Tesla car: ಗಮನ ಸೆಳೆದ ಜೈ ಶ್ರೀರಾಮ್.. ಜೈ ಶ್ರೀರಾಮ್ ರಾಜಾರಾಮ್ ಹಾಡಿಗೆ ಅಮೆರಿಕಾದ ಟೆಸ್ಲಾ ಕಾರುಗಳ ಲೈಟಿಂಗ್ಸ್ ಶೋ, ವೈರಲ್
ವಾಷಿಂಗ್ಟನ್, ಜನವರಿ, 15: ಅಯೋಧ್ಯೆಯಲ್ಲಿ ನಿರ್ಮಾಣವಾದ ಶ್ರೀರಾಮ ಮಂದಿರ ಜನವರಿ 22ಕ್ಕೆ ಉದ್ಘಾಟನೆ ಆಗಲಿದ್ದು, ಈ ಕ್ಷಣಕ್ಕಾಗಿ ಇಡೀ ಭಾರತವೇ ಕಾತದರಿಂದ ಕಾಯುತ್ತಿದೆ. ಇನ್ನು ಶ್ರೀರಾಮನ ಹಾಡಂತೂ ಬರೀ ದೇಶ ಅಲ್ಲದೆ ವಿದೇಶಗಳಲ್ಲೂ ಸದ್ದು ಮಾಡುತ್ತಿದೆ. ಇದೀಗ ವಿಶ್ವಹಿಂದೂ ಪರಿಷತ್ ಅಮೆರಿಕದ ಘಟಕ ಟೆಸ್ಲಾ ಕಂಪನಿಯ ಕಾರುಗಳ ಲೈಟ್ ಶೋ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ವೇಳೆ ಕಾರುಗಳ ಮೂಲಕ ರಾತ್ರೋರಾತ್ರಿ ಜೈಶ್ರೀರಾಮ್.. ಜೈಶ್ರೀರಾಮ್ ಮ್ಯೂಸಿಕಲ್ ಲೈಟ್ ಶೋ ನಡೆಸಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
#WATCH | Vishwa Hindu Parishad (VHP) of America organised an Epic Tesla Musical Light show in Maryland ahead of the Ram Mandir 'Pran Pratishtha' in Ayodhya on January 22. pic.twitter.com/8vG8WhHMIO
— ANI (@ANI) January 14, 2024
ಅಮೆರಿಕದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾದ ಈ ಐಷಾರಾಮಿ ಟೆಸ್ಲಾ ಕಾರು ಕೆಲವು ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದು, ಈ ಫೋಟೋಗಳು ಸಖತ್ ವೈರಲ್ ಆಗಿದ್ದವು. ಇದೀಗ ಅಮೇರಿಕಾದಲ್ಲಿ ಭಾರತದ ಶ್ರೀರಾಮನ ಹಾಡಿಗೆ ತಕ್ಕಂತೆ ಈ ಕಾರಿನ ಲೈಟ್ ಶೋ ನಡೆಸಿರುವುದು ಎಲ್ಲೆಡೆ ವೈರಲ್ ಆಗುತ್ತಿದೆ. ಸದ್ಯ ಈ ವಿಡಿಯೋವನ್ನು ಎಎನ್‌ಐ ತನ್ನ ಟ್ವೀಟ್‌ನಲ್ಲಿ ಹಂಚಿಕೊಂಡಿದೆ.

ಹೀಗೆ ವಿದೇಶಗಳಲ್ಲೂ ಶ್ರೀರಾಮನ ಮಹಿಮೆ ಕಂಡುಬರುತ್ತಿವೆ. ಪ್ರಾಣಪ್ರತಿಷ್ಠಾಪನೆಯ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾದು ಕುಳಿತಿದೆ. ಈ ನಡುವೆ ವಿಶ್ವದ ಪ್ರತಿಷ್ಠಿತ ಕಾರು ಕಂಪನಿಯಾದ ಟೆಸ್ಲಾ ಜೈ ಶ್ರೀರಾಮ್.. ಜೈ ಶ್ರೀರಾಮ್.. ರಾಜಾರಾಮ್ʼ ಹಾಡಿಗೆ ವಿಶೇಷ ಗೌರವ ಸೂಚಿಸುವುದಕ್ಕಾಗಿ ತನ್ನ ಕಾರುಗಳನ್ನು ಬಳಸಿಕೊಂಡು ಲೈಟ್ ಮೂಲಕ ತೋರಿಸಿರುವ ಝಲಕ್ ವಿಡಿಯೋವೊಂದು ಭಾರತೀಯರ ಗಮನ ಸೆಳೆದಿದೆ.












Click it and Unblock the Notifications