ಭಾರತದ ಅತಿ ಉದ್ದದ ರೈಲು ಮಾರ್ಗಗಳು: 3 ದಿನಕ್ಕೂ ಅಧಿಕ ರೈಲಿನಲ್ಲಿ ರೋಚಕ ಜರ್ನಿ! ಹೇಗಿರುತ್ತೆ ಗೊತ್ತಾ...

ಭಾರತೀಯ ರೈಲ್ವೆ ಜಾಲವು ದೇಶದ ಮೂಲೆ ಮೂಲೆಗಳನ್ನು ಸಂಪರ್ಕಿಸುವ ವಿಶ್ವದ ಅತಿದೊಡ್ಡ ರೈಲು ಜಾಲಗಳಲ್ಲಿ ಒಂದಾಗಿದೆ. ಅನೇಕ ಪ್ರಯಾಣಿಕರಿಗೆ ಗಮ್ಯಸ್ಥಾನಕ್ಕಿಂತಲೂ ಪ್ರಯಾಣವೇ ಹೆಚ್ಚು ನೆನಪಾಗುವ ಅನುಭವವಾಗಿರುತ್ತದೆ. ಪರ್ವತಗಳು, ನದಿಗಳು, ಕಾಡುಗಳು, ನಗರಗಳು ಮತ್ತು ಬದಲಾಗುವ ಸಂಸ್ಕೃತಿಗಳ ನಡುವೆ ಸಾಗುವ ದೀರ್ಘ ರೈಲು ಪ್ರಯಾಣಗಳು ವಿಶೇಷ ಅನುಭವವನ್ನು ನೀಡುತ್ತವೆ. ಭಾರತದಲ್ಲಿ ಕೆಲವು ರೈಲು ಮಾರ್ಗಗಳು ಸಾವಿರಾರು ಕಿಲೋಮೀಟರ್ ದೂರವನ್ನು ಕ್ರಮಿಸಿ ಹಲವು ರಾಜ್ಯಗಳನ್ನು ದಾಟುತ್ತವೆ. ದೀರ್ಘ ರೈಲು ಪ್ರಯಾಣಗಳನ್ನು ಇಷ್ಟಪಡುವವರಿಗಾಗಿ ಭಾರತದ ವಿವಿಧ ರಾಜ್ಯಗಳನ್ನು ಹಾದು ಹೋಗುವ ಐದು ಅತ್ಯಂತ ಸುದೀರ್ಘ ರೈಲು ಮಾರ್ಗಗಳ ಮಾಹಿತಿ ಇಲ್ಲಿದೆ.

ಅಗರ್ತಲಾ - ಬೆಂಗಳೂರು ಕ್ಯಾಂಟೋನ್ಮೆಂಟ್

ಬೆಂಗಳೂರಿನ ಕ್ಯಾಂಟೋನ್ಮೆಂಟ್ ನಿಲ್ದಾಣದಿಂದ ತ್ರಿಪುರಾದ ಅಗರ್ತಲಾವರೆಗೆ ಸಾಗುವ ರೈಲು ಮಾರ್ಗವೂ ಭಾರತದ ಅತಿ ಉದ್ದದ ರೈಲು ಪ್ರಯಾಣಗಳಲ್ಲಿ ಒಂದಾಗಿದೆ. ಸುಮಾರು 3,570 ಕಿಲೋಮೀಟರ್ ದೂರವನ್ನು ಕ್ರಮಿಸುವ ಈ ರೈಲು ಸುಮಾರು 28 ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಪ್ರಯಾಣಕ್ಕೆ ಸುಮಾರು 64 ರಿಂದ 65 ಗಂಟೆಗಳ ಕಾಲ ಬೇಕಾಗುತ್ತದೆ.

ರೈಲಿನ ಹೆಸರು: ಹಮ್‌ಸಫರ್ ಎಕ್ಸ್‌ಪ್ರೆಸ್
ರೈಲು ಸಂಖ್ಯೆ (ಅಗರ್ತಲಾದಿಂದ ಬೆಂಗಳೂರಿಗೆ): 12504
ರೈಲು ಸಂಖ್ಯೆ (ಬೆಂಗಳೂರು ಕ್ಯಾಂಟೋನ್ಮೆಂಟ್ ನಿಂದ ಅಗರ್ತಲಾಕ್ಕೆ): 12503
ಸಂಚರಿಸುವ ದಿನಗಳು: ಮಂಗಳವಾರ ಮತ್ತು ಶನಿವಾರ ಅಗರ್ತಲಾದಿಂದ , ಮಂಗಳವಾರ ಮತ್ತು ಶುಕ್ರವಾರ ಬೆಂಗಳೂರು ಕ್ಯಾಂಟೋನ್ಮೆಂಟ್‌ನಿಂದ
ಹೊರಡುವ ಸಮಯ: ಅಗರ್ತಲಾದಿಂದ ಮಂಗಳವಾರ ಮತ್ತು ಶನಿವಾರ ಬೆಳಗ್ಗೆ 05:30 ಕ್ಕೆ ಹೊರಡುತ್ತದೆ. ಬೆಂಗಳೂರು ಕ್ಯಾಂಟೋನ್ಮೆಂಟ್‌ನಿಂದ ಬೆಳಿಗ್ಗೆ 10:15 ಹೊರಡುತ್ತದೆ.

Longest Train Routes in India

ಡಿಬ್ರುಗಢ್ - ಕನ್ಯಾಕುಮಾರಿ ರೈಲು ಮಾರ್ಗ

ಅಸ್ಸಾಂನ ಡಿಬ್ರುಗಢ್‌ನಿಂದ ತಮಿಳುನಾಡಿನ ಕನ್ಯಾಕುಮಾರಿವರೆಗೆ ಸಾಗುವ ರೈಲು ಮಾರ್ಗವು ಭಾರತದ ಅತೀ ಉದ್ದದ ರೈಲು ಪ್ರಯಾಣಗಳಲ್ಲಿ ಒಂದಾಗಿದೆ. ಸುಮಾರು 4,273 ಕಿಲೋಮೀಟರ್ ದೂರವನ್ನು ಕ್ರಮಿಸುವ ಈ ರೈಲು ಸುಮಾರು 30 ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಈ ಪ್ರಯಾಣವು ಈಶಾನ್ಯ ಭಾರತದ ಹಸಿರು ಪ್ರದೇಶಗಳಿಂದ ದಕ್ಷಿಣ ಭಾರತದ ಸಮುದ್ರ ತೀರದವರೆಗೆ ಸಾಗುತ್ತದೆ. ಸಂಪೂರ್ಣ ಪ್ರಯಾಣಕ್ಕೆ ಸುಮಾರು 75ಗಂಟೆಗಳ ಕಾಲ ಬೇಕಾಗುತ್ತದೆ.

ರೈಲಿನ ಹೆಸರು: ವಿವೇಕ್ ಎಕ್ಸ್‌ಪ್ರೆಸ್
ರೈಲು ಸಂಖ್ಯೆ: 22504 (ದಿಬ್ರುಗಢದಿಂದ ಕನ್ಯಾಕುಮಾರಿ)
ಸಂಚರಿಸುವ ದಿನಗಳು: ವಾರದ ಎಲ್ಲಾ 7 ದಿನಗಳೂ (ಪ್ರತಿದಿನ) ಲಭ್ಯವಿದೆ.
ಹೊರಡುವ ಸಮಯ: ಸಂಜೆ 19:00 ಗಂಟೆಗೆ

ಭಾರತದ ಕೊನೆಯ ರೈಲು ನಿಲ್ದಾಣ ಯಾವುದು ಗೊತ್ತಾ? ಇಲ್ಲಿದೆ ಕುತೂಹಲಕರ ಮಾಹಿತಿ
ಭಾರತದ ಕೊನೆಯ ರೈಲು ನಿಲ್ದಾಣ ಯಾವುದು ಗೊತ್ತಾ? ಇಲ್ಲಿದೆ ಕುತೂಹಲಕರ ಮಾಹಿತಿ

ಕನ್ಯಾಕುಮಾರಿ - ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ

ಭಾರತದ ದಕ್ಷಿಣ ತುದಿಯಿಂದ ಜಮ್ಮು-ಕಾಶ್ಮೀರದವರೆಗೆ ಸಾಗುವ ಈ ರೈಲು ಮಾರ್ಗವು ಸುಮಾರು 3,790 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ. ಸುಮಾರು 12 ರಾಜ್ಯಗಳನ್ನು ದಾಟುವ ಈ ರೈಲು ಪ್ರಯಾಣಕ್ಕೆ 73 ಗಂಟೆಗಳಷ್ಟು ಸಮಯ ಬೇಕಾಗುತ್ತದೆ. ಉತ್ತರ ಮತ್ತು ದಕ್ಷಿಣ ಭಾರತದ ವೈವಿಧ್ಯಮಯ ಸಂಸ್ಕೃತಿಗಳನ್ನು ಒಂದೇ ಪ್ರಯಾಣದಲ್ಲಿ ಕಾಣಬಹುದಾದ ವಿಶೇಷ ಮಾರ್ಗ ಇದು.

ರೈಲಿನ ಹೆಸರು: ಹಿಮಸಾಗರ್ ಎಕ್ಸ್‌ಪ್ರೆಸ್
ರೈಲು ಸಂಖ್ಯೆ: 16317
ಸಂಚರಿಸುವ ದಿನಗಳು: ಪ್ರತಿ ವಾರದ ಶುಕ್ರವಾರ
ಹೊರಡುವ ಸಮಯ: ಮಧ್ಯಾಹ್ನ 02:15ಕ್ಕೆ

ತಿರುವನಂತಪುರಂ - ಸಿಲ್ಚರ್ ರೈಲು ಮಾರ್ಗ

ಕೇರಳದ ತಿರುವನಂತಪುರಂನಿಂದ ಅಸ್ಸಾಂನ ಸಿಲ್ಚರ್‌ವರೆಗೆ ಸಾಗುವ ಈ ರೈಲು ಭಾರತದಲ್ಲಿನ ಅತಿ ಉದ್ದದ ಪ್ರಯಾಣಗಳಲ್ಲಿ ಒಂದಾಗಿದೆ. ಸುಮಾರು 3,932 ಕಿಲೋಮೀಟರ್ ದೂರವನ್ನು ಕ್ರಮಿಸುವ ಈ ರೈಲು ಮಾರ್ಗದಲ್ಲಿ ಸುಮಾರು 54 ನಿಲ್ದಾಣಗಳಿವೆ. ಪ್ರಯಾಣಿಕರು ಸುಮಾರು 74 ಗಂಟೆ 35 ನಿಮಿಷಗಳ ಕಾಲ ರೈಲಿನಲ್ಲೇ ಪ್ರಯಾಣಿಸುತ್ತಾರೆ.

ರೈಲಿನ ಹೆಸರು: ಅರೋಣೈ ಎಕ್ಸ್‌ಪ್ರೆಸ್
ರೈಲು ಸಂಖ್ಯೆ: 15607
ಸಂಚರಿಸುವ ದಿನಗಳು: ಪ್ರತಿ ಮಂಗಳವಾರ (Tuesday)
ಹೊರಡುವ ಸಮಯ: 16:55 (ಸಂಜೆ 04:55)

ಭಾರತದಿಂದ ನೇಪಾಳಕ್ಕೆ ಮೊದಲ ಭಾರತ ಗೌರವ್ ರೈಲು: ಭಕ್ತರಿಗೆ ಹೊಸ ಆಧ್ಯಾತ್ಮಿಕ ಪ್ರವಾಸ ಅನುಭವ
ಭಾರತದಿಂದ ನೇಪಾಳಕ್ಕೆ ಮೊದಲ ಭಾರತ ಗೌರವ್ ರೈಲು: ಭಕ್ತರಿಗೆ ಹೊಸ ಆಧ್ಯಾತ್ಮಿಕ ಪ್ರವಾಸ ಅನುಭವ

ಅಮೃತಸರ - ಕೊಚ್ಚುವೇಲಿ ರೈಲು ಮಾರ್ಗ

ಪಂಜಾಬಿನ ಅಮೃತಸರದಿಂದ ಕೇರಳದ ಕೊಚ್ಚುವೇಳಿವರೆಗೆ ಸಾಗುವ ಈ ರೈಲು ಮಾರ್ಗವು ಸುಮಾರು 3,597 ಕಿಲೋಮೀಟರ್ ದೂರವನ್ನು ಹೊಂದಿದೆ. ಏಳು ರಾಜ್ಯಗಳನ್ನು ದಾಟುವ ಈ ರೈಲು ಪ್ರಯಾಣಕ್ಕೆ ಸುಮಾರು 54 ಗಂಟೆಗಳ ಕಾಲ ಬೇಕಾಗುತ್ತದೆ. ಉತ್ತರ ಮತ್ತು ದಕ್ಷಿಣ ಭಾರತದ ನಡುವಿನ ಪ್ರಮುಖ ರೈಲು ಸಂಪರ್ಕಗಳಲ್ಲಿ ಇದೂ ಒಂದು.

ರೈಲಿನ ಹೆಸರು: ಅಮೃತಸರ - ಕೊಚ್ಚುವೇಳಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್.
ರೈಲಿನ ಸಂಖ್ಯೆ: 12484(ASR KCVL SF EXP)
ಸಂಚರಿಸುವ ದಿನಗಳು: ಅಮೃತಸರದಿಂದ ಕೊಚ್ಚುವೇಲಿಗೆ ಪ್ರತಿ ಭಾನುವಾರ ಬೆಳಿಗ್ಗೆ 05:55 ಕ್ಕೆ ಹೊರಡುತ್ತದೆ. ಕೊಚ್ಚುವೇಲಿಯಿಂದ ಅಮೃತಸರಕ್ಕೆ ಪ್ರತಿ ಬುಧವಾರ ಬೆಳಿಗ್ಗೆ 09:10 ಕ್ಕೆ ಕೊಚ್ಚುವೇಳಿಯಿಂದ ಹೊರಡುತ್ತದೆ.

ಈ ದೀರ್ಘ ರೈಲು ಪ್ರಯಾಣಗಳು ಕೇವಲ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗುವ ಮಾರ್ಗಗಳಷ್ಟೇ ಅಲ್ಲ, ಭಾರತದ ವೈವಿಧ್ಯಮಯ ಪ್ರಕೃತಿ, ಸಂಸ್ಕೃತಿ ಮತ್ತು ಜೀವನಶೈಲಿಯನ್ನು ಹತ್ತಿರದಿಂದ ಅನುಭವಿಸುವ ಅವಕಾಶವೂ ಹೌದು. ಸಾಧ್ಯವಾದರೆ ಒಮ್ಮೆ ಈ ಮಾರ್ಗಗಳಲ್ಲಿ ಸಂಚರಿಸಿ ಮರೆಯಲಾಗದ ಅನುಭವ ಪಡೆಯಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+