ಸೂರತ್‌ನಲ್ಲಿ ಶ್ರೀರಾಮನನ್ನು ಚಿತ್ರಿಸುವ ಲೇಸರ್ ಲೈಟ್: ಯುಎಸ್‌ನಲ್ಲೂ ಅಯೋಧ್ಯೆ
ಸೂರತ್ ಜನವರಿ 19: ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಶ್ರೀರಾಮ ನಾಮ ಜಪ ಶುರುವಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಸಕಲ ಸಿದ್ದತೆಗಳು ಭರದಿಂದ ಸಾಗಿದ್ದರೆ ಇತ್ತು ವಿದೇಶದಲ್ಲಿರುವ ಹಿಂದೂ ಸಮುದಾಯದ ಜನ ಶ್ರೀರಾಮನ ಆರಾಧನೆ ಪ್ರಾರಂಭಿಸಿದ್ದಾರೆ. ಶ್ರೀರಾಮನನ್ನು ಚಿತ್ರಿಸುವ ಲೇಸರ್ ಲೈಟ್ ಹಾಗೂ 150 ಟೆಸ್ಲಾ ಕಾರುಗಳನ್ನು 'ರಾಮ' ಎಂಬ ಪದ ಕಾಣಿಸುವಂತೆ ನಿಲ್ಲಿಸಿರುವ ದೃಶ್ಯಗಳು ವೈರಲ್ ಆಗಿವೆ.
ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಸಮಾರಂಭಕ್ಕೆ ಇನ್ನೇನು ಎರಡೇ ದಿನ ಬಾಕಿ ಇದೆ. ದೇಶದೆಲ್ಲೆಡೆ ಮಾತ್ರವಲ್ಲದೆ ವಿದೇಶದಿಂದಲೂ ಈ ಅದ್ಬುತ ಕ್ಷಣವನ್ನು ಕಣ್ತುಂಬಿಕೊಳ್ಳಲು ಜನ ಅಯೋಧ್ಯೆಯತ್ತ ಹೆಜ್ಜೆ ಇಡುತ್ತಿದ್ದಾರೆ. ಈ ನಡುವೆ ಸೂರತ್‌ನಲ್ಲಿರುವ ಬಿಜೆಪಿ ಮುಖ್ಯಸ್ಥರ ಕಚೇರಿ ಮೇಲೆ ಶ್ರೀರಾಮನನ್ನು ಚಿತ್ರಿಸುವ ಲೇಸರ್ ದೀಪದ ವ್ಯವಸ್ಥೆ ಮಾಡಲಾಗಿತ್ತು.

ಹೌದು... ಗುರುವಾರ ರಾತ್ರಿ ಸೂರತ್‌ನಲ್ಲಿರುವ ಗುಜರಾತ್ ಬಿಜೆಪಿ ಅಧ್ಯಕ್ಷ ಸಿಆರ್ ಪಾಟೀಲ್ ಅವರ ಕಚೇರಿಯಲ್ಲಿ ಅದ್ಭುತ ಲೇಸರ್ ಶೋ ಆಯೋಜಿಸಲಾಗಿತ್ತು. ಲೇಸರ್ ಶೋನಲ್ಲಿ ಶ್ರೀರಾಮ, ಹನುಮಾನ್ ಮತ್ತು ಅಯೋಧ್ಯೆಯ ರಾಮಮಂದಿರದ ಮೋಡಿಮಾಡುವ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಈ ದೃಶ್ಯಗಳು ಅದ್ಬುತವಾಗಿದ್ದು ನೋಡುಗರ ಗಮನ ಸೆಳೆದಿವೆ.
#WATCH | Gujarat: Ahead of the Ram Mandir 'Pran Pratistha' ceremony, a laser show projecting pictures of Lord Ram was organised at Gujarat BJP President CR Patil's office in Surat. (18.01) pic.twitter.com/SAF72zOvlJ
— ANI (@ANI) January 19, 2024
ಅಯೋಧ್ಯೆಯ ರಾಮಮಂದಿರದಲ್ಲಿ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಸಮಾರಂಭವನ್ನು ಆಚರಿಸಲು ಭಾರತದಾದ್ಯಂತ ದೇವಾಲಯಗಳಲ್ಲಿ ಸ್ವಚ್ಛತಾ ಅಭಿಯಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಬಿಜೆಪಿ ಜನವರಿ 22 ರಂದು ಆಯೋಜಿಸಿದೆ.
ಜನವರಿ 22 ರಂದು ಅದ್ಧೂರಿ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಅಂದು ಭವ್ಯ ಮಂದಿರದಲ್ಲಿ ರಾಮ್ ಲಲ್ಲಾನ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ವಾರಣಾಸಿಯ ವಿಶೇಷ ಅರ್ಚಕ ಲಕ್ಷ್ಮೀಕಾಂತ ದೀಕ್ಷಿತ್ ಅವರು ರಾಮ್ ಲಲ್ಲಾ ಅವರ ಪ್ರಾಣ ಪ್ರತಿಷ್ಠೆಯ ವಿಧಿವಿಧಾನಗಳನ್ನು ನೆರವೇರಿಸುವರು.

ಜನವರಿ 14 ರಿಂದ ಜನವರಿ 22 ರವರೆಗೆ ಪವಿತ್ರ ನಗರದಲ್ಲಿ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತದೆ. ರಾಮನ ಜನ್ಮಸ್ಥಳವೆಂದು ಪರಿಗಣಿಸಲ್ಪಟ್ಟಿರುವ ಅಯೋಧ್ಯೆ ಭಾರತದ ಜನರಿಗೆ ಆಧ್ಯಾತ್ಮಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ.
ಅಮೆರಿಕಾದಲ್ಲೂ ಶ್ರೀರಾಮ
ಅಯೋಧ್ಯೆ ರಾಮಮಂದಿರಕ್ಕೆ ಸಂಬಂಧಿಸಿದಂತೆ ದೇಶ ವಿದೇಶಗಳಲ್ಲಿ ಹಲವು ವಿಶಿಷ್ಟ ಹಾಗೂ ಅಚ್ಚರಿ ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿವೆ. ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಐತಿಹಾಸಿಕ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಆಚರಿಸಲು ವಿದೇಶಗಳಲ್ಲಿ ನೆಲೆಸಿರುವ ಹಿಂದೂ ಸಮುದಾಯದ ಜನರು ಕಾರ್ಯಕ್ರಮವೊಂದನ್ನು ಅಮೇರಿಕಾದ ಮೇರಿಲ್ಯಾಂಡ್‌ನಲ್ಲಿ ಆಯೋಜಿಸಿದ್ದರು.
ಅಮೆರಿಕದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಅತ್ಯಾಕರ್ಷಕ ಟೆಸ್ಲಾ ಮ್ಯೂಸಿಕಲ್ ಲೈಟ್ ಶೋ ಅನ್ನು ಆಯೋಜಿಸಿತ್ತು. ಇದು ಬೆಳಕಿನ ಪ್ರದರ್ಶನದ ಮೂಲಕ ಭಗವಾನ್ ರಾಮನ ರೂಪಗಳು ಮತ್ತು ರಾಮ ಮಂದಿರದ ವಿಗ್ರಹವನ್ನು ಅದ್ಭುತವಾಗಿ ಪ್ರದರ್ಶಿಸಿತು. ಇದರೊಂದಿಗೆ 150 ಟೆಸ್ಲಾ ಕಾರುಗಳನ್ನು 'ರಾಮ್' ಎಂಬ ಪದ ಕಾಣಿಸುವಂತೆ ನಿಲ್ಲಿಸಲಾಗಿತ್ತು.

ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ನೆನಪಿಗಾಗಿ 200 ಕ್ಕೂ ಹೆಚ್ಚು ಭಾರತೀಯ ಅಮೇರಿಕನ್ ಟೆಸ್ಲಾ ಕಾರು ಮಾಲೀಕರು ಶನಿವಾರ ವಾಷಿಂಗ್ಟನ್ ಡಿಸಿಯ ಮೇರಿಲ್ಯಾಂಡ್ ಉಪನಗರದಲ್ಲಿ ವಿಶಿಷ್ಟವಾದ ಸಂಗೀತ-ಬೆಳಕು ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಈವೆಂಟ್‌ನ ವೀಡಿಯೊವು ಕಲಾತ್ಮಕ ವ್ಯವಸ್ಥೆಗಳಲ್ಲಿ ನಿಲುಗಡೆ ಮಾಡಲಾದ ಕಾರುಗಳನ್ನು ತೋರಿಸುತ್ತದೆ. ಈ ವೇಳೆ ಅಲ್ಲಿದ್ದ ಹಿಂದೂ ಮೂಲದ ಜನರು ಹೆಮ್ಮೆಯಿಂದ ಭಗವಾನ್ ರಾಮನ ಚಿತ್ರಗಳಿರುವ ಧ್ವಜಗಳನ್ನು ಬೀಸಿದರು. ಉತ್ಸಾಹದಿಂದ 'ಜೈ ಶ್ರೀ ರಾಮ್', 'ರಾಮ್ ಲಕ್ಷ್ಮಣ ಜಾನಕಿ' ಮತ್ತು 'ಜೈ ಶ್ರೀ ಹನುಮಾನ್' ಎಂಬ ಘೋಷಣೆಗಳನ್ನು ಕೂಗಿದರು. ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ಸಮೀಪಿಸುತ್ತಿದ್ದಂತೆ, ಈ ಘಟನೆಯು ಕೇವಲ ಸ್ಥಳೀಯ ಕಾರ್ಯಕ್ರಮವಾಗಿರದೆ ಜಾಗತಿಕ ಕಾರ್ಯಕ್ರಮವಾಗಿದೆ ಎಂಬುದು ಸ್ಪಷ್ಟವಾಗಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications