ಆರೋಗ್ಯ ಹಾಗೂ ಶಿಕ್ಷಣ ಸೇರಿದಂತೆ ವಿವಿಧ ಕಾರಣಗಳಿಗೆ ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಬಾಡಿಗೆ ಹೆಚ್ಚಳವಾಗುತ್ತಿದೆ. ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಬೇಡಿಕೆ ಹೆಚ್ಚಾದಂತೆ ಬಾಡಿಗೆ ಮನೆಗಳ ಬಾಡಿಗೆಯೂ ಹೆಚ್ಚಳವಾಗುತ್ತಿದೆ.

ಬೆಂಗಳೂರು ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವಮಟ್ಟದ ಪರಿಸರ ವ್ಯವಸ್ಥೆಯನ್ನು ಹೊಂದಿದ್ದರೂ, ನಗರದ ನಾಗರಿಕ ಮೂಲಸೌಕರ್ಯವು ಅದರ ವೇಗದ ಬೆಳವಣಿಗೆಗೆ ತಕ್ಕಂತೆ ಅಭಿವೃದ್ಧಿಯಾಗಿಲ್ಲ ಎಂದು ಅಗರ್ವಾಲ್ ಹೇಳಿದ್ದಾರೆ. ಟೆಕ್ ಪಾರ್ಕ್‌ಗಳು ಮತ್ತು ಕಚೇರಿ ಆವರಣಗಳು ವಿಶ್ವದರ್ಜೆಯದ್ದಾಗಿವೆ. ಆದರೆ, ಅಲ್ಲಿಂದ ಹೊರಬಂದ ಕೂಡಲೇ ಜನರು ಸಂಚಾರ ದಟ್ಟಣೆ, ಗುಂಡಿಬಿದ್ದ ರಸ್ತೆಗಳು ಹಾಗೂ ನಗರದ ವಿಸ್ತರಣೆಗೆ ಹೊಂದಿಕೊಳ್ಳಲು ಹೆಣಗಾಡುತ್ತಿರುವ ಮೂಲಸೌಕರ್ಯವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ನಗರವನ್ನು 'ಭಾರತದ ಸಿಲಿಕಾನ್ ವ್ಯಾಲಿ' ಎಂದು ಕರೆದಿರುವ ಅಗರ್ವಾಲ್, ಇಲ್ಲಿರುವ ಪ್ರತಿಭಾವಂತ ಜನರು, ಕೌಶಲ್ಯ ಮತ್ತು ಕಂಪನಿಗಳ ಕಾರಣದಿಂದ ಈ ನಗರವು ಆ ಬಿರುದಿಗೆ ನಿಜವಾಗಿಯೂ ಅರ್ಹವಾಗಿದೆ ಎಂದು ಹೇಳಿದ್ದಾರೆ. ನಗರವು ನಿರ್ಮಿಸಿಕೊಂಡಿರುವ ಬಲಿಷ್ಠ ತಂತ್ರಜ್ಞಾನ ಪರಿಸರ ವ್ಯವಸ್ಥೆಗೆ ತಕ್ಕಂತೆ ಮೂಲಸೌಕರ್ಯವೂ ಶೀಘ್ರದಲ್ಲೇ ಅಭಿವೃದ್ಧಿಯಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಪ್ರತಿಭೆ ವಿಚಾರದಲ್ಲಿ ಈಗಾಗಲೇ ಬೆಂಗಳೂರು ಮುಂಚೂಣಿಯಲ್ಲಿದೆ. ಈಗ ಆ ಮಟ್ಟದ ಪ್ರತಿಭೆಗೆ ತಕ್ಕಂತಹ ವಿಶ್ವಮಟ್ಟದ ಮೂಲಸೌಕರ್ಯವನ್ನು ನಗರವು ಪಡೆಯಬೇಕಾಗಿದೆ ಎಂದಿದ್ದಾರೆ. ಬೆಂಗಳೂರಿಗೆ ಹೋಲಿಕೆ ಮಾಡಿದರೆ ದೆಹಲಿ - ಎನ್‌ಸಿಆರ್ ಭಾಗದಲ್ಲಿ ಬಾಡಿಗೆ ಕಡಿಮೆ ಇದೆ ನಿಜ. ಆದರೆ ಹಲವು ವಿಚಾರಗಳಲ್ಲಿ ವ್ಯತ್ಯಾಸವಿದೆ ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+