ಭಾರತದ ಬೆನ್ನಿಗೆ ನಿಂತ ಅಮೆರಿಕ, ಭಾರತೀಯರಿಗೆ ಭರ್ಜರಿ ವೀಸಾ ಗಿಫ್ಟ್!

ನವದೆಹಲಿ: ಭಾರತದಲ್ಲಿನ ಅಮೆರಿಕ ಕಾನ್ಸುಲರ್ ಟೀಂ 2023ರಲ್ಲಿ ಹಿಂದೆಂದಿಗಿಂತಲೂ ಹೆಚ್ಚು ವೀಸಾ ಪರಿಶೀಲಿಸಿದ್ದು, ಈ ಮೂಲಕವಾಗಿ ವಿಸಿಟರ್ ವೀಸಾ ಅಪಾಯಿಂಟ್‌ಮೆಂಟ್ ಕಾಯುವ ಸಮಯವನ್ನು 75% ರಷ್ಟು ಕಡಿಮೆ ಮಾಡಿದೆ. ಈ ಮೂಲಕ ಭಾರತೀಯರಿಗೆ ಹೊಸ ಭರವಸೆ ಮೂಡಿದ್ದು, ಆ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಅಷ್ಟಕ್ಕೂ 2023ರಲ್ಲಿ ಭಾರತದಲ್ಲಿನ ಯುಎಸ್ ರಾಯಭಾರ ಕಚೇರಿಗಳು ಮತ್ತು ದೂತಾವಾಸ ಕಚೇರಿಗಳು ದಾಖಲೆ ಪ್ರಮಾಣದ 1.4 ಮಿಲಿಯನ್ ಯುಎಸ್ ವೀಸಾ ಪರಿಶೀಲಿಸಿವೆ. ಎಲ್ಲಾ ವೀಸಾ ವಿಭಾಗದಲ್ಲಿ ಬೇಡಿಕೆ ಅಭೂತಪೂರ್ವವಾಗಿದ್ದು, 2022 ಕ್ಕೆ ಹೋಲಿಸಿದರೆ ಅರ್ಜಿಗಳಲ್ಲಿ 60% ಹೆಚ್ಚಳವಾಗಿದೆ. ವಿಶ್ವಾದ್ಯಂತ ಪ್ರತಿ 10 ಯುಎಸ್ ವೀಸಾ ಅರ್ಜಿದಾರರಲ್ಲಿ ಒಬ್ಬರು ಭಾರತ ಮೂದಲವರು ಎಂಬುದೇ ವಿಶೇಷವಾಗಿದೆ.

5 Reasons Why US Issues a Record 1.4 Million Visas to Indians in 2023

ಭಾರತೀಯರಿಗೆ ಭರ್ಜರಿ ಸುದ್ದಿ!

ವಿಸಿಟರ್ ವೀಸಾಗಳಿಗೆ (B1/B2) ಯು.ಎಸ್‌. ಮಿಷನ್‌ನ ಇತಿಹಾಸದಲ್ಲಿ 2ನೇ ಬಾರಿ 7,00,000 ಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಅರ್ಜಿಗಳನ್ನ ಸ್ವೀಕರಿಸಿದ್ದು ಅದನ್ನ ಪರಿಶೀಲಿಸಲು ಸಿದ್ಧವಾಗಿದೆ. ಮುಂಬೈನಲ್ಲಿ ವರ್ಷದ ಆರಂಭದಲ್ಲಿ 3 ತಿಂಗಳು ಸಿಬ್ಬಂದಿ ಹೆಚ್ಚಿಸಿ, ಶಾಶ್ವತ ಸಿಬ್ಬಂದಿ ಸ್ಥಾನಗಳ ಸಂಖ್ಯೆ ಹೆಚ್ಚಿಸುವ ಮೂಲಕ ಮತ್ತು ನವೀನ ತಾಂತ್ರಿಕ ಪರಿಹಾರಗಳ ಮೂಲಕ ಅಮೆರಿಕದ ರಾಯಭಾರ ಕಚೇರಿ ಮತ್ತು ದೂತಾವಾಸ ಕಚೇರಿ ಈ ಬೇಡಿಕೆ ಪೂರೈಸಿವೆ.

ಕಾಯುವ ಸಮಯವೂ ಕಡಿಮೆ!

ಪರಿಶೀಲನೆ ಪ್ರಕ್ರಿಯೆಯಲ್ಲಿ ಸುಧಾರಣೆ & ಸಿಬ್ಬಂದಿ ಸಂಖ್ಯೆ ಹೆಚ್ಚಿಸುವಲ್ಲಿ ಹೂಡಿಕೆ ದೇಶಾದ್ಯಂತ ವಿಸಿಟರ್ ವೀಸಾಗಳಿಗಾಗಿ ಕಾಯುವ ಸಮಯವನ್ನು ಸರಾಸರಿ 1,000 ದಿನಗಳಿಂದ ಕೇವಲ 250 ದಿನಕ್ಕೆ ಇಳಿಸಿದೆ. ಎಲ್ಲಾ ಇತರ ವೀಸಾ ವಿಭಾಗಗಳಲ್ಲಿ ಕಾಯುವ ಸಮಯ ಕಡಿಮೆಯಾಗಿದೆ. 2023 ರಲ್ಲಿ ಭಾರತದ ಯು.ಎಸ್‌. ಕಾನ್ಸುಲರ್ ತಂಡವು 1,40,000 ಕ್ಕೂ ಹೆಚ್ಚು ವಿದ್ಯಾರ್ಥಿ ವೀಸಾ ನೀಡಿದ್ದು ವಿಶ್ವದ ಯಾವುದೇ ದೇಶಕ್ಕಿಂತ ಹೆಚ್ಚಾಗಿದೆ. ಈ ಮೂಲಕ ಸತತ 3ನೇ ವರ್ಷ ಈ ದಾಖಲೆಯನ್ನು ಮಾಡಿದೆ.

5 Reasons Why US Issues a Record 1.4 Million Visas to Indians in 2023

ಎಲ್ಲೆಲ್ಲಿ ವೀಸಾ ಸಿಗುತ್ತಿದೆ?

ಪ್ರತ್ಯೇಕವಾಗಿ ನೋಡಿದರೆ ಮುಂಬೈ, ನವದೆಹಲಿ, ಹೈದರಾಬಾದ್ ಮತ್ತು ಚೆನ್ನೈ ಈಗ ವಿಶ್ವದ ಅತ್ಯಂತ ಹೆಚ್ಚು ವಿದ್ಯಾರ್ಥಿ ವೀಸಾ ಪರಿಶೀಲನೆ ನಡೆಸುವ ನಾಲ್ಕು ಕೇಂದ್ರಗಳಲ್ಲಿ ಒಂದಾಗಿವೆ. ಪರಿಣಾಮ ಭಾರತೀಯ ವಿದ್ಯಾರ್ಥಿಗಳು ಅಮೆರಿಕದ ಅಂತಾರಾಷ್ಟ್ರೀಯ ಪದವಿ ವಿದ್ಯಾರ್ಥಿಗಳ ಅತಿದೊಡ್ಡ ಗುಂಪಾಗಿದ್ದಾರೆ ಮತ್ತು ಅಮೆರಿಕದಲ್ಲಿ ಅಧ್ಯಯನ ಮಾಡುತ್ತಿರುವ 10 ಲಕ್ಷಕ್ಕಿಂತ ಹೆಚ್ಚು ವಿದೇಶಿ ವಿದ್ಯಾರ್ಥಿಗಳಲ್ಲಿ ಕಾಲು ಭಾಗಕ್ಕಿಂತಲೂ ಹೆಚ್ಚು ಇದ್ದಾರೆ.

