ವಿಶ್ವಸಂಸ್ಥೆಯಿಂದ ಉಗ್ರ ಮಸೂದ್ ನಿಷೇಧ: ಭಾರತಕ್ಕೆ ಚೀನಾ ಅಡ್ಡಗಾಲು?

ವಿಶ್ವಸಂಸ್ಥೆಯಿಂದ ಉಗ್ರ ಮಸೂದ್ ನ ಮೇಲೆ ನಿಷೇಧ ಹೇರಿಸಲು ಭಾರತ ಮಾಡುತ್ತಿರುವ ಪ್ರಯತ್ನಕ್ಕೆ ಚೀನಾ ಈ ಬಾರಿಯೂ ಅಡ್ಡಗಾಲು ಹಾಕುವ ಸಾಧ್ಯತೆಯಿದೆ. ಭಾರತದ ಈ ಪ್ರಯತ್ನಕ್ಕೆ ಚೀನಾ ಈ ಹಿಂದೆಯೂ ಅಡ್ಡಗಾಲು ಹಾಕಿತ್ತು.

ನವದೆಹಲಿ, ಜೂನ್ 20: ಪಾಕಿಸ್ತಾನದಲ್ಲಿ ನೆಲೆಸಿರುವ ಕುಖ್ಯಾತ ಭಯೋತ್ಪಾದಕ ಹಾಗೂ ಜೈಷ್-ಎ-ಮೊಹಮ್ಮದ್ ಸಂಘಟನೆಯ ನಾಯಕ ಮಸೂದ್ ಅಜರ್ ನ ಮೇಲೆ ವಿಶ್ವಸಂಸ್ಥೆಯಿಂದ ನಿಷೇಧ ಹೇರುವಂತೆ ಮಾಡುವ ಭಾರತದ ಪ್ರಯತ್ನಕ್ಕೆ ಚೀನಾ ಮತ್ತೊಮ್ಮೆ ಅಡ್ಡಗಾಲು ಹಾಕುವ ಸಾಧ್ಯತೆಗಳು ದಟ್ಟವಾಗಿದೆ.

ವಿಶ್ವಸಂಸ್ಥೆಯು ನಿಷೇಧಿತ ಉಗ್ರರ ಪಟ್ಟಿಯನ್ನು ತಯಾರಿಸುವ ವಿಚಾರದಲ್ಲಿ ಈಗಾಗಲೇ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಂದಲೇ ತೀವ್ರ ಆಕ್ಷೇಪವಿದೆ. ಹಾಗಾಗಿ, ಚೀನಾ ದೇಶವು ಈ ವಿಚಾರದಲ್ಲಿ ಯಾರನ್ನೂ ಬೆಂಬಲಿಸುವುದಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಹೇಳಿರುವುದು, ಭಾರತಕ್ಕೆ ಮತ್ತೊಮ್ಮೆ ತೊಡಕಾಗುವುದನ್ನು ಎತ್ತಿ ತೋರಿಸಿದೆ.

China hints at blocking India’s move for UN ban on JeM leader again

ಅಜರ್ ಮೇಲೆ ನಿಷೇಧ ಹೇರಬೇಕೆಂದು ವಿಶ್ವಸಂಸ್ಥೆಯನ್ನು ಭಾರತ ಆಗ್ರಹಿಸುತ್ತಿದೆ. ಕಳೆದ ವರ್ಷ ನಡೆದಿದ್ದ ಪಠಾಣ್ ಕೋಟ್ ಉಗ್ರರ ದಾಳಿಯ ಪ್ರಮುಖ ರೂವಾರಿಯೂ ಆಗಿರುವ ಮಸೂದ್ ಗೆ ಅದೇ ಪ್ರಕರಣದ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ನಿಷೇಧ ಹೇರುವಂತೆ ಭಾರತ ವಿಶ್ವಸಂಸ್ಥೆಯನ್ನು ಕೋರಿದೆ.

ಭಾರತದ ಈ ಕೋರಿಕೆಗೆ ಈಗಾಗಲೇ ಚೀನಾ ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿತ್ತು. ಇದೀಗ, ಇದೇ ವಿಚಾರ ಮುಂದಿನ ತಿಂಗಳು ವಿಶ್ವಸಂಸ್ಥೆಯ 1267 ಸಮಿತಿಯ ಮುಂದೆ ಬರಲಿದೆ. ಅಲ್ಲಿ ಭಾರತದ ಬೇಡಿಕೆಗೆ ವಿಶ್ವ ಸಂಸ್ಥೆಯ ಉಳಿದ ಸದಸ್ಯ ರಾಷ್ಟ್ರಗಳ ಬೆಂಬಲ ಬೇಕಿದೆ. ಆದರೆ, ಪಾಕಿಸ್ತಾನ ಇದಕ್ಕೆ ಆಕ್ಷೇಪವಿತ್ತಿದ್ದು, ಅದಕ್ಕೆ ಚೀನಾ ಪರೋಕ್ಷವಾಗಿ ಬೆಂಬಲ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+