ಕೆಲಸದ ವೀಸಾಗಳಿಗೂ ಆದ್ಯತೆ

ಉದ್ಯೋಗ ವೀಸಾ ಮೊದಲ ಆದ್ಯತೆಯಾಗಿವೆ. ಕಾನ್ಸುಲರ್ ಟೀಮ್ ಇಂಡಿಯಾ ಕಾರ್ಯಕ್ಷಮತೆ ಹೆಚ್ಚಿಸಲು ಚೆನ್ನೈ & ಹೈದರಾಬಾದ್‌ನಲ್ಲಿ ಅರ್ಜಿ-ಆಧಾರಿತ ವೀಸಾ ಪರಿಶೀಲನೆ ಪ್ರಕ್ರಿಯೆಗಳನ್ನ ಕ್ರೋಢೀಕರಿಸಿದೆ. 2023ರಲ್ಲಿ ಭಾರತೀಯರು ಮತ್ತು ಅವರ ಕುಟುಂಬ ಸದಸ್ಯರಿಗೆ 380,000ಕ್ಕೂ ಹೆಚ್ಚು ಉದ್ಯೋಗ ವೀಸಾ ಪರಿಶೀಲಿಸಿತು ಮತ್ತು ಈ ಮೂಲಕ ಕನಿಷ್ಠ ಕಾಯುವ ಸಮಯವನ್ನ ನಿರ್ವಹಿಸಲು ಅಮೆರಿಕದ ಮಿಷನ್‌ಗೆ ಅನುವು ಮಾಡಿಕೊಟ್ಟಿತು. 2024ರಲ್ಲಿ, ಪ್ರಾಯೋಗಿಕ ಕಾರ್ಯಕ್ರಮ ಅರ್ಹ H1B ಹೊಂದಿರುವವರು ಯುನೈಟೆಡ್ ಸ್ಟೇಟ್ಸ್‌ನಲ್ಲಿ ತಮ್ಮ ವೀಸಾಗಳನ್ನು ನವೀಕರಿಸಲು ಅನುಮತಿಸುತ್ತದೆ, ಈ ಗುಂಪಿನ ಪರಿಶೀಲನೆ ಪ್ರಕ್ರಿಯೆ ಇನ್ನಷ್ಟು ಸರಳಗೊಳಿಸುತ್ತದೆ.

ಕಾನ್ಸುಲೇಟ್ ಜನರಲ್ ಮುಂಬೈ ಸಾಂಕ್ರಾಮಿಕ ರೋಗದಿಂದಾಗಿ ವಿಳಂಬವಾಗಿದ್ದ 31,000ಕ್ಕೂ ಹೆಚ್ಚು ಇಮಿಗ್ರಂಟ್‌ ವೀಸಾ ಪ್ರಕರಣಗಳ ಸರದಿಯನ್ನ ಪೂರ್ಣಗೊಳಿಸಿದೆ. ವಲಸಿಗರ ವೀಸಾಗಳ ಅರ್ಜಿ ಬಾಕಿ ಉಳಿದಿರುವ & ಸಮಯ ನಿಗದಿ ಮಾಡಲು ಕಾಯುತ್ತಿರುವ ಜನರು ಈಗ ಪ್ರಮಾಣಿತ & ಸಾಂಕ್ರಾಮಿಕ ಪೂರ್ವ ಅಪಾಯಿಂಟ್‌ಮೆಂಟ್ ವಿಂಡೋದಲ್ಲಿ ಅಪಾಯಿಂಟ್‌ಮೆಂಟ್ ಪಡೆಯಬಹುದು.

ವೀಸಾ ವಿಚಾರದಲ್ಲಿ ಹೊಸ ಕ್ರಾಂತಿ

ಯುಎಸ್‌ ಮಿಷನ್ ಭಾರತದಲ್ಲಿ ಕಾನ್ಸುಲರ್ ಸೇವೆಗಳ ಭವಿಷ್ಯದಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಿ ಮತ್ತು ಹೆಚ್ಚು ಪರಿಣಾಮಕಾರಿ ಮತ್ತು ಅನುಕೂಲಕರ ಸೇವೆಗಳನ್ನ ಒದಗಿಸುವ ಹೊಸ ಮಾರ್ಗ ಅನ್ವೇಷಿಸುತ್ತದೆ. ಈ ಹೂಡಿಕೆಗಳು ಮಾರ್ಚ್ 2023 ರಲ್ಲಿ ಹೈದರಾಬಾದ್‌ನಲ್ಲಿ ಹೊಸ $340 ಮಿಲಿಯನ್ ಡಾಲರ್ ಮೌಲ್ಯದ ಕಚೇರಿ ತೆರೆಯುವುದು ಅಹಮದಾಬಾದ್ ಮತ್ತು ಬೆಂಗಳೂರಲ್ಲಿ ಎರಡು ಹೊಸ ದೂತಾವಾಸಗಳ ಘೋಷಣೆ, ದೇಶಾದ್ಯಂತ ನಮ್ಮ ಸೌಲಭ್ಯಗಳಿಗೆ ಬಂಡವಾಳ ಸುಧಾರಣೆಗಳನ್ನು ಮುಂದುವರೆಸುವುದು ಮತ್ತು ಭಾರತಕ್ಕೆ ಹೆಚ್ಚಿನ ಕಾನ್ಸುಲರ್ ಅಧಿಕಾರಿಗಳ ಶಾಶ್ವತ ನಿಯೋಜನೆಯನ್ನು ಒಳಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